Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ

ಅತೃಪ್ತ ಶಾಸಕರಿಗೆ ವಿಪ್ ಜಾರಿಗೊಳಿಸುವ ಅಧಿಕಾರ ಶಾಸಕಾಂಗ ನಾಯಕರಿಗಿದೆ : ಸ್ಪೀಕರ್ ರೂಲಿಂಗ್

Chandrayaan 2

ಚಂದ್ರಯಾನ 2 ಉಡಾವಣೆಗೆ ಕ್ಷಣಗಣನೆ ಆರಂಭ: ವಿಜ್ಞಾನ ಲೋಕಕ್ಕೆ ಕೌತುಕದ ದಿನ

MS Dhoni

ಸೇನಾ ತರಬೇತಿ ಪಡೆಯಲು ಮಹೇಂದ್ರ ಸಿಂಗ್​ ಧೋನಿಗೆ ಅನುಮತಿ

ಸಂಗ್ರಹ ಚಿತ್ರ

'ದಿನದ ಅತ್ಯುತ್ತಮ ಗೋಲ್' ಕೊನೆಯ ಕ್ಷಣದಲ್ಲಿ ಹ್ಯಾರಿ ಕೇನ್ ಅದ್ಭುತ ಗೋಲ್, ವಿಡಿಯೋ ವೈರಲ್!

Rowdy sheeter arrested after firing at Bengaluru

ಬೆಂಗಳೂರು: ತಡರಾತ್ರಿಯಲ್ಲಿ ಪೋಲೀಸ್ ಕಾರ್ಯಾಚರಣೆ, ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿ ಬಂಧನ

Tommoddy

ಟೀಂ ಇಂಡಿಯಾದ ಮುಂದಿನ ಕೋಚ್ ಯಾರು? ಟಾಮ್ ಮೂಡಿ ಹೆಸರು ಮುಂಚೂಣಿಯಲ್ಲಿ

Prakash Javadekar

ಮೋದಿ 2.0 ಸರ್ಕಾರದ ಮೊದಲ 50 ದಿನಗಳಲ್ಲಿ ಸಮಾಜದ ಎಲ್ಲಾ ರಂಗಗಳ ಅಭಿವೃದ್ದಿಗೆ ಆದ್ಯತೆ- ಜಾವಡೇಕರ್

Satya Pal Malik

ಒಮರ್ ಅಬ್ದುಲ್ಲಾ ಒಬ್ಬ 'ರಾಜಕೀಯ ಬಾಲಾಪರಾಧಿ': ಕಾಶ್ಮೀರ ರಾಜ್ಯಪಾಲ ಮಲಿಕ್ ಹೊಸ ವಿವಾದ

MS Dhoni-Mathira

ಪಾಕ್ ಆಟಗಾರರೇ ಮುಖ ತಿರುಗಿಸಿದರು, ನಾನು ಅಳುತ್ತಿದ್ದಾಗ ಧೋನಿ ನನ್ನನ್ನು ಕರೆದರು ಎಂದ ಪಾಕ್ ನಟಿ!

Representational image

ಎಲ್ ಜಿಬಿಟಿ ಸಮುದಾಯಕ್ಕೆ ಮೀಸಲಾದ ನೇಮಕ ಸಲಹಾ ಸಂಸ್ಥೆ

Threatened youth

ಔರಂಗಾಬಾದ್: ಜೈ ಶ್ರೀರಾಮ್ ಪಠಿಸುವಂತೆ ಮುಸ್ಲಿಂ ಯುವಕರಿಗೆ ಬೆದರಿಕೆ

Commonwealth TT: Kannada girl Archana Kamath-Sathiyan pair wins mixed double gold medal

ಕಾಮನ್ವೆಲ್ತ್ ಟಿಟಿ: ಕನ್ನಡತಿ ಅರ್ಚನಾ ಜೋಡಿಗೆ ಮಿಶ್ರ ಡಬಲ್ಸ್ ಬಂಗಾರ

Nagesh

ಮಂಗಳೂರು: ಡೆಂಗ್ಯು ಜ್ವರದಿಂದ ಬಳಲುತ್ತಿದ್ದ ಯುವ ಪತ್ರಕರ್ತ ನಾಗೇಶ್ ನಿಧನ

ಮುಖಪುಟ >> ಸಿನಿಮಾ >> ಸಿನಿಮಾ ವಿಮರ್ಶೆ

ಕಥನ ಕಲೆಯಿಲ್ಲದ ಕದನ ಕಲೆ!

ಸಿಪಾಯಿ ಚಿತ್ರ ವಿಮರ್ಶೆ
ಸಿಪಾಯಿ ಸಿನೆಮಾ ವಿಮರ್ಶೆ

Sipayi Kannada Movie Review

'ಲೂಸಿಯಾ' ಸಿನೆಮಾದಲ್ಲಿ ಸಹ ನಿರ್ದೇಶಕನಾಗಿದ್ದ ರಜತ್ ಮಯಿ ಈಗ ಸ್ವತಂತ್ರವಾಗಿ ನಿರ್ದೇಶಿಸಿರುವ 'ಸಿಪಾಯಿ' ಬಿಡುಗಡೆಯಾಗಿದೆ. ಚೊಚ್ಚಲ ಬಾರಿಗೆ ನಟಿಸಿರುವ ಸಿದ್ಧಾರ್ಥ್ ಅವರೇ ನಿರ್ಮಿಸಿರುವ ಸಿನೆಮಾದಲ್ಲಿ 'ಲೂಸಿಯಾ' ಖ್ಯಾತಿಯ ಶ್ರುತಿ ಹರಿಹರನ್ ನಾಯಕನಟಿ. ಈ ಹಿಂದೆ ಬಿಡುಗಡೆಯಾಗಿ ಜನಪ್ರಿಯವಾಗಿದ್ದ ನಟ ರವಿಚಂದ್ರನ್ ಅವರ ಸಿನೆಮಾದ ಹೆಸರನ್ನೇ ಹೊತ್ತಿರುವ 'ಸಿಪಾಯಿ'ಯ ಕದನ ಪ್ರೇಕ್ಷಕನನ್ನು ಆವರಿಸಿಕೊಳ್ಳಲಿದೆಯೇ?

ಬರೀ ವರದಿ ಮಾಡುವುದರಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ನಂಬುವ ಟಿವಿ ವಾಹಿನಿಯೊಂದರ ಕ್ರೈಮ್ ವರದಿಗಾರ ಸಿದ್ಧು (ಸಿದ್ಧಾರ್ಥ್), ಮಾಫಿಯಾದ ಒಳಹೊಕ್ಕು, ಅಲ್ಲಿನವರ ನಂಬುಗೆಗೆ ಪಾತ್ರನಾಗಿ ಒಳಗಿನಿಂದಲೇ ಹೋರಾಡುತ್ತಾನೆ. ಸ್ಪೈ ಕ್ಯಾಮರಾಗಳನ್ನು ಧಾರಾಳವಾಗಿ ಬಳಸಿ ಮಾಫಿಯಾ ಡಾನ್ ವಿರಾಟ್ ನ (ಕೃಷ್ಣ ಹೆಬ್ಬಾಳೆ) ದೌರ್ಜನ್ಯಗಳನ್ನು ಬಯಲಿಗೆಳೆಯುತ್ತಾನೆ. ಹೀಗೆ ಹತ್ತಾರು ಧೀರೋದ್ಧಾತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಿದ್ಧುಗೆ, ತಾನು ಓದಿದ ಕಾಲೇಜಿನಲ್ಲಿ ದಿವ್ಯಳನ್ನು (ಶ್ರುತಿ ಹರಿಹರನ್) ಕಂಡ ಕ್ಷಣ ಪ್ರೇಮ ಹೂಂಕರಿಸಿ, ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಾರೆ. ಹೀರೋನ ಚಟುವಟಿಕೆಗಳಿಗೆ ಅವನ ತಂದೆ ಮತ್ತು ವರಿದಿಗಾರ ನರಸಿಂಹ ರಾಜು (ಅಚ್ಯುತ್ ಕುಮಾರ್) ಪೂರ್ಣ ಸಾಥ್ ನೀಡಿದರೆ, ಗೆಳೆಯ ಮಂಜು (ಸಂಚಾರಿ ವಿಜಯ್) ಸದಾ ಜೊತೆಗೆ ಇರುತ್ತಾನೆ! ಹೀರೋನ ಈ ಹಾದಿಯಲ್ಲಿ ಸಿಗುವ ಕಲ್ಲು ಮುಳ್ಳು ಮತ್ತು ಹೂಗಳು ಏನೇನು?

ಅತಿ ಸಾಧಾರಣ ಕಥೆಯೊಂದನ್ನು ಹೆಣೆದು, ವಿವಿಧ ಪಾತ್ರಗಳ ನೆನಪಿನ ದೃಶ್ಯಗಳು ಮತ್ತು ಸದ್ಯದಲ್ಲಿ ನಡೆಯುವ ಕಥೆಯ ದೃಶ್ಯಗಳನ್ನು ಬದಲಿಸುತ್ತಾ ಸಾಗುವ ನಿರೂಪಣಾ ತಂತ್ರದ ಮೂಲಕ ಕಥೆ ಹೇಳಿದ್ದು, ಪ್ರಾರಂಭಕ್ಕೆ ಪ್ರೇಕ್ಷಕರಲ್ಲಿ ಒಂದು ಸಣ್ಣ ಕುತೂಹಲ ಮೂಡಿಸಲು ಸಾಧ್ಯವಾಗಿದ್ದರೂ, ಮುಂದುವರೆದಂತೆ ಎಲ್ಲವು ಬಯಲಾಗಿ, ಸಮತಟ್ಟಾಗಿ  ನಿರಾಸೆಯನ್ನು ಹೆಚ್ಚಿಸುತ್ತಾ ಆಯಾಸ ತರಿಸುತ್ತದೆ. ಸಿನೆಮಾದ ಪ್ರಾರಂಭದಲ್ಲಿ ಪ್ರಜ್ಞೆ ಕಳೆದುಕೊಂಡಿರುವ ನಾಯಕ ಸಿದ್ಧು ಮೂಡಿಸುವ ಕುತೂಹಲದ ಎಳೆ ಮಾಯವಾಗಿ ಮುಂದೆಲ್ಲಾ ಫೈಟ್ ಗಳು, ಹಾಡುಗಳಿಂದ ತುಂಬಿ ಹೋಗಿ ಮಾಮೂಲಿ ಮಸಾಲಾ ಸಿನೆಮಾವಾಗಿ ಮಾರ್ಪಾಡಾಗುತ್ತದೆ. ನೆನಪಿನಲ್ಲುಳಿಯುವ ಯಾವುದೇ ಭಾವನಾತ್ಮಕ ಸನ್ನಿವೇಶ/ಘಟನೆಗಳಾಗಲಿ, ಅಥವಾ ಸೀಟಿನ ತುದಿಗೆ ಪ್ರೇಕ್ಷನನ್ನು ಎಳೆದು ಕೂರಿಸುವ ತಿರುವುಗಳಾಗಲಿ ಸಿನೆಮಾದಲ್ಲಿ ಇಲ್ಲ. ಹೀರೊ ಮಾಫಿಯಾದೊಳಗೆ ಸೇರುವ ಘಟನೆಯಾಗಲಿ, ಅಲ್ಲಿ ಇದ್ದುಕೊಂಡು ಅವರ ಚಟುವಟಿಕೆಗಳನ್ನು ದಾಖಲು ಮಾಡುವ ದೃಶ್ಯಗಳು ಬಹಳ ಜಾಳುಜಾಳಾಗಿದ್ದು, ಇನ್ನು ಸ್ವಲ್ಪ ಹೆಚ್ಚಿನ ವಿವರಗಳನ್ನು ಕೆದಕಿ ನಂಬಿಕೆಯುಟ್ಟಿಸುವಂತೆ ಚಿತ್ರಿಸಿದ್ದರೆ ಒಳ್ಳೆಯ ಥ್ರಿಲ್ಲರ್ ಆಗಿ ಪ್ರೇಕ್ಷಕರನ್ನು ರಂಜಿಸಬಹುದಿತ್ತು! ಇತ್ತ ಅಬ್ಬರದ ಹಾಡುಗಳ ನಡುವೆ ನಾಯಕ ನಾಯಕಿಯ ರೊಮ್ಯಾಂಟಿಕ್ ದೃಶ್ಯಗಳು ಕೂಡ ಪರಿಣಾಮಕಾರಿಯಾಗಿ ಮೂಡಿ ಬಂದಿಲ್ಲ.  

ಸಿನೆಮಾದ ತಾಂತ್ರಿಕ ಆಯಾಮಗಳಲ್ಲಿ ಗಮನ ಸೆಳೆಯುವುದು ಪರಮೇಶ್ ಅವರ ಛಾಯಾಗ್ರಹಣ. ಆಕ್ಷನ್ ದೃಶ್ಯಗಳಿಗೆ, ಹಾಡುಗಳಿಗೆ ಉತ್ತಮವಾದ ಪರಿಸರವನ್ನು ಕಥೆಗೆ ಪೂರಕವಾಗಿ ಸೆರೆಹಿಡಿರುವುದು ಮುದ ನೀಡುತ್ತದೆ. ಅಜನೀಶ್ ಲೋಕನಾಥ್ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಯಾವುದೇ ಹಾಡುಗಳು ಮನಸ್ಸಿನಲ್ಲುಳಿಯುವುದಿಲ್ಲ. ನಿರೂಪಣೆಯ ತಂತ್ರ ಕೂಡ ಸಿನೆಮಾಗೆ ಯಾವುದೇ ರೀತಿಯಲ್ಲಿ ಸಹಕರಿಸದೆ, ತಿರುವುಗಳನ್ನು ನೀಡದೆ, ಬೇಕಂತಲೇ ಹಿಂದಕ್ಕೆ ಮುಂದಕ್ಕೆ ಚಲಿಸುವ ದೃಶ್ಯಗಳು ಪ್ರಯಾಸವನ್ನು ತಂದೊಡ್ಡುತ್ತವೆ. ಈ ನಿಟ್ಟಿನಲ್ಲಿ ಸಂಕಲನ ಕೂಡ ಹೆಚ್ಚೇನೂ ಸಹಕರಿಸಿಲ್ಲ. ಚೊಚ್ಚಲ ನಟನೆಯಲ್ಲಿ ಸಿದ್ಧಾರ್ಥ್ ನೃತ್ಯ ಮತ್ತು ಆಕ್ಷನ್ ದೃಶ್ಯಗಳ ಮೂಲಕ ಗಮನ ಸೆಳೆದರೂ, ಭಾವನಾತ್ಮಕ ದೃಶ್ಯಗಳಲ್ಲಿ ಇನ್ನು ಹೆಚ್ಚಿನ ಪರಿಶ್ರಮದ ಅವಶ್ಯಕತೆ ಇದೆ. ಶ್ರುತಿ ಹರಿಹರನ್, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ ಎಂದಿನಂತೆ ತಮ್ಮ ಸಹಜ ನಟನೆ ನೀಡಿದ್ದರೆ, ಸಂಚಾರಿ ವಿಜಯ್ ಅವರ ಪಾತ್ರದ ಅವಶ್ಯಕತೆಯೇ ಪ್ರೇಕ್ಷಕರಿಗೆ ತಿಳಿಯದೆ ಹೋಗುತ್ತದೆ. ಯಾವುದೇ ಅತಿರೇಕದ ಹಾಸ್ಯದ ಟ್ರ್ಯಾಕ್ ಇಲ್ಲದೆ, ಒಂದು ಸುಲಭವಾದ ಕಥೆಯನ್ನು ಸೀದಾ ಸಾದವಾಗಿ ತೆರೆಗೆ ತಂದಿರುವ ನಿರ್ದೇಶಕ ರಜತ್ ಮಯಿ ಒಂದು ಸಾಧಾರಣ ಸಿನೆಮಾವನ್ನು ನೀಡಿದ್ದಾರೆ. 
Posted by: GN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Sipayi, Kannada, Cinema, Review, ಸಿಪಾಯಿ, ಚಿತ್ರವಿಮರ್ಶೆ, ವಿಮರ್ಶೆ
English summary
Sipayi directed by debutant Rajat mayee is tiresome watch. A very ordinary story with lot of action scenes and songs, doesn't make any effort to thrill the audience.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS