ಪ್ರತಿ ಸಿಪ್ಪಲ್ಲೂ ಕ್ರಿಯೇಟಿವಿಟಿಯ ಕಿಕ್ಕು: 'ಓಲ್ಡ್ ಮಾಂಕ್' ಚಿತ್ರವಿಮರ್ಶೆ 

ನಡೆಯದ ಕಥೆಯೇ ಆದರೂ ಬಿಲೀವೆಬಲ್ ಆಗಿ ಸ್ಟೋರಿ ಟೆಲ್ಲಿಂಗ್ ಮಾಡೋದು ಶ್ರೀನಿ ಸಿನಿಮಾಗಳ ವೈಶಿಷ್ಟ್ಯತೆ. 'ಓಲ್ಡ್ ಮಾಂಕ್' ಸಿನಿಮಾದಲ್ಲೂ ಈ ತಂತ್ರಗಾರಿಕೆಯನ್ನು ಕಾಣಬಹುದು. ಅಲ್ಲದೆ ಎಷ್ಟೊಂದು ಕ್ರಿಯೇಟಿವ್ ಆಗಲು ಸಾಧ್ಯವೋ ಅವೆಲ್ಲಾ ಸಾಧ್ಯತೆಗಳನ್ನು ಬಳಸಿಕೊಂಡಿರುವುದು ಸಿನಿಮಾದ ಹೆಗ್ಗಳಿಕೆ.

Published: 25th February 2022 06:26 PM  |   Last Updated: 26th February 2022 12:57 PM   |  A+A-


ಸಿನಿಮಾ ಪೋಸ್ಟರ್

Online Desk

ವಿಮರ್ಶೆ: ಹರ್ಷವರ್ಧನ್ ಸುಳ್ಯ


ಒಂದು ಸಿನಿಮಾ ಆರಂಭದಿಂದ ಅಂತ್ಯದವರೆಗೆ ಎಲ್ಲೆಲ್ಲಿ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳಬಹುದೋ ಅವೆಲ್ಲಾ ಗ್ಯಾಪ್ ಗಳಲ್ಲಿ ಹೊಸ ಹೊಸ ವಿಭಿನ್ನ ಐಡಿಯಾಗಳ ಮೂಲಕ ಫಿಲ್ ಇನ್ ದಿ ಬ್ಲ್ಯಾಂಕ್ಸ್ ಮಾಡಿರೋ ಸಿನಿಮಾ 'ಓಲ್ಡ್ ಮಾಂಕ್'. ಶ್ರೀನಿ ನಿರ್ದೇಶಿಸಿ, ನಟಿಸಿರುವ ಸಿನಿಮಾದ ಟೈಟಲ್ ಕಾರ್ಡ್ ನೋಡುತ್ತಿದ್ದರೆ 80/ 90ರ ದಶಕದ ಕನ್ನಡ ಸಿನಿಮಾಗಳ ಟೈಟಲ್ ಕಾರ್ಡುಗಳು ನೆನಪಿಗೆ ಬರುತ್ತವೆ. 

ಸಿನಿಮಾ, ದೇವಲೋಕದ ದೃಶ್ಯದ ಮೂಲಕ ತೆರೆದುಕೊಳ್ಳುತ್ತದೆ. ಲವ್ ಬರ್ಡ್ಸ್ ಆಗಿದ್ದ ಕೃಷ್ಣ ಮತ್ತು ರುಕ್ಮಿಣಿಯ ನಡುವೆ ಫಿಟ್ಟಿಂಗ್ ಇಟ್ಟ ಕಾರಣಕ್ಕೆ ಕೃಷ್ಣನಿಗೆ ನಾರದನ ಮೇಲೆ ಕೋಪ ಬರುತ್ತದೆ. ಅದರ ಫಲವಾಗಿ ನಾರದ ಕೃಷ್ಣನ ಶಾಪಕ್ಕೆ ತುತ್ತಾಗುತ್ತಾನೆ. ಭೂಲೋಕದಲ್ಲಿ ಪ್ರೀತಿಯನ್ನು ಹೇಟ್ ಮಾಡುವ ತಂದೆಯ ಮಗನಾಗಿ ಜನ್ಮ ತಳೆಯುತ್ತಾನೆ. ಆತನೇ ಕಥಾನಾಯಕ ಅಪ್ಪಣ್ಣ ಉರುಫ್ ಶ್ರೀನಿ. 

ತನಗೆ ಸಿಗಬಾರದ್ದು ಯಾರಿಗೂ ಸಿಗಬಾರದು ಎನ್ನುವ ಫಿಲಾಸಫಿಯನ್ನು ಮೈಗೂಡಿಸಿಕೊಂಡ ಅಪ್ಪಣ್ಣನಿಗೆ ಲವ್ ಮಾಡುವವರನ್ನು ಕಂಡರಾಗದು. ಈ ಪ್ರಕ್ರಿಯೆಯಲ್ಲಿ ಆತ ಸಿಹಿಕಹಿ ಚಂದ್ರುವಿನ ದ್ವೇಷಕ್ಕೆ ತುತ್ತಾಗುತ್ತಾನೆ. ಒನ್ ಫೈನ್ ಡೇ ತಾನು ಮನಸೋತಿರುವ ಹುಡುಗಿಯ ತಂದೆ ಸಿಹಿಕಹಿ ಚಂದ್ರು ಎಂದು ಗೊತ್ತಾದಾಗ ವೈಮನಸ್ಯ ಏರ್ಪಡುತ್ತದೆ. 

ಈಗಾಗಲೇ ತನ್ನ ಮಗಳಿಗೆ ದೊಡ್ಡ ಮನೆಯ ಹುಡುಗನನ್ನು ಗೊತ್ತು ಮಾಡಿರುವ ವಿಷಯವನ್ನು ಸಿಹಿಕಹಿ ಚಂದ್ರು ಹೇಳುತ್ತಾರೆ. ಆ ದೊಡ್ಡ ಮನೆಯ ಹುಡುಗ ಬೇರಾರೂ ಆಗಿರದೆ ಕಾಲೇಜುದಿನಗಳಲ್ಲಿ ನಾಯಕನ ಶತ್ರುವಾಗಿರುತ್ತಾನೆ. ನಾಯಕನಿಂದ ಅವನ ಕೆಲಸ, ಹುಡುಗಿ ಎಲ್ಲವನ್ನೂ ಆತ ಕಿತ್ತುಕೊಂಡು ಸೇಡು ತೀರಿಸಿಕೊಳ್ಳಲು ಹವಣಿಸುತ್ತಾನೆ. 

ಇದಿಷ್ಟು ಸಿಂಪಲ್ಲಾಗಿ ಹೇಳಬಹುದಾದ ಸಿನಿಮಾದ ಕಥೆ. ಆದರೆ ಪುರಾಣದಲ್ಲಿರುವಂತೆ ಈ ಸಿನಿಮಾದಲ್ಲಿ ಉಪಕಥೆಗಳು ಹಲವಾರಿವೆ. ಎಲ್ಲವು ಮಜಭರಿತವಾಗಿವೆ. ಎರಡೂವರೆ ಗಂಟೆಯ ಕಾಲ ಪ್ರೇಕ್ಷಕನನ್ನು ಸೀಟಿನಲ್ಲಿ ಹಿಡಿದು ಕೂರಿಸುವಲ್ಲಿ ಚಿತ್ರಕಥೆ ಮಹತ್ತರ ಪಾತ್ರ ವಹಿಸಿದೆ.   

ಸಿನಿಮಾದ ಮತ್ತೊಂದು ಹೆಗ್ಗಳಿಕೆ ಪಂಚಿಂಗ್ ಡಯಲಾಗುಗಳು. ಕೇವಲ ನಾಯಕನಿಗೆ ಮಾತ್ರವೇ ಅಲ್ಲ, ನಾಯಕನ ತಂದೆ ಪಾತ್ರ ನಿರ್ವಹಿಸಿರುವ ಎಸ್. ನಾರಾಯಣ್ ಅವರಿಂದಲೂ ಪಂಚಿಂಗ್ ಡಯಲಾಗು ಹೇಳಿಸಲಾಗಿದೆ. ಅಪ್ಪ ಎಸ್. ನಾರಾಯಣ್, ಲವ್ ವಿಷ್ಯದಲ್ಲಿ ಮಾತ್ರ ನೋ ನಾರಾಯಣ್. ಇಫ್ ಯು ಆರ್ ಲೋಫರ್ ಐಯಾಮ್ ಯುವರ್ ಫಾದರ್.  

ನಡೆಯದ ಕಥೆಯೇ ಆದರೂ ಬಿಲೀವೆಬಲ್ ಆಗಿ ಹೇಳುವುದು ಶ್ರೀನಿ ಸಿನಿಮಾಗಳ ವೈಶಿಷ್ಟ್ಯತೆ. 'ಓಲ್ಡ್ ಮಾಂಕ್' ಸಿನಿಮಾದಲ್ಲೂ ಈ ತಂತ್ರಗಾರಿಕೆಯನ್ನು ಕಾಣಬಹುದು. ಅಲ್ಲದೆ ಎಷ್ಟೊಂದು ಕ್ರಿಯೇಟಿವ್ ಆಗಿಸಲು ಸಾಧ್ಯವೋ ಅವೆಲ್ಲಾ ಸಾಧ್ಯತೆಗಳನ್ನು ಬಳಸಿಕೊಂಡಿರುವುದು ಸಿನಿಮಾದಲ್ಲಿ ಕಾಣುತ್ತದೆ. 

ಉದಾಹರಣೆಗೆ 'ಆರ್ಟ್ ಆಫ್ ಲವಿಂಗ್' ಎನ್ನುವ ಹಿರಿಯ ಪ್ರೇಮಿಗಳ ಕ್ಲಬ್. ಇಳಿವಯಸ್ಸಿನ ಒಂಟಿ ಹಿರಿಯ ಜೀವಗಳು ತಮ್ಮ ಮೊದಲನೇ ಪ್ರೀತಿಯನ್ನು ಕಂಡುಕೊಳ್ಳಲು ನೆರವಾಗುವ ಐಡಿಯಾ ವಿನೂತನವಾದುದು. 

'ಡ್ರಾಮಾ' ಸಿನಿಮಾದಲ್ಲಿ ಯೋಗರಾಜ್ ಭಟ್ ಅವರು ಎರಡು ಒಂಟಿ ಹಿರಿಯ ಜೀವಗಳಿಗೆ ಮದುವೆ ಮಾಡಿಸುವುದನ್ನು ತೋರಿಸಿದ್ದರು. ಶ್ರೀನಿ ಐಡಿಯಾದ ಇಂಪ್ರೊವೈಸ್ಡ್ ವರ್ಷನ್ ತೋರಿಸಿದ್ದಾರೆ. ಅದೊಂದೇ ಅಲ್ಲ, ಡೆಮೊ ಎಂ ಎಲ್ ಎ ಎನ್ನುವ ರಾಜಕಾರಣದ ತಂತ್ರಗಾರಿಕೆಯ ಪರಿಚಯವೂ ಇಲ್ಲಿದೆ. 

ನಿರ್ದೇಶನದ ಜೊತೆಗೆ ನಾಯಕ ನಟನಾಗಿ ಅಭಿನಯಿಸಿರುವ ಶ್ರೀನಿ ಎರಡೂ ವಿಭಾಗಗಳಲ್ಲಿ ಮಿಂಚಿದ್ದಾರೆ. ಅವರ ಜೊತೆ ನಟಿಸಿರುವ ಸುಜಯ್ ಶಾಸ್ತ್ರಿ ತಮ್ಮ ಹಾಸ್ಯದ ಟೈಮಿಂಗ್ ಮತ್ತು ಸಂಭಾಷಣೆಯಿಂದ ನಗೆಯುಕ್ಕಿಸುತ್ತಾರೆ. ನಾಯಕಿ ಅದಿತಿ ಪ್ರಭುದೇವ ಮುದ್ದಾಗಿ ಕಾಣುವುದರ ಜೊತೆಗೆ ನಟನೆ ಮತ್ತು ನೃತ್ಯದ ಮೂಲಕ ಪ್ರೇಕ್ಷಕರ ಮನಗೆಲ್ಲುತ್ತಾರೆ. 

ಈ ಸಿನಿಮಾದ ಮೂಲಕ ಶ್ರೀಕೃಷ್ಣನಾಗಿ ಸುನಿಲ್, ಎಸ್. ನಾರಾಯಣ್ ಮತ್ತೆ ಹಿರಿತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ ಎಂದು ಹೇಳಬಹುದು. ನಾಯಕನ ತಂದೆ ಪಾತ್ರಕ್ಕೆ ಎಸ್. ನಾರಾಯಣ್ ಅವರಿಗಿಂತ ಸೂಕ್ತವಾದ ನಟ ಬೇರಾರೂ ಇಲ್ಲ ಎಂದೆನ್ನಿಸುವಷ್ಟರ ಮಟ್ಟಿಗೆ ಗಮನಸೆಳೆಯುತ್ತಾರೆ. ಪೋಷಕ ನಟಿ ಅರುಣಾ ಬಾಲರಾಜ್ ಅವರು ಈ ಸಿನಿಮಾದಲ್ಲೂ ನಾಯಕನ ಅಮ್ಮನಾಗಿ ಆಪ್ತವಾಗಿ ನಟಿಸಿದ್ದಾರೆ. ನಮ್ಮಮ್ಮನೂ ಹೀಗಿದ್ದಿದ್ದರೆ ಎನ್ನುವಂತಿರುವ ಅವರನ್ನು 'ಡ್ರೀಮ್ ಗರ್ಲ್' ಎನ್ನುವಂತೆ 'ಡ್ರೀಮ್ ಮಾಮ್' ಎನ್ನಲಡ್ಡಿಯಿಲ್ಲ. 

ಸಿನಿಮಾದ ಸಿನಿಮೆಟೊಗ್ರಫಿ, ಹಿನ್ನೆಲೆ ಸಂಗೀತ, ಹಾಡಿನ ಪ್ರೊಡಕ್ಷನ್, ಎಸ್ಪೆಷಲಿ 'ಗಿಚ್ಚಿ ಗಿಲಿಗಿಲಿ' ಹಾಡಿನಲ್ಲಿ ಬಳಕೆಯಾದ Vfx ಎಲ್ಲವೂ ಇಂದಿನ ಕಾಲದ ಟ್ರೆಂಡ್ ಗೆ ಅಪ್ ಡೇಟೆಡ್ ಆಗಿರುವುದನ್ನು ಸೂಚಿಸುತ್ತವೆ. ಒಟ್ಟಿನಲ್ಲಿ ಸಿನಿಮಾದ ಪ್ರೊಡಕ್ಷನ್  ನಿರ್ಮಾಪಕರ ಧಾರಾಳತೆಗೆ ಸಾಕ್ಷ್ಯ ಒದಗಿಸುತ್ತದೆ. ಮನೆ ಮಂದಿಯೆಲ್ಲ ಒಟ್ಟಾಗಿ ನೋಡುವ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಪ್ಯಾಕೇಜನ್ನು 'ಓಲ್ಡ್ ಮಾಂಕ್' ಸಿನಿಮಾ ಮೂಲಕ ಶ್ರೀನಿ ನೀಡಿದ್ದಾರೆ.


Stay up to date on all the latest ಸಿನಿಮಾ ವಿಮರ್ಶೆ news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments(1)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • N S Krishna

    By mutual dialogue across the table both countries may arrive suitable agreement and the war should be ended as early as possible so the people may lead their Golden Life.
    4 months ago reply
flipboard facebook twitter whatsapp