ವೆಬ್ ಸೀರೀಸ್ ನಲ್ಲಿ ರಿಸ್ಕ್ ಕಡಿಮೆ: ಸಂಯುಕ್ತಾ ಹೊರನಾಡ್

ಲೈಫು ಇಷ್ಟೇನಾ ಚಿತ್ರದಲ್ಲಿನ ಮನೋಜ್ಞ ಅಭಿನಯದ ಮೂಲಕ ಕನ್ನಡ ಅಭಿಮಾನಿಗಳ ಮನಸೂರೆಗೊಳಿಸಿದ್ದ ನಟಿ ಸಂಯುಕ್ತಾ ಹೊರನಾಡ್ ಅವರು ಇದೀಗ ಒಟಿಟಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. 

published : 11 Jun 2020

ದಾಖಲೆ ಬರೆದ 'ಜೊತೆ ಜೊತೆಯಲಿ' ಸೀರಿಯಲ್ ಟೈಟಲ್ ಟ್ರ್ಯಾಕ್ 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲ್ಲಿ ಧಾರವಾಹಿಯ ಟೈಟಲ್ ಟ್ರ್ಯಾಕ್ ಇದೀಗ ಹೊಸ ದಾಖಲೆ ಮಾಡಿದೆ. 'ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು, ಜೊತೆಯಲ್ಲಿ ಜೊತೆಯಲ್ಲಿ' ಎನ್ನುವ ಈ ಹಾಡು ಯು ಟ್ಯೂಬ್ ನಲ್ಲಿ 1 ಕೋಟಿ ವೀಕ್ಷಣೆ ಪಡೆದು ದಾಖಲೆ ಮಾಡಿದೆ.

published : 11 Jun 2020

ಕೈಯಲ್ಲಿ ಹಲವು ಚಿತ್ರಗಳಿರುವಂತೆ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ ಧನಂಜಯ್!

ಟಗರು ಡಾಳಿ ಖ್ಯಾತಿಯ ಧನಂಜಯ್ ಕೈಯಲ್ಲಿ ಈಗಾಗಲೇ ಹಲವು ಚಿತ್ರಗಳಿದ್ದು, ಇದೀಗ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ವಿಕ್ರಮ್ ರವಿಚಂದ್ರನ್  ಅಭಿಯನದ ಚೊಚ್ಚಲ ಚಿತ್ರ ತ್ರಿವಿಕ್ರಮ ನಿರ್ಮಿಸುತ್ತಿರುವ ಗೌರಿ ಎಂಟರ್ ಟೈನರ್ಸ್ ನೊಂದಿಗೆ ಧನಂಜಯ್ ಜೊತೆಗೂಡಿದ್ದಾರೆ. 

published : 11 Jun 2020

‘ದೊಡ್ಡೋರು’ ಸೆಟ್ಟೇರಲಿಲ್ಲ, ಚಿರು ಕನಸು ನನಸಾಗಲಿಲ್ಲ

ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ, ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಕಾಲಿಕ ಸಾವನ್ನು ಅರಗಿಸಿಕೊಳ್ಳಲು ಇನ್ನೂ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಇದೇ ಸಂದರ್ಭದಲ್ಲಿ ಅವರೊಡನೆ ಸಮಯ ಕಳೆದ ಬಹುತೇಕ ಕಲಾವಿದರು, ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ನೆನಪನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

published : 10 Jun 2020

ಶ್ರೇಯಸ್ ಮಂಜು ಜೊತೆ 'ಕ್ಯೂ'ನಲ್ಲಿ ನಿಂತ ನಿರ್ದೇಶಕ ನಾಗಶೇಖರ್

ಪಡ್ಡೆಹುಲಿ ಚಿತ್ರದ ಮೂಲಕ ಭರವಸೆ ಮೂಡಿಸಿರುವ ನಟ ಶ್ರೇಯಸ್ ಮಂಜು ಅವರು ವಿಷ್ಣು ಪ್ರಿಯ ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಈ ನಡುವಲ್ಲೇ ನಿರ್ದೇಶಕ ನಾಗಶೇಖರ್ ಅವರು ನಿರ್ದೇಶಿಸುತ್ತಿರುವ ಚಿತ್ರವೊಂದಕ್ಕೆ ಹೀರೋ ಆಗಿ ನಟಿಸಲಿದ್ದಾರೆ. 

published : 10 Jun 2020

ಮೈಸೂರು ಡೈರೀಸ್‌' ಚಿತ್ರ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ!

ನಟ ಪ್ರಭು ಮುಂಡ್ಕೂರು ನಾಯಕನಾಗಿ ನಟಿಸಿರುವ ಮೈಸೂರು ಡೈರೀಸ್‌' ಚಿತ್ರ ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗಲಿದೆ. ಮೈಸೂರು ಡೈರೀಸ್‌' ಚಿತ್ರವು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.

published : 10 Jun 2020

'ಮಂಗಳ' ಆಗಿ ಡಿಜಿಟಲ್ ಲೋಕಕ್ಕೆ ಕಾಲಿಟ್ಟ ಕಾವ್ಯಾ ಶಾಸ್ತ್ರಿ

ಆಂಕರಿಂಗ್ ನಿಂದ ನಟನೆಗೆ ಇಳಿದ ಕಾವ್ಯಾ ಶಾಸ್ತ್ರಿಇದೀಗ "ಮಂಗಳ" ವೆಬ್ ಸೀರೀಸ್ ಮೂಲಕ ತಮ್ಮ ಚೊಚ್ಚಲ ಒಟಿಟಿ  ಪ್ಲಾಟ್‌ಫಾರ್ಮ್ ಪ್ರವೇಶವನ್ನು ಎದುರು ನೋಡುತ್ತಿದ್ದಾರೆ. ಅಪರಿಚಿತ ತಾಯಿಯೊಂದಿಗಿನ ಪಯಣ ಎಂಬ ಸಬ್ ಟೈಟಲ್ ಹೊಂದಿರುವ ಈ ಸರಣಿಯ ಕಥೆ, ನಿರ್ದೇಶನ ಪ್ರಥ್ವಿ ಕುಣಿಗಲ್ ಅವರದ್ದಾಗಿದೆ.

published : 10 Jun 2020

ಕರಣ್ ಜೋಹಾರ್ ನಿರ್ಮಾಣದ ಗುಂಜಾನ್ ಸಕ್ಸೇನಾ- ದಿ ಕಾರ್ಗಿಲ್ ಗರ್ಲ್ ಸಿನಿಮಾ ನೆಟ್ಪ್ಲಿಕ್ಸ್ ನಲ್ಲಿ ಬಿಡುಗಡೆ

ಜಾನ್ಹವಿ ಕಪೂರ್ ನಟನೆಯ ಕರಣ್ ಜೋಹಾರ್ ನಿರ್ಮಾಣದ ಗುಂಜಾನ್ ಸಕ್ಸೇನಾ-ದಿ ಕಾರ್ಗಿಲ್ ಗರ್ಲ್ ಸಿನಿಮಾ ಸಾಮಾನ್ಯ ಸಿನಿಮಾಗಳಂತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೇ ನೇರವಾಗಿ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. 

published : 09 Jun 2020

ಎರಡು ದಿನ ಸೋಶಿಯಲ್ ಮೀಡಿಯಾ ಓಪನ್ ಮಾಡಲು ಹಿಂಜರಿದೆ: ಅನುಶ್ರೀ

ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣ ನೋಡಲು ನಾನು ಹಿಂಜರಿದಿದ್ದೆ. ಸುದ್ದಿ ನೋಡಲು ಭಯವಾಗುತ್ತಿತ್ತು ಎಂದು ಸ್ಯಾಂಡಲ್ ವುಡ್ ನಟಿ, ನಿರೂಪಕಿ ಅನುಶ್ರೀ ಹೇಳಿದ್ದಾರೆ.

published : 09 Jun 2020

ನಿರ್ದೇಶಕಿ ಸಂಜನಾ ರೆಡ್ಡಿ ಸ್ಥಿತಿ ಗಂಭೀರ, ವೆಂಟಿಲೇಟರ್ ಅಳವಡಿಕೆ!

ಕರ್ಣಂ ಮಲ್ಲೇಶ್ವರಿ ಜೀವನಾಧಾರಿತ ಚಿತ್ರದ ನಿರ್ದೇಶಕಿ ಸಂಜನಾ ರೆಡ್ಡಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

published : 09 Jun 2020

ZEE5 ನಲ್ಲಿ ನಿಮ್ಮ ನೆಚ್ಚಿನ 'ಜೊತೆ ಜೊತೆಯಲಿ', 'ಗಟ್ಟಿಮೇಳ' ಹಾಗೂ 'ಪಾರು' ಧಾರಾವಾಹಿಗಳು ಮತ್ತೆ ಆರಂಭ

ಕೊರೋನಾ ಲಾಕ್ ಡೌನ್ ಕಾರಣ ಪ್ರಸಾರ ನಿಲ್ಲಿಸಿದ್ದ ಧಾರಾವಾಹಿಗಳೆಲ್ಲಾ ಇದೀಗ ಮತ್ತೆ ಪ್ರಸಾರ ಪ್ರಾರಂಭಿಸಿದೆ. ಝೀ ಕನ್ನಡದಲ್ಲಿ ಪ್ರಸಾರವಾಗುವ "ಜೊತೆ ಜೊತೆಯಲಿ", "ಗಟ್ಟಿಮೇಳ"  ಹಾಗೂ "ಪಾರು" ಮೊದಲಾದ ಯಶಸ್ವಿ ಧಾರಾವಾಹಿಗಳು ಮತ್ತೆ ಟಿವಿಯಲ್ಲಿ ಮೂಡಿಬರುತ್ತಿರುವುದು ಪ್ರೇಕ್ಷಕರಿಗೆ ಅದರಲ್ಲಿಯೂ ಗೃಹಿಣಿಯರಿಗೆ ಸಂತಸ ತಂದಿದೆ.

published : 09 Jun 2020

ಚಿರಂಜೀವಿ ಸರ್ಜಾ ನಿಧನದ ಶೂನ್ಯವನ್ನು ತುಂಬಲಸಾಧ್ಯ: ಚಿತ್ರ ನಿರ್ಮಾಪಕರ ನೋವಿನ ನುಡಿ

ನಟ ಚಿರಂಜೀವಿ ಸರ್ಜಾ ಅಕಾಲಿಕ ನಿಧನ ಅವರು ಸಧ್ಯ ನಟಿಸುತ್ತಿದ್ದ ಚಿತ್ರದ ನಿರ್ಮಾಪಕರ ಪಾಲಿಗೆ ಹೊಸ ಸವಾಲನ್ನು ಒಡ್ಡಿದೆ. ಇದಾಗಲೇ ಚಿತ್ರೀಕರಣಗೊಂಡ ಚಿತ್ರಗಳ ಭಾಗಗಳನ್ನು ಡಬ್ ಮಾಡಲು ಅತ್ಯುತ್ತಮ ಧ್ವನಿಗಾಗಿ ಶೋಧ ನಡೆದಿದೆ. ಇನ್ನು ಹಾಡುಗಳನ್ನು ಬಿಟ್ಟು ಕಂಪ್ಯೂಟರ್ ಗ್ರಾಫಿಕ್ಸ್ ಅನ್ನು ಶೂಟ್ ಮಾಡದ ಭಾಗಗಳಿಗೆ ಬಳಸಿಕೊಳ್ಳಲು ಅವರು ಯೋಜಿಸುತ್ತಿದ್ದಾರೆ.

published : 09 Jun 2020

ಭೂ ತಾಯಿ ಒಡಲು ಸೇರಿದ ನಟ ಚಿರಂಜೀವಿ ಸರ್ಜಾ, ಕಣ್ಣೀರ ವಿದಾಯ!

ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ನಟ ಧ್ರುವ ಸರ್ಜಾರ ಫಾರ್ಮ್ ಹೌಸ್ ನಲ್ಲಿ ನೆರವೇರಿತು. 

published : 08 Jun 2020

ಲಾಕ್ ಡೌನ್ ವೇಳೆ 12ನೇ ಕಿರುಚಿತ್ರ ಪೂರ್ಣಗೊಳಿಸಿದ ಸಾಕ್ಷ್ಯಚಿತ್ರ ತಯಾರಕ ವಿನೋದ್ ರಾಜೇಂದ್ರ!

ಕೊರೋನಾ ಲಾಕ್ ಡೌನ್ ನಿಂದಾಗಿ ಹಲವರ ಅನೇಕ ಯೋಜನೆಗಳು ಕಡಿಮೆಯಾಗಿರಬಹುದು ಆದರೆ, ಸಾಕ್ಷ್ಯಚಿತ್ರ ತಯಾರಕ ವಿನೋದ್ ರಾಜೇಂದ್ರ ಅವರ ಯೋಜನೆಗಳು ಮಾತ್ರ ಸ್ಥಗಿತಗೊಂಡಿಲ್ಲ. ಈ ಅವಧಿಯಲ್ಲಿ ಅವರು ಐಎಂಎಡಿ ಶೀರ್ಷಿಕೆಯಲ್ಲಿ 12ನೇ ಕಿರುಚಿತ್ರವನ್ನು ಪೂರ್ಣಗೊಳಿಸಿದ್ದಾರೆ.

published : 08 Jun 2020

'ಅಂದು-ಇಂದು ನಾವು ಒಂದು' ಎಂದ ವ್ಯಕ್ತಿ ಬಿಟ್ಟು ಹೋದಾಗ...ವೈರಲ್ ಆಗುತ್ತಿವೆ ಚಿರು ಸರ್ಜಾ ಇನ್ಸ್ಟಾಗ್ರಾಂ ಪೋಸ್ಟ್ ಗಳು!

ಜೂನ್ 7, 2020 ಸ್ಯಾಂಡಲ್ ವುಡ್ ಪಾಲಿಗೆ ಕರಾಳ ದಿನ. ಭರವಸೆಯ ಯುವ ನಟ ಚಿರಂಜೀವಿ ಸರ್ಜಾ ಹಠಾತ್ ನಿಧನ ಇಡೀ ಕಲಾವಿದ ಲೋಕವನ್ನು ಆಘಾತಗೊಳಿಸಿತು.

published : 08 Jun 2020

ಚಿರಂಜೀವಿ ಸರ್ಜಾ-ಮೇಘನಾ ರಾಜ್ ಮದುವೆಗೆ ಮಧ್ಯಸ್ಥಿಕೆ ವಹಿಸಿದ್ದರು ಈ ಪ್ರಸಿದ್ಧ ನಟ

ಸುಮಾರು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ 2018ರಲ್ಲಿ ವೈವಾಹಿಕ ಬದುಕಿಗೆ ಕಾಲಿರಿಸಿದ್ದರು. ಏ 29ರಂದು ಕೋರಮಂಗಲದ ಹೊಸೂರು ರಸ್ತೆಯ ಸೇಂಟ್ ಆಂಥೋನೀಸ್ ಫೈರಿ ಚರ್ಚ್‌ನಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಕ್ರೈಸ್ತ ಸಂಪ್ರದಾಯದಂತೆ ಇಬ್ಬರೂ ಮದುವೆಯಾಗಿದ್ದರು.

published : 08 Jun 2020

ತಾಯಿಯಾಗುತ್ತಿದ್ದ ಮೇಘನಾ: ಮಗುವಿನ ಮುಖ ನೋಡದೇ ಬಾರದ ಲೋಕಕ್ಕೆ ತೆರಳಿದ ಚಿರು

ಅಕಾಲಿಕ ಮರಣಕ್ಕೆ ತುತ್ತಾದ ನಟ ಚಿರಂಜೀವಿ ಸರ್ಜಾ ಇನ್ನು ಸ್ವಲ್ಪ ಸಮಯ ಕಳೆದಿದ್ದರೇ ತಂದೆಯಾಗುತ್ತಿದ್ದರು.  ನಟಿ ಹಾಗೂ ಪತ್ನಿ ಮೇಘನಾ ರಾಜ್ 4 ತಿಂಗಳ ಗರ್ಭಿಣಿ.

published : 08 Jun 2020

ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಸ್ಥಳ ಅಂತಿಮ; ಧ್ರುವಸರ್ಜಾ ಫಾರ್ಮ್ ಹೌಸ್ ನಲ್ಲಿ ನಾಳೆ ಅಂತಿಮ ವಿಧಿವಿಧಾನ

ಇಂದು ನಿಧನರಾದ ನಟ ಜಿರಂಜೀವಿ ಸರ್ಜಾ ಅವರ ಅಂತಿಮ ವಿಧಿವಿಧಾನ ಸ್ಥಳವನ್ನು ಅಂತಿಮಗೊಳಿಸಲಾಗಿದ್ದು, ಚಿರಂಜೀವಿ ಅವರ ತಮ್ಮ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್ ನಲ್ಲಿ ನೆರವೇರಿಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.

published : 07 Jun 2020

ನಟ ಚಿರಂಜೀವಿ ಸರ್ಜಾ ನಿಧನ: ಚಿತ್ರರಂಗದ ಗಣ್ಯರ ಅಶ್ರುತರ್ಪಣ

ನಟ ಜಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನದಿಂದಾಗಿ ಕನ್ನಡ ಚಿತ್ರರಂಗ ಆಘಾತ ವ್ಯಕ್ತಪಡಿಸಿದ್ದು, ನಟ ದರ್ಶನ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

published : 07 Jun 2020

ಚಿರಂಜೀವಿ ಸರ್ಜಾ ನಿಧನಕ್ಕೆ ಸಿಎಂ ಬಿಎಸ್ ವೈ, ಸಿದ್ದರಾಮಯ್ಯ ಸೇರಿದಂತೆ ಗಣ್ಯರ ಕಂಬನಿ

ನಟ ಜಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಮತ್ತು ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

published : 07 Jun 2020

ನಟ ಚಿರಂಜೀವಿ ಸರ್ಜಾ ವಿಧಿವಶ

ನಟ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

published : 07 Jun 2020

ಎಸ್ ಎಸ್ ರಾಜಮೌಳಿಯ #RRR ಸಿನಿಮಾ ಸೋತರೆ, ಬೀದಿಗಿಳಿದು ಸಂಭ್ರಮ: ಆರ್ ಜಿವಿ

ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ  #RRR ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತರೆ ಬೀದಿಗಿಳಿದು ಪಟಾಕಿ ಹೊಡೆದು ಸಂಭ್ರಮಿಸಲಾಗುತ್ತದೆ ಎಂದು ಬಾಲಿವುಡ್ ನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

published : 06 Jun 2020

ಬೆಂಗಳೂರು ನಾಗರತ್ಮಮ್ಮ ಜೀವನಾಧಾರಿತ ಚಿತ್ರ ತೆರೆಗೆ, ನಾಗಾಭರಣ ಸಿದ್ಧತೆ!

ಕರ್ನಾಟಕ ಸಂಗೀತ ಹಾಡುಗಾರ್ತಿ, ಸಾಂಸ್ಕೃತಿಕ ಹೋರಾಟಗಾರ್ತಿ ಮತ್ತು ವಿದುಷಿ ಬೆಂಗಳೂರು ನಾಗರತ್ನಮ್ಮ ಅವರ ಜೀವನಾಧಾರಿತ ಚಿತ್ರವನ್ನು ತೆರೆಗೆ ತರಲು ರಂಗಕರ್ಮಿ ಮತ್ತು ಚಿತ್ರ ನಿರ್ದೇಶಕ ಟಿಎಸ್ ನಾಗಾಭರಣ ಸಿದ್ಧತೆ ನಡೆಸಿದ್ದಾರೆ.

published : 06 Jun 2020

’ಬದಲಾಗು ನೀನು, ಬದಲಾಯಿಸು ನೀನು’ ದೃಶ್ಯರೂಪಕ: ಸಿಎಂ ಯಡಿಯೂರಪ್ಪರಿಂದ ಬಿಡುಗಡೆ

ಕೊರೋನ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡದ ಚಿತ್ರರಂಗ ಹಾಗು ಕ್ರೀಡಾ ರಂಗದ ಖ್ಯಾತನಾಮರು ಪಾಲ್ಗೊಂಡಿರುವ ದೃಶ್ಯರೂಪಕ ’ಬದಲಾಗು ನೀನು, ಬದಲಾಯಿಸು ನೀನು’ #MYHERO ವನ್ನು  ಮುಖ್ಯಮಂತ್ರಿ ಯಡಿಯೂರಪ್ಪನವರು ಲೋಕಾರ್ಪಣೆ ಮಾಡಿದರು.

published : 06 Jun 2020