ಸುದೀಪ್ 'ಪೈಲ್ವಾನ್' ಗೆ ಹಾಲಿವುಡ್ ನ ಲಾರ್ನೆಲ್ ಸ್ಟೋವಲ್ ಸ್ಟಂಟ್ಸ್!
Published: 12 Sep 2018 12:57 PM IST | Updated: 12 Sep 2018 01:24 PM IST
ಬೆಂಗಳೂರು: ಕೆಸಿಸಿ ಕ್ರಿಕೆಟ್ ಕಪ್ ಮುಗಿದಿದ್ದು, ಕೃಷ್ಣ ನಿರ್ದೇಶನಕ ಪೈಲ್ವಾನ್ ಚಿತ್ರದ ಶೂಟಿಂಗ್ ಗೆ ಸುದೀಪ್ ವಾಪಾಸಾಗಿದ್ದಾರೆ. ಸಿನಿಮಾಗೆ ಅಂತಾರಾಷ್ಟ್ರೀಯ ಫೈಟರ್ ಹಾಲಿವುಡ್ ನ ಲಾರ್ನೆಲ್ ಸ್ಟೋವಲ್ ಅವರನ್ನು ಕರೆ ತಂದಿದ್ದಾರೆ.
ಲರ್ನೆಲ್ ಸ್ಟೋವಲ್ ಅಮೇರಿಕಾದ ಜನಪ್ರಿಯ ಕ್ರೀಡಾಪಟು. ಫೈಟಿಂಗ್, ಮಾರ್ಷೆಲ್ ಆರ್ಟ್ಸ್ನಲ್ಲಿ ವಿಶ್ವ ವಿಖ್ಯಾತ ಕ್ರೀಡಾಪಟು. ಆದರೆ, 2001ರಲ್ಲಿ ಸಿನಿಮಾ ರಂಗದಲ್ಲಿಯೇ ನೆಲೆಸಲು ಮನಸ್ಸು ಮಾಡಿದ್ದರು. ಅಲ್ಲಿಂದ ನೂರಕ್ಕೂ ಅಧಿಕ ಸಿನಿಮಾಗಳಿಗೆ ಸಾಹಸ ನಿರ್ದೇಶಕರಾಗಿ ದುಡಿದಿದ್ದಾರೆ. ಟೈಟಾನ್ಸ್, ಫೇಟ್ ಆಫ್ ದಿ ಫ್ಯೂರಿಯಸ್, ದಿ ಪ್ರಿನ್ಸ್, ಸ್ಟೋಲನ್, ಸ್ನೋಫಾಲ್ ಗಳಲ್ಲಿ ಕೆಲಸ ಮಾಡಿದ್ದಾರೆ
ಲರ್ನೆಲ್ ತಮಿಳಿನ ‘ಬೂಲೊಗಂ’ ಸಿನಿಮಾದಿಂದ ಭಾರತಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಮುಂದೆ ಸುಲ್ತಾನ್, ಬಾಹುಬಲಿ- 2 ನಲ್ಲೂ ಟ್ಯಾಲೆಂಟ್ ಏನು ಅಂತಾ ತೋರಿಸಿಕೊಟ್ಟಿದ್ದರು. ಸುಲ್ತಾನ್ ಮತ್ತು ಬಾಹುಬಲಿ- 2 ಸಿನಿಮಾದ ಸಾಹಸ ಲರ್ನೆಲ್ಗೆ ‘ಭಾಗ್ಯದ ಬಾಗಿಲು’ ತೆರೆಯಿತು.
ಅಕ್ಟೋಬರ್ ನಲ್ಲಿ ಲರ್ನೆಲ್ ಭಾರತಕ್ಕೆ ಆಗಮಿಸಲಿದ್ದು, ನಟ ಸುದೀಪ್ ಬದಲಾಗಿ ಡಮ್ಮಿ ಕ್ಯಾರೆಕ್ಟರ್ ಜೊತೆ ಫೈಟಿಂಗ್ ಮಾಡಲಿದ್ದಾರೆ, ಸುದೀಪ್ ಗೆ ಅಂತಿಮ ಶಾಟ್ ನ ತರಬೇತಿ ನೀಡಲಿದ್ದಾರೆ.
ಸಿನಿಮಾದ ಪ್ರಮುಖ ದೃಶ್ಯವನ್ನು ಸದ್ಯ ಹೈದರಾಬಾದ್ ನ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಮುಂದಿನ ಶೂಟಿಂಗ್ ನಡೆಯಲಿದೆ, .
ಸಿನಿಮಾವನ್ನ ಜಾಗತಿಕ ಮಾರುಕಟ್ಟೆಯ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕೆನ್ನುವ ಹಂಬಲದಲ್ಲಿದ್ದಾರೆ. ಅದಕ್ಕಾಗಿ ಕೋಟಿ ಕೋಟಿ ಸುರಿಯುತ್ದಿದ್ದಾರೆ. ಕೃಷ್ಣರ ಶ್ರಮಕ್ಕೆ ತಕ್ಕಂತೆ ಕಿಚ್ಚ ಸುದೀಪ್ ಕೂಡ ಸಾಥ್ ನೀಡಿದ್ದಾರೆ.
Posted by: SD | Source: The New Indian Express