ರಕ್ಷಿತ್-ರಶ್ಮಿಕಾ ಬ್ರೇಕಪ್ ಬಗ್ಗೆ ಸುಮನ್ ಮಂದಣ್ಣ ಹೇಳಿದ್ದೇನು?

Published: 11 Sep 2018 10:24 AM IST | Updated: 11 Sep 2018 05:34 PM IST
ರಶ್ಮಿಕಾ ಮಂದಣ್ಣ-ಸುಮನ್ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ (ಸಂಗ್ರಹ ಚಿತ್ರ)
ಬೆಂಗಳೂರು: ಕನ್ನಡದ ಸೂಪರ್ ಹಿಟ್ ಚಿತ್ರ ''ಕಿರಿಕ್ ಪಾರ್ಟಿ''ಯ ಕ್ಯೂಟ್ ಜೋಡಿ ಎಂದು ಅಭಿಮಾನಿಗಳಿಂದ ಕರೆಸಿಕೊಂಡಿದ್ದ ರಕ್ಷಿತ್-ರಶ್ಮಿಕಾ ಜೋಡಿ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎಂಬ ಸುದ್ದಿಗೆ ರಶ್ಮಿಕಾ ಮಂದಣ್ಣ ತಾಯಿ ಸುಮನ್ ಮಂದಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಒಂದಾಗಿದ್ದ ಈ ಜೋಡಿ ಕಳೆದ ವರ್ಷ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಯಾವಾಗ ಮದುವೆ ಎಂದು ಎಲ್ಲರೂ ಕೇಳುತ್ತಿರುವಾಗಲೇ ಸಂಬಂಧ ಮುರಿದುಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಮನ್ ಮಂದಣ್ಣ, ''ನಾವು ಕಳೆದ ಒಂದು ತಿಂಗಳಿನಿಂದ ತುಂಬಾ ಡಿಸ್ಟರ್ಬ್ ಆಗಿದ್ದೇವೆ. ಅವರವರ ಬದುಕು ಅವರವರ ಸ್ವಂತದ್ದು. ಖುಷಿಯಿಂದ ಬದುಕಬೇಕು. ಕೆಲಸಕ್ಕೆ ಕಷ್ಟ ಮಾಡಿಕೊಂಡು ಏಕೆ ಇರಬೇಕು? ನಮ್ಮ ಕುಟುಂಬದ ವಿಷಯ. ಎರಡು ಕುಟುಂಬಗಳು ಕೂತು ಚರ್ಚೆ ಮಾಡಿ ನಿರ್ಧಾರ ಮಾಡಿದ್ದೇವೆ. ಇದರಲ್ಲಿ ಏನೂ ತಲೆಹೋಗುವಂಥದ್ದು ಇಲ್ಲ'' ಎಂದಿದ್ದಾರೆ.

Posted by: SUD | Source: Online Desk

ಈ ವಿಭಾಗದ ಇತರ ಸುದ್ದಿ