Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Navy recovers one body from Meghalaya coal mine after one month

ಮೇಘಾಲಯ ಗಣಿ ದುರಂತ: ಒಂದು ತಿಂಗಳ ನಂತರ ಓರ್ವ ಕಾರ್ಮಿಕನ ಮೃತ ದೇಹ ಪತ್ತೆ

Siddaganga Seer

ಸಿದ್ಧಗಂಗಾ ಶ್ರೀಗಳ ಆರೋಗ್ಯ ಸ್ಥಿರ, ಆದರೆ ದರ್ಶನಕ್ಕೆ ಇಲ್ಲ ಅವಕಾಶ

ರವೀಂದ್ರ ಜಡೇಜಾ

ಕೊಹ್ಲಿಯನ್ನೇ ಹಿಂದಿಕ್ಕಿದ್ದ ಜಡೇಜಾರಿಂದ ವೇಗದ ರನೌಟ್, ವಿಡಿಯೋ ವೈರಲ್!

Hanaclassu: The insecurity, fear and disbelief are the creators of arms trade

ಅಭದ್ರತೆ, ಅವಿಶ್ವಾಸ, ಅಪನಂಬಿಕೆ ಸೃಷ್ಟಿಸಿದೆ ಸಾವಿರಾರು ಕೋಟಿ ಶಸ್ತ್ರಾಸ್ರ ವಹಿವಾಟು!

Yeddyurappa

ನಾವು 'ಆಪರೇಷನ್' ಮಾಡಿಲ್ಲ, ಅವರೇ ನಮಗೆ 'ಆಪರೇಷನ್' ಮಾಡಲು ಯತ್ನಿಸುತ್ತಿದ್ದಾರೆ: ಯಡಿಯೂರಪ್ಪ

Donald Trump nominates three Indian Americans to key administration post

ಟ್ರಂಪ್ ಆಡಳಿತದಲ್ಲಿ ಭಾರತೀಯರ ಪ್ರಾಬಲ್ಯ: ಪ್ರಮುಖ ಹುದ್ದೆಗಳಿಗೆ 3 ಭಾರತೀಯ ಮೂಲದ ಅಮೆರಿಕನ್ನರ ನೇಮಕ

Representational image

ಸಮಯಕ್ಕೆ ಸರಿಯಾಗಿ ಸಿಗದ ಚಿಕಿತ್ಸೆ: ಚೇಳು ಕಚ್ಚಿದ ಬಾಲಕ ಸಾವು

ಸಂಗ್ರಹ ಚಿತ್ರ

ಭೀಕರ ವಿಡಿಯೋ: ಮಹಿಳಾ ವಿಜ್ಞಾನಿಯನ್ನು ಜೀವಂತವಾಗಿ ತಿಂದು ತೇಗಿದ ದೈತ್ಯ ಮೊಸಳೆ

Student rises voice against lecturer, shows disrespect: video goes viral

ನೆನ್ನೆ ಸುಮ್ನೆ ಕೂತಿದ್ದೆ, ಇದು ನಮ್ ಕ್ಲಾಸ್ ನಾವು ಹೇಳಿದಂಗೆ ಕೇಳ್ಬೇಕು: ಪ್ರಾಧ್ಯಾಪಕಿಗೆ ವಿದ್ಯಾರ್ಥಿಯ ಅವಾಜ್!

Sudeep

ದುರ್ಗದ ಹುಲಿ ಸಿನಿಮಾದಿಂದ ನಟ ಸುದೀಪ್ ಹಿಂದೆ ಸರಿಯಲು ಕಾರಣವೇನು?

H D Revanna-Rohini Sinduri

ಜಿಲ್ಲಾಧಿಕಾರಿ ಸಭೆಯಲ್ಲಿ ಹೆಚ್ ಡಿ ರೇವಣ್ಣ- ಡಿಸಿ ರೋಹಿಣಿ ಸಿಂಧೂರಿ ವಾಗ್ವಾದ

H.D revanna , C.S Puttaraju And  Sa.Ra Mahesh

ಬಿಜೆಪಿ ಸರ್ಜರಿಗೆ ಜೆಡಿಎಸ್ ಮಾಸ್ಟರ್ ಪ್ಲಾನ್: ಒಕ್ಕಲಿಗ ಶಾಸಕರೇ ಮೈನ್ ಟಾರ್ಗೆಟ್!

Ambareesh-Darshan

ಅಂಬಿ ನಿಧನ: ಯಶ್ ಬಳಿಕ ಸರಳ ಹುಟ್ಟುಹಬ್ಬ ಆಚರಣೆಗೆ ದರ್ಶನ್ ಮನವಿ

ಮುಖಪುಟ >> ಸಿನಿಮಾ >> ಸಿನಿಮಾ ವಿಮರ್ಶೆ

ಲವ್ ಇನ್ ಮಂಡ್ಯ - ಸಕ್ಕರೆ ನಾಡಿನ ಸಿಹಿ ಪ್ರೇಮ ಕಥೆ

ಲವ್ ಇನ್ ಮಂಡ್ಯ ಚಿತ್ರ ವಿಮರ್ಶೆ
Love In Mandya

ಲವ್ ಇನ್ ಮಂಡ್ಯ

ಮಚ್ಚು-ಲಾಂಗು-ಆಕ್ಷನ್ ಇಲ್ಲದೆ ಸಿನೆಮಾ ಮಾಡುವುದೇ ಅಪಥ್ಯ ಎನ್ನುವ ಗಾಂಧಿನಗರದ ಜನರ ಮಧ್ಯೆ ಸರಳ ಕಥೆ ಹೇಳುವುದಕ್ಕೆ ಒತ್ತು ಕೊಟ್ಟಿರುವ ಈ ಉತ್ತಮ ಚಿತ್ರ ಬಂದಿರುವುದು, ಬಂಡೆಯ ಮಧ್ಯೆ ಮತ್ತೊಂದು ಗಿಡ ಚಿಗುರೊಡೆದಂತೆಯೆ! ಅರಸು ಅಂತಾರೆ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಗಮನಾರ್ಹ ಸಿನೆಮಾ ನಿರ್ದೇಶಿಸಿದ್ದಾರೆ.

ಕೇಬಲ್ ಕರ್ಣ (ನೀನಾಸಂ ಸತೀಶ್) ಅನಾಥ. ಕೇಬಲ್ ಬಸಣ್ಣನ ಶಿಷ್ಯನಾಗಿ ಕೇಬಲ್ ಆಪರೇಟರ್ ಕೆಲಸ ಮಾಡುತ್ತ ಮಂಡ್ಯದಲ್ಲಿ ಆಗ ತಾನೇ ಮನೆ ಮಾಡಿರುವ ಕುಟುಂಬದ ಎಸ್ ಎಸ್ ಎಲ್ ಸಿ ನಪಾಸಾದ ಹುಡುಗಿ ಸುಷ್ಮಾ (ಸಿಂಧು ಲೋಕನಾಥ್) ಳನ್ನು ಪ್ರೀತಿಸುತ್ತಾನೆ. ಮೊದಲಾರ್ಧದ ಇವರಿಬ್ಬರ ನವಿರು ಪ್ರೇಮ ಕಥೆಗೆ ಟ್ವಿಸ್ಟ್ ಸಿಗುವುದು ದ್ವಿತೀಯಾರ್ಧದಲ್ಲಿ. ಸುಷ್ಮಾ ಮದುವೆಯನ್ನು ಅವಳಿಗೆ ಇಷ್ಟವಿಲ್ಲದ ಹುಡುಗನ ಜೊತೆ ಅವಳ ಹೆತ್ತವರು ಗೊತ್ತು ಮಾಡುವುದರಿಂದ, ಕರ್ಣ ಮತ್ತು ಸುಷ್ಮಾ ಹೊಸೂರಿಗೆ ಓಡಿ ಹೋಗುತ್ತಾರೆ. ಹೊಸೂರಿನಲ್ಲಿ ಅವರು ನೆಮ್ಮದಿಯಿಂದ ಬದುಕಲು ಸಾಧ್ಯವೇ?

ಅರಸು ಅಂತಾರೆ ಸಿನೆಮಾಗೆ ಅತ್ಯುತ್ತಮ ಕಥೆ ಬರೆದಿದ್ದಾರೆ ಎನ್ನಲಾಗದಿದ್ದರೂ, ಅವರು ಈ ಮಾಧ್ಯಮದ ಮೂಲಕ ಒಂದು ಸರಳ ಕಥೆಯನ್ನು ತಾಜಾವಾಗಿ ಹೇಳುವ ಜಾಣ್ಮೆಗೆ ಮೆಚ್ಚಬೇಕು. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ, ಸೂಪರ್ ಸ್ಟಾರ್ ಗಳ ಮಧ್ಯೆಯೇ ನಡೆಯುವ ಗಾಂಧಿ ನಗರದ ಕಥೆಗಳಿಗೆ ವಿಭಿನ್ನವಾಗಿ, ಈ ಕಥೆ ನಡೆಯುವುದು ಮಂಡ್ಯದ ಹಳ್ಳಿಯಲ್ಲಿ ಮತ್ತು ಸಾಮಾನ್ಯ ಪಾತ್ರಗಳ ನಡುವೆ. ಅರಸು ಸಿನೆಮಾ ಸ್ಕ್ರೀನ್ ಅನ್ನು ಉಪಯೋಗಿಸಿಕೊಂಡಿರುವ ರೀತಿ ಅನನ್ಯ. ಪ್ರತಿ ಫ್ರೇಮಿನಲ್ಲು ಮುನ್ನಲೆಯಲ್ಲೋ-ಹಿನ್ನಲೆಯಲ್ಲೋ ಮಂಡ್ಯದ ಪರಿಸರವನ್ನು ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ಎತ್ತಿನ ಗಾಡಿ ಕಾಣಿಸುತ್ತದೆ. ಮಕ್ಕಳು ಎತ್ತಿನ ನೊಗದ ಮೇಲೆ ಆಟ ಆಡುವುದು ಕಾಣಿಸುತ್ತದೆ. ಬಾವಿ, ಹುಲ್ಲಿನ ಹೊರೆಗಳು ಕಾಣಿಸುತ್ತವೆ. ನಿರ್ದೇಶಕರು ನಿರೂಪಣೆಯಲ್ಲಿ ನಮ್ಮನ್ನು ಎಲ್ಲೋ ೯೦ರ ದಶಕದ ಹಿಂದಿನ ಕಥಾ ನಿರೂಪಣೆಗೆ ಕೊಂಡೊಯ್ಯುತ್ತಿದ್ದಾರೇನೊ ಎಂದೆನಿಸುತ್ತದೆ. ಅದೇ ಸಿನೆಮಾದ ತಾಜಾತನ. ಅದೇ ಪ್ರೇಕ್ಷಕನನ್ನು ಹಿಡಿದಿಡುವುದು. ಮೊದಲಾರ್ಧದ ನವಿರು ಪ್ರೇಮ ಕಥೆ ಮತ್ತು ಲಘು ಹಾಸ್ಯ ಪ್ರೇಕ್ಷಕರಲ್ಲಿ ಮಂದಹಾಸ ಮೂಡಿಸುತ್ತದೆ. ದ್ವಿತೀಯಾರ್ಧದಲ್ಲಿ ತಿರುವು ಕಾಣುವ ಸಿನೆಮಾ ನಿರೂಪಣಾ ಶೈಲಿಯಲ್ಲೂ ಬದಲಾವಣೆ ಕಾಣುತ್ತದೆ. ಆದರೂ ಬೇಸರವೆನ್ನುವ ರೀತಿಯಲ್ಲಿ ಬದಲಾಗುವುದಿಲ್ಲ. ಇಲ್ಲಿಯವರೆಗೂ ಸಾಮಾನ್ಯ ಮನುಷ್ಯನಾಗಿದ್ದ ಕರ್ಣನಿಗೆ ಕೊನೆಗೆ ಹಿರೋಯಿಸಂ ತುಂಬುತ್ತಾರೆ. ಅದು ಗಾಂಧಿನಗರದ ಅಗತ್ಯತೆಯೇನೋ! ಹಾಗೂ ಕೊನೆಯ ಕೆಲವು ದೃಶ್ಯಗಳು ಮಲೆಯಾಳಂ ಚಲನಚಿತ್ರ "ದೃಶ್ಯಂ"ಅನ್ನು  ನೆನಪಿಗೆ ತರುತ್ತವೆ. ಹೀಗಾಗಿ ನಟನ ಹಿರೋಯಿಸಂ ಅನ್ನು ಅತಾರ್ಕಿಕವಾಗುವುದರಿಂದ ನಿರ್ದೇಶಕರು ತಪ್ಪಿಸಿದ್ದಾರೆ.

ನೀನಾಸಂ ಸತೀಶ್ ತಮ್ಮ ಅಭಿನಯವನ್ನು ಹಿಂದಿನ ಸಿನೆಮಾಗಳಿಗಿಂತ ಉತ್ತಮ ಪಡಿಸಿಕೊಂಡಿದ್ದಾರೆ. ಆರರಿಂದ ಹತ್ತು ಪ್ಯಾಕ್ ಆಕ್ಷನ್ ಹೀರೋಗಳ ಮಧ್ಯೆ ಸಾಮಾನ್ಯರೂ ಹೇಗೆ ಬದುಕಬಹುದು ಎಂಬುದನ್ನು ತೋರಿಸಲು ಪ್ರಯತ್ನಿಸಿದ್ದಾರೆ. ಸಿಂಧು ಲೋಕನಾಥ್ ಕೂಡ ಸುಂದರ ಅಭಿನಯ ನೀಡಿದ್ದಾರೆ. ಹಾಗೆ ಇಲ್ಲಿಯೂ ಕೂಡ ಗ್ಲಾಮರ್ ಇಲ್ಲದೆ ಕೂಡ ನಟಿಸಬಹುದು ಎಂಬುದರ ಉದಾಹರಣೆಯಿದೆ. ಸಿನೆಮಾಗೆ ಸುಜ್ಞಾನಮೂರ್ತಿ ಅವರ ಅತ್ಯುತ್ತಮ ಛಾಯಾಗ್ರಹಣವಿದ್ದು, ಸಿನೆಮಾವನ್ನು ಎತ್ತಿ ಹಿಡಿಯುತ್ತದೆ ಹಾಗೂ ಮಂಡ್ಯ-ಹೊಸೂರುಗಳ ಪರಿಸರವನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಹಾಡುಗಳು ಸಿನೆಮಾಗಿ ಪೂರಕವಾಗಿದ್ದು, ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನ ಯಶಸ್ವಿಯಾಗಿದೆ ಎನ್ನಬಹುದು. ಬಪ್ಪಿ ಲಹರಿ ಒಂದು ಹಾಡು ಹಾಡಿದ್ದು, ಹಲವಾರು ಕನ್ನಡದ ಗಾಯಕರನ್ನು ಯತೇಚ್ಚವಾಗಿ ಬಳಸಿಕೊಂಡಿರುವುದು ಅಭಿನಂದನಾರ್ಹ. ಗೀತ ರಚನೆ ಕೂಡ ಪಡ್ಡೆಗಳನ್ನು ಹಿಡಿದಿಡಲು ಯಶಸ್ವಿಯಾಗಿದೆ. ಸತೀಶ್ ಅವನ ಶಿಷ್ಯನಾಗಿ ಹಾಗೂ ಸಿಂಧು ಲೋಕನಾಥ್ ಅವರ ತಂಗಿಯಾಗಿ ನಟಿಸಿರುವ ಬಾಲ ನಟರ ಪಾತ್ರ ಮಾಮೂಲಿ ಗಾಂಧಿ ನಗರದ ವಯಸ್ಸಿಗೆ ಮೀರಿದ ಮಕ್ಕಳ ಪಾತ್ರವಾಗಿದ್ದರೂ, ಉತ್ತಮ ಅಭಿನಯ ನೀಡಿದ್ದಾರೆ. ಉಳಿದಂತೆ ರಾಕ್ಲೈನ್ ಸುಧಾಕರ್ ತಮ್ಮ ಎಂದಿನ ಅಭಿನಯ ನೀಡಿದ್ದಾರೆ.

ಬಂಡೆ ಮಧ್ಯೆ ಚಿಗುರೊಡೆದ ಗಿಡಗಳು ಗಮನಕ್ಕೆ ಬಾರದೆ ಹೋಗಬಹುದು, ಆದರೆ ಅವೂ ದೊಡ್ಡವಾಗಿ ನೆರಳು ಕೊಡುತ್ತವೆ. ಆದರೆ ಈ ಸಿನೆಮಾ ಚಿಗುರಿನಲ್ಲಿಯೇ ಗಮನಾರ್ಹವಾಗಿದ್ದು ಪ್ರೇಕ್ಷಕರನ್ನು ತಣಿಸಬಲ್ಲದು. ಹೋಗಿ ಒಮ್ಮೆ ನೋಡಿ!

- ಗುರುಪ್ರಸಾದ್

guruprasad.n@kannadaprabha.com

Posted by: Guruprasad Narayana

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Love In Mandya, Cinema, Film, Review, Sandalwood, Kannada, Satish Ninasam, Arasu Anthare, Sindhu Lokanath, ಲವ್ ಇನ್ ಮಂಡ್ಯ, ಚಲನಚಿತ್ರ, ವಿಮರ್ಶೆ, ಸಿನೆಮಾ, ನೀನಾಸಂ ಸತೀಶ್, ಸಿಂಧು ಲೋಕನಾಥ್, ಅರ
English summary
Arasu Anthare in his directorial debut delivers a clean entertainment. The film not sticking to the usual Gandhinagar Action packed violence based thrillers tries to take back audience to pre 90's Narrative.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS