ಗರ್ಭಕೋಶ ಜಾರುವಿಕೆಗೆ ಕಾರಣ ಹಾಗೂ ಚಿಕಿತ್ಸೆಗಳು (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿ

ಮಹಿಳೆಯರ ಕಿಬ್ಬೊಟ್ಟೆಯಲ್ಲಿರುವ ಅಂಗಗಳು (ಗರ್ಭಕೋಶ, ಮೂತ್ರಕೋಶ ಹಾಗೂ ಕರುಳು) ಜಾರುವ ಪ್ರಕ್ರಿಯೆಯನ್ನು ‘ಪೆಲ್ವಿಕ್‍ ಆರ್ಗನ್ ಪ್ರೊಲ್ಯಾಪ್ಸ್’ ಎಂದು ಹೇಳಲಾಗುತ್ತದೆ. 

Published: 19th February 2022 11:23 AM  |   Last Updated: 19th February 2022 06:41 PM   |  A+A-


File photo

ಸಂಗ್ರಹ ಚಿತ್ರ

ಮಹಿಳೆಯರ ಕಿಬ್ಬೊಟ್ಟೆಯಲ್ಲಿರುವ ಅಂಗಗಳು (ಗರ್ಭಕೋಶ, ಮೂತ್ರಕೋಶ ಹಾಗೂ ಕರುಳು) ಜಾರುವ ಪ್ರಕ್ರಿಯೆಯನ್ನು ‘ಪೆಲ್ವಿಕ್‍ ಆರ್ಗನ್ ಪ್ರೊಲ್ಯಾಪ್ಸ್’ ಎಂದು ಹೇಳಲಾಗುತ್ತದೆ. ಇದರಲ್ಲಿ ಗರ್ಭಕೋಶ ಜಾರುವಿಕೆಯನ್ನು ʼಯೂಟಿರೈನ್ ಪ್ರೊಲ್ಯಾಪ್ಸ್ʼ (Uterine Prolapse) ಎಂದು ಕರೆಯುತ್ತಾರೆ.

ಋತುಚಕ್ರಬಂಧಕ್ಕೆ ಒಳಗಾಗಿರುವ ಅಥವಾ ಆ ಸ್ಥಿತಿಯನ್ನು ಮುಟ್ಟುವ ವಯಸ್ಸಿನ ಮಹಿಳೆಯರಲ್ಲಿ ಬಹಳ ಸಾಮಾನ್ಯವಾಗಿ ಕಂಡುಬರುವ ಅನಾರೋಗ್ಯ ಸ್ಥಿತಿ ಗರ್ಭಕೋಶ ಜಾರುವಿಕೆ. ಜಾಗತಿಕ ಅಂಕಿ ಅಂಶಗಳ ಪ್ರಕಾರ ಹೆರಿಗೆಯ ನಂತರ, 50 ವರ್ಷ ವಯಸ್ಸಿಗಿಂತ ಹಿರಿಯರಾದ ಮಹಿಳೆಯರಲ್ಲಿ ಅರ್ಧದಷ್ಟು ಮಂದಿ ಪೆಲ್ವಿಕ್‍ ಆರ್ಗನ್ ಪ್ರೊಲ್ಯಾಪ್ಸ್‍ ನ ಕೆಲವು ಲಕ್ಷಣಗಳನ್ನು ಹೊಂದಿರುತ್ತಾರೆ ಹಾಗೂ 80 ವರ್ಷ ವಯಸ್ಸಿನ ಹೊತ್ತಿಗೆ ಪ್ರತೀ ಹತ್ತರಲ್ಲಿ ಒಬ್ಬರು ಮಹಿಳೆಗೆ ಗರ್ಭಕೋಶ ಜಾರುವಿಕೆಯ ಸಮಸ್ಯೆಗೆ ಶಸ್ತ್ರಚಿಕಿತ್ಸೆಯ ಅಗತ್ಯ ಬೀಳುತ್ತದೆ.

ಇದನ್ನೂ ಓದಿ: ಪಾರ್ಶ್ವವಾಯು ನಿಯಂತ್ರಣ ಹೇಗೆ? ಚಿಕಿತ್ಸೆ ಏನು? (ಕುಶಲವೇ ಕ್ಷೇಮವೇ?)

ಸಾಮಾನ್ಯವಾಗಿ ಇದು ಜೀವಾಪಾಯಕ್ಕೆ ಕಾರಣವಾಗುವುದಿಲ್ಲ. ಅದರೆ ಜೀವನದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾಗಿದೆ. ಆರಂಭಿಕ ಹಂತಗಳಲ್ಲಿ ಇದನ್ನು ಪತ್ತೆ ಮಾಡಿದರೆ ತುಂಬಾ ಸರಳವಾಗಿ ಚಿಕಿತ್ಸೆ ನೀಡಬಹುದು.

ಗರ್ಭಕೋಶ ಜಾರುವಿಕೆಗೆ ಕಾರಣಗಳು
ಗರ್ಭಾವಸ್ಥೆ ಹಾಗೂ ಹೆರಿಗೆಯಿಂದ ಕಿಬ್ಬೊಟ್ಟೆ ಭಾಗದಲ್ಲಿ ಸ್ನಾಯುಗಳು ಹಾಗೂ ಲಿಗಮೆಂಟ್ಸ್‍ ದುರ್ಬಲವಾಗುವುದು ಸಹಜ. ಮಗುವಿನ ಗಾತ್ರ ದೊಡ್ಡದಿದ್ದರೆ, ಹೆರಿಗೆ ಸಂದರ್ಭದಲ್ಲಿ ಇಕ್ಕುಳದಂತಹ ಉಪಕರಣಗಳನ್ನು (ಫಾರ್ಸೆಪ್ಸ್) ಬಳಸಿದ್ದರೆ, ಹೆರಿಗೆಗೆ ದೀರ್ಘ ಸಮಯತೆಗೆದುಕೊಂಡಿದ್ದಲ್ಲಿ, ಮಹಿಳೆಯೊಬ್ಬಳಿಗೆ ಹೆಚ್ಚು ಹೆರಿಗೆಗಳಾಗಿದ್ದರೂ, ಹೆರಿಗೆಗಳ ಅಂತರ ಎರಡು ವರ್ಷಗಳಿಗಿಂತ ಕಡಿಮೆ ಇದ್ದಲ್ಲಿ ಮತ್ತು ಪದೇ ಪದೇ ಗರ್ಭಪಾತಗಳಾಗುತ್ತಿದ್ದರೆ ಹೀಗಾಗಬಹುದು.

ಕೆಲವೊಮ್ಮೆ ಮುಟ್ಟು ನಿಂತ ಬಳಿಕ ಹಾರ್ಮೋನು ಪ್ರಭಾವ ಕಡಿಮೆಯಾದಾಗ ಗರ್ಭಕೋಶ ಸಹಿತ ಬೇರೆ ಅಂಗಗಳು ಕೆಳಕ್ಕೆ ಜಾರಬಹುದು. ಅತಿಯಾದ ತೂಕ ಇರುವವರಿಗೆ ಹೀಗಾಗಬಹುದು. ಮಲಬದ್ಧತೆ, ಬಹಳ ದಿನಗಳಿಂದ ಕಫದ ಜೊತೆಗೆಕೆಮ್ಮು ಇದ್ದರೆ, ತೂಕ ಹೆಚ್ಚು ಎತ್ತಿದಾಗ ಹೊಟ್ಟೆ ಮೇಲೆ ಭಾರ ಬಿದ್ದು ಒಳ ಅಂಗಗಳು ಜಾರಬಹುದು. ಗರ್ಭಕೋಶದ ನಿವಾರಣೆಯ ಬಳಿಕ ಇತರ ಅಂಗಗಳಿಗೆ ಇದ್ದ ಆಸರೆ ತಪ್ಪಿ ಬೇರೆ ಅಂಗಗಳು ಕೆಳಕ್ಕೆ ಜಾರಬಹುದು. ಹೀಗೆ ಗರ್ಭಕೋಶ, ಮೂತ್ರಕೋಶ, ಮೂತ್ರನಾಳ, ಕರುಳಿನ ಭಾಗ, ಗುದದ್ವಾರ ಇತ್ಯಾದಿ ಬಹು ಅಂಗಗಳು ಒಟ್ಟಾಗಿ ಜಾರುವ ಅನಾರೋಗ್ಯ ಸ್ಥಿತಿಯನ್ನು ಮಲ್ಟಿ ಆರ್ಗನ್ ಪ್ರೊಲ್ಯಾಪ್ಸ್‍ ಅಥವಾ ಬಹು ಅಂಗ ಜಾರುವಿಕೆ ಎನ್ನುತ್ತಾರೆ. 

ಇದನ್ನೂ ಓದಿ: ಹೆರಿಗೆ ನಂತರದ ಖಿನ್ನತೆ ಮತ್ತು ಅದರ ಲಕ್ಷಣಗಳು (ಕುಶಲವೇ ಕ್ಷೇಮವೇ)

ಗರ್ಭಕೋಶ ಜಾರುವಿಕೆಯ ಲಕ್ಷಣಗಳು
ಕೆಲವರಿಗೆ ಈ ತೊಂದರೆ ಇದ್ದರೂ, ಅದರ ಲಕ್ಷಣಗಳು ಅವರ ಗಮನಕ್ಕೆ ಬಂದಿರುವುದಿಲ್ಲ. ಜನನಾಂಗ ಭಾಗದ ಹೊರಜಾರುವಿಕೆಯ ವಿಧಗಳು ಗರ್ಭಕೋಶ ಹೊರಜಾರುವಿಕೆ: ಯೋನಿಯ ಮೇಲುಭಾಗದಲ್ಲಿ ಗರ್ಭಕೋಶವನ್ನು ಕಟ್ಟಿ ಹಿಡಿಯುವ ಬಂಧಕ ಅಂಗಾಂಶಗಳ ಗುಂಪೊಂದು ದುರ್ಬಲಗೊಂಡಾಗ ಈ ಸ್ಥಿತಿ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಗರ್ಭಕೋಶ ಕೆಳಜಾರುತ್ತದೆ ಮತ್ತು ಇದರ ಫಲವಾಗಿ ಯೋನಿಯ ಎದುರು ಮತ್ತು ಹಿಂಭಾಗದ ಗೋಡೆಗಳೆರಡೂ ದುರ್ಬಲಗೊಳ್ಳುತ್ತವೆ. ಗರ್ಭಕೋಶದ ಮುಂಭಾಗವನ್ನು ಗರ್ಭಕೋಶದ ಕತ್ತು (ಸೆರ್ವಿಕ್ಸ್) ಎಂದು ಕರೆಯಲಾಗುತ್ತದೆ ಮತ್ತು ಈ ಸೆರ್ವಿಕ್ಸ್‍ ನ ಸ್ಥಾನವನ್ನಾಧರಿಸಿ, ಹೊರಜಾರುವಿಕೆ ಎಷ್ಟು ತೀವ್ರವಾಗಿದೆ ಎಂದು ಈ ರೀತಿ ವಿಶ್ಲೇಷಿಸಲಾಗುತ್ತದೆ.

ಮುಂದುವರಿದ ಹಂತಗಳಲ್ಲಿ ಪತ್ತೆಯಾದಾಗ ಸಂಕೀರ್ಣ ಸಮಸ್ಯೆಗಳನ್ನು ತಡೆಯಲು ಮತ್ತು ಅಂಗಗಳ ಕಾರ್ಯಚಟುವಟಿಕೆಗಳನ್ನು ಮೊದಲಿನಂತೆ ಮಾಡಲು ರೋಗಿಗಳನ್ನು ತಜ್ಞ ಆರೋಗ್ಯ ಸೌಲಭ್ಯಗಳುಳ್ಳ ಆಸ್ಪತ್ರೆಗಳಿಗೆ ಕಳುಹಿಸಬೇಕು.

ಇದನ್ನೂ ಓದಿ: ಹರ್ನಿಯಾ: ಶಸ್ತ್ರಚಿಕಿತ್ಸೆ ಕುರಿತು ನಿರ್ಲಕ್ಷ್ಯ ಬೇಡ (ಕುಶಲವೇ ಕ್ಷೇಮವೇ)

ಗರ್ಭಕೋಶ ಜಾರುವಿಕೆಗೆ ಚಿಕಿತ್ಸೆಗಳು
ಆಧುನಿಕ ಯುರೊಗೈನಕಾಲಜಿಯಲ್ಲಿ ಜಾರುವಿಕೆಗೆ ಚಿಕಿತ್ಸೆಯಾಗಿ ಗರ್ಭಕೋಶವನ್ನೇ ತೆಗೆದುಬಿಡುವ ವಿಧಾನ ಬಹುಚರ್ಚೆಯಲ್ಲಿದೆ.

ಯಾವುದೇ ಲಕ್ಷಣಗಳು ಇರದಿದ್ದರೂ ಯೋನಿ ಪರೀಕ್ಷೆಯ ಮೂಲಕ ಒಳ ಅಂಗಗಳ ಜಾರುವಿಕೆಯನ್ನು ಕಂಡುಕೊಳ್ಳಬಹುದು. ಕೆಳಗೆ ಏನೋ ಬಂದಂತೆ ಅನಿಸಬಹುದು. ಕೈಗೆ ತಗಲಬಹುದು. ಅತಿಯಾಗಿ ಬೆನ್ನುನೋವು ಬರಬಹುದು. ಕೆಳಗೆ ಎಳೆದಂತೆ, ಭಾರವಾದಂತೆ ಅನಿಸಬಹುದು. ಒಮ್ಮೊಮ್ಮೆ ಅದು ಪೂರ್ತಿ ಹೊರಬಂದು ಕಾಣಿಸಬಹುದು. ಹಾಗೇನಾದರೂ ಕಂಡುಬಂದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ತುಂಬಾ ದಿನ ಹಾಗೆಯೇ ಬಿಟ್ಟರೆ ಅಲ್ಸರ್‍ ಉಂಟಾಗಿ ಅಲ್ಲಿ ಸೋಂಕು ತಗುಲಬಹುದು.

ಯೋನಿ ಪರೀಕ್ಷೆಯ ಮೂಲಕ ವೈದ್ಯರು ಗರ್ಭಕೋಶ ಎಷ್ಟರಮಟ್ಟಿಗೆ ಜಾರಿವೆ ಎನ್ನುವುದನ್ನು ಕಂಡುಕೊಳ್ಳುತ್ತಾರೆ. ಅವುಗಳಿಗೆ ಅಲ್ಸರ್‍ ತಗುಲಿದೆಯೇ ಬೇರೆ ಸಮಸ್ಯೆ ಏನಾದರೂ ಇದೆಯೇ ಎನ್ನುವುದನ್ನು ಪತ್ತೆಹಚ್ಚುತ್ತಾರೆ.

ಇದನ್ನೂ ಓದಿ: ಶ್ರವಣ ಸಮಸ್ಯೆ: ಕಿವುಡುತನ ಮತ್ತು ಜಾಗ್ರತೆ (ಕುಶಲವೇ ಕ್ಷೇಮವೇ)

ಜೀವನಶೈಲಿ ಬದಲಾವಣೆ, ದೇಹತೂಕ ಹೆಚ್ಚಿಗೆ ಇದ್ದರೆ ಇಳಿಸಿಕೊಳ್ಳುವುದು ಮತ್ತು ಕಿಬ್ಬೊಟ್ಟೆ ಭಾಗಗಳ ಲಿಗಮೆಂಟ್ಸ್, ಮತ್ತು ಸ್ನಾಯುಗಳ ಬಲವರ್ಧನೆಗೆ ವೈದ್ಯರು ವ್ಯಾಯಾಮಗಳಿಂದ ಪರಿಹಾರ ಸಾಧ್ಯ. ವೆಜೈನಲ್ ಹಾರ್ಮೋನು ಕ್ರೀಮು, ಮಾತ್ರೆ ಬಳಸಲು ಸೂಚಿಸುತ್ತಾರೆ. ಇದರಿಂದ ಲಿಗಮೆಂಟ್, ಸ್ನಾಯುಗಳ ಬಲವರ್ಧನೆಗೆ ನೆರವಾಗುತ್ತದೆ. ಕೆಮ್ಮು ಮತ್ತು ಕಫ ಇದ್ದರೆ ಅದಕ್ಕೆ ಚಿಕಿತ್ಸೆ ಬೇಕಾಗುತ್ತದೆ. ರಿಂಗ್ ಮಾದರಿಯ ಪೇಸರಿ ಎಂಬ ಸಾಧನವನ್ನು ಅಳವಡಿಸಿ ತಾತ್ಕಾಲಿಕ ಪರಿಹಾರ ಒದಗಿಸುತ್ತಾರೆ. 

ಜೊತೆಗೆ ಯಾವ ಅಂಗ ಅಥವಾ ಅಂಗಗಳು ಎಷ್ಟರ ಮಟ್ಟಿಗೆ ಜಾರಿವೆ ಎನ್ನುವುದನ್ನು ಖಚಿತಪಡಿಸಿಕೊಂಡು ಕೆಲವು ಚಿಕಿತ್ಸಾ ಉಪಾಯಗಳನ್ನು ಅನುಸರಿಸಲಾಗುತ್ತದೆ. ರಿಂಗ್ ಮಾದರಿಯ ಪೇಸರಿ ಎಂಬ ಸಾಧನವನ್ನು ಅಳವಡಿಸಿ ತಾತ್ಕಾಲಿಕ ಪರಿಹಾರ ಒದಗಿಸುತ್ತಾರೆ. ಏನೂ ಪರಿಹಾರ ಮಾಡಿಕೊಳ್ಳದೇ ಇದ್ದರೆ ಸಮಸ್ಯೆ ಹಾಗೆಯೇ ಮುಂದುವರಿಯಬಹುದು ಅಥವಾ ಪರಿಸ್ಥಿತಿ ಇನ್ನೂ ಹದಗೆಡಬಹುದು. ಒಳಅಂಗಗಳ ಜಾರುವಿಕೆ ಜೀವಕ್ಕೆ ಅಪಾಯ ತರದೇಇದ್ದರೂ ಜೀವನದ ಗುಣಮಟ್ಟದ ಮೇಲೆ ಮಾತ್ರ ಖಂಡಿತ ಪರಿಣಾಮ ಬೀರಬಹುದು.

ಡಾ. ವಸುಂಧರಾ ಭೂಪತಿ,
ಇ-ಮೇಲ್: bhupathivasundhara@gmail.com
ಫೋನ್: 9986840477‌


Stay up to date on all the latest ಅಂಕಣಗಳು news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp