ಅಯ್ಯಪ್ಪನುಂ-ಕೋಶಿಯುಂ ಮಲಯಾಳಂ ಸಿನಿಮಾ ನಿರ್ದೇಶಕ ಸಚ್ಚಿ ಇನ್ನಿಲ್ಲ 

ಮಲಯಾಳಂ ಚಿತ್ರರಂಗದ  ಪ್ರತಿಭಾವಂತ ನಿರ್ದೇಶಕ ಕೆ. ಆರ್.ಸಚ್ಚಿದಾನಂದ್ ಅಲಿಯಾಸ್ ಸಚ್ಚಿ ಜೂನ್ 18ರಂದು ನಿಧನರಾಗಿದ್ದಾರೆ. ಇತ್ತೀಚೆಗೆ ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಚ್ಚಿ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ, ಮತ್ತೊಮ್ಮೆ ತೀವ್ರ ಹೃದಯ ಸ್ತಂಬನವಾಗಿ ಮೃತಪಟ್ಟಿದ್ದಾರೆ.

published : 19 Jun 2020

ಚಿರು, ನೀ ನನ್ನ ಆತ್ಮದ ಅರ್ಧ ಭಾಗ', ನೋವು ತೋಡಿಕೊಂಡ ಮೇಘನಾ

ಪತಿಯನ್ನು ನೆನೆದು ಭಾರವಾದ ಮನದ ನೋವನ್ನೆಲ್ಲ ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡಿರುವ ಮೇಘನಾ, ‘ನೋವಿನ ಜತೆಗೆ ಹರುಷವನ್ನೂ ನೀಡಿ ಹೋಗಿದ್ದೀಯಾ, ನೀ ಮತ್ತೆ ಬರುವವರೆಗೂ ಕಾಯುವೆ” ಎಂದು ಬರೆದುಕೊಂಡಿದ್ದಾರೆ.

published : 18 Jun 2020

ಯಶ್ ಮುಂದಿನ ಚಿತ್ರದ ಮೂಲಕ ಕನ್ನಡದ ಮತ್ತೊಂದು ಪ್ರತಿಭೆ ರಾಷ್ಟ್ರ ಮಟ್ಟಕ್ಕೆ!

ನಿರ್ದೇಶಕ ನರ್ತನ್ ಅವರ ಮುಂಬರುವ ಯೋಜನೆಗಾಗಿ ಯಶ್ ಸಹಕರಿಸಿದ್ದಾರೆ ಎಂಬ ಹಾಪೋಹಗಳಿಗೆ ಮತ್ತೆ ರೆಕ್ಕೆ ಪುಕ್ಕ ಬಂದಿದೆ. ನಟ-ನಿರ್ದೇಶಕ ಜೋಡಿ ಈಗ ಮುಂದಿನ ಹಂತದ ಚರ್ಚೆಗಳಿಗೆ ತೆರಳಿದ್ದಾರೆ ಎಂಬುದು ತಿಳಿದುಬಂದಿದೆ. 

published : 18 Jun 2020

'ಭಜರಂಗಿ 2' ತಂಡದಿಂದ ಶಿವರಾಜ್ ಕುಮಾರ್ ಗೆ ಕಾದಿದೆ ಅಚ್ಚರಿ!

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸಂತೋಷದ ಹಾಗೂ ಕುತೂಹಲಕಾರಿ ಸುದ್ದಿಯೊಂದು ಹೊರಬಿದ್ದಿದೆ. ಜುಲೈ 12 ರಂದು ಹ್ಯಾಟ್ರಿಕ್ ಹಿರೋ ಹುಟ್ಟುಹಬ್ಬದ ಪ್ರಯುಕ್ತ ಭಜರಂಗಿ 2 ಚಿತ್ರದ ದೃಶ್ಯ ವಿಡಿಯೋವೊಂದನ್ನು ಬಿಡುಗಡೆ ಮಾಡಲು ನಿರ್ದೇಶಕ ಎ. ಹರ್ಷ ಎದುರು ನೋಡುತ್ತಿದ್ದಾರೆ.

published : 18 Jun 2020

ಭಾರತದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳು ಸಮೀಕ್ಷೆ: ಕೆಜಿಎಫ್ ಟಾಪ್ 2, ಉಪ್ಪಿ ಅಭಿನಯದ ‘ಕಬ್ಬ’ 3ನೇ ಸ್ಥಾನದಲ್ಲಿ

ಇದು ಕನ್ನಡಿಗರಾದ ನಾವು ಹೆಮ್ಮೆ ಪಡಬೇಕಾದ ಸಂಗತಿ! ಭಾರತದ ಹೆಸರಾಂತ ಪತ್ರಿಕೆ ಹಾಗೂ ವೆಬ್ ಸೈಟ್ ಗಳು ನಡೆಸಿರುವ ದೇಶದ ಟಾಪ್ 10 ಎಕ್ಸ್ಪೆಕ್ಟೆಡ್ ಸಿನಿಮಾಗಳು ಎಂಬ ಸಮೀಕ್ಷೆಯಲ್ಲಿ ಕೆಜಿಎಫ್ ಎರಡನೇ ಸ್ಥಾನದಲ್ಲಿದ್ದರೆ," ಕಬ್ಜ" ಚಿತ್ರ ಮೂರನೇ ಸ್ಥಾನದಲ್ಲಿದೆ.

published : 17 Jun 2020

ನ್ಯಾಚುರಲ್ ಹಾರರ್ ಥ್ರಿಲ್ಲರ್ 'ಅವನಿ'ಗಾಗಿ ಒಂದಾದ ನಿರ್ದೇಶಕ ಗಿರಿರಾಜ್, ನಿರ್ಮಾಪಕ ಉದಯ್

ನಿರ್ಮಾಪಕ ಉದಯ್ ಕೆ ಮೆಹ್ತಾ ಮತ್ತು ಮೂರು ಬಾರಿಯ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಬಿ ಎಂ ಗಿರಿರಾಜ್ ಇಬ್ಬರೂ ನ್ಯಾಚುರಲ್ ಹಾರರ್ ಥ್ರಿಲ್ಲರ್ ಚಿತ್ರದ ಮೂಲಕ ಒಟ್ತಾಗುತ್ತಿದ್ದಾರೆ. "ಅವನಿ" ಉದಯ್  ನಟ ನಿರ್ಮಾಪಕರೂ ಆಗಿರುವ  ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟರೆಲ್ಲ ನಟಿಸುತ್ತಿದ್ದಾರೆ ಎನ್ನಲಾಗಿದೆ.

published : 17 Jun 2020

'ನಮ್ಮ ಸಂಬಂಧ ಯಾವಾಗ್ಲೂ ಚಿರಂಜೀವಿಯಾಗೇ ಇರುತ್ತೆ ಬಂಗಾರ': ಅಗಲಿದ ನಟನಿಗೆ ಸರ್ಜಾ ಫ್ಯಾಮಿಲಿ ಭಾವನಾತ್ಮಕ ಪತ್ರ

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅಕಾಲಿಕ ನಿಧನ ಅವರ ಕುಟುಂಬ, ಅಭಿಮಾನಿಗಳಲ್ಲಿ ಶೋಕ ಮಡುಗಟ್ಟುವಂತೆ ಮಾಡಿದೆ. ಈ ನಡುವೆ ನಟ ಚಿರಂಜೀವಿ ಸರ್ಜಾ ಅವರ ಹನ್ನೊಂದನೇ ದಿನದ ಕಾರ್ಯ ಇಂದು ನಡೆಯಲಿದೆ. ಈ ಸಮಯದಲ್ಲಿ ಸರ್ಜಾ ಕುಟುಂಬ ಅಗಲಿದ ನಟನಿಗೆ ಆಪ್ತವಾಗಿ, ಭಾವನಾತ್ಮಕ ಪತ್ರವೊಂದನ್ನು ಬರೆದಿದೆ.

published : 17 Jun 2020

ಫ್ಯಾಮಿಲಿ ಪ್ಯಾಕ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ

ಸದಭಿರುಚಿ ಚಿತ್ರಗಳ ನಿರ್ಮಾಣಕ್ಕೆ ಹೆಸರಾಗಿರುವ ಪಿ ಆರ್ ಕೆ ಪ್ರೊಡಕ್ಷನ್ಸ್‌ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿರುವ ‘ಫ್ಯಾಮಿಲಿ ಪ್ಯಾಕ್’ ಚಿತ್ರದ ಮೊದಲ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.

published : 16 Jun 2020

ಡಾರ್ಲಿಂಗ್ ಕೃಷ್ಣ ಹೊಸ ಚಿತ್ರಕ್ಕೆ ಮಹೂರ್ತ ಫಿಕ್ಸ್: ಜೂನ್ 18ಕ್ಕೆ srikrishna@gmail.com ಶೂಟಿಂಗ್ ಸ್ಟಾರ್ಟ್

ಕೊರೋನಾ ಸಾಂಕ್ರಾಮಿಕ ಮಧ್ಯೆಯೇ srikrishna@gmail.com ಚಿತ್ರಕ್ಕೆ ಮಹೂರ್ತ ಫಿಕ್ಸ್ ಆಗಿದೆ.

published : 16 Jun 2020

ಲಾಕ್‌ಡೌನ್ ಬಳಿಕ ಬರ್ತಿದ್ದಾರೆ 'ಹೋಂ ಮಿನಿಸ್ಟರ್': ರಿಯಲ್ ಸ್ಟಾರ್ ಚಿತ್ರಕ್ಕೆ ಸಿಕ್ಕಿದೆ ಯು/ಎ ಪ್ರಮಾಣಪತ್ರ

ಲಾಕ್ ಡೌನ್ ನಂತರ ಸೆನ್ಸಾರ್ ಮಂಡಳಿ ಮತ್ತೆ ಕೆಲಸ ಪುನಾರಂಭ ಮಾಡಿದೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ "ಹೋಂ ಮಿನಿಸ್ಟರ್" ಚಿತ್ರ ಸೇರಿ ಎಂಟು ಚಿತ್ರಗಳನ್ನು ವೀಕ್ಷ್ಸಿದ್ದು ತನ್ನ ಪ್ರಮಾಣ ಪತ್ರ ನೀಡಿದೆ.

published : 16 Jun 2020

ಸ್ಯಾಂಡಲ್ ವುಡ್ ಗೆ ಸಿಹಿ ಸುದ್ದಿ: ಚಲನಚಿತ್ರ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಅನುಮತಿ

ರಾಜ್ಯದಲ್ಲಿ ಅನ್ ಲಾಕ್ 1.0 ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಚಲನಚಿತ್ರ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಗೆ ಅನುಮತಿ ನೀಡುವ ಮೂಲಕ ಸ್ಯಾಂಡಲ್ ವುಡ್ ಗೆ ಸಿಹಿ ಸುದ್ದಿ ನೀಡಿದೆ.

published : 15 Jun 2020

ಪ್ರೀತಿಸಿದವರೊಂದಿಗೆ ಸಪ್ತಪದಿ ತುಳಿಯಲು ತಯಾರಾದ 'ಮೊಗ್ಗಿನ ಮನಸು' ಬೆಡಗಿ ಶುಭಾ ಪೂಂಜಾ

ಮೊಗ್ಗಿನ ಮನಸು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ್ದ ನಟಿ ಶುಭಾ ಪೂಂಜಾ ಹಸೆಮಣೆ ಏರಲು ಸಿದ್ದತೆ ನಡೆಸಿದ್ದಾರೆ. 

published : 15 Jun 2020

ಸೆಟ್ಟೇರಲು ಸಿದ್ದವಾದ 'ಕರ್ವ 3': ಮೊದಲ ಬಾರಿಗೆ ಹಾರರ್ ಚಿತ್ರದಲ್ಲಿ ಮೇಘನಾ ಗಾಂವ್ಕರ್

ಸ್ವರ್ಣಲತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮುಂದಿನ ಚಿತ್ರ "ಕರ್ವ-3" ಆಗಿದ್ದು ಈ ಹಿಂದೆ 6-5 = 2 ಮತ್ತು ದಿಯಾ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ ಕೃಷ್ಣ ಚೈತನ್ಯ ಈಗ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. 

published : 15 Jun 2020

ಲಾಕ್‌ಡೌನ್ ನಡುವೆ ಸಾವಯವ ಕೃಷಿ ಮಾಡಿ ಸೈ ಎನಿಸಿಕೊಂಡ ರಿಯಲ್ ಸ್ಟಾರ್

ರಿಯಲ್ ಸ್ಟಾರ್ ಅಂದಾಕ್ಷಣ ಕಣ್ಣಮುಂದೆ ಕಾಣುವ ಚಿತ್ರ ಸ್ಯಾಂಡಲ್‌ವುಡ್ ನಟ "ಉಪೆಂದ್ರ". ಅವರದ್ದು ವಿಶಿಷ್ಟ ಮ್ಯಾನರಿಸಂ, ವಿಚಿತ್ರ ಸಂಭಾಷಣೆ, ಗೊಂದಲ ಮೂಡಿಸುವ ನಿರ್ದೇಶನದಿಂದ ಸೈ ಎನಿಸಿಕೊಂಡ ನಟ. ಈಗ ತಾನೊಬ್ಬ ಮಾದರಿ ಕಷಿಕ ಎನ್ನುವುದನ್ನೂ ತೋರಿಸಿಕೊಟ್ಟಿದ್ದಾರೆ.

published : 14 Jun 2020

ಮೇಘನಾಳ ಉದರದಲ್ಲಿ ಎರಡು ಜೀವ: ಚಿರು ಎರಡು ಆತ್ಮವಾಗಿ ಮರುಹುಟ್ಟು- ಕುತೂಹಲಕ್ಕೆ ಕಾರಣವಾಯ್ತು ಜಗ್ಗೇಶ್ ಟ್ವೀಟ್!

ತನ್ನ ಪ್ರೀತಿಯ ಗಂಡ ಚಿರಂಜೀವಿ ಸರ್ಜಾನನ್ನು ಕಳೆದುಕೊಂಡ ನೋವಿನಲ್ಲಿರುವ  ಗರ್ಭಿಣಿ ಮೇಘನಾ ರಾಜ್ ಅವರಿಗೆ ಅವಳಿ ಮಕ್ಕಳಾಗಬಹುದು ಎಂದು ನವರಸ ನಾಯಕ ಜಗ್ಗೇಶ್ ಮಾಡಿರುವ  ಟ್ವೀಟ್ ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ

published : 14 Jun 2020

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ವಿನಾಯಕ್ ಜೋಶಿ, ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಜತೆ ವಿವಾಹ 

ಆರ್‌ಜೆ  ಹಾಗೂ ನಟ ವಿನಾಯಕ್ ಜೋಷಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ., ಬಹುಮುಖ ಪ್ರತಿಭೆಯ ನಟ ಶೀಘ್ರವೇ ತನ್ನ ಆತ್ಮೀಯ ಗೆಳತಿ ಹಾಗೂ ಬ್ಯಾಡ್ಮಿಂಟನ್ ತಾರೆ ವರ್ಷಾ ಬೆಳವಾಡಿ ಜತೆ ವಿವಾಹವಾಗುತ್ತಿದ್ದಾರೆ.

published : 14 Jun 2020

ಚೆನ್ನೈನಲ್ಲಿ ನಟಿ ರಮ್ಯಾ ಕೃಷ್ಣ ಕಾರಿನಲ್ಲಿದ್ದ 8 ಲಿಕ್ಕರ್​ ಬಾಟಲಿ, ಎರಡು ಬಿಯರ್ ಕ್ರೇಟ್ ಜಪ್ತಿ ಮಾಡಿದ ಪೊಲೀಸರು

ಹಲವು ಕನ್ನಡ ಚಿತ್ರಗಳಲ್ಲೂ ನಟಿಸಿರುವ ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಾ ಕೃಷ್ಣ ಅವರ ಕಾರಿನಲ್ಲಿದ್ದ 8 ಲಿಕ್ಕರ್ ಬಾಟಲಿ ಮತ್ತು ಎರಡು ಬಿಯರ್ ಕ್ರೇಟ್ ಬಾಕ್ಸ್ ಗಳನ್ನು ತಮಿಳುನಾಡು ಪೊಲೀಸರು ಶನಿವಾರ ಜಪ್ತಿ ಮಾಡಿದ್ದಾರೆ.

published : 13 Jun 2020

ಸಿನಿಮಾಟೋಗ್ರಾಫರ್ ಕಣ್ಣನ್ ವಿಧಿವಶ

ದಕ್ಷಿಣ ಭಾರತ ಚಲನ ಚಿತ್ರರಂಗದ ಪ್ರಮುಖ ಛಾಯಾಗ್ರಾಹಕ ಬಿ. ಕಣ್ಣನ್(೬೯) ಅವರು ಶನಿವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.

published : 13 Jun 2020

ಈತ ಜಗ್ಗೇಶ, ನನ್ನ ಇಷ್ಟದ ಆಂಜನೇಯ ಎಂದಿದ್ದರು ಡಾ. ರಾಜ್ ಕುಮಾರ್!

ಚಿತ್ರರಂಗದ ಕುರಿತ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸದಾ ಹಂಚಿಕೊಳ್ಳುವ ಜಗ್ಗೇಶ್‌ ಅವರು, ಇತ್ತೀಚೆಗೆ ರಾಜ್‌ ಅವರ ಕುರಿತ ನೆನಪೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾರೆ

published : 13 Jun 2020

ಈ ಲಾಕ್‌ಡೌನ್ ಅವಧಿ ಸಾಕಾಗಲಿಲ್ಲ: ನಟಿ ಶ್ರೀಲೀಲಾ

ಲಾಕ್ ಡೌನ್ ನಡುವೆಯೇ ಕ್ಯಾಮರಾ ಲೈಟ್ಸ್ ಗಳನ್ನೆದುರಿಸಲು ನಟಿ ಶ್ರೀಲೀಲಾ ಸಿದ್ದವಾಗಿದ್ದು ಅವರೀಗ ಮೆಗಾ ಫೋಟೋಶೂಟ್‌ನ ಭಾಗವಾಗುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ಛಾಯಾಗ್ರಾಹಕ ಭುವನ್ ಗೌಡ ಈ ನಟಿಯ ಫೋಟೋಶುಟ್ ನಡೆಸಿದ್ದಾರೆ.

published : 13 Jun 2020

ಕೊರೋನಾ ಆತಂಕದ ನಡುವೆಯೇ ಶೂಟಿಂಗ್ ಪುನಾರಂಭಿಸುತ್ತಿರೋ ಮೊದಲ ಕನ್ನಡ ಚಿತ್ರ 'ಫ್ಯಾಂಟಮ್'

ಜುಲೈ 1 ರಂದು ತೆಲಂಗಾಣದ ಅನ್ನಪೂರ್ಣ ಸ್ಟುಡಿಯೋದಲ್ಲಿ "ಫ್ಯಾಂಟಮ್" ಚಿತ್ರದ ಶೂಟಿಂಗ್ ಪ್ರಾರಂಭಗೊಳ್ಳುತ್ತಿದ್ದು ಸುದೀಪ್ ಅಭಿನಯದ ಈ ಚಿತ್ರ ಲಾಕ್ ಡೌನ್ ಬಳಿಕ ಶೂಟಿಂಗ್ ಪ್ರಾರಂಭಿಸುತ್ತಿರುವ ಮೊದಲ ಕನ್ನಡ ಚಿತ್ರವಾಗಲಿದೆ.

published : 13 Jun 2020

ವೃತ್ತಿ ಬದುಕಿನ ರಿಫ್ರೆಶ್ ಬಟನ್ ಒತ್ತಲು ನಾನೀಗ ಸಿದ್ದ: ನೇಹಾ ಶೆಟ್ಟಿ

ಪ್ರಸ್ತುತ ಬೆಂಗಳೂರಿನಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವನಟಿ ನಟಿ ನೇಹಾ ಶೆಟ್ಟಿ ಆದಷ್ಟು ಶೀಘ್ರದಲ್ಲಿ ಟ ಮನೆಗೆ ಮರಳಲು ಹಾತೊರೆಯುತ್ತಿದ್ದಾರೆ. ಆಕೆ ಮುಂಬೈಗೆ ತೆರಳಲು  ಕಾರಣ ಮತ್ತು ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಕೋರ್ಸ್ ಅನ್ನು ಏಕೆ ಮುಂದುವರಿಸಿದೆ ಎನ್ನುವುದರ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ.

published : 13 Jun 2020

ಸದ್ದಿಲ್ಲದೇ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ನಟಿ ಮಯೂರಿ

ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಜನಮನ ಗೆದ್ದು, ಕೃಷ್ಣ ಲೀಲಾ ಸಿನಿಮಾ ಮೂಲಕ ಸ್ಯಾಂಡಲ್'ವುಡ್'ನಲ್ಲಿ ಸದ್ದು ಮಾಡಿದ್ದ ನಟಿ ಮಯೂರಿಯವರು ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

published : 12 Jun 2020

ನನಗೂ ಒಬ್ಬ ಜಗವರಿಯದ ದೇವರ ಮಗ ತಮ್ಮನಿದ್ದಾನೆ ಅವನ ಮಗುವಂತೆ 55ವರ್ಷದಿಂದ ಸಾಕುತ್ತಿದ್ದೇವೆ!

ಮಂಡ್ಯದಲ್ಲಿ ನಟ ಹುಚ್ಚ ವೆಂಕಟ್ ಮೇಲಾದ ಹಲ್ಲೆಯನ್ನು ಖಂಡಿಸಿ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.ಮಂಡ್ಯ ಶ್ರೀರಂಗಪಟ್ಟಣದಲ್ಲಿ ಕೆಲವರು ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 

published : 12 Jun 2020