Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Tejashwi Yadav

ಬಿಜೆಪಿ ವಿರುದ್ಧದ ಹೋರಾಟಕ್ಕೆ ಕಾಂಗ್ರೆಸ್ ನಾಯಕತ್ವ ಉತ್ತಮ- ಆರ್ ಜೆಡಿ ತೇಜಸ್ವಿ ಯಾದವ್

MLA Anand Singh

ಈಗಲ್ಟನ್ ರೆಸಾರ್ಟ್ ನಲ್ಲಿ ಕೈ ಕೈ ಮಿಲಾಸಿದ ಕೈ ಶಾಸಕರು..?; ಶಾಸಕ ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲು

South Africa

ವಿರಾಟ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಹಶೀಂ ಆಮ್ಲಾ, ಯಾವುದು ಆ ದಾಖಲೆ!

ಅಯ್ಯಪ್ಪ ಮದುವೆ ಚಿತ್ರ

ಸ್ಯಾಂಡಲ್‍ವುಡ್ ನಟಿಯನ್ನು ವರಿಸಿದ ಕ್ರಿಕೆಟಿಗ, ಬಿಗ್ಬಾಸ್ ಖ್ಯಾತಿಯ ಅಯ್ಯಪ್ಪ!

Casual Photo

ಬೆಂಗಳೂರು: ಬೆಂಕಿಯ ಕೆನ್ನಾಲಿಗೆಗೆ 40 ಗುಡಿಸಲುಗಳು ಭಸ್ಮ

Dhoni Photo

ಐಸಿಸಿ ಅಧಿಕೃತ ಟ್ವಿಟರ್ ಕವರ್ ಪೇಜ್ ನಲ್ಲಿ ಧೋನಿ ಚಿತ್ರ: ಅಭಿಮಾನಿಗಳು ಫಿದಾ!

Sonia, Rahul Gandhi

ಜ.23 ಮತ್ತು 24 ರಂದು ಸೋನಿಯಾ,ರಾಹುಲ್ ಗಾಂಧಿ ತಮ್ಮ ಕ್ಷೇತ್ರಗಳಿಗೆ ಭೇಟಿ?

ಸಂಗ್ರಹ ಚಿತ್ರ

ಮಿಂಚಿನ ಸ್ಟಂಪಿಂಗ್: ಎಂಎಸ್ ಧೋನಿ ಕೀಪಿಂಗ್ ನೋಡಿ ಮೂಗಿನ ಮೇಲೆ ಬೆರಳಿಟ್ಟ ಕೊಹ್ಲಿ, ವಿಡಿಯೋ ವೈರಲ್!

Sasikala

ಶಶಿಕಲಾಗೆ ಕಾರಾಗೃಹದಲ್ಲಿ ವಿಐಪಿ ಸೌಕರ್ಯ- ಆರ್ ಟಿಐನಲ್ಲಿ ಬಹಿರಂಗ

ಸಂಗ್ರಹ ಚಿತ್ರ

ಕನ್ನಡ ಚಿತ್ರರಂಗವೆಂದರೆ ಅಸಡ್ಡೆನಾ? ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಮೋಹಕ ತಾರೆ ರಮ್ಯಾ, ಕಾರಣವೇನು ಗೊತ್ತ?

ಸಂಗ್ರಹ ಚಿತ್ರ

ಆಸ್ಟ್ರೇಲಿಯಾ ಓಪನ್: ಸ್ಟಿಫನಾಸ್ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿದ 'ಚಾಂಪಿಯನ್' ಫೆಡರರ್

Mayawati

ಆಕ್ಷೇಪಾರ್ಹ ಹೇಳಿಕೆ: ಬಿಜೆಪಿ ಶಾಸಕಿ ಸಾಧನ ಸಿಂಗ್ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ ಬಿಎಸ್ಪಿ

Malayalam Actress Gayathri Arun gives befitting reply to pervert for offering Rs 2 lakh per night

ಗಂಟೆಗೆ 2 ಲಕ್ಷ ಕೊಡುತ್ತೇನೆ ಎಂದ ಕಾಮುಕನಿಗೆ ತಲೆ ತಿರುಗುವಂತೆ ಉತ್ತರ ಕೊಟ್ಟ ಖ್ಯಾತ ನಟಿ!

ಮುಖಪುಟ >> ಅಂಕಣಗಳು

ಒಬಾಮ ಮಾತು ಮುಗಿದಾಗ ಪ್ರಶ್ನೆಗಳೇ ಉಳಿದಿರಲಿಲ್ಲ!

ನಂಗೆ ಇಷ್ಟಾನೋ
ಫ್ರಾನ್ಸ್ ಹೊರತಾಗಿ ಉಳಿದ ಯಾವ ದೇಶಗಳೂ ಸಿರಿಯಾ ಕುರಿತ ಒಬಾಮ ವಾದವನ್ನು ಪುರಸ್ಕರಿಸಲಿಲ್ಲ. ಒಂದು ರೀತಿಯಲ್ಲಿ ಇದು ಅಮೆರಿಕಕ್ಕೆ ಅಂತಾರಾಷ್ಟ್ರೀಯ ವೇದಿಕೆಯಲ್ಲಾದ ದೊಡ್ಡ ಮುಖಭಂಗ. ಇಂಥ ಮನಸ್ಥಿತಿಯಲ್ಲಿ ಒಬಾಮ ಪತ್ರಿಕಾಗೋಷ್ಠಿಗೆ ಬಂದರು.

ನಮ್ಮ ಪ್ರಧಾನಿ ಡಾ. ಮನಮೋಹನಸಿಂಗ್ ಜತೆ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಪ್ರಪಂಚದ ಇಪ್ಪತ್ತು ಬಲಿಷ್ಠ ದೇಶಗಳ ನಾಯಕರನ್ನು ಒಂದೇ ಸೂರಿನಡಿ ನೋಡುವ ಅವಕಾಶ ಸಿಕ್ಕಿತ್ತು. ವಿಶ್ವಸಂಸ್ಥೆಯ ಮಹಾ ಅಧಿವೇಶನದ ಸಂದರ್ಭದಲ್ಲಿ ಎಲ್ಲ ರಾಷ್ಟ್ರಗಳ ಮುಖ್ಯಸ್ಥರು ಸೇರುತ್ತಾರೆ. ಆದರೆ ಜಿ-20 ವಿಶ್ವದ ಆರ್ಥಿಕವಾಗಿ ಶಕ್ತಿಶಾಲಿಯಾಗಿರುವ ದೇಶಗಳ ನಾಯಕರ ವೇದಿಕೆ. ಹೀಗಾಗಿ ಈ ಶೃಂಗಕ್ಕೆ ಎಲ್ಲಿಲ್ಲದ ಮಹತ್ವ.

ಒಂದು ದೇಶದ ನಾಯಕ ಮತ್ತೊಂದು ದೇಶದ ನಾಯಕನನ್ನು ಭೇಟಿ ಮಾಡುವುದೇ ಮಹತ್ವ. ಜಿ-20 ವೇದಿಕೆ ಇಪ್ಪತ್ತು ದೇಶಗಳ ನಾಯಕರಿಗೆ ಪರಸ್ಪರ ಭೇಟಿ, ಮಾತುಕತೆಗೆ ಅವಕಾಶ ಕಲ್ಪಿಸುತ್ತದೆ. ಜಿ-20 ಶೃಂಗದ ಸದಸ್ಯ ದೇಶಗಳ ಪೈಕಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ಸೇರಿಕೊಂಡು ಬ್ರಿಕ್ಸ್ (BRICS) ಎಂಬ ಇನ್ನೊಂದು ಪುಟ್ಟ ವೇದಿಕೆಯನ್ನು ನಿರ್ಮಿಸಿಕೊಂಡಿದೆ. ಹೀಗಾಗಿ ಎರಡು ದಿನಗಳ ಜಿ-20 ಶೃಂಗದ ಸಂದರ್ಭದಲ್ಲಿ ಸಮಾನಾಂತರವಾಗಿ ಹತ್ತು-ಹನ್ನೆರಡು ದೇಶಗಳ ನಾಯಕರು ಭೇಟಿ, ದ್ವಿಪಕ್ಷೀಯ ಸಂಬಂಧ, ಒಪ್ಪಂದಗಳಿಗೆ ಸಹಿ, ಮಾತುಕತೆಯಲ್ಲಿ ತೊಡಗಿರುತ್ತಾರೆ.

ನಮ್ಮ ಪ್ರಧಾನಿಯವರು ಶೃಂಗಸಭೆಯಲ್ಲಿ ಭಾಗವಹಿಸಿದ್ದಲ್ಲದೇ, ಹನ್ನೊಂದು ದೇಶಗಳ ಪ್ರಮುಖರೊಂದಿಗೆ ದ್ವಿಪಕ್ಷೀಯ ಮಾತುಕತೆಗೂ ಕುಳಿತಿದ್ದರು. ಇಬ್ಬರು ನಾಯಕರ ಜತೆಗೆ ಒಂದು ರೀತಿಯಲ್ಲಿ ಮಾತಾಡಿದರೆ, ಹನ್ನೊಂದನೆಯ ನಾಯಕನ ಜತೆಯಲ್ಲಿ ಮಾತು ಮುಗಿಸುವಾಗ ಪದ, ಭಾಷೆ, ವಾಕ್ಯ, ಮಾತಿನ ಮೋಡಿ, ಹಾವ-ಭಾವ ಒಂದೇ ರೀತಿ ಇರುತ್ತದೆ. ನಮ್ಮ ಪ್ರಧಾನಿ ಏನು ಹೇಳುತ್ತಾರೆ, ಯಾವ ಪದ ಬಳಸುತ್ತಾರೆ, ಅವರ ವಾಕ್ಯ ಹೇಗೆ ಕೊನೆಗೊಳ್ಳುತ್ತದೆಂಬುದನ್ನು ನಾವು ಊಹಿಸಬಹುದು. ಕೆಲವು ಕಿಲಾಡಿ ಪತ್ರಕರ್ತರು, ಪ್ರಧಾನಿ ಹೇಳುವುದಕ್ಕಿಂತ ಮೊದಲೇ ಒಳಬಾಯಲ್ಲಿ ಅವರು ಹೇಳಲಿರುವುದನ್ನು ಉಸುರಿ ತಮ್ಮೊಳಗೆ ಮುಸಿಮುಸಿ ನಗುತ್ತಿದ್ದರು. ಎರಡನೆಯ ಭೇಟಿಯ ಸಂದರ್ಭದ ನಂತರ ಭೇಟಿ-ಮಾತುಕತೆಗಳೆಲ್ಲ ಒಂದೇ ರೀತಿ ಇದ್ದಂತೆ ತೋರುತ್ತಿತ್ತು. ನಮಗೇ ಇಷ್ಟು ಕಸಿವಿಸಿಯಾಗುತ್ತಿತ್ತು, ಇನ್ನು ನಮ್ಮ ಪ್ರಧಾನಿಯವರಿಗೆಷ್ಟು ಆಗಿರಲಿಕ್ಕಿಲ್ಲ?

ಜಿ-20 ಶೃಂಗಸಭೆಯಲ್ಲಿ ನಿಜಕ್ಕೂ ಗಮನ ಸೆಳೆದವರೆಂದರೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ.

ಶೃಂಗಸಭೆಯ ಮುಕ್ತಾಯದ ನಂತರ ಒಬಾಮ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡಿದರು. ಆ ಗೋಷ್ಠಿಯಲ್ಲಿ ಏನಿಲ್ಲವೆಂದರೂ ಒಂದು ಸಾವಿರ ಪತ್ರಕರ್ತರು ಸೇರಿದ್ದಿರಬಹುದು. ಅಂಥ ಪ್ರೆಸ್‌ಮೀಟ್ ಅನ್ನು ನಾನು ಅದಕ್ಕಿಂತ ಮೊದಲು ನೋಡಿರಲಿಲ್ಲ. ಒಬಾಮ ನಿರರ್ಗಳವಾಗಿ ಸುಮಾರು ಅರ್ಧ ಗಂಟೆ ಮಾತಾಡಿದರು. ಸಿರಿಯಾ ವಿರುದ್ಧ ಯುದ್ಧ ಸಾರಬೇಕೆಂಬ ಅವರ ಬೆಂಬಲಕ್ಕೆ ಜಿ-20 ಶೃಂಗ ನಿಲ್ಲಲಿಲ್ಲ. ಫ್ರಾನ್ಸ್ ಹೊರತಾಗಿ ಉಳಿದ ಯಾವ ದೇಶಗಳೂ ಒಬಾಮ ವಾದವನ್ನು ಪುರಸ್ಕರಿಸಲಿಲ್ಲ. ಒಂದು ರೀತಿಯಲ್ಲಿ ಇದು ಅಮೆರಿಕಕ್ಕೆ ಅಂತಾರಾಷ್ಟ್ರೀಯ ವೇದಿಕೆಯಲ್ಲಾದ ದೊಡ್ಡ ಮುಖಭಂಗ. ಆರ್ಥಿಕ ಬಿಕ್ಕಟ್ಟಿನ ಚರ್ಚೆಗೆ ಜಿ-20 ಶೃಂಗಸಭೆ ಕಲಾಪ ಮೀಸಲಾಗಿದ್ದರೂ, ಎಲ್ಲರ ಮನಸ್ಸಿನಲ್ಲಿ ಸಿರಿಯಾವೇ ಪ್ರಧಾನವಾಗಿ ಕೇಂದ್ರಿಕೃತವಾಗಿತ್ತು.

ಇಂಥ ಮನಸ್ಥಿತಿಯಲ್ಲಿ ಒಬಾಮ ಪತ್ರಿಕಾಗೋಷ್ಠಿಗೆ ಬಂದರು. ಎಲ್ಲರೂ ಮೈಯೆಲ್ಲಾ ಕಿವಿಯಾಗಿ ಕುಳಿತಿದ್ದರು. ಇದು ನಿಜಕ್ಕೂ ಅವರ ನಾಯಕತ್ವವನ್ನು ಓರೆಗಲ್ಲಿಗೆ ಹಚ್ಚುವ ಸಂದರ್ಭ.

ಒಬಾಮ ಮಾತು ಆರಂಭಿಸಿದರು. ಅಮೆರಿಕದ ಪ್ರಜಾಪ್ರಭುತ್ವದ ಅಂತಃಸತ್ವ, ದೇಶದ ಜನರ ತಳಮಳ, ಕನವರಿಕೆ, ವಿಶ್ವದಲ್ಲಿ ಅಮೆರಿಕಕ್ಕಿರುವ ಜವಾಬ್ದಾರಿ, ಸಿರಿಯಾದಲ್ಲಿ ಆಗಿದ್ದೇನು, ನಿಜವಾದ ಹಕೀಕತ್ತು ಏನು, ಯುದ್ಧವೇಕೆ ಅನಿವಾರ್ಯ, ಯುದ್ಧಾನಂತರದ ಚಿತ್ರಣ, ಆರ್ಥಿಕತೆ ಮೇಲಾಗುವ ದುಷ್ಪರಿಣಾಮ, ಆದರೂ ಯುದ್ಧವೇಕೆ ಅಗತ್ಯ... ಈ ಎಲ್ಲ ವಿಷಯಗಳ ಬಗ್ಗೆ ಅತ್ಯಂತ ತಾರ್ಕಿಕವಾಗಿ ಮಾತಾಡಿದರು. ಅಲ್ಲಿಯವರೆಗೆ ಒಬಾಮ ಅವರನ್ನು ವಿರೋಧಿಸುತ್ತಿದ್ದವರು, ಅವರ ವಾದವನ್ನು ಒಪ್ಪದಿದ್ದವರು ಸಹ ಮೆತ್ತಗಾಗಿದ್ದರು. ಅವರು ಯಾವುದೇ ಪ್ರಶ್ನೆಗಳನ್ನು ಉಳಿಸಿರಲಿಲ್ಲ. ಎಲ್ಲರ ಮನದಲ್ಲಿ ನೇತಾಡುತ್ತಿದ್ದ ಪ್ರಶ್ನೆಗಳಿಗೆ ಸಂದೇಹವೇ ಇಲ್ಲದಂತೆ ಉತ್ತರ ನೀಡಿದ್ದರು. ಅವಕಾಶ ಸಿಕ್ಕಿದ್ದರೆ ಅಲ್ಲಿ ಸೇರಿದ್ದ ಎಲ್ಲ ಪತ್ರಕರ್ತರೂ ಒಬಾಮ ಮೇಲೆ 'ಪ್ರಶ್ನಾಸ್ತ್ರ'ಗಳನ್ನೆಸೆಯ ಬಯಸಿದ್ದರು. ಒಬಾಮ ಎಲ್ಲರ ಬಾಯಿ ಮುಚ್ಚಿಸಿದ್ದರು. ತಮ್ಮ ದೃಷ್ಟಿಯಿಂದ ತಾವು ಹೇಳಿದ್ದೇ ಸರಿ ಎಂದು ಅನಿಸುವಂತೆ, ಮನವರಿಕೆಯಾಗುವಂತೆ ಮಾತಾಡಿದರು. ಆ ಪತ್ರಿಕಾಗೋಷ್ಠಿಯಲ್ಲಿ ಮೂವರು ಪತ್ರಕರ್ತರಿಗೆ ಮಾತ್ರ ಪ್ರಶ್ನೆ ಕೇಳಲು ಅವಕಾಶವಿತ್ತು. ಒಬಾಮ ಮಾತು ಮುಗಿದ ಬಳಿಕ, ಆ ಮೂರು ಪ್ರಶ್ನೆಗಳಲ್ಲಿ ಮೊನಚು ಇರಲಿಲ್ಲ. ಕಾರಣ ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು.

ಅಮೆರಿಕದಂಥ ದೇಶದಲ್ಲಿ ಡಾ. ಮನಮೋಹನಸಿಂಗ್ ಅವರಂಥವರು ರಾಷ್ಟ್ರಾಧ್ಯಕ್ಷರಾಗಲು ಆಗುವುದಿಲ್ಲ. ನಿಜವಾದ ನಾಯಕನಾದವನು ಜನರಿಂದ ಅವತರಿಸುತ್ತಾನೆ, ಜನರಿಗೆ ಉತ್ತರದಾಯಿಯಾಗಿರುತ್ತಾನೆ.

ಅಂದು ಒಬಾಮ ತಮ್ಮ ಮಾತು, ತರ್ಕ, ಭಾಷೆ, ಅಸ್ಖಲಿತ ನುಡಿ, ಹಾವ-ಭಾವ ಮೋಡಿ, ಆತ್ಮವಿಶ್ವಾಸ, ಮನವೊಲಿಸುವ ಪರಿ... ಇವುಗಳಿಂದ ಎಲ್ಲರ ಮನಸ್ಸಿಗೂ ತಾಕಿದರು. ವಿಶ್ವದ ಶಕ್ತಿಶಾಲಿ ದೇಶದ ನಾಯಕನಾಗಿ ತಾನು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಯಾವ ಸಂದೇಹವನ್ನೂ ಉಳಿಸಿರಲಿಲ್ಲ. ತಾವೊಬ್ಬ ಧೀಮಂತ ನಾಯಕ ಎಂಬುದನ್ನು ಅವರು ಮತ್ತೊಮ್ಮೆ ಸಾಬೀತು ಮಾಡಿದರು.

ಶೃಂಗಸಭೆಯಲ್ಲಿ ನನಗೆ ದಕ್ಕಿದ ಹಲವು ಸಂಗತಿಗಳ ಪೈಕಿ ಒಬಾಮ ಪತ್ರಿಕಾಗೋಷ್ಠಿಯೂ ಒಂದಾಗಿತ್ತು.

ಪುಟಿನ್ ಎಂಬ ಜುಡೋ ಪಟ್ಟುಗಾರ

ಬರಾಕ್ ಒಬಾಮ ಅವರಂತೆ ಗಮನ ಸೆಳೆದ ಮತ್ತೊಬ್ಬ ನಾಯಕ ಪುಟಿನ್. ಜಿ-20 ಶೃಂಗಸಭೆ ಆರಂಭಕ್ಕೆ ಮುನ್ನವೇ ಅಮೆರಿಕದ ಯುದ್ಧಪಿಪಾಸು ನೀತಿಯನ್ನು ಪುಟಿನ್ ಖಂಡಿಸಿ ಒಂದು ಭೂಮಿಕೆಯನ್ನು ಸಿದ್ಧಪಡಿಸಿದ್ದರು. ಜಾಗತಿಕ ನಾಯಕರು ಆಗಮಿಸುತ್ತಿದ್ದಂತೆ ಸಿರಿಯಾ ವಿರುದ್ಧ ಯುದ್ಧವನ್ನು ಮಾಡದಿರುವ ಬಗ್ಗೆ ಪುಟಿನ್ ಎಲ್ಲರ ಮನವೊಲಿಸಿದ್ದರು. ರಷ್ಯಾ ಆತಿಥೇಯ ರಾಷ್ಟ್ರವಾಗಿರದಿದ್ದರೆ, ಪುಟಿನ್ ಮಾತಿನ ಧಾಟಿಯೇ ಬೇರೆಯಾಗಿರುತ್ತಿತ್ತೇನೋ? ಆದರೂ ಖಡಾಖಡಿ ಭಾಷೆಯಲ್ಲಿ ಅಮೆರಿಕಕ್ಕೆ ಹೇಳಬೇಕಾದುದನ್ನು ಹೇಳಿದರು.

ನಿಮಗೆ ಗೊತ್ತಿರಬಹುದು, ಪುಟಿನ್ ಮೂಲತಃ ಜುಡೋ ಪಟ್ಟುಗಾರ. ರಷ್ಯಾದ ಅಧ್ಯಕ್ಷರಾಗಿರಬಹುದು, ಆದರೂ ಇಂದಿಗೂ ಪ್ರತಿದಿನ ಮುಕ್ಕಾಲುಗಂಟೆ ಜುಡೋ ಪ್ರ್ಯಾಕ್ಟೀಸು ಮಾಡುತ್ತಾರೆ. ಹದಿನಾಲ್ಕನೇ ವರ್ಷದಿಂದ ಅವರು ಜುಡೋ ಕಲಿಯಲಾರಂಭಿಸಿದವರು. ಸಾಂಬೋ ಎಂಬ ರಷ್ಯಾದ ನಿಯುದ್ಧದಲ್ಲೂ ಅವರಿಗೆ ಸಾಕಷ್ಟು ಪಟ್ಟುಗಳು ಕರಗತವಾಗಿವೆ. ರಷ್ಯಾದಲ್ಲಿ ನಡೆದ ಹಲವು ಸ್ಪರ್ಧೆ, ಚಾಂಪಿಯನ್‌ಶಿಪ್‌ಗಳಲ್ಲಿ ಪುಟಿನ್ ಭಾಗವಹಿಸಿ ಟ್ರೋಫಿ ಗೆದ್ದಿದ್ದಾರೆ.

ಸೇಂಟ್ ಪೀಟರ್ಸ್‌ಬರ್ಗ್‌ನ ಪ್ರಸಿದ್ಧ ಪುಸ್ತಕದ ಅಂಗಡಿಯಲ್ಲಿ ಒಂದು ಪುಸ್ತಕ ಗಮನ ಸೆಳೆಯಿತು. ಅದರ ಶೀರ್ಷಿಕೆ -Judo with Vladimir Putin, Its History, theory, Practice. ಇಬ್ಬರು ಲೇಖಕರ ಜತೆಗೂಡಿ ಪುಟಿನ್ ಬರೆದ ಕೃತಿಯಿದು. 1975ರಲ್ಲಿ ಅವರಿಗೆ ರಷ್ಯಾದಲ್ಲಿ ಕ್ರೀಡೆಗೆ ನೀಡುವ ಅತ್ಯುನ್ನತ ಪದವಿ -ಮಾಸ್ಟರ್ ಆಫ್ ಸ್ಪೋರ್ಟ್ಸ್ ನೀಡಲಾಯಿತು.

ರಷ್ಯಾದ ಅಧ್ಯಕ್ಷರಾಗಿ ಪುಟಿನ್ ಜಪಾನ್‌ಗೆ ಹೋಗಿದ್ದರು. ಆ ಸಂದರ್ಭದಲ್ಲಿ ಅವರು ಅಲ್ಲಿ ಜುಡೋ ಕೇಂದ್ರಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಜುಡೋ ಪಟುಗಳ ಜತೆ ಮಾತಾಡುವಾಗ ಅವರಿಗೆ ಏನನಿಸಿತ್ತೋ ಏನೋ, ತಮ್ಮ ಕೋಟು, ಟೈ, ಪ್ಯಾಂಟು ಕಳಚಿ, ಪಕ್ಕಾ ಜುಡೋ ದಿರಿಸು ಧರಿಸಿ, ಕಸರತ್ತು ಪ್ರದರ್ಶನಕ್ಕೆ ನಿಂತೇ ಬಿಟ್ಟರು. ತಮಗೆ ಗೊತ್ತಿರುವ ಪಟ್ಟುಗಳನ್ನೆಲ್ಲ ಪ್ರದರ್ಶಿಸಿ ಅಲ್ಲಿ ಸೇರಿದ್ದವರನ್ನೆಲ್ಲ ಚಕಿತಗೊಳಿಸಿ ಬಿಟ್ಟರು.

ಇಷ್ಟೇ ಅಲ್ಲ, ಪುಟಿನ್ ಕರಾಟೆ ಪಟು ಸಹ ಹೌದು. ಶಾಸ್ತ್ರೀಯ ಕ್ಯೊಕುಶಿನ್ ಕೈಕನ್ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಗಿಟ್ಟಿಸಿಕೊಂಡಿದ್ದಾರೆ. ಈ ಪ್ರಕಾರದ ಕರಾಟೆಯ ಮಾಸ್ಟರ್ ಸ್ವತಃ ಪುಟಿನ್‌ಗೆ 2009ರಲ್ಲಿ ಪ್ರದಾನ ಮಾಡಿದರು.

ಈ ವರ್ಷ ಪುಟಿನ್ ರಷ್ಯಾದ ಎಲ್ಲ ಶಾಲೆ, ಕಾಲೇಜುಗಳಲ್ಲಿ ಫಿಸಿಕಲ್ ಫಿಟ್ನೆಸ್ ವಿಷಯವನ್ನು ಕಡ್ಡಾಯವಾಗಿ ಜಾರಿಗೊಳಿಸಿದ್ದಾರೆ. ಪ್ರಧಾನ ಮಂತ್ರಿ ಡಿಮಿಟ್ರಿ ಮೆಡ್ವದೆವ್ ಹಾಗೂ ಪುಟಿನ್ ಜತೆಯಾಗಿ ಸ್ಕೀಯಿಂಗ್‌ನಲ್ಲಿ ತೊಡಗುತ್ತಾರೆ. ಇಬ್ಬರೂ ಜತೆಗೂಡಿ ವಿದೇಶಗಳಿಗೆ ಪ್ರವಾಸ ಹೋದಾಗ ಬ್ಯಾಡ್ಮಿಂಟನ್ ಆಡುತ್ತಾರೆ. ಇಬ್ಬರೇ ಮಾತಾಡುತ್ತಾ ಹತ್ತಾರು ಕಿಮಿ ಸೈಕಲ್ ತುಳಿಯುತ್ತಾರೆ. ಕಳೆದ ಎರಡು ವರ್ಷಗಳಿಂದ ಪುಟಿನ್ ಐಸ್‌ಸ್ಕೇಟಿಂಗ್ ಹಾಗೂ ಐಸ್ ಹಾಕಿ ಆಟದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನಮ್ಮ ಪ್ರಧಾನಿ, ರಾಷ್ಟ್ರಪತಿಗಳು ಇವನ್ನೆಲ್ಲ ಟಿವಿಯಲ್ಲಾದರೂ ವೀಕ್ಷಿಸುತ್ತಾರೋ ಇಲ್ಲವೋ? ಗೊತ್ತಿಲ್ಲ.

ಜೀವನದ ಅರ್ಥ

ಬ್ರೆಜಿಲ್‌ನ ಖ್ಯಾತ ಕಾದಂಬರಿಕಾರ ಹಾಗೂ ವ್ಯಕ್ತಿತ್ವ ವಿಕಸನ ಗುರು ಪಾಲೊ ಕೊಹಿಲೋಗೆ ಯಾರೋ ಕೇಳಿದರಂತೆ-'ನಿನಗೆ ಜೀವನ ಅಂದ್ರೆ ಏನು ಅಂತ ಗೊತ್ತಾ?'

ಅದಕ್ಕೆ ಆತ-'ಇಲ್ಲ, ನನಗೆ ಸ್ವಲ್ಪವೂ ಗೊತ್ತಿಲ್ಲ. ನಾನು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಿಲ್ಲ.'

'ಹೌದಾ? ನಿನಗೆ ಜೀವನ ಅಂದ್ರೆ ಏನು ಅಂತ ಗೊತ್ತಿಲ್ವಾ? ನಾನೇ ವಾಸಿ. ನನಗೆ ಜೀವನ ಅಂದ್ರೆ ಏನು ಅಂತ ಗೊತ್ತಿದೆ' ಎಂದು ಹೇಳಿದ.

ಅದಕ್ಕೆ ಕೊಹಿಲೋ ಹೇಳಿದ- 'ನಿನಗೆ ಜೀವನ ಅಂದ್ರೆ ಏನು ಅಂತ ಗೊತ್ತಾಗಿದೆ ಅಂದ್ರೆ ನಿನಗೆ ಅದರ ಬಗ್ಗೆ ಏನೇನೂ ಗೊತ್ತೇ ಇಲ್ಲ ಎಂದು ಅರ್ಥ'.

- ವಿಶ್ವೇಶ್ವರ ಭಟ್

Posted by: Mainashree

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : nange ishtano

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS