ಹುಟ್ಟಿದಾಗಿನಿಂದಲೇ ಯಾರೋಬ್ಬರು ಹೀರೋ ಅಥವಾ ವಿಲ್ಲನ್ ಆಗಿರಲ್ಲ: ವಶಿಷ್ಠ ಸಿಂಹ

ವಶಿಷ್ಠ ಸಿಂಹ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವನಟ. ತಮ್ಮ ಕಂಚಿನ ಕಂಠ ,ತೀಕ್ಷ್ಣ ನೋಟ, ಕಡಕ್ ಅಭಿನಯದಿಂದ ಗುರುತಿಸಿಕೊಂಡಿರುವ ವಶಿಷ್ಠ ಅವರು ಹೆಚ್ಚಾಗಿ ವಿಲ್ಹನ್ ಪಾತ್ರಗಳಿಂದಲೇ ಹೆಸರುವಾಸಿಯಾಗಿದ್ದಾರೆ.
ವಶಿಷ್ಚ ಸಿಂಹ
ವಶಿಷ್ಚ ಸಿಂಹ

ವಶಿಷ್ಠ ಸಿಂಹ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವನಟ. ತಮ್ಮ ಕಂಚಿನ ಕಂಠ ,ತೀಕ್ಷ್ಣ ನೋಟ, ಕಡಕ್ ಅಭಿನಯದಿಂದ ಗುರುತಿಸಿಕೊಂಡಿರುವ ವಶಿಷ್ಠ ಅವರು ಹೆಚ್ಚಾಗಿ ವಿಲ್ಹನ್ ಪಾತ್ರಗಳಿಂದಲೇ ಹೆಸರುವಾಸಿಯಾಗಿದ್ದಾರೆ.

ಆದರೆ ಈಗ ಬರುತ್ತಿರುವ ಹೊಸ ಚಿತ್ರದಲ್ಲಿ ವಶಿಷ್ಟ ಅವರ ಪಾತ್ರ ಬದಲಾಗಿದೆ, ಖಲನಾಯಕ ಬದಲು ನಾಯಕ ನಟ ನಾಗಿ ಬದಲಾಗಿದ್ದಾರೆ. ಒಬ್ಬ ನಟನಾಗಿ ಬಂದಾಗ ಯಾವಾಗಲೂ ಎಕ್ಸೈಟ್ ಮೆಂಟ್ ಇರುತ್ತದೆ. ಆದರೆ ಒಂದು ಪ್ರಾಜೆಕ್ಟ್ ಗೆ ಹೀರೋ ಎಂದು ಗೊತ್ತಾದ ಮೇಲೆ ಭಾವನೆಯೇ ಬೇರೆಯಾಗಿರುತ್ತದೆ. ಸದ್ಯ ನನಗೆ ಆ ರೀತಿಯ ಒಂದು ಕುತೂಹಲ ಮೂಡುತ್ತಿದೆ ಎಂದು ಹೇಳಿದ್ದಾರೆ.

ಜನ ನನ್ನಿಂದ ಏನು ನಿರೀಕ್ಷಿಸುತ್ತಾರೆ ಹಾಗೂ ನನ್ನನ್ನು ಒಪ್ಪಿಕೊಳ್ಳುತ್ತಾರೆಯೇ ಎಂಬ ಕುತೂಹಲ ಮೂಡಿದೆ,  ಆರಂಭದಲ್ಲಿ ಕೇವಲ ಖಳನಾಯಕನ ಪಾತ್ರಗಳಲ್ಲಿ ಮಾತ್ರ ವಶಿಷ್ಟ ಸಿಂಹ ಕಾಣಿಸಿಕೊಳ್ಳುತ್ತಿದ್ದರು. 

ಮೊದಲು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡ ಹಲವು ನಟರುಗಳು ನಂತರ  ಹೀರೋಗಳಾಗಿ ಬದಲಾಗಿದ್ದಾರೆ, ಅಂಬರೀಷ್ ಮತ್ತು ರಜನೀಕಾಂತ್ ಮೊದಲು ವಿಲ್ಲನ್ ಗಳಾಗಿದ್ದವರು. ಕಲಾವಿದರ ಜೀವನಕ್ಕೆ ಅವರಿಬ್ಬರು ಉತ್ತಮ ಉದಾಹರಣೆ.

ಬದಲಾಗುವುಗವುದು ತಪ್ಪಲ್ಲ,  ಆದರೆ ಟೈಮ್ ಲೈನ್ ಎಂಬುದು ಬಹಳ ಮುಖ್ಯ.  ಸದ್ಯಕ್ಕೆ ಸಿನಿಮಾ ರಂಗ ಬಹಳ ವಿಭಿನ್ನವಾಗಿದೆ.  ಅವನೆ ಏನೋ ಮಾಡ್ಕೋಂಡಿದ್ದನಲ್ಲಾ ಇವೆಲ್ಲಾ ಬೇಕಿತ್ತಾ ಎಂಬ ಮಾತುಗಳು ನನಗೆ ಇಷ್ಟವಾಗುವುದಿಲ್ಲ,  ಒಬ್ಬ ನಟನಾಗಿ ನನ್ನ ಈ ಬದಲಾವಣೆಯ್ನು ಜನರು ಉತ್ತಮವಾಗಿ ಸ್ವೀಕರಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ. 

ನಾಗತಿಹಳ್ಳಿ ಮೇಸ್ಟ್ರು ನನ್ನ ಸಂಪರ್ಕಿಸಿದ್ದನ್ನು ಸ್ಮರಿಸಿದ ವಶಿಷ್ಟ ಸಿಂಹ, ಅಂದು ನನಗೆ ಅಪರಿಚಿ ನಂಬರ್ ಇಂದ ಕರೆ ಬಂದಿತ್ತು. ಕರೆ ಸ್ವೀಕರಿಸಿ ಮಾತನಾಡಿದಾಗ, ಆ ಕಡೆ ಇದ್ದ ವ್ಯಕ್ಕಿ, ಗೆಳೆಯ, ನಾನು ನಾಗತಿಹಳ್ಳಿ ಎಂದು ಪರಿಚಯಿಸಿಕೊಂಡರು, ನಾನು ಮಾಡಿರುವ ಸಿನಿಮಾಗಳ ಬಗ್ಗೆ ಅವರು ವಿಚಾರಿಸಲಿಲ್ಲ, ನನ್ನ ಸಿನಿಮಾದಲ್ಲಿ ನಟಿಸಬೇಕೆಂದರು.  ನಾನು ಎರಡನೇ ಯೋಚನೆ ಮಾಡದೇ ಒಪ್ಪಿಕೊಂಡೆ, ಹಾಗೂ ಯಾವ ಪಾತ್ರ ಎಂದು ಕೇಳಿದೆ, ಹೀರೋ ಎಂದು ಹೇಳಿದರು ಮೇಸ್ಟ್ರು.

ಆ ಕ್ಷಣದಲ್ಲಿ, ಅವರೆಲ್ಲೋ ರಾಂಗ್ ನಂಬರ್ ಗೆ ಕರೆ ಮಾಡಿದ್ದಾರೆ ಎಂದು ಕೊಂಡೆ,   ಬೇರೆ ಯಾರಾದರೂ ಈ ಮಾತು ಹೇಳಿದ್ದರೇ ನಾನು ಪ್ರಶ್ನಿಸುತ್ತಿದ್ದೆ, ಆದರೆ ಆ ಕಡೆಯಿಂದ ಮಾತನಾಡುತ್ತಿದ್ದದ್ದು, ನಾಗತಿಹಳ್ಳಿ  ಸರ್, ಇದು ನನಗೆ ಆಶ್ಚರ್ಯ ತರಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com