ಪವನ್ ಕಲ್ಯಾಣ್, ನಾನಿ ಬಳಿಕ ತೆಂಡೂಲ್ಕರ್ ವಿರುದ್ಧ ಕೆಟ್ಟದಾಗಿ ಪೋಸ್ಟ್, ನಟಿ ಶ್ರೀರೆಡ್ಡಿ ವಿರುದ್ಧ ಅಶ್ಲೀಲ ಟ್ರೋಲ್!

Published: 12 Sep 2018 04:51 PM IST | Updated: 12 Sep 2018 06:22 PM IST
ಚಾರ್ಮಿ ಕೌರ್-ಸಚಿನ್ ತೆಂಡೂಲ್ಕರ್- ಶ್ರೀರೆಡ್ಡಿ
ಟಾಲಿವುಡ್ ನಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿ, ಪವರ್ ಸ್ಟಾರ್ ಪವನ್ ಕಲ್ಯಾಣ್, ನಟ ನಾನಿ ವಿರುದ್ಧ ತೆಗಳಿದ್ದ ನಟಿ ಶ್ರೀರೆಡ್ಡಿ ಇದೀಗ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಗ್ಗೆ ಪೋಸ್ಟ್ ಮಾಡಿ ಟ್ರೋಲ್ ಗೆ ಗುರಿಯಾಗಿದ್ದಾರೆ. 

ಶ್ರೀರೆಡ್ಡಿ ತಮ್ಮ ಪೋಸ್ಟ್ ನಲ್ಲಿ ಸಚಿನ್ ತೆಂಡೂಲ್ಕರ್ ಓರ್ವ ಪ್ರಣಯ ವ್ಯಕ್ತಿ. ಅವರು ಹೈದರಾಬಾದ್ ಗೆ ಬಂದಾಗ ಚಾರ್ಮಿಂಗ್ ಗರ್ಲ್(ಚಾರ್ಮಿ ಕೌರ್) ಜತೆ ಚಕ್ಕಂದವಾಡಿದ್ರೂ, ಹೈ ಪ್ರೊಫೈಲ್ ಹೊಂದಿರುವ ಚಾಮುಂಡೇಶ್ವರ್ ಸ್ವಾಮಿ ಮಧ್ಯವರ್ತಿಯಾಗಿದ್ದ. ಚನ್ನಾಗಿ ಆಟುವಾ ವ್ಯಕ್ತಿ ಚನ್ನಾಗಿ ರೋಮ್ಯಾನ್ಸ್ ಮಾಡಬಹುದು??? ಎಂದು ಬರೆದುಕೊಂಡಿದ್ದಾರೆ. 

ಶ್ರೀರೆಡ್ಡಿ ಪೋಸ್ಟ್ ಇದೀಗ ಸಚಿನ್ ತೆಂಡೂಲ್ಕರ್ ಹಾಗೂ ಚಾರ್ಮಿ ಕೌರ್ ಅಭಿಮಾನಿಗಳು ಕೆರಳುವಂತೆ ಮಾಡಿದ್ದು ಶ್ರೀರೆಡ್ಡಿಯನ್ನು ಅಶ್ಲೀಲವಾಗಿ ನಿಂದಿಸಿ ಟ್ರೋಲ್ ಮಾಡುತ್ತಿದ್ದಾರೆ. 

ಈ ಹಿಂದೆ ಶ್ರೀರೆಡ್ಡಿ ಪವನ್ ಕಲ್ಯಾಣ್, ನಾನಿ, ತಮಿಳು ನಿರ್ದೇಶಕ ಮುರುಗದಾಸ್ ವಿರುದ್ಧ ಕೆಂಡಕಾರಿದ್ದರು. ಇನ್ನು ತಮ್ಮ ಜೊತೆ ಅಭಿರಾಮ್ ದಗ್ಗುಬಾಟಿ ಸೆಕ್ಸ್ ಮಾಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. 

ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುವ ಸಚಿನ್ ತೆಂಡೂಲ್ಕರ್ ಅವರು ಅಷ್ಟೇ ಚನ್ನಾಗಿ ರೋಮ್ಯಾನ್ಸ್ ಮಾಡಬಹುದು ಎಂದು ಪೋಸ್ಟ್ ಮಾಡಿ ಶ್ರೀರೆಡ್ಡಿ ಟ್ರೋಲ್ ಗೆ ಗುರಿಯಾಗಿದ್ದಾರೆ.
Posted by: VS | Source: Online Desk

ಈ ವಿಭಾಗದ ಇತರ ಸುದ್ದಿ