ಕನ್ನಡದಲ್ಲಿ ಮತ್ತೊಂದು ಹೊಸ ಚಾನೆಲ್: ಕಲರ್ಸ್ ಕನ್ನಡ ಸಿನಿಮಾ!

Published: 11 Sep 2018 12:23 PM IST
ಕಲರ್ಸ್ ಕನ್ನಡ ಸಿನಿಮಾ ಚಾನೆಲ್
ಮುಂಬಯಿ: ಈಗಾಗಲೇ ತನ್ನ ವೈವಿಧ್ಯಮ ಮನೋರಂಜನಾ ಕಾರ್ಯಕ್ರಮಗಳಿಂದಾಗಿ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿರುವ ವೈಕಾಮ್-18 ಪ್ರಾದೇಶಿಕವಾಗಿ ಮತ್ತಷ್ಟು ವಿಸ್ತರಿಸಲು ನಿರ್ಧರಿಸಿದ್ದು, ಕಲರ್ಸ್ ಕನ್ನಡ ಸಿನಿಮಾ ಚಾನೆಲ್ ಆರಂಭಿಸಲು ಸಿದ್ಧತೆ ನಡೆಸಿದೆ.

2016 ರಲ್ಲಿ ರಿಶ್ತೆ ಸಿನಿಫ್ಲೆಕ್ಸ್ ಆರಂಭಿಸಲಾಗಿದ್ದು, ಇದು 2ನೇ  ಸಿನಿಮಾ ಚಾನೆಲ್ ಇದಾಗಿದೆ. ವೈಕಾಮ್ 18 ಅಡಿಯಲ್ಲಿ, ಈಜ್ಞ ಚಾನೆಲ್ ಆರಂಭವಾಗುತ್ತಿದ್ದು, ಪ್ರಾದೇಶಿಕ ಭಾಷೆಗಳಲ್ಲಿ ಹೆಚ್ಚಿಮನ ಮನರಂಜನೆ ನೀಡುವುದು ತಮ್ಮ  ಉದ್ದೇಶವಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಸೆಪ್ಟಂಬರ್ 24 ರಂದು ಕಾರ್ಯರಂಭ ಮಾಡಲಿದ್ದು ಸುಮಾರು 450 ಸಿನಿಮಾಗಳು ಲೈಬ್ರರಿಯಲ್ಲಿವೆ, ಮಾರುಕಟ್ಟೆ ಶೇರಿನಲ್ಲಿ ಹೆಚ್ಚಳವಾಗಲು ಸಹಾಯವಾಗುತ್ತದೆ ಎಂದು ವೈಕಾಮ್ 18 ಸಿಇಓ  ಸುಂಧಾಂಶು ಹೇಳಿದ್ದಾರೆ. 
Posted by: SD | Source: PTI

ಈ ವಿಭಾಗದ ಇತರ ಸುದ್ದಿ