ವಿನು ಬಳಂಜ 'ನಾಥೂರಾಮ್' ನಲ್ಲಿ ರಿಷಬ್ ಶೆಟ್ಟಿಗೆ ಕಿಶೋರ್ ಸಾಥ್!

Published: 08 Sep 2018 12:14 PM IST
ಕಿಶೋರ್
ಬೆಂಗಳೂರು: ವಿನು ಬಳಂಜ ಅವರ ಮುಂದಿನ ಚಿತ್ರ "ನಾಥುರಾಮ್" ನಲ್ಲಿ ರಿಷಭ್ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದು ಜತೆಗೆ ಇನ್ನೋರ್ವ ನಟ ಕಿಶೋರ್ ಅಭಿನಯವೂ ಇರುವುದು ವಿಶೇಷ.

ಬಹು ಸಮಯದ ಬಳಿಕ ಕನ್ನಡ ಚಿತ್ರವೊಂದರಲ್ಲಿ ಕಿಶೋರ್ ಅಭಿನಯಿಸುತ್ತಿದ್ದು ಈ ಚುತ್ರದಲ್ಲಿ ಅವರುಗೆ ಬಲವಾದ ಹಿನ್ನೆಲೆಯ ಪಾತ್ರವಿದೆ ಎನ್ನಲಾಗಿದೆ. ಅಂದಹಾಗೆ ಅನಂತ್ ನಾಗ್ ಸಹ ಈ ಚಿತ್ರದ ಪ್ರಮುಖ ತಾರಾ ಬಳಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಿರುತೆರೆಗಳಲ್ಲಿ ಧಾರಾವಾಹಿಗಳನ್ನು ನಿರ್ದೇಶಿಸುತ್ತಿದ್ದ ವಿನು ಬಳಂಜ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದ್ದು ಚಿತ್ರತಂಡ ಚಿತ್ರದ ನಾಯಕಿ ಪಾತ್ರಕ್ಕಾಗಿ ಹೊಸ ಮುಖದ ಹುಡುಕಾಟದಲ್ಲಿದೆ.

ಶ್ರೀದೇವಿ ಪ್ರೊಡಕ್ಷನ್ಸ್ ನಿರ್ಮಾಣದ ನಾಥೂರಾಮ್ ಈ ಹಿಂದೆ ರಂಗಿತರಂಗ ಮೂಲಕ ಚಿತ್ರ ನಿರ್ಮಾಣ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದ ನಿರ್ಮಾಣ ಸಂಸ್ಥೆಯ ನಾಲ್ಕನೇ ಕೊಡುಗೆ ಇದಾಗಿದೆ.

ರಿಷಬ್ ಇದಾಗಲೇ "ಕಥಾಸಂಗಮ", "ಇವನೇ ಸತ್ಯನಾರಾಯಣ" ಚಿತ್ರಗಳಿಗೆ ಬಂಡವಾಳ ಹೂಡಿದ್ದಾರೆ. ಇನ್ನು "ನಾಥೂರಾಮ್" ಚಿತ್ರದ ಚಿತ್ರೀಕರಣ ಮುಂದಿನ ಹದಿನೈದು ದಿನಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ.
Posted by: RHN | Source: The New Indian Express

ಈ ವಿಭಾಗದ ಇತರ ಸುದ್ದಿ