ತಮಿಳು ನಟ ಕೋವೈ ಸೆಂಥಿಲ್ ನಿಧನ

Published: 10 Sep 2018 12:17 AM IST
ಕೋವೈ ಸೆಂಥಿಲ್
ಕೊಯಂಬತ್ತೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೋವೈ ಸೆಂಥಿಲ್ ಎಂದೇ ಜನಪ್ರಿಯರಾಗಿದ್ದ ತಮಿಳು ಚಿತ್ರರಂಗದ ಹಿರಿಯ ನಟ ಕುಮಾರಸ್ವಾಮಿ ಅವರು ಭಾನುವಾರ ನಿಧನರಾಗಿದ್ದಾರೆ.

74 ವರ್ಷದ ಸೆಂಥಿಲ್ ಅವರು ಇಂದು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

1980ರಲ್ಲಿ ತೆರೆ ಕಂಡ ಕೆ ಭಾಗ್ಯರಾಜ್ ನಿರ್ದೇಶನದ 'ಒರು ಕೈ ಒಸಾಯ್' ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಸೆಂಥಿಲ್ ಅವರು 1999ರಲ್ಲಿ ತೆರೆ ಕಂಡ ರಜನಿಕಾಂತ್ ಅವರ ಪಡಿಯಪ್ಪ ಚಿತ್ರ ಸೇರಿದಂತೆ ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸೆಂಥಿಲ್ ನಿಧನಕ್ಕೆ ದಕ್ಷಿಣ ಭಾರತ ಕಲಾವಿದರ ಸಂಘ ತೀವ್ರ ಸಂತಾಪ ಸೂಚಿಸಿದೆ.
Posted by: LSB | Source: PTI

ಈ ವಿಭಾಗದ ಇತರ ಸುದ್ದಿ