ಸಾಮಾಜಿಕ ತಾಣದಲ್ಲಿ ಸದ್ದು ಮಾಡುತ್ತಿದೆ 'ಕವಲುದಾರಿ'ಯ ರಹಸ್ಯ ಟೀಸರ್

Published: 08 Sep 2018 11:30 AM IST | Updated: 08 Sep 2018 12:17 PM IST
ರಿಷಿ
ಬೆಂಗಳೂರು: ನಿರ್ದೇಶಕ ಹೇಮಂತ್ ಎಂ. ರಾವ್ ಸೆಪ್ಟೆಂಬರ್ 3 ರಂದು ತಮ್ಮ ಮುಂದಿನ ಚಿತ್ರ "ಕವಲುದಾರಿ" ರಹಸ್ಯಮಯ ಟೀಸರ್ ಒಂದನ್ನು ಬಿಡುಗಡೆಗೊಳಿಸಿದ್ದಾರೆ. ಈ ಟೀಸರ್ ಸಾಮಾಜಿಕ ತಾಣದಲ್ಲಿ ಬಾರೀ ಸದ್ದು ಮಾಡುತ್ತಿದ್ದು ಬಿಡುಗಡೆಯಾದ ಐದು ದಿನಗಳ ಬಳಿಕ ಸಹ ಸಾಕಷ್ಟು ವೈರಲ್ ಆಗಿದೆ. ಇದಾಗಲೇ ಟೀಸರ್ ಅನ್ನು ಐದು ಲಕ್ಷಕ್ಕೆ ಹೆಚ್ಚು ಜನ ವೀಕ್ಷಿಸಿದ್ದಾರೆ.

"ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಚಿತ್ರದ ನಿರ್ದೇಶಕರಾದ ಹೇಮಂತ್ "ಚಿತ್ರದ ಸಂಪೂರ್ಣ ಟೀಸರ್ ಒಂದು ರಹಸ್ಯದಿಂದ ಕೂಡಿದೆ. ಪ್ರೇಕ್ಷಕರು ಚೇತನ್ ರಾಜ್ ಅವರ ಸಂಗೀತ ಹಾಗೂ ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣವನ್ನು ಬಹಳ ಮೆಚ್ಚಿದ್ದಾರೆ.ನನಗೆ ದೊರೆತ ಪ್ರತಿಕ್ರಿಯೆ ಪ್ರಕಾರ ತಂಡದ ಎಲ್ಲಾ ಸದಸ್ಯರೂ ಉತ್ತಮ ಕೆಲಸ ನಿರ್ವಹಿಸಿದ್ದಾರೆ." ಹೇಳಿದ್ದಾರೆ.

ಟೀಸರ್ ಇಷ್ಟು ಪ್ರಖ್ಯಾತಿ ಆಗಲು ಪುನೀತ್ ರಾಜ್ ಕುಮಾರ್ ಅವರ ಕೊಡುಗೆಯೂ ಒಂದು ಕಾರಣವಾಗಿದೆ. "ಪುನೀತ್ ರಾಜ್ ಕುಮಾರ್ ಅವರೀಗ ಅಧಿಕೃತ ಟ್ವಿತ್ಟರ್ ಖಾತೆ ತೆರೆದಿದ್ದಾರೆ.. ಅವರು ತಮ್ಮ ಟ್ವಿಟ್ಟರ್ ಮೂಲಕ "ಕವಲುದಾರಿ" ಟೀಸರ್ ಅನ್ನು ಹಂಚಿಕೊಂಡಿದ್ದು ಇದು ನಮ್ಮ ಚಿತ್ರದ ಟೀಸರ್ ಗೆ ಹೆಚ್ಚು ಪ್ರಚಾರ ಸಿಕ್ಕುವಂತೆ ಮಾಡಿದೆ." ನಿರ್ದೇಶಕ ಹೇಮಂತ್ ವಿವರಿಸಿದರು.

ಈ ಚಿತ್ರವನ್ನು ಪಿ.ಆರ್.ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.ಟ್ರಾಫಿಕ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪ-ಇನ್ಸ್ಪೆಕ್ಟರ್ ಶ್ಯಾಮ್ ಪಾತ್ರಧಾರಿಯಾಗಿ ರಿಷಿ ಕಾಣಿಸಿಕೊಳ್ಳುತ್ತಿದ್ದಾರೆ.ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ನಿವೃತ್ತ ಪೋಲೀಸ್ ಅಧಿಕಾರಿ ಪಾತ್ರದಲ್ಲಿದ್ದು ಅಚ್ಯುತ್ ಕುಮಾರ್, ರೋಶಿನಿ ಪ್ರಕಾಶ್, ಸಿದ್ದಾರ್ಥ್ ಮಾದ್ಯಮಿಕ, ಸಿರಿ ರವಿಕುಮಾರ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸಧ್ಯ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರ ಅಕ್ಟೋಬರ್ ಗೆ ತೆರೆ ಕಾಣುವ ನಿರೀಕ್ಷೆಯನ್ನು ನಿರ್ದೇಶಕ ಹೇಮಂತ್ ವ್ಯಕ್ತಪಡಿಸಿದರು.

Posted by: RHN | Source: The New Indian Express

ಈ ವಿಭಾಗದ ಇತರ ಸುದ್ದಿ