ಅಂಜದ ಗಂಡು ಕಥಾನಾಯಕ ಮೀಟ್ಸ್ ಬಿಗ್ ಬಾಸ್ ರೌಡಿ: 'ರೌಡಿ ಬೇಬಿ' ಚಿತ್ರವಿಮರ್ಶೆ

ನಾಯಕ ನಟ ರವಿ ಗೌಡ ಸೇರಿದಂತೆ ಹಲವು ಹೊಸ ಪೋಷಕಪಾತ್ರಧಾರಿಗಳಿಂದ ನಟನೆಯನ್ನು ಪಡೆದುಕೊಳ್ಳಲು ನಿರ್ದೇಶಕರು ಪಟ್ಟಿರುವ ಶ್ರಮ ಪ್ರಶಂಸಾರ್ಹ. ಪಾತ್ರಧಾರಿಗಳ ನಟನಾ ನ್ಯೂನತೆಯನ್ನು ಮರೆಸಲು ಸಿನಿಮಾ, ಕಾಮಿಡಿ ಮತ್ತು ಸಂಭಾಷಣೆ ಮೊರೆ ಹೊಕ್ಕಿದೆ.

Published: 12th February 2022 02:57 PM  |   Last Updated: 12th February 2022 03:59 PM   |  A+A-


ಸಿನಿಮಾ ಪೋಸ್ಟರ್

Online Desk

ವಿಮರ್ಶೆ: ಹರ್ಷವರ್ಧನ್ ಸುಳ್ಯ


'ರೌಡಿ ಬೇಬಿ' ತಮಿಳು ಹಾಡಿನ ಜನಪ್ರಿಯತೆಯನ್ನು ಕ್ಯಾಚ್ ಮಾಡಿಕೊಳ್ಳುವ ಸಲುವಾಗಿ ಮಾತ್ರವೇ ರವಿ ಗೌಡ ನಾಯಕರಾಗಿ ಅಭಿನಯಿಸಿರುವ ಈ ಸಿನಿಮಾಗೆ ರೌಡಿ ಬೇಬಿ ಎಂಬ ಹೆಸರಿಟ್ಟರೋ ಏನೋ ಎನ್ನುವ ಅನುಮಾನ ಪ್ರೇಕ್ಷಕರಿಗೆ ಬರುವ ಎಲ್ಲಾ ಸಾಧ್ಯತೆಗಳು ನಿಚ್ಚಳ. 

ಸಿನಿಮಾದಲ್ಲಿ ರೌಡಿ ಎಂದರೆ ಬಿಗ್ ಬಾಸ್ ದಿವ್ಯಾ ಸುರೇಶ್, ಬೇಬಿ ಎಂದರೆ ಕಥಾನಾಯಕ ಕೃಷ್ಣ(ರವಿ ಗೌಡ). ಪ್ರಿಯಕರ, ಪ್ರಿಯತಮೆಗೆ ಬೇಬಿ ಇದ್ದ ಹಾಗೆ ಎನ್ನುವ ಥಾಟ್ ಅನ್ನು ಹೆಸರಿಗಲ್ಲದೆ ಪರದೆ ಮೇಲೆ ಮೂಡಿಸಿದ್ದರೆ ಚಿತ್ರದ ಹೆಸರಿಗೆ ಕೊಂಚ ನ್ಯಾಯ ಸಿಗುತ್ತಿತ್ತು.

ಸಿನಿಮಾ ಕಥೆ ಪ್ರೇಕ್ಷಕನನ್ನು ಸೀಟ್ ಮೇಲೆ ಹಿಡಿದು ಕುಳ್ಳಿರಿಸುವಲ್ಲಿ ಸಮರ್ಥವಾಗಿದೆ. ರೌಡಿ ಬೇಬಿ ಸಿನಿಮಾವನ್ನು ಸಹ್ಯವಾಗಿಸುವಲ್ಲಿ ಅಮಿತ್ ರಾಜ್ ಹಾಸ್ಯ ಮತ್ತು ಅಭಿಷೇಕ್ ರುಫುಸ್ ಅವರ ಹಿನ್ನೆಲೆ ಸಂಗೀತ ಪ್ರಧಾನ ಪಾತ್ರ ವಹಿಸಿದೆ. ಅಮಿತ್ ರಾಜ್ ಹಾಸ್ಯ ಚೂರು ಮಿತಿ ಮೀರಿದಂತೆ ಅನ್ನಿಸಿದರೂ ಟೈಮ್ ಪಾಸ್ ಆಗಲು ಸಹಕರಿಸುತ್ತದೆ. 

ಇದನ್ನೂ ಓದಿ: ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಈ ಸಿನಿಮಾ ನೋಡಿದ್ದಿದ್ದರೆ ಬಡವ ರಾಸ್ಕಲ್ ಅಂದುಬಿಡೋರು: ಬಡವ ರಾಸ್ಕಲ್ ಚಿತ್ರವಿಮರ್ಶೆ

ನಾಯಕ ನಟ ರವಿ ಗೌಡ ಸೇರಿದಂತೆ ಹಲವು ಹೊಸ ಪೋಷಕಪಾತ್ರಗಳಿಂದ ನಟನೆಯನ್ನು ಪಡೆದುಕೊಳ್ಳಲು ನಿರ್ದೇಶಕರು ಪಟ್ಟಿರುವ ಶ್ರಮ ಪ್ರಶಂಸಾರ್ಹ. ಸಿನಿಮಾದ ಪೋಷಕ ಪಾತ್ರಗಳಲ್ಲಿ ಅರುಣಾ ಬಾಲರಾಜ್, ಶ್ರೀನಾಥ್ ವಸಿಷ್ಠ, ಅಮಿತ್ ರಾಜ್, ಕೆಂಪೇಗೌಡ ಹೊರತು ಪಡಿಸಿ ಪರಿಚಯದ ಮುಖಗಳಿಲ್ಲ. ಆಕ್ಟಿಂಗ್ ಎಂದರೆ ರಿಯಾಕ್ಟಿಂಗ್ ಎನ್ನುವ ಮಾತಿದೆ. ಒಂದು ಸಿನಿಮಾ ಹಿಟ್ ಆಗಲು ಪ್ರಧಾನ ಪಾತ್ರಗಳ ಜೊತೆಗೆ ಪೋಷಕ ಪಾತ್ರಗಳೇ ಕಾರಣವಾಗುತ್ತವೆ. ಸಮರ್ಥ ಪೋಷಕ ಪಾತ್ರಧಾರಿಗಳ ಕೊರತೆ ರೌಡಿ ಬೇಬಿ ಸಿನಿಮಾದ ಕೊರತೆಗಳಲ್ಲೊಂದು.

ತನ್ನ ಹುಡುಗಿಯ ಮದುವೆಯ ಹಿಂದಿನ ದಿನ ಭಗ್ನಪ್ರೇಮಿ ನಾಯಕ ಸ್ನೇಹಿತನೊಂದಿಗೆ ಎಣ್ಣೆ ಹೊಡೆಯುತ್ತಿರುತ್ತಾನೆ. ಆ ದಿನ ರಾತ್ರಿ ಅವಳನ್ನು ಮರೆಯುತ್ತೇನೆ ಎಂದು ಗೆಳೆಯನಿಗೆ ಆಶ್ವಾಸನೆ ಕೊಡುತ್ತಾನೆ. ಆದರೆ, ಯಾವುದೋ ಘಳಿಗೆಯಲ್ಲಿ ಮನಸ್ಸು ಬದಲಾಯಿಸಿ ಮದುವೆ ಮನೆಗೆ ಹೊರಡುತ್ತಾನೆ. ಫ್ಲ್ಯಾಷ್ ಬ್ಯಾಕ್ ತೆರೆದುಕೊಳ್ಳುತ್ತದೆ. ಹಾಲೇಜು ಹಿನ್ನೆಲೆಯ ಈ ಫ್ಲ್ಯಾಷ್ ಬ್ಯಾಕ್ ಗೆ ತೆಲುಗಿನ ಹ್ಯಾಪಿ ಡೇಸ್ ಪ್ರೇರಣೆಯಾಗಿದೆ. ಕೆಲ ಶಾಟ್ ಗಳು, ಹಾಟ್ ಟೀಚರ್ ಪಾತ್ರ ಅದಕ್ಕೆ ಸಾಕ್ಷ್ಯ ಒದಗಿಸುತ್ತದೆ.

ಇದನ್ನೂ ಓದಿ: ಮನುರಂಜನ್ ರೂಪದಲ್ಲಿ ರವಿಚಂದ್ರನ್ ಈಸ್ ಬ್ಯಾಕ್: ಮುಗಿಲ್ ಪೇಟೆ ಸಿನಿಮಾದಲ್ಲಿ ಮನರಂಜನೆಗೇನೂ ಕೊರತೆಯಿಲ್ಲ: ಚಿತ್ರ ವಿಮರ್ಶೆ

'ಅಂಜದ ಗಂಡು' ಸಿನಿಮಾದ ನಾಯಕನಂತೆ ನಾಯಕ ಕೃಷ್ಣ ತನ್ನದೇ ಕಂಪನಿಯಲ್ಲಿ ಕೆಲಸಗಾರನಾಗಿ ಸೇರಿಕೊಂಡಿರುತ್ತಾನೆ. ಅಲ್ಲಿ ಅವನ ಕ್ಯಾರೆಕ್ಟರ್ ಗೆ ಒಬ್ಬಳು ಹುಡುಗಿ ಬೀಳುತ್ತಾಳೆ. ಅವಳೇ ಪ್ರಪೋಸ್ ಕೂಡಾ ಮಾಡುತ್ತಾಳೆ. ಈ ಸಮಯದಲ್ಲಿ ಅವಳ ಅಮ್ಮ ಅರುಣಾ ಬಾಲರಾಜ್ ಎಂಟ್ರಿ ಕೊಡುತ್ತಾಳೆ. ಅರುಣಾಳನ್ನು ನೋಡಿ ನಾಯಕ, ನಾವಿಬ್ಬರೂ ಇನ್ನು ಜೀವನದಲ್ಲಿ ಒಂದಾಗಲು ಸಾಧ್ಯವಿಲ್ಲ ಎಂದು ಹುಡುಗಿಗೆ ಹೇಳುತ್ತಾನೆ. ಅರುಣಾ ಕೂಡಾ ತನ್ನ ಮಗಳಿಗೆ ಅದೇ ಮಾತನ್ನು ಹೇಳುತ್ತಾಳೆ.

ಅರುಣಾಗೂ, ಕಥಾನಾಯಕನಿಗೂ ಏನು ಸಂಬಂಧ, ಅವನಿಗೇಕೆ ನಾಯಕಿಯನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಪ್ರೇಕ್ಷಕ ಅಚ್ಚರಿಪಡುವಷ್ಟರಲ್ಲಿ ಇನ್ನೊಂದು ಫ್ಲ್ಯಾಷ್ ಬ್ಯಾಕ್ ತೆರೆದುಕೊಳ್ಳುತ್ತದೆ. ಆ ಫ್ಲ್ಯಾಷ್ ಬ್ಯಾಕ್ ನಾಯಕಿ ಪ್ರಾಧ್ವಿ ಅಲಿಯಾಸ್ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಅಲಿಯಾಸ್ ರೌಡಿ. ಇವೆಲ್ಲಾ ಎಳೆಗಳು ಎಲ್ಲಿ ಹೋಗಿ ಕೊನೆಯಾಗುತ್ತದೆ ಎನ್ನುವುದೇ ಸಿನಿಮಾದ ಸ್ವಾರಸ್ಯ. ನಟನಾ ನ್ಯೂನತೆಗಳನ್ನು ಪಕ್ಕಕ್ಕಿಟ್ಟು ನೋಡುವುದಾದರೆ ಕೃಷ್ಣ ರೆಡ್ಡಿ ನಿರ್ದೇಶನದ ರೌಡಿ ಬೇಬಿ ಸಿನಿಮಾ ರಂಜನೀಯ ಸಿನಿಮಾ.

ಇದನ್ನೂ ಓದಿ: ಪುನೀತ್ ಅಭಿಮಾನಿಗಳಿಗೆ ಕನೆಕ್ಟ್ ಆಗುವ ಮನೋಜ್ಞ ಕ್ಲೈಮ್ಯಾಕ್ಸ್: ಭಜರಂಗಿ2 ಚಿತ್ರವಿಮರ್ಶೆ


Stay up to date on all the latest ಸಿನಿಮಾ ವಿಮರ್ಶೆ news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp