Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Two IAF planes crash mid-air at Bengaluru, pilots eject safely

ಬೆಂಗಳೂರು ಏರ್ ಷೋ ತಾಲೀಮು ವೇಳೆ ಅವಘಡ: 2 ಸೂರ್ಯಕಿರಣ್ ಜೆಟ್ ಗಳ ಡಿಕ್ಕಿ, ಓರ್ವ ಪೈಲಟ್ ಸಾವು ಶಂಕೆ

ವಿರಾಟ್ ಕೊಹ್ಲಿ

2019ರ ವಿಶ್ವಕಪ್‌ಗೆ ದಿನಗಣನೆ: ಬಲಿಷ್ಠ ತಂಡಗಳು ಹಾಗೂ ಸ್ಟಾರ್ ಆಟಗಾರರು!

If India thinks attack us and we will not think of retaliating, we will retaliate: Pakistan PM Imran Khan

ಪಾಕ್ ಮೇಲೆ ಭಾರತ ದಾಳಿ ಮಾಡುವುದಾದರೆ, ನಮ್ಮಿಂದ ಸಾಧ್ಯವಿಲ್ಲವೇ..: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ಕೊಹ್ಲಿ-ಧೋನಿ

2019 ಐಪಿಎಲ್ ವೇಳಾಪಟ್ಟಿ: ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ಆರಂಭಿಕ ಜಟಾಪಟಿ!

less than 100 hours of Pulwama terrorist attack, we eliminated JeM leadership in the valley: Indian Army

ಪುಲ್ವಾಮ ದಾಳಿ: ಕೇವಲ 100 ಗಂಟೆಯೊಳಗೆ ಕಾಶ್ಮೀರದಲ್ಲಿ ಜೆಇಎಂ ನಾಯಕತ್ವವೇ ನಿರ್ನಾಮ: ಭಾರತೀಯ ಸೇನೆ

Ola gets a whopping investment of Rs. 650 crore from 
Sachin bansal

'ಓಲಾ'ದಲ್ಲಿ ಸಚಿನ್ ಬನ್ಸಾಲ್ 650 ಕೋಟಿ ರೂ. ಹೂಡಿಕೆ

ಸಂಗ್ರಹ ಚಿತ್ರ

ಕಲಬುರಗಿ: ಪಾಕ್ ಧರ್ಮ ಪ್ರಚಾರಕನ ಕತ್ತು ಸೀಳಿ ಭೀಕರ ಕೊಲೆ!

Kumaraswamy

ನಾವು ಭಿಕ್ಷುಕರಲ್ಲ: ಸ್ಥಾನ ಹೊಂದಾಣಿಕೆ ಕುರಿತು ಕಾಂಗ್ರೆಸ್ ಗೆ ಸಿಎಂ ಕುಮಾರಸ್ವಾಮಿ

ಹರ್ಭಜನ್ ಸಿಂಗ್

ಪುಲ್ವಾಮಾ ದಾಳಿ: ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ಟೀಂ ಇಂಡಿಯಾ ಆಡದಂತೆ ಹರ್ಭಜನ್ ಆಗ್ರಹ

BJP MLA CT Ravi Speeding car rams into car in Tumkuru, two dead

ಮೂತ್ರ ವಿಸರ್ಜನೆ ಮಾಡುತ್ತಿದ್ದವರ ಮೇಲೆ ಹರಿದ ಶಾಸಕ ಸಿಟಿ ರವಿ ಕಾರು, ಇಬ್ಬರ ದುರ್ಮರಣ

Why Jet Airways is being sold for just one rupee

ಕೇವಲ 1 ರೂಪಾಯಿಗೆ ಮಾರಾಟಕ್ಕಿದೆ ಜೆಟ್ ಏರ್ ವೇಸ್!

Modi flags off locomotive

ಡೀಸೆಲ್‌ನಿಂದ ಇಲೆಕ್ಟ್ರಿಕ್‌ ಪರಿವರ್ತಿತ ವಿಶ್ವದ ಮೊದಲ ಲೋಕೊಮೋಟಿವ್ ಗೆ ಮೋದಿ ಚಾಲನೆ

Collection Photo

ದಾಳಿಕೋರರನ್ನು ಭಾರತಕ್ಕೊಪ್ಪಿಸುವಂತೆ ಇಮ್ರಾನ್‍ಗೆ ಸಲಹೆ ನೀಡಿ: ಸಿಧುಗೆ ದಿಗ್ವಿಜಯ್ ಕಿವಿಮಾತು

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ರಶ್ಮಿಕಾ-ರಕ್ಷಿತ್ ಬ್ರೇಕಪ್ ಸುದ್ದಿ: ರಕ್ಷಿತ್ ಪರ ಕಿಚ್ಚ ಸುದೀಪ್ ಹೇಳಿದ್ದೇನು!

Rashmika Mandanna-Rakshit Shetty-Kiccha Sudeep

ರಶ್ಮಿಕಾ ಮಂದಣ್ಣ-ರಕ್ಷಿತ್ ಶೆಟ್ಟಿ-ಕಿಚ್ಚ ಸುದೀಪ್

ಬೆಂಗಳೂರು: ಸ್ಯಾಂಡಲ್ವುಡ್ ನ ಕಿರಿಕ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಬ್ರೇಕಪ್ ಕುರಿತಂತೆ ರಕ್ಷಿತ್ ಶೆಟ್ಟಿ ನಿನ್ನೆ ಸ್ಪಷ್ಟನೆ ನೀಡಿದ್ದು ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ರಕ್ಷಿತ್ ಪರ ಬ್ಯಾಟ್ ಬೀಸಿದ್ದಾರೆ. 

ಕಪೋಲಕಲ್ಪಿತ ಸುದ್ದಿಗಳಿಂದ ರಶ್ಮಿಕಾ ಮಂದಣ್ಣ ಅವರನ್ನು ದೂಷಿಸಬೇಡಿ ಎಂದು ಫೇಸ್ ಬುಕ್ ನಲ್ಲಿ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದರು. ಇದರ ಬಗ್ಗೆ ಇಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿ ರಕ್ಷಿತ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಜೀವನದಲ್ಲಿ ಒಳ್ಳೆಯದಾಗಲಿ ಅಂತ ಶುಭ ಹಾರೈಸಿದರು. 

ರಕ್ಷಿತ್ ನೀವು ಘನತೆ ಹಾಗೂ ಪ್ರಬುದ್ಧವಾಗಿಯೇ ಮಾತನಾಡಿದ್ದೀರಿ. ಖುಷಿಯಾಗಿರಿ ನನ್ನ ಗೆಳೆಯ. ಸೆಲೆಬ್ರಿಟಿಗಳು ಅಂತ ತಕ್ಷಣ ತಮ್ಮೆಲ್ಲಾ ಭಾವನಾತ್ಮಕ ವಿಚಾರಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕೆಂದಿಲ್ಲ. ಅದು ಸಾಧ್ಯವೂ ಇಲ್ಲ. ಇಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಬದುಕಿದೆ. ಎಲ್ಲದಕ್ಕೂ ಸಮಯ ಕೂಡಿಬರಬೇಕು. ಹೀಗಾಗಿ ಈ ಬಗ್ಗೆ ಮತ್ತೆ ಯಾರೂ ಏನು ಕೇಳಬೇಕಾಗಿಲ್ಲ ಅಂತ ಸುದೀಪ್ ಬರೆದುಕೊಂಡಿದ್ದಾರೆ. 

ನಿನ್ನೆ ಫೇಸ್ ಬುಕ್ ನಲ್ಲಿ ರಕ್ಷಿತ್ ಶೆಟ್ಟಿ ಅವರು, "ಬೇರೆ ವಿಷಯಗಳ ಕುರಿತು ಗಮನ ಹರಿಸಬೇಕಿರುವುದರಿಂದ ಸಾಮಾಜಿಕ ಜಾಲತಾಣದಿಂದ ದೂರ ಇರುತ್ತೇನೆ ಎಂದು ಹೇಳಿದೆ. ಆದರೆ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿರುವ ಸುದ್ದಿಗಳು ನಾನು ಸಾಮಾಜಿಕ ಜಾಲತಾಣಕ್ಕೆ ಮತ್ತೆ ಬರಬೇಕಾಯಿತು" ಎಂದಿದ್ದರು. 

ರಶ್ಮಿಕಾ  ಅವರ ಬಗ್ಗೆ ಈಗಾಗಲೇ ನಿರ್ದಿಷ್ಟ ಅಭಿಪ್ರಾಯ ರೂಪುಗೊಂಡಿದೆ. ಅಭಿಪ್ರಾಯ ರೂಪುಗೊಳ್ಳುವ ರೀತಿಯಲ್ಲೇ ಕೆಲವೊಂದು ಸಂಗತಿಗಳನ್ನು ತೋರಿಸಲಾಗಿದೆ. ಆದ್ದರಿಂದ  ನಾನು ಯಾರನ್ನೂ ಸಹ ದೂಷಿಸುವುದಿಲ್ಲ. ನಾವು ನೋಡಿದ್ದನ್ನೇ, ಕೇಳಿದ್ದನ್ನೇ ನಿಜ ಎಂದು ನಂಬುತ್ತೇವೆ. ಆದರೆ ಅದೇ ಸತ್ಯ ಆಗಿರಬೇಕೆಂದೇನು ಇಲ್ಲ. ಮತ್ತೊಂದು ದೃಷ್ಟಿಕೋನದಿಂದ ಯೋಚನೆ ಮಾಡದೇಯೇ ನಾವು ನಿರ್ಧಾರಕ್ಕೆ ಬಂದು ಬಿಡುತ್ತೇವೆ. 

ರಶ್ಮಿಕಾ ಮಂದಣ್ಣ ಅವರನ್ನು ನಾನು 2 ವರ್ಷಗಳಿಂದ ನೋಡಿದ್ದೇನೆ, ಅವರೇನೆಂದು ನಿಮ್ಮೆಲ್ಲರಿಗಿಂತ ನನಗೆ ಚೆನ್ನಾಗಿ ಗೊತ್ತು. ದಯವಿಟ್ಟು ಅವರ ಬಗ್ಗೆ ಕಪೋಲಕಲ್ಪಿತ ಸುದ್ದಿಗಳನ್ನು ನಿಜ ಎಂದು ನಂಬಬೇಡಿ. ಅವರನ್ನು ಶಾಂತಿ ಇಂದ ಇರಲು ಬಿಡಿ. ಶೀಘ್ರವೇ ಈ ಎಲ್ಲ ಗೊಂದಲಗಳೂ ಕೊನೆಯಾಗಲಿವೆ, ನಿಜ ಏನೆಂದು ತಿಳಿಯಲಿದೆ, ಮಾಧ್ಯಮಗಳಲ್ಲಿನ ಕಪೋಲಕಲ್ಪಿತ ಸುದ್ದಿಗಳನ್ನು ನಂಬಬೇಡಿ" ಎಂದು ರಕ್ಷಿತ್ ಶೆಟ್ಟಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.
Posted by: VS | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Kiccha Sudeep, Rakshit Shetty, Rashmika Mandanna, Breakup, Engagement, ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಬ್ರೇಕ್ ಅಪ್, ನಿಶ್ಚಿತಾರ್ಥ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS