Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಸಂಗ್ರಹ ಚಿತ್ರ

ಲೋಕಸಭಾ ಚುನಾವಣೆ: ಎಐಎಡಿಎಂಕೆ-ಬಿಜೆಪಿ ಮತ್ತು ಪಿಎಂಕೆ ಮೈತ್ರಿ, ಸೀಟು ಹಂಚಿಕೆ

Two IAF planes crash mid-air at Bengaluru, pilots eject safely

ಬೆಂಗಳೂರು ಏರ್ ಷೋ ತಾಲೀಮು ವೇಳೆ ಅವಘಡ: 2 ಸೂರ್ಯಕಿರಣ್ ಜೆಟ್ ಗಳ ಡಿಕ್ಕಿ, ಓರ್ವ ಪೈಲಟ್ ಸಾವು

ವಿರಾಟ್ ಕೊಹ್ಲಿ

2019ರ ವಿಶ್ವಕಪ್‌ಗೆ ದಿನಗಣನೆ: ಬಲಿಷ್ಠ ತಂಡಗಳು ಹಾಗೂ ಸ್ಟಾರ್ ಆಟಗಾರರು!

ಸಂಗ್ರಹ ಚಿತ್ರ

ಭಯೋತ್ಪಾದನೆಗೆ ಪಾಕಿಸ್ತಾನ ನರಮಂಡಲವಿದ್ದಂತೆ: ಇಮ್ರಾನ್ ಖಾನ್‌ಗೆ ಭಾರತ ತಿರುಗೇಟು

ಸಂಗ್ರಹ ಚಿತ್ರ

ಸೌದಿ ರಾಜನಿಗೆ ಚಾಲಕನಾದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾಲೆಳೆದ ಟ್ವೀಟರಿಗರು!

Yuvraj Singh

ಎಬಿ ಡಿವಿಲಿಯರ್ಸ್‌ರಂತೆ ರಿವರ್ಸ್ ಸ್ವೀಪ್ 6 ಬಾರಿಸಿದ ಯುವರಾಜ್ ಸಿಂಗ್, ವಿಡಿಯೋ ವೈರಲ್!

If India thinks attack us and we will not think of retaliating, we will retaliate: Pakistan PM Imran Khan

ಪಾಕ್ ಮೇಲೆ ಭಾರತ ದಾಳಿ ಮಾಡುವುದಾದರೆ, ನಮ್ಮಿಂದ ಸಾಧ್ಯವಿಲ್ಲವೇ..: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ಸಂಗ್ರಹ ಚಿತ್ರ

ಕಲಬುರಗಿ: ಪಾಕ್ ಧರ್ಮ ಪ್ರಚಾರಕನ ಕತ್ತು ಸೀಳಿ ಭೀಕರ ಕೊಲೆ!

ಕೊಹ್ಲಿ-ಧೋನಿ

2019 ಐಪಿಎಲ್ ವೇಳಾಪಟ್ಟಿ: ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ಆರಂಭಿಕ ಜಟಾಪಟಿ!

Sathish Ninasam

ಡಿಕೆ ರವಿ ಜೀವನಾಧಾರಿತ: ಚಂಬಲ್ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್‌ಗೆ ಅರ್ಜಿ

Kumaraswamy

ನಾವು ಭಿಕ್ಷುಕರಲ್ಲ: ಸ್ಥಾನ ಹೊಂದಾಣಿಕೆ ಕುರಿತು ಕಾಂಗ್ರೆಸ್ ಗೆ ಸಿಎಂ ಕುಮಾರಸ್ವಾಮಿ

NCW asks Delhi Police to initiate probe into alleged harassment of Barkha Dutt on Twitter

ಬರ್ಖಾ ದತ್ ಗೆ ಕಿರುಕುಳ: ತನಿಖೆ ನಡೆಸುವಂತೆ ದೆಹಲಿ ಪೊಲೀಸರಿಗೆ ಎನ್ ಸಿಡಬ್ಲ್ಯೂ ಸೂಚನೆ

less than 100 hours of Pulwama terrorist attack, we eliminated JeM leadership in the valley: Indian Army

ಪುಲ್ವಾಮ ದಾಳಿ: ಕೇವಲ 100 ಗಂಟೆಯೊಳಗೆ ಕಾಶ್ಮೀರದಲ್ಲಿ ಜೆಇಎಂ ನಾಯಕತ್ವವೇ ನಿರ್ನಾಮ: ಭಾರತೀಯ ಸೇನೆ

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ತಮ್ಮ ಕನಸಿನ ಚಿತ್ರವನ್ನೇ ಬಿಟ್ಟು ಕೊಟ್ರಾ ಕಿಚ್ಚಾ ಸುದೀಪ್?

ರಾಕ್ ಲೈನ್ ವೆಂಕಟೇಶ್-ಸುದೀಪ್ ಭೇಟಿ ವೇಳೆ ಆಗಿದ್ದೇನು..? ಸುದೀಪ್ ಹೇಳಿದ್ದೇನು?
Is Kiccha Sudeep Drops his Ambitious Madakari Nayaka Movie Project?

ಸಂಗ್ರಹ ಚಿತ್ರ

ಬೆಂಗಳೂರು: ಮದಕರಿ ನಾಯಕನ ಕುರಿತ ಐತಿಹಾಸಿ ಚಿತ್ರವನ್ನು ನಟರಾದ ದರ್ಶನ್ ಮತ್ತು ಸುದೀಪ್ ಅವರು ಪ್ರತ್ಯೇಕವಾಗಿ ಮಾಡುತ್ತಿದ್ದಾರೆ ಎಂಬ ಸುದ್ದಿ ಬಹಳ ದಿನಗಳ ಹಿಂದೆ ಕೇಳಿ ಬಂದಿತ್ತು. ಇದೀಗ ಹೊಸ ಸುದ್ದಿ ಎಂದರೆ ಸುದೀಪ್ ತಮ್ಮ ಕನಸಿನ ಚಿತ್ರವನ್ನು ಬಿಟ್ಟುಕೊಟ್ಟಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕೆಲ ಮಾಧ್ಯಮಗಳು ವರದಿ ಮಾಡಿದ್ದು, ನಟ ಕಿಚ್ಚಾ ಸುದೀಪ್ ಅವರು, ತಾವು ನಿರ್ದೇಶಿಸಿ, ನಟಿಸಬೇಕಿದ್ದ ಮದಕರಿ ನಾಯಕನ ಜೀವನ ಚರಿತ್ರೆ ಆಧರಿಸಿದ ‘ದುರ್ಗದ ಹುಲಿ’ ಚಿತ್ರವನ್ನು ಕೈಬಿಟ್ಟಿದ್ದಾರೆ ಎಂದು ವರದಿ ಮಾಡಿವೆ. 

ಈ ಹಿಂದೆ  ದರ್ಶನ್‌ ಅಭಿನಯದಲ್ಲಿ, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದಲ್ಲಿ ‘ಗಂಡುಗಲಿ ವೀರ ಮದಕರಿ’ ಸಿನಿಮಾ ಸೆಟ್ಟೇರಲು ತಯಾರಾಗಿತ್ತು. ಇತ್ತ ಸುದೀಪ್‌ ತನ್ನ ಮಹತ್ವಾಕಾಂಕ್ಷೆಯ ‘ದುರ್ಗದ ಹುಲಿ’ ಚಿತ್ರ ನಿರ್ದೇಶಿಸಲು ತಯಾರಿ ಮಾಡಿಕೊಂಡಿದ್ದರು.  ಈ ಬಗ್ಗೆ ಸುದೀಪ್ ಈ ಹಿಂದೆ ಸ್ಪಷ್ಟನೆ ಕೂಡ ನೀಡಿ ತಾವೂ ಕೂಡ ಮದಕರಿ ಕುರಿತ ಚಿತ್ರ ಮಾಡುತ್ತಿದ್ದೇವೆ ಎಂದು ಹೇಳಿದ್ದರು.  ಹೀಗಾಗಿ ಈ ಎರಡೂ ಚಿತ್ರಗಳು ಇಬ್ಬರು ನಟರುಗಳ ಅಭಿಮಾನಿಗಳ ನಡುವೆ ಸಾಕಷ್ಟುಜಿದ್ದಾಜಿದ್ದಿಗೆ ಕಾರಣವಾಗಿತ್ತು. ಆದರೆ, ಇದೀಗ ‘ದುರ್ಗದ ಹುಲಿ’ ಚಿತ್ರದ ಅಂಗಳದಿಂದ ಹಿಂದೆ ಸರಿಯುತ್ತಿರುವುದಾಗಿ ಸ್ವತಃ ಸುದೀಪ್‌ ಅವರೇ ಹೇಳಿಕೊಂಡಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಮಾಧ್ಯಮ ವರದಿಯನ್ವಯ, ಇತ್ತೀಚೆಗಷ್ಟೆನಿರ್ಮಾಪಕ ರಾಕ್ ಲೈನ್‌ ವೆಂಕಟೇಶ್‌ ಅವರು ಸುದೀಪ್‌ ಅವರನ್ನು ಭೇಟಿ ಮಾಡಿ ಚಿತ್ರದುರ್ಗದ ಪಾಳೆಗಾರರ ಕತೆಯ ಎರಡು ಸಿನಿಮಾ ಆಗುತ್ತಿರುವ ಬಗ್ಗೆ ಮಾತುಕತೆ ಮಾಡುತ್ತಿದ್ದಾಗ ‘ನೀವು ನಮ್ಮ ಕನ್ನಡ ಚಿತ್ರರಂಗದ ನಿರ್ಮಾಪಕರು. ದರ್ಶನ್‌ ಕೂಡ ನಮ್ಮ ಕನ್ನಡ ಚಿತ್ರರಂಗದ ಹೀರೋ. ಇಬ್ಬರೂ ನಮ್ಮವರೇ. ನಾನೂ ನಿಮ್ಮವನೇ. ಆದರೆ, ಒಂದೇ ಹಿನ್ನೆಲೆಯ ಕತೆಗಾಗಿ ನಾವು ಮುನಿಸಿಕೊಳ್ಳುವುದು ಬೇಡ. ದರ್ಶನ್‌ ಬೇರೆ ಅಲ್ಲ, ನೀವು ಬೇರೆ ಅಲ್ಲ. ನಾವೆಲ್ಲ ಗೆಳೆಯರು. ಹೀಗಾಗಿ ನಾನೇ ದುರ್ಗದ ಹುಲಿ ಚಿತ್ರದಿಂದ ಹಿಂದೆ ಸರಿಯುತ್ತಿದ್ದೇನೆ. ಮುಂದೆ ಬೇರೆ ಐತಿಹಾಸಿಕ ಸಿನಿಮಾ ಕತೆ ಸಿಕ್ಕರೆ ಜತೆಯಾಗಿ ಮಾಡೋಣ. ನೀವು ಖುಷಿಯಾಗಿ ವೀರ ಮದಕರಿ ನಾಯಕನ ಚಿತ್ರ ಮಾಡಿ’ ಎಂದು ಸುದೀಪ್‌ ರಾಕ್‌ಲೈನ್‌ ವೆಂಕಟೇಶ್‌ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.

ಆದರೆ ದರ್ಶನ್ ಆಗಲಿ, ಸುದೀಪ್ ಆಗಲಿ ಅಥವಾ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಂದಾಗಲಿ ಈ ಬಗ್ಗೆ ಸ್ಪಷ್ಟನೆ ಬಂದಿಲ್ಲ.
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Bengaluru, Sandalwood, Kiccha Sudeep, Madakari Nayaka, Darshan, Rockline Venkatesh, ಬೆಂಗಳೂರು, ಸ್ಯಾಂಡಲ್ ವುಡ್, ಕಿಚ್ಚ ಸುದೀಪ್, ಮದಕರಿ ನಾಯಕ, ದರ್ಶನ್, ರಾಕ್ ಲೈನ್ ವೆಂಕಟೇಶ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS