ಬ್ರೈನ್ ಹ್ಯಾಮರೇಜ್
ಮೆದುಳಿನಲ್ಲಿ ರಕ್ತನಾಳಗಳು ಒಡೆದು ರಕ್ತ ಹೊರಬರುವುದಕ್ಕೆ ಮೆದುಳಿನ ರಕ್ತಸ್ರಾವ (Brain Bleed/ Brain Hemorrhage) ಎಂದು ಹೆಸರು.
ಇದೊಂದು ವೈದ್ಯಕೀಯ ತುರ್ತುಸ್ಥಿತಿಯಾಗಿದ್ದು ಹಠಾತ್ತನೆ ಆಗುತ್ತದೆ. ಅತಿ ಹೆಚ್ಚಿನ ರಕ್ತದೊತ್ತಡ, ಮೆದುಳಿನಲ್ಲಿ ಗಡ್ಡೆ, ರಕ್ತನಾಳಗಳ ದುರ್ಬಲತೆ (ಸೆರೆಬ್ರಲ್ ಅನ್ಯೂರಿಸಂ- Cerebral Aneurysm), ತಲೆಗೆ ಗಂಭೀರವಾಗಿ ಏಟು ಬೀಳುವುದು ಮತ್ತು ಆಘಾತಗಳು ಮೆದುಳಿನ ರಕ್ತಸ್ರಾವಕ್ಕೆ ಪ್ರಮುಖ ಕಾರಣಗಳಾಗಿವೆ. ಬ್ರೈನ್ ಹ್ಯಾಮರೇಜನ್ನು ಸೆರೆಬ್ರಲ್ ಹ್ಯಾಮರೇಜ್, ಇಂಟ್ರಕ್ರಾನಿಯಲ್ ಮತ್ತು ಇಂಟ್ರಾಸೆರೆಬ್ರಲ್ ಹ್ಯಾಮರೇಜ್ ಎಂದೂ ಕರೆಯುತ್ತಾರೆ. ಇದರಿಂದ ಮೆದುಳಿನ ಅಂಗಾಂಶಗಳಿಗೆ ಹಾನಿ ಉಂಟಾಗುತ್ತದೆ.
ಮಾನವನ ಮೆದುಳು ಅರಿವಿನ ನೆಲೆ. ಜೊತೆಗೆ ದೇಹದ ಸಮತೋಲನ ಕಾಪಾಡುತ್ತದೆ.ಇದಲ್ಲದೇ ಚಲನೆಗಳು, ಅಂಗಾಂಗಗಳ ಸಮನ್ವಯ ಮುಂತಾದ ಅನೇಕ ಕಾರ್ಯಗಳನ್ನು ಮಾಡುತ್ತದೆ. ಮೆದುಳಿಗೆ ಆಗುವ ಗಾಯಗಳು ದೇಹದ ಭಾಗದ ಅಸಮತೋಲನಕ್ಕೆ ಕಾರಣವಾಗಬಹುದು ಮತ್ತು ರೋಗಿಯ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ತ್ವರಿತ ವೈದ್ಯಕೀಯ ಚಿಕಿತ್ಸೆಯು ಇಂತಹ ದುರಂತಗಳನ್ನು ತಡೆಯುತ್ತದೆ.
ಮೆದುಳು ರಕ್ತಸ್ರಾವದ ಲಕ್ಷಣಗಳು
ಮೆದುಳು ರಕ್ತಸ್ರಾವದ ಲಕ್ಷಣಗಳು ಬೇರೆ ಬೇರೆಯಾಗಿರುತ್ತವೆ. ಈ ಲಕ್ಷಣಗಳು ಮುಖ್ಯವಾಗಿ ರಕ್ತಸ್ರಾವವಾಗುವ ಭಾಗವನ್ನು ಮತ್ತು ರಕ್ತಕೋಶಗಳಿಗೆ ಅದರಿಂದ ಆಗುವ ಪರಿಣಾಮವನ್ನು ಅವಲಂಬಿಸಿರುತ್ತವೆ. ಇದರ ಲಕ್ಷಣಗಳು ಒಮ್ಮೆಗೇ ಕಾಣಿಸಿಕೊಳ್ಳಬಹುದು ಅಥವಾ ನಿಧಾನವಾಗಿಯೂ ಕಾಣಿಸಿಕೊಳ್ಳಬಹುದು. ತುಂಬಾ ತಲೆನೋವು ಬರುವುದು, ಮುಖ, ತೋಳು, ಕಾಲಿನ ದೌರ್ಬಲ್ಯ (ಮುಖ್ಯವಾಗಿ ದೇಹದ ಒಂದು ಬದಿ), ವಸ್ತುಗಳನ್ನು ಸರಿಯಾಗಿ ಹಿಡಿದುಕೊಳ್ಳಲು ಆಗದಿರುವುದು, ಸರಿಯಾಗಿ ಚಲಿಸಲು ಆಗದಿರುವುದು, ಗೊಂದಲ, ಮಾತುಕತೆ ಅಥವಾ ಮಾತನ್ನು ಅರ್ಥಮಾಡಿಕೊಳ್ಳುವಲ್ಲಿ ತೊಂದರೆ, ತಲೆತಿರುಗುವಿಕೆ, ಸಮತೋಲನ ನಷ್ಟ, ಒಂದು ಅಥವಾ ಎರಡೂ ಕಣ್ಣುಗಳಲ್ಲಿ ನೋಡುವುದರಲ್ಲಿ ತೊಂದರೆ, ವಾಂತಿ ಅಥವಾ ವಾಕರಿಕೆ, ಆಹಾರ ನುಂಗಲು ಆಗದಿರುವುದು ಅಥವಾ ಧ್ವನಿಯಲ್ಲಿ ಹಠಾತ್ ಬದಲಾವಣೆ, ತಿಳಿವಳಿಕೆ, ಆಲೋಚನೆ, ಸುತ್ತಮುತ್ತಲಿನ ವಿಷಯಗಳ ಬಗ್ಗೆ ಗೊಂದಲ, ಮೂತ್ರ ಅಥವಾ ಕರುಳಿನ ಚಲನೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ಇರುವುದು ಇಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಮೆದುಳಿನ ರಕ್ತಸ್ರಾವ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ.
ಮೆದುಳು ರಕ್ತಸ್ರಾವಕ್ಕೆ ಚಿಕಿತ್ಸೆ
ಮೆದುಳು ನೋವಿನ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸಿ.ಟಿ. ಸ್ಕ್ಯಾನ್ ಮೂಲಕ ಮೆದುಳಿಗಾದ ಗಾಯದ ಪ್ರಮಾಣವನ್ನು ಪತ್ತೆ ಹಚ್ಚಲಾಗುತ್ತದೆ. ನರ ಪರೀಕ್ಷೆ ಮತ್ತು ಕಣ್ಣಿನ ಪರೀಕ್ಷೆ ಮೂಲಕ ದೃಷ್ಟಿ ನರವನ್ನು ಪರೀಕ್ಷಿಸಲಾಗುತ್ತದೆ. ರಕ್ತಸ್ರಾವವಾಗುತ್ತಿದ್ದರೆ ಮತ್ತು ಊದಿಕೊಂಡಿದ್ದರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಕೆಲವು ನಿರ್ದಿಷ್ಟ ಔಷಧಿಗಳನ್ನು ನೀಡಲಾಗುತ್ತದೆ. ಇದು ನೋವು ನಿವಾರಕ ಮಾತ್ರೆಗಳು ಮತ್ತು ಊತವನ್ನು ಕಡಿಮೆ ಮಾಡಲು ಕಾರ್ಟಿಕೋಸ್ಟೀರಾಯಿಡ್ಸ್ ಅಥವಾ ಡೈಯುರೆಟಿಕ್ಸನ್ನು ನೀಡಲಾಗುತ್ತದೆ.
ಮೆದುಳಿನಲ್ಲಿ ರಕ್ತವು 20 ಮಿಲಿಗ್ರಾಮಿನಷ್ಟು ಹೊರಬಂದಿದ್ದರೆ ಅದನ್ನು ಐಸಿಯುನಲ್ಲಿಯೇ ಔಷಧೋಪಚಾರಕೊಟ್ಟು ಸರಿಪಡಿಸಬಹುದು. ರೋಗಿಗಳು ಪ್ರಜ್ಞಾಹೀನರಾಗಿ 30 ಮಿಲಿಗ್ರಾಮಿಗಿಂತ ಹೆಚ್ಚು ರಕ್ತ ಸೋರಿಕೆ ಆಗಿದ್ದರೆ ಸರ್ಜರಿ ಮೂಲಕ ಚಿಕಿತ್ಸೆ ನೀಡಬೇಕಾಗುತ್ತದೆ. ಶೇಕಡಾ 20-30ರಷ್ಟು ರೋಗಿಗಳಿಗೆ ಮಾತ್ರ ಸರ್ಜರಿಯನ್ನು ಶಿಫಾರಸ್ಸು ಮಾಡಲಾಗುತ್ತದೆ. ಇಂತಹ ರಕ್ತಸ್ರಾವದಿಂದ ಲಕ್ವ ಉಂಟಾಗಿದ್ದರೆ ಅದನ್ನು ಫಿಜಿಯೋಥೆರಪಿ ಮತ್ತು ಆಯುರ್ವೇದದಲ್ಲಿ ಪಂಚಕರ್ಮ ಚಿಕಿತ್ಸೆಯ ಮೂಲಕ ಸರಿಪಡಿಸುವ ಪ್ರಯತ್ನ ಮಾಡಲಾಗುತ್ತದೆ.
ರೋಗಿಯ ಇದರಿಂದ ಗುಣಮುಖರಾಗಲು ತೆಗೆದುಕೊಳ್ಳುವ ಸಮಯವು ಅದಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ರೋಗಿಗಳು ಪೂರ್ತಿಯಾಗಿ ಗುಣಮುಖರಾಗುತ್ತಾರೆ. ಇನ್ನು ಕೆಲವೊಮ್ಮೆ ಗುಣಮುಖರಾಗದೆ ಸ್ಟ್ರೋಕ್, ಮೆದುಳಿನ ಕಾರ್ಯ ಸಂಪೂರ್ಣವಾಗಿ ಸ್ಥಗಿತವಾಗಬಹುದು. ಕೂಡಲೇ ವೈದ್ಯಕೀಯ ಚಿಕಿತ್ಸೆ ಕೊಡಿಸದೇ ಹೋದರೆ ಸಾವು ಸಂಭವಿಸಲೂಬಹುದು.
ಬ್ರೈನ್ ಹ್ಯಾಮರೇಜ್: ರೋಗಿ ಗುಣ ಹೊಂದಬಹುದೇ?
ವೈದ್ಯಕೀಯ ಚಿಕಿತ್ಸೆಗೆ ರೋಗಿಯು ತಕ್ಷಣ ಸ್ಪಂದಿಸಬಹುದು ಆಥವಾ ಸ್ವಲ್ಪ ಸಮಯ ತೆಗೆದುಕೊಂಡು ನಿಧಾನವಾಗಿ ಸ್ಪಂದಿಸಬಹುದು. ಬ್ರೈನ್ ಹ್ಯಾಮರೇಜ್ ಎಷ್ಟು ಪ್ರಮಾಣದಲ್ಲಿ ಉಂಟಾಗಿದೆ ಎಂಬುದರ ಮೇಲೆ ರೋಗಿಯ ಚೇತರಿಕೆ ಅವಲಂಬಿತವಾಗಿದೆ. ಕೆಲವು ರೋಗಿಗಳು ಇದರಿಂದ ಸಂಪೂರ್ಣವಾಗಿ ಗುಣ ಹೊಂದುತ್ತಾರೆ. ಕೆಲವರಲ್ಲಿ ಸ್ಟ್ರೋಕ್, ಮೆದುಳಿನ ಕೆಲವು ಕಾರ್ಯಗಳ ನಷ್ಟ, ಸೀಜರ್ಸ್ ಹಾಗೆಯೇ ಉಳಿದುಕೊಳ್ಳಬಹುದು.
ಅಧಿಕ ರಕ್ತದೊತ್ತಡದಿಂದ ರಕ್ತನಾಳಗಳು ದುರ್ಬಲವಾಗಿ ಒಡೆದು ಮೆದುಳಿನ ರಕ್ತಸ್ರಾವ ಉಂಟಾದರೆ ಅದನ್ನು ಪರಿಹರಿಸಬಹುದು. ಮೆದುಳಿನ ರಕ್ತಸ್ರಾವ ಇರುವ ಅನೇಕ ರೋಗಿಗಳು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರೇ ಆಗಿದ್ದಾರೆ. ಅವರು ನಿಯಮಿತವಾಗಿ ತಪಾಸಣೆಗೆ ಒಳಗಾಗಬೇಕು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಅವರು ವೈದ್ಯರು ಸೂಚಿಸಿದಂತೆ ಸೂಕ್ತ ಆಹಾರ ಪಥ್ಯ (ಡಯಟ್), ದೈನಂದಿನ ವ್ಯಾಯಾಮ ಮಾಡಬೇಕು ಮತ್ತು ಔಷಧಿ ಮಾತ್ರೆಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಬೇಕು. ಸಿಗರೇಟು/ಡ್ರಗ್ಸ್ ಸೇವನೆ ಮಾಡಬಾರದು. ಸ್ಕೂಟರ್/ಕಾರ್ ಡ್ರೈವ್ ಮಾಡುವಾಗ ಹುಷಾರಾಗಿರಬೇಕು. ದೇಹದ ತೂಕ ಅತಿಯಾಗಿ ಹೆಚ್ಚಾಗಮೆದುಳಿನ ರಕ್ತಸ್ರಾವ (ಬ್ರೈನ್ ಹ್ಯಾಮರೇಜ್) ಮೆದುಳಿನಲ್ಲಿ ರಕ್ತನಾಳಗಳು ಒಡೆದು ರಕ್ತ ಹೊರಬರುವುದಕ್ಕೆ ಮೆದುಳಿನ ರಕ್ತಸ್ರಾವ (Brain Bleed/ Brain Hemorrhage) ಎಂದು ಹೆಸರು. ಇದೊಂದು ವೈದ್ಯಕೀಯ ತುರ್ತುಸ್ಥಿತಿಯಾಗಿದ್ದು ಹಠಾತ್ತನೆ ಆಗುತ್ತದೆ. ಅತಿ ಹೆಚ್ಚಿನ ರಕ್ತದೊತ್ತಡ, ಮೆದುಳಿನಲ್ಲಿ ಗಡ್ಡೆ, ರಕ್ತನಾಳಗಳ ದುರ್ಬಲತೆ (ಸೆರೆಬ್ರಲ್ ಅನ್ಯೂರಿಸಂ- Cerebral Aneurysm), ತಲೆಗೆ ಗಂಭೀರವಾಗಿ ಏಟು ಬೀಳುವುದು ಮತ್ತು ಆಘಾತಗಳು ಮೆದುಳಿನ ರಕ್ತಸ್ರಾವಕ್ಕೆ ಪ್ರಮುಖ ಕಾರಣಗಳಾಗಿವೆ. ಬ್ರೈನ್ ಹ್ಯಾಮರೇಜನ್ನು ಸೆರೆಬ್ರಲ್ ಹ್ಯಾಮರೇಜ್, ಇಂಟ್ರಕ್ರಾನಿಯಲ್ ಮತ್ತು ಇಂಟ್ರಾಸೆರೆಬ್ರಲ್ ಹ್ಯಾಮರೇಜ್ ಎಂದೂ ಕರೆಯುತ್ತಾರೆ. ಇದರಿಂದ ಮೆದುಳಿನ ಅಂಗಾಂಶಗಳಿಗೆ ಹಾನಿ ಉಂಟಾಗುತ್ತದೆ.
ಮಾನವನ ಮೆದುಳು ಅರಿವಿನ ನೆಲೆ. ಜೊತೆಗೆ ದೇಹದ ಸಮತೋಲನ ಕಾಪಾಡುತ್ತದೆ.ಇದಲ್ಲದೇ ಚಲನೆಗಳು, ಅಂಗಾಂಗಗಳ ಸಮನ್ವಯ ಮುಂತಾದ ಅನೇಕ ಕಾರ್ಯಗಳನ್ನು ಮಾಡುತ್ತದೆ. ಮೆದುಳಿಗೆ ಆಗುವ ಗಾಯಗಳು ದೇಹದ ಭಾಗದ ಅಸಮತೋಲನಕ್ಕೆ ಕಾರಣವಾಗಬಹುದು ಮತ್ತು ರೋಗಿಯ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ತ್ವರಿತ ವೈದ್ಯಕೀಯ ಚಿಕಿತ್ಸೆಯು ಇಂತಹ ದುರಂತಗಳನ್ನು ತಡೆಯುತ್ತದೆ.
ಮೆದುಳು ರಕ್ತಸ್ರಾವದ ಲಕ್ಷಣಗಳು
ಮೆದುಳು ರಕ್ತಸ್ರಾವದ ಲಕ್ಷಣಗಳು ಬೇರೆ ಬೇರೆಯಾಗಿರುತ್ತವೆ. ಈ ಲಕ್ಷಣಗಳು ಮುಖ್ಯವಾಗಿ ರಕ್ತಸ್ರಾವವಾಗುವ ಭಾಗವನ್ನು ಮತ್ತು ರಕ್ತಕೋಶಗಳಿಗೆ ಅದರಿಂದ ಆಗುವ ಪರಿಣಾಮವನ್ನು ಅವಲಂಬಿಸಿರುತ್ತವೆ. ಇದರ ಲಕ್ಷಣಗಳು ಒಮ್ಮೆಗೇ ಕಾಣಿಸಿಕೊಳ್ಳಬಹುದು ಅಥವಾ ನಿಧಾನವಾಗಿಯೂ ಕಾಣಿಸಿಕೊಳ್ಳಬಹುದು. ತುಂಬಾ ತಲೆನೋವು ಬರುವುದು, ಮುಖ, ತೋಳು, ಕಾಲಿನ ದೌರ್ಬಲ್ಯ (ಮುಖ್ಯವಾಗಿ ದೇಹದ ಒಂದು ಬದಿ), ವಸ್ತುಗಳನ್ನು ಸರಿಯಾಗಿ ಹಿಡಿದುಕೊಳ್ಳಲು ಆಗದಿರುವುದು, ಸರಿಯಾಗಿ ಚಲಿಸಲು ಆಗದಿರುವುದು, ಗೊಂದಲ, ಮಾತುಕತೆ ಅಥವಾ ಮಾತನ್ನು ಅರ್ಥಮಾಡಿಕೊಳ್ಳುವಲ್ಲಿ ತೊಂದರೆ, ತಲೆತಿರುಗುವಿಕೆ, ಸಮತೋಲನ ನಷ್ಟ, ಒಂದು ಅಥವಾ ಎರಡೂ ಕಣ್ಣುಗಳಲ್ಲಿ ನೋಡುವುದರಲ್ಲಿ ತೊಂದರೆ, ವಾಂತಿ ಅಥವಾ ವಾಕರಿಕೆ, ಆಹಾರ ನುಂಗಲು ಆಗದಿರುವುದು ಅಥವಾ ಧ್ವನಿಯಲ್ಲಿ ಹಠಾತ್ ಬದಲಾವಣೆ, ತಿಳಿವಳಿಕೆ, ಆಲೋಚನೆ, ಸುತ್ತಮುತ್ತಲಿನ ವಿಷಯಗಳ ಬಗ್ಗೆ ಗೊಂದಲ, ಮೂತ್ರ ಅಥವಾ ಕರುಳಿನ ಚಲನೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ಇರುವುದು ಇಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಮೆದುಳಿನ ರಕ್ತಸ್ರಾವ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ.
ಮೆದುಳು ರಕ್ತಸ್ರಾವಕ್ಕೆ ಚಿಕಿತ್ಸೆ
ಮೆದುಳು ನೋವಿನ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸಿ.ಟಿ. ಸ್ಕ್ಯಾನ್ ಮೂಲಕ ಮೆದುಳಿಗಾದ ಗಾಯದ ಪ್ರಮಾಣವನ್ನು ಪತ್ತೆ ಹಚ್ಚಲಾಗುತ್ತದೆ. ನರ ಪರೀಕ್ಷೆ ಮತ್ತು ಕಣ್ಣಿನ ಪರೀಕ್ಷೆ ಮೂಲಕ ದೃಷ್ಟಿ ನರವನ್ನು ಪರೀಕ್ಷಿಸಲಾಗುತ್ತದೆ. ರಕ್ತಸ್ರಾವವಾಗುತ್ತಿದ್ದರೆ ಮತ್ತು ಊದಿಕೊಂಡಿದ್ದರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಕೆಲವು ನಿರ್ದಿಷ್ಟ ಔಷಧಿಗಳನ್ನು ನೀಡಲಾಗುತ್ತದೆ. ಇದು ನೋವು ನಿವಾರಕ ಮಾತ್ರೆಗಳು ಮತ್ತು ಊತವನ್ನು ಕಡಿಮೆ ಮಾಡಲು ಕಾರ್ಟಿಕೋಸ್ಟೀರಾಯಿಡ್ಸ್ ಅಥವಾ ಡೈಯುರೆಟಿಕ್ಸನ್ನು ನೀಡಲಾಗುತ್ತದೆ.
ಮೆದುಳಿನಲ್ಲಿ ರಕ್ತವು 20 ಮಿಲಿಗ್ರಾಮಿನಷ್ಟು ಹೊರಬಂದಿದ್ದರೆ ಅದನ್ನು ಐಸಿಯುನಲ್ಲಿಯೇ ಔಷಧೋಪಚಾರಕೊಟ್ಟು ಸರಿಪಡಿಸಬಹುದು. ರೋಗಿಗಳು ಪ್ರಜ್ಞಾಹೀನರಾಗಿ 30 ಮಿಲಿಗ್ರಾಮಿಗಿಂತ ಹೆಚ್ಚು ರಕ್ತ ಸೋರಿಕೆ ಆಗಿದ್ದರೆ ಸರ್ಜರಿ ಮೂಲಕ ಚಿಕಿತ್ಸೆ ನೀಡಬೇಕಾಗುತ್ತದೆ. ಶೇಕಡಾ 20-30ರಷ್ಟು ರೋಗಿಗಳಿಗೆ ಮಾತ್ರ ಸರ್ಜರಿಯನ್ನು ಶಿಫಾರಸ್ಸು ಮಾಡಲಾಗುತ್ತದೆ. ಇಂತಹ ರಕ್ತಸ್ರಾವದಿಂದ ಲಕ್ವ ಉಂಟಾಗಿದ್ದರೆ ಅದನ್ನು ಫಿಜಿಯೋಥೆರಪಿ ಮತ್ತು ಆಯುರ್ವೇದದಲ್ಲಿ ಪಂಚಕರ್ಮ ಚಿಕಿತ್ಸೆಯ ಮೂಲಕ ಸರಿಪಡಿಸುವ ಪ್ರಯತ್ನ ಮಾಡಲಾಗುತ್ತದೆ.
ರೋಗಿಯ ಇದರಿಂದ ಗುಣಮುಖರಾಗಲು ತೆಗೆದುಕೊಳ್ಳುವ ಸಮಯವು ಅದಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ರೋಗಿಗಳು ಪೂರ್ತಿಯಾಗಿ ಗುಣಮುಖರಾಗುತ್ತಾರೆ. ಇನ್ನು ಕೆಲವೊಮ್ಮೆ ಗುಣಮುಖರಾಗದೆ ಸ್ಟ್ರೋಕ್, ಮೆದುಳಿನ ಕಾರ್ಯ ಸಂಪೂರ್ಣವಾಗಿ ಸ್ಥಗಿತವಾಗಬಹುದು. ಕೂಡಲೇ ವೈದ್ಯಕೀಯ ಚಿಕಿತ್ಸೆ ಕೊಡಿಸದೇ ಹೋದರೆ ಸಾವು ಸಂಭವಿಸಲೂಬಹುದು.
ಬ್ರೈನ್ ಹ್ಯಾಮರೇಜ್: ರೋಗಿ ಗುಣ ಹೊಂದಬಹುದೇ?
ವೈದ್ಯಕೀಯ ಚಿಕಿತ್ಸೆಗೆ ರೋಗಿಯು ತಕ್ಷಣ ಸ್ಪಂದಿಸಬಹುದು ಆಥವಾ ಸ್ವಲ್ಪ ಸಮಯ ತೆಗೆದುಕೊಂಡು ನಿಧಾನವಾಗಿ ಸ್ಪಂದಿಸಬಹುದು. ಬ್ರೈನ್ ಹ್ಯಾಮರೇಜ್ ಎಷ್ಟು ಪ್ರಮಾಣದಲ್ಲಿ ಉಂಟಾಗಿದೆ ಎಂಬುದರ ಮೇಲೆ ರೋಗಿಯ ಚೇತರಿಕೆ ಅವಲಂಬಿತವಾಗಿದೆ. ಕೆಲವು ರೋಗಿಗಳು ಇದರಿಂದ ಸಂಪೂರ್ಣವಾಗಿ ಗುಣ ಹೊಂದುತ್ತಾರೆ. ಕೆಲವರಲ್ಲಿ ಸ್ಟ್ರೋಕ್, ಮೆದುಳಿನ ಕೆಲವು ಕಾರ್ಯಗಳ ನಷ್ಟ, ಸೀಜರ್ಸ್ ಹಾಗೆಯೇ ಉಳಿದುಕೊಳ್ಳಬಹುದು.
ಅಧಿಕ ರಕ್ತದೊತ್ತಡದಿಂದ ರಕ್ತನಾಳಗಳು ದುರ್ಬಲವಾಗಿ ಒಡೆದು ಮೆದುಳಿನ ರಕ್ತಸ್ರಾವ ಉಂಟಾದರೆ ಅದನ್ನು ಪರಿಹರಿಸಬಹುದು. ಮೆದುಳಿನ ರಕ್ತಸ್ರಾವ ಇರುವ ಅನೇಕ ರೋಗಿಗಳು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರೇ ಆಗಿದ್ದಾರೆ. ಅವರು ನಿಯಮಿತವಾಗಿ ತಪಾಸಣೆಗೆ ಒಳಗಾಗಬೇಕು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಅವರು ವೈದ್ಯರು ಸೂಚಿಸಿದಂತೆ ಸೂಕ್ತ ಆಹಾರ ಪಥ್ಯ (ಡಯಟ್), ದೈನಂದಿನ ವ್ಯಾಯಾಮ ಮಾಡಬೇಕು ಮತ್ತು ಔಷಧಿ ಮಾತ್ರೆಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಬೇಕು. ಸಿಗರೇಟು/ಡ್ರಗ್ಸ್ ಸೇವನೆ ಮಾಡಬಾರದು. ಸ್ಕೂಟರ್/ಕಾರ್ ಡ್ರೈವ್ ಮಾಡುವಾಗ ಹುಷಾರಾಗಿರಬೇಕು. ದೇಹದ ತೂಕ ಅತಿಯಾಗಿ ಹೆಚ್ಚಾಗದಂತೆ ನೋಡಿಕೊಳ್ಳಬೇಕು.
ಮಧುಮೇಹ ಇರುವವರು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುವುದನ್ನು ಖಚಿತಪಡಿಸಿಕೊಳ್ಳಬೇಕು. ಮಧುಮೇಹಿಗಳಲ್ಲಿ ಅನೇಕ ಜನರು ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ತೂಕವನ್ನು ಹೊಂದಿರಬಹುದು, ಇವೆಲ್ಲವೂ ಅಪಾಯಕಾರಿ ಅಂಶಗಳಾಗಿವೆ. ಈ ಬಗ್ಗೆ ಸಾಕಷ್ಟು ಗಮನಹರಿಸಬೇಕು. ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು.
ಡಾ. ವಸುಂಧರಾ ಭೂಪತಿ
ಮೊಬೈಲ್: 9986840477
ಇ-ಮೇಲ್: bhupathivasundhara@gmail.com