ಡ್ರಗ್ಸ್ ಕೇಸ್: ಚಿತ್ರ ನಿರ್ಮಾಪಕ ಶಂಕರೇಗೌಡ ಬಂಧನ

ಪಾರ್ಟಿ ಆಯೋಜಿಸಿ, ಡ್ರಗ್ಸ ಪೂರೈಕೆ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್'ವುಡ್ ಖ್ಯಾತ ನಿರ್ಮಾಪಕರೊಬ್ಬರನ್ನು ಬೆಂಗಳೂರಿನ ಗೋವಿಂದಪುರಂ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

published : 24 Mar 2021

ರಚಿತಾ ರಾಮ್, ಸತೀಶ್ ನೀನಾಸಂ ಜೋಡಿಯ 'ಮ್ಯಾಟ್ನಿ' ಶೂಟಿಂಗ್ ಇಂದಿನಿಂದ ಆರಂಭ

ಮನೋಹರ್ ಕಾಂಪಲ್ಲಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮ್ಯಾಟ್ನಿ ಸಿನಿಮಾದಲ್ಲಿ ರಚಿತಾ ರಾಮ್ ಮತ್ತು ಸತೀಶ್ ನೀನಸಂ ನಟಿಸುತ್ತಿದ್ದು ಇಂದಿನಿಂದ ಶೂಟಿಂಗ್ ಆರಂಭವಾಗಲಿದೆ.

published : 24 Mar 2021

ಯುವ ಸಂಭ್ರಮ ಡೇ 3: ಮೈಸೂರಿನಲ್ಲಿ ಕಿಕ್ಕಿರಿದ ಜನಸ್ತೋಮದ ಎದುರು ಹೆಜ್ಜೆ ಹಾಕಿದ ಪವರ್ ಸ್ಟಾರ್! ವಿಡಿಯೋ

ಹೊಂಬಾಳೆ ಫಿಲ್ಮ್ಸ್ ಪ್ರೊಢಕ್ಷನ್ ಅಡಿ ಸಂತೋಷ್ ಆನಂದ್ ರಾಮ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ರಾಜ್ಯಾದ್ಯಂತ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ.

published : 23 Mar 2021

'ಗೋವಿಂದ ಗೋವಿಂದ' ಆಡಿಯೋ ಬಿಡುಗಡೆ

ಶೈಲೇಂದ್ರ ಪ್ರೊಡಕ್ಷನ್ಸ್, ಎಲ್.ಜಿ. ಕ್ರಿಯೇಷನ್ಸ್, ರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ನಿರ್ಮಿಸಿರುವ "ಗೋವಿಂದ ಗೋವಿಂದ" ಚಿತ್ರದ ಆಡಿಯೋ ಜ್ಯೂಕ್ ಬಾಕ್ಸ್ ಬಿಡುಗಡೆ  ಸಮಾರಂಭ ಸೋಮವಾರ ನೆರವೇರಿತು. ಪುಷ್ಕರ್ ಫಿಲಂಸ್ ಮೂಲಕ  ಹಾಡುಗಳು ಹೊರಬಂದಿವೆ.

published : 23 Mar 2021

ದೃಷ್ಟಿವಿಶೇಷಚೇತನ ವ್ಯಕ್ತಿ ಪಾತ್ರದಲ್ಲಿ ತೆರೆಮೇಲೆ ಬರಲು ನಾನು ಉತ್ಸುಕನಾಗಿದ್ದೇನೆ: ಗಣೇಶ್

ನಟ ಗಣೇಶ್ ಮತ್ತು ನಿರ್ದೇಶಕ ಸುನಿ ಮತ್ತೊಂದು ಸಿನಿಮಾಗಾಗಿ ಒಂದಾಗುತ್ತಿದ್ದಾರೆ. ಈ ಕುರಿತ ನಿರೀಕ್ಷೆಗಳು ಹೆಚ್ಚಿದ್ದು ಸ್ವಾಭಾವಿಕವಾಗಿ, ಈ ನಟ-ನಿರ್ದೇಶಕ ಜೊಡಿ ಹಿಟ್ ಚಿತ್ರ ಚಮಕ್ ನಿಂದಲೂ ಸಾಕಷ್ಟು ಜನಪ್ರಿಯವಾಗಿದೆ. 

published : 23 Mar 2021

ಮಾರ್ಚ್ 30ರಂದು ಕಿರಣ್ ನಾರಾಯಣ್ ನಟನೆಯ 'ಸ್ನೇಹರ್ಷಿ' ಸಿನಿಮಾ ಸಾಂಗ್ ರಿಲೀಸ್

ಮೊಟ್ಟ ಮೊದಲ ಬಾರಿಗೆ ನಿರ್ದೇಶಕನಾಗಿ ಸ್ನೇಹರ್ಷಿ ಸಿನಿಮಾ ನಿರ್ದೇಶನ ಮಾಡಿರುವ  ಕಿರಣ್ ನಾರಾಯಣ್ ನಾಯಕನಾಗಿಯೂ ನಟಿಸುತ್ತಿದ್ದಾರೆ.

published : 23 Mar 2021

ಮೂರು ತಲೆಮಾರಿನ  ಕಥೆಯುಳ್ಳ 'ತ್ರಿಕೋನ' ಚಿತ್ರಕ್ಕೆ ಯು/ಎ ಪ್ರಮಾಣಪತ್ರ: ಏಪ್ರಿಲ್ ನಲ್ಲಿ ಬಿಡುಗಡೆ

ಮುಸ್ಸಂಜೆಯ ಹೊಸ್ತಿಲಲ್ಲಿರುವ 65ರ ವ್ಯಕ್ತಿಯ ಅನುಭವ, 45ರ ಹರೆಯದ ಅಹಂ, 25ರ ವಯಸ್ಸಿನ ಶಕ್ತಿ ಈ ಮೂರು ವಯಸ್ಸಿನ ಹಿನ್ನೆಲೆಯಲ್ಲಿ ಸಾಗುವ ಚಿತ್ರವೇ ತ್ರಿಕೋನ.

published : 23 Mar 2021

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡದ 'ಅಕ್ಷಿ' ಅತ್ಯುತ್ತಮ ಚಲನಚಿತ್ರ

 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಕನ್ನಡದ 'ಅಕ್ಷಿ' ಅತ್ಯುತ್ತಮ ಚಲನಚಿತ್ರ ಪುರಸ್ಕಾರಕ್ಕೆ ಪಾತ್ರವಾಗಿದೆ. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿಚೋರ್, ಹಿಂದಿಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

published : 22 Mar 2021

'ಬಿಲ್ಲಾ 2' ಖ್ಯಾತಿಯ ತಮಿಳು ನಟ ಥೀಪೆಟ್ಟಿ ಗಣೇಶನ್ ನಿಧನ

ಖ್ಯಾತ ತಮಿಳು ನಟ ಥೀಪೆಟ್ಟಿ ಗಣೇಶನ್ ಅನಾರೋಗ್ಯದ ಕಾರಣ ಸೋಮವಾರ ಮಧುರೈನಲ್ಲಿ ನಿಧನರಾದರು.

published : 22 Mar 2021

'ಜಾನಿ ವಾಕರ್'ನಲ್ಲಿ ರಾಗಿಣಿ ದ್ವಿವೇದಿ ತನಿಖಾಧಿಕಾರಿ ಪಾತ್ರ!

ನಟಿ ರಾಗಿಣಿ ದ್ವಿವೇದಿ ಇತ್ತೀಚೆಗೆ ಈ ವರ್ಷ ಕನಿಷ್ಠ ಆರರಿಂದ ಎಂಟು ಸಿನಿಮಾಗಳಿಗೆ ಸಹಿ ಹಾಕುವುದಾಗಿ ಹೇಳಿದ್ದರು. ಇದಾಗಲೇ ಅವರು ತಮ್ಮ ಎರಡನೇ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. "ಕರ್ವ 3" ನಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಇದೀಗ "ಜಾನಿ ವಾಕರ್" ಸಿನಿಮಾಗಾಗಿ ತಯಾರಿ ನಡೆಸಿದ್ದಾರೆ.

published : 22 Mar 2021

ಕೋಟೆನಾಡು ಚಿತ್ರದುರ್ಗದಲ್ಲಿ 'ಕೋಟಿಗೊಬ್ಬ 3' ಪ್ರಿ-ರಿಲೀಸ್ ಕಾರ್ಯಕ್ರಮ

ಏಪ್ರಿಲ್ 29 ರಂದು ತೆರೆಗೆ ಬರಲಿರುವ "ಕೋಟಿಗೊಬ್ಬ 3" ಬಿಡುಗಡೆಗಾಗಿ ಸುದೀಪ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರೆ, ಈ ಕಮರ್ಷಿಯಲ್ ಎಂಟರ್ಟೈನರ್ ನಿರ್ಮಾಪಕರು ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ / ಆಡಿಯೊ ಬಿಡುಗಡೆಯನ್ನು ಕೋಟೆನಾಡು ಚಿತ್ರದುರ್ಗದಲ್ಲಿ ಆಯೋಜಿಸಲು ಸಜ್ಜಾಗಿದ್ದಾರೆ.

published : 22 Mar 2021

ಕಲಬುರಗಿಯಲ್ಲಿ ಯುವರತ್ನ ಪ್ರಚಾರ, ಪುನೀತ್ ನೋಡಲು ಮುಗಿಬಿದ್ದ ಅಭಿಮಾನಿಗಳು!

ಪೊಗರು, ರಾಬರ್ಟ್ ನಂತರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ನಟ ಪುನೀತ್ ರಾಜ್ ಕುಮಾರ್ ಕಾಂಬಿನೇಷ್ ನಲ್ಲಿ ಸ್ಯಾಂಡಲ್ ವುಡ್ ನ ಮತ್ತೊಂದು ಬಿಗ್ ಬಜೆಟ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ರಾಜ್ಯಾದ್ಯಂತ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. 

published : 21 Mar 2021

ಫಿಲಂ ಚೇಂಬರ್ ನಲ್ಲಿ 'ಸಿಡಿ ಲೇಡಿ' ಸಿನಿಮಾ ಟೈಟಲ್ ರಿಜಿಸ್ಟರ್!

ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಸಿಡಿ ಪ್ರಕರಣ ಸಿನಿಮಾ ಆಗುತ್ತಿದೆಯೆ? ಫಿಲಂ ಚೇಂಬರ್ ನಲ್ಲಿ "ಸಿಡಿ ಲೇಡಿ" ಹೆಸರಿನ ಟೈಟಲ್ ರಿಜಿಸ್ಟರ್ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

published : 20 Mar 2021

ಶಶಾಂಕ್ ನಿರ್ದೇಶನದ ಚಿತ್ರದಲ್ಲಿ ರಿಯಲ್ ಸ್ಟಾರ್'ಗೆ ಹರಿಪ್ರಿಯಾ ಜೋಡಿ

ಸ್ಯಾಂಡಲ್'ವುಡ್'ನ ಬಹುಬೇಡಿಕೆಯ ನಟಿ ಹರಿಪ್ರಿಯಾ ಅವರು ರಿಯಲ್ ಸ್ಟಾರ್ ಉಪೇಂದ್ರ ಜೊತೆ ತೆರೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

published : 20 Mar 2021

ಕೆಲವು ಸಮಯದಲ್ಲಿ, ನಟಿಯರು ಕೇವಲ ಸಾಮಾನ್ಯ ನಾಯಕಿಯ ಪಾತ್ರದಿಂದ ಹೊರಬಂದು ಬದಲಾಗಬೇಕು: ಸೋನು ಗೌಡ

"ಗುಲ್ಟೂ" ಚಿತ್ರದಲ್ಲಿನ ಸೋನು ಗೌಡ ಅವರ ಪಾತ್ರವೇ "ಯುವರತ್ನ" ಚಿತ್ರದಲ್ಲಿ ಸಹ ಅವರದ್ದಾಗಿದೆ ಎಂದು ನಟಿ ಸೋನು ಬಹಿರಂಗಪಡಿಸಿದ್ದಾರೆ.. 

published : 20 Mar 2021

ಸಿಎಂ ನಿವಾಸಕ್ಕೆ ನಟ ಸುದೀಪ್ ದಿಢೀರ್ ಭೇಟಿ: ಯಡಿಯೂರಪ್ಪ, ವಿಜಯೇಂದ್ರ ಜೊತೆ ಚರ್ಚೆ

ಸ್ಯಾಂಡಲ್ ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

published : 19 Mar 2021

ಸುನಿ 'ಸಖತ್' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗೆ ನಿಶ್ವಿಕಾ ನಾಯಕಿ

ಸುನಿ ನಿರ್ದೇಶನದ 'ಸಖತ್' ಚಿತ್ರದಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಗೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸುತ್ತಿದ್ದಾರೆ. 

published : 18 Mar 2021

ದ್ವಾರ್ಕಿ ರಾಘವ್ ನಿರ್ದೇಶನದ 'ಒಂದು ಗಂಟೆಯ ಕಥೆ' ಶುಕ್ರವಾರ ರಿಲೀಸ್

ದ್ವಾರ್ಕಿ ರಾಘವ್ ನಿರ್ದೇಶನದ 'ಒಂದು ಗಂಟೆಯ ಕಥೆ' ಸಿನಿಮಾ ಈ ಶುಕ್ರವಾರ ರಿಲೀಸ್ ಆಗಲಿದೆ.

published : 18 Mar 2021

ಎಪಿ ಅರ್ಜುನ್ 'ಅದ್ಧೂರಿ ಲವರ್' ಚಿತ್ರಕ್ಕೆ ವಿರಾಟ್ ಮತ್ತು ಸಂಜನಾ ಆನಂದ್ ಜೋಡಿ!

ಎಪಿ ಅರ್ಜುನ್ ನಿರ್ದೇಶನ ಅದ್ದೂರಿ ಲವರ್ ಸಿನಿಮಾದಲ್ಲಿ ಕಿಸ್ ಸಿನಿಮಾ ಹೀರೋ ವಿರಾಟ್ ನಟಿಸುತ್ತಿದ್ದು, ಸಂಜನಾ ಆನಂದ್ ನಾಯಕಿಯಾಗಿದ್ದಾರೆ.

published : 18 Mar 2021

'ಭಜರಂಗಿ' ನಿರ್ದೇಶಕನ ಮುಂದಿನ ಸಿನಿಮಾಗೆ 'ಭರ್ಜರಿ' ಹೀರೋ

ಪೊಗರು ನಟ ಧ್ರುವ ಸರ್ಜಾ ಸದ್ಯ ಉಜ್ ಮೆಹ್ತಾ ನಿರ್ಮಿಸಿ, ನಂದ ಕಿಶೋರ್ ನಿರ್ದೇಶನದ ದುಬಾರಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

published : 18 Mar 2021

ಸಿನಿಮಾದಲ್ಲಿ 'ಧಮ್' ಇದ್ದರೆ ಪೈರಸಿ ಏನೂ ಮಾಡಲ್ಲ; ರಾಬರ್ಟ್ ಚಿತ್ರದ ಸಾವಿರಕ್ಕೂ ಅಧಿಕ ಲಿಂಕ್ ಡಿಲೀಟ್: ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ರಾಬರ್ಟ್’ ಚಿತ್ರದ ಗೆಲುವಿನ ಸಂಭ್ರವನ್ನು ಹಂಚಿಕೊಂಡಿದ್ದು, ಚಿತ್ರ ಚೆನ್ನಾಗಿದ್ದರೆ ಜನ ಖಂಡಿತ ವೀಕ್ಷಿಸುತ್ತಾರೆ ಎಂದಿದ್ದಾರೆ.

published : 17 Mar 2021

ಕೋವಿಡ್ ನಿಂದ ಕುಸಿದಿರುವ ಕನ್ನಡ ಚಿತ್ರರಂಗಕ್ಕೆ ಪವರ್ ಸ್ಟಾರ್ ಪುನೀತ್ ರವರ ಸಾಲು ಸಾಲು ಚಿತ್ರಗಳ 'ಪವರ್'!

ಸಂತೋಷ್ ಆನಂದ್ ರಾಮ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಏಪ್ರಿಲ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

published : 17 Mar 2021

ದ್ವಿಭಾಷಾ ಚಿತ್ರಕ್ಕಾಗಿ ಶಿವಣ್ಣಗೆ ನಿರ್ದೇಶಕ ನಂದ ಕಿಶೋರ್ ಆಕ್ಷನ್ ಕಟ್!

ನಿರ್ದೇಶಕ ನಂದ ಕಿಶೋರ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಭೇಟಿ ಈ ಇಬ್ಬರೂ ಸೇರಿ ಸಿನಿಮಾ ಒಂದರ ತಯಾರಿಯಲ್ಲಿದ್ದಾರೆ ಎನ್ನುವ ಊಹಾಪೋಹಗಳಿಗೆ ಕಾರಣವಾಗಿತ್ತು. ವಿಶ್ವಾಸಾರ್ಹ ಮೂಲದ ಪ್ರಕಾರ, ಅಧ್ಯಕ್ಷ, ರನ್ನ, ಮುಕುಂದ ಮುರಾರಿ, ಪೊಗರು ಚಿತ್ರಗಳ ನಿರ್ದೇಶಕ  ಸೆಂಚುರಿ ಸ್ಟಾರ್ ಜೊತೆ ಕೈಜೋಡಿಸಲಿದ್ದಾರೆ.

published : 17 Mar 2021

ಕಿಚ್ಚನ ಬಣ್ಣದ ಲೋಕದ ಬೆಳ್ಳಿ ಹಬ್ಬ: ಕೋಟಿಗೊಬ್ಬ -3 ತಂಡದಿಂದ ಅದ್ದೂರಿ ಆಚರಣೆ

ನಟ ಕಿಚ್ಚ ಸುದೀಪ್ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿ 25 ವರ್ಷಗಳು ಪೂರೈಸಿದೆ. ಈ ಪ್ರಯುಕ್ತ ಕೋಟಿಗೊಬ್ಬ -3 ಸಿನಿಮಾ ತಂಡ ಅದ್ದೂರಿಯಾಗ ಬೆಳ್ಳಿಹಬ್ಬವನ್ನು ಆಚರಿಸಿದೆ.

published : 16 Mar 2021