ಪುರುಷರ ಮಾನಸಿಕ ಸಮಸ್ಯೆಗಳು (ಚಿತ್ತ ಮಂದಿರ)

ಡಾ. ಸಿ.ಆರ್. ಚಂದ್ರಶೇಖರ್

ಹಲವು ಪುರುಷರು ಸದಾ ಒತ್ತಡಕ್ಕೆ ಒಳಗಾಗಿರುತ್ತಾರೆ ದುಃಖ ಭಯದಿಂದ ಬಳಲುತ್ತಿರುತ್ತಾರೆ. ಗಂಡು ಅಥವಾ ಪುರುಷರ ಮೇಲೆ ಸಮಾಜ, ಕುಟುಂಬದ ನಿರೀಕ್ಷೆ ಅಪಾರ. ಕೆಲವು ಸಲ ಈ ನಿರೀಕ್ಷೆಗಳು ಅವಾಸ್ತವಿಕವಾಗಿರುತ್ತವೆ.

Published: 14th January 2022 07:00 AM  |   Last Updated: 13th January 2022 11:24 PM   |  A+A-


Image for representational purpose only

(ಸಾಂಕೇತಿಕ ಚಿತ್ರ)

ಗಂಡು ಮಗು ಹುಟ್ಟಲಿ ಎಂದು ಬಹುತೇಕ ದಂಪತಿಗಳು ಮತ್ತು ಕುಟುಂಬಗಳು ಆಶಿಸುತ್ತಾರೆ. ಗಂಡು ಮಗು ಹುಟ್ಟಿದರೆ ಸಿಹಿ ಹಂಚಿ ಸಂಭ್ರಮ ಪಡುತ್ತಾರೆ. ನಮ್ಮದು ಪುರುಷ ಪ್ರಧಾನ ಸಮಾಜ. ಪುರುಷನೇ ನಾಯಕ, ಸ್ತ್ರೀ ಅವನ ಅನುಯಾಯಿ, ಎಲ್ಲಾ ಪ್ರಮುಖ ನಿರ್ಧಾರಗಳನ್ನು ಪುರುಷರೇ ತೆಗೆದುಕೊಳ್ಳುತ್ತಾರೆ. ಸ್ತ್ರೀಯರಿಗೆ ಹೋಲಿಸಿದರೆ ಸಾಮಾಜಿಕ ಕಟ್ಟುಪಾಡುಗಳು ಪುರುಷನಿಗೆ ಕಡಿಮೆ. ಕಟ್ಟುಪಾಡುಗಳನ್ನು ಪುರುಷ ಉಲ್ಲಂಘಿಸಿದರೂ ಕುಟುಂಬ- ಸಮಾಜ ತಲೆಬಿಸಿ ಮಾಡಿಕೊಳ್ಳುವುದಿಲ್ಲ. ಪುರುಷರು ನಡೆದದ್ದೇ ದಾರಿ ಎನ್ನಲಾಗುತ್ತದೆ.

ಆದರೆ ಪುರುಷರು ಸುಖವಾಗಿದ್ದಾರೆಯೇ?
ಉತ್ತರ: ಹಲವು ಪುರುಷರು ಸದಾ ಒತ್ತಡಕ್ಕೆ ಒಳಗಾಗಿರುತ್ತಾರೆ ದುಃಖ ಭಯದಿಂದ ಬಳಲುತ್ತಿರುತ್ತಾರೆ. ಗಂಡು ಅಥವಾ ಪುರುಷರ ಮೇಲೆ ಸಮಾಜ, ಕುಟುಂಬದ ನಿರೀಕ್ಷೆ ಅಪಾರ. ಕೆಲವು ಸಲ ಈ ನಿರೀಕ್ಷೆಗಳು ಅವಾಸ್ತವಿಕವಾಗಿರುತ್ತವೆ.

 • ಹುಡುಗನ ಐಕ್ಯೂ ಮತ್ತು ಕಲಿಯುವ ಶಕ್ತಿಯ ಅರಿವಿಲ್ಲದೆ  'ನೀನು ಚೆನ್ನಾಗಿ ಓದಬೇಕು, ಹೆಚ್ಚು ಅಂಕಗಳನ್ನು ಪಡೆಯಬೇಕು, ಬುದ್ಧಿವಂತನಾಗಬೇಕು' ಎಂದು ಪೋಷಕರು, ಶಿಕ್ಷಕರು, ಎಲ್ಲರೂ ಒತ್ತಡ ಹೇರುತ್ತಾರೆ. ಕಡಿಮೆ ಅಂಕಗಳನ್ನು ತೆಗೆದರೆ, ಫೇಲಾದರೆ, ಹೀಯಾಳಿಸುತ್ತಾರೆ 'ದಡ್ಡ ' ಎಂದು ಅಪಹಾಸ್ಯ ಮಾಡುತ್ತಾರೆ.
 • ನೀನು ಹುಡುಗ ಧೈರ್ಯಶಾಲಿಯಾಗಿರಬೇಕು. ಹೋರಾಡಲು ಸಿದ್ಧನಿರಬೇಕು. ಎತ್ತರವಾಗಿ ಗಟ್ಟಿಮುಟ್ಟಿಯಾಗಿರಬೇಕು. ಭಯಪಡುವ, ಹೋರಾಡಲು ಹಿಂಜರಿಯುವ ಸಣಕಲು/ಪೀಚು ದೇಹದ ಹುಡುಗರನ್ನು,  'ನೀನು ಹೆಣ್ಣಿಗ' ಎಂದು ಅವಮಾನಿಸುತ್ತಾರೆ, ತಾತ್ಸಾರ ಮಾಡುತ್ತಾರೆ.
 • ಉದ್ಯೋಗ ಮಾಡಿ, ಚೆನ್ನಾಗಿ ಸಂಪಾದಿಸು ಶ್ರೀಮಂತನಾಗು ಎನ್ನುತ್ತಾರೆ. ಉದ್ಯೋಗ ಸಿಗದ, ಉದ್ಯೋಗ ಮಾಡಲಾಗದ, ಸಂಪಾದಿಸದ ಪುರುಷರನ್ನು ಎಲ್ಲರೂ ನಿರ್ಲಕ್ಷ್ಯ ಮಾಡುತ್ತಾರೆ, ಆಕ್ಷೇಪಿಸುತ್ತಾರೆ, ಸೋಮಾರಿ ಎಂದು ಮೂತಿ ತಿವಿಯುತ್ತಾರೆ.
 • ಅನ್ಯಾಯದ ವಿರುದ್ಧ ದುಷ್ಟರ ವಿರುದ್ಧ ಹೋರಾಡು ನೀನು ಗಂಡಸು' ಎನ್ನಲಾಗುತ್ತದೆ. ಹೋರಾಡದಿದ್ದರೆ ಗೇಲಿ ಮಾಡಲಾಗುತ್ತದೆ. ದುರ್ಬಲ, ಉತ್ತರಕುಮಾರ, ಶಿಖಂಡಿ, ಎಂದು ಜರೆಯಲಾಗುತ್ತದೆ. ಮನೆಯವರೇ ಗೌರವ ಕೊಡುವುದಿಲ್ಲ. 
 • "ಸರಿಯಾದ ವಯಸ್ಸಿಗೆ ಮದುವೆಯಾಗಬೇಕು, ಸಂಸಾರಿಯಾಗಬೇಕು, ಮಕ್ಕಳನ್ನು ಪಡೆಯಬೇಕು". ನಾನಾ ಕಾರಣಗಳಿಂದ ಮದುವೆ ತಡವಾದರೆ, ಬಂದ ವಧು ಅಥವಾ ಆಕೆಯ ಮನೆಯವರು ವರನನ್ನು ಒಪ್ಪದಿದ್ದರೆ, ಅವಮಾನ.
 • ಮದುವೆಯಾದ ಮೇಲೆ ಹೆಂಡತಿಯ ಮೇಲೆ ಸಂಪೂರ್ಣ ಹತೋಟಿ ಮಾಡಬೇಕು. ಹೆಂಡತಿಯ ಮಾತುಗಳನ್ನು ಕೇಳುವ, ಹೆಂಡತಿಗೆ ಹೆದರುವ ಗಂಡನನ್ನು, ಎಲ್ಲರೂ ಕೋಳಿಕುಕ್ಕ, ಹೆಂಡತಿಯ ಗುಲಾಮ, ಎಂದು ತಮಾಷೆ ಮಾಡುತ್ತಾರೆ. ತಂದೆ - ತಾಯಿ ಸೊಸೆಯ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡಿದರೆ, ಗಂಡ ಹೆಂಡತಿಯ ಪರ ವಹಿಸುವಂತಿಲ್ಲ. ತಾಯಿ - ತಂದೆಗೆ ದೌರ್ಜನ್ಯ ಮಾಡಬೇಡಿ ಎಂದು ಹೇಳುವಂತಿಲ್ಲ. ಹೆಂಡತಿಯನ್ನು ಅನಗತ್ಯವಾಗಿ ಖಂಡಿಸಬೇಕು. ಬೇರೆ ಮನೆ ಮಾಡುವಂತಿಲ್ಲ. 
 • ಲೈಂಗಿಕ ಆಸೆ ಕ್ರಿಯೆಯಲ್ಲಿ ಪುರುಷ ಸದಾ ತನ್ನ ಶಕ್ತಿಯನ್ನು ಪ್ರದರ್ಶಿಸಬೇಕು. ಹೆಚ್ಚು ಸಲ ಲೈಂಗಿಕ ಕ್ರಿಯೆ ನಡೆಸಲು ಶಕ್ತನಾಗಬೇಕು, ಹೆಂಡತಿಯನ್ನು ತೃಪ್ತಿಪಡಿಸಬೇಕು. ಮೊದಲ ರಾತ್ರಿಯಲ್ಲೇ ಸಂಭೋಗ ಮಾಡಲೇಬೇಕು. ಇಲ್ಲದಿದ್ದರೆ ನೀನು ಗಂಡಸಲ್ಲ, ಶಿಖಂಡಿ ಎಂದು ಕರೆಸಿಕೊಳ್ಳಬೇಕು.
 • ಧೂಮಪಾನ, ಮದ್ಯಪಾನ ಮಾಡುವುದು ಗಂಡಸ್ತನದ ಲಕ್ಷಣ ಎನ್ನಲಾಗುತ್ತದೆ. ಅವು ಅನಾರೋಗ್ಯಕರ, ಅಪಾಯಕಾರಿ ಬೇಡ ಎನ್ನುವಂತಿಲ್ಲ. ನೀನು ಗಂಡಸಾದರೆ ಸಿಗರೇಟು ಸೇದುತ್ತೀಯಾ, ಬಿಯರ್, ಬ್ರಾಂದಿ ಕುಡಿಯುತ್ತೀಯಾ. ಕುಡಿಯಲಿಲ್ಲ ಎಂದರೆ ನೀನು ಗಂಡಸೇ ಅಲ್ಲ ಎಂದು ಧೂಮ ಪ್ರಿಯ, ಪಾನಪ್ರಿಯ ಸ್ನೇಹಿತರ ಅಪಹಾಸ್ಯಕ್ಕೆ ತುತ್ತಾಗಬೇಕು.
 • ದಾಂಪತ್ಯ ವಿರಸದ ಬೆಂಕಿಯನ್ನು ಅನೇಕ ಕುಟುಂಬಗಳಲ್ಲಿ ಕಾಣುತ್ತೇವೆ. ದಾಂಪತ್ಯ ವಿರಸಕ್ಕೆ ಕಾರಣಗಳೇನೇ ಇರಲಿ, ಗಂಡ ಮತ್ತು ಹೆಂಡತಿ ಇಬ್ಬರೂ ನೋವು- ಹಿಂಸೆಯ ಬೇಗೆಯಲ್ಲಿ  ಬೇಯುತ್ತಾರೆ. ಗಂಡಂದಿರ ನೋವು/ ಹಿಂಸೆಗೆ ಸಾಮಾನ್ಯ ಕಾರಣಗಳಿವು.
 • ಹಟಮಾರಿ /ಕೋಪಿಷ್ಟ ಹೆಂಡತಿ. ತಂದೆತಾಯಿಗಳ ಅತಿ ಮುದ್ದಿನ ಪರಿಣಾಮವಾಗಿ ಅಥವಾ ತಂದೆ-ತಾಯಿಯ ಶ್ರೀಮಂತಿಕೆಯಿಂದಾಗಿ, ಹೆಂಡತಿ ಅಹಂ ಬೆಳೆಸಿಕೊಳ್ಳಬಹುದು. ಗಂಡನ ಜುಟ್ಟು ನನ್ನ ಕೈಲಿರಬೇಕು, ಆತ ನಾನು ಹೇಳಿದಂತೆ ಕೇಳಬೇಕು ಎಂಬ ಆಸೆಯಿಂದ, ಆಕೆ ಗಂಡನ ಮೇಲೆ ಸವಾರಿ ಮಾಡಲಾರಂಭಿಸುತ್ತಾಳೆ. 
 • ಗಂಡನ ಚಾರಿತ್ಯ ಗುಣದ ಬಗ್ಗೆ ಅನುಮಾನ ಪಡುವ, ಸಂಶಯ ಪೀಡಿತ ಹೆಂಡತಿ ಗಂಡನಿಗೆ ಕೊಡುವ ನೋವು ವರ್ಣಿಸಲು ಕಷ್ಟ. ನೀವು ನಿಮ್ಮ ಕಾಲೇಜು ಸಹಪಾಠಿಯೊಂದಿಗೆ, ಸಹದ್ಯೋಗಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದೀರಿ. ಎದುರು ಮನೆಯ ಹೆಂಗಸನ್ನು ಆಗಾಗ ನೋಡಿ ಏಕೆ ನಗುವುದು. ಅವರ ಮನೆಗೆ ಏಕೆ ಹೋಗುತ್ತೀರಿ, ಹೋದ ವಾರ ಯಾವುದೋ ಹೆಂಗಸನ್ನು ಸ್ಕೂಟರ್ ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದೀರಿ ಎಂದು ನೋಡಿದ ನನ್ನ ಸ್ನೇಹಿತೆ ಹೇಳಿದಳು. ಪಾರ್ಕಿನಲ್ಲಿ ಯಾರೋ ಹುಡುಗಿಯೊಂದಿಗೆ ಕುಳಿತು ಲಲ್ಲೆಯಾಡುತ್ತಿದ್ದಿರಂತೆ. ಎಲ್ಲಿ ನಿಮ್ಮ ಮೊಬೈಲ್ ಕೊಡಿ, ಈ ಕಾಲ್ ಮಾಡಿರೋದು ಯಾರು, ದಿನವೂ ಈ ನಂಬರ್ ನಿಂದ ನಿಮಗೆ ಕಾಲ್ ಬರುತ್ತಿದೆ. ಏಕೆ?  ಕನವರಿಸಿಕೊಳ್ಳುತ್ತಾ ರಾಧಾ ರಾಧಾ ಎಂದು ಹೇಳುತ್ತಿದ್ದೀರಿ.  ಯಾರ್ರೀ ಈ ರಾಧೆ? ಆಫೀಸ್ ಟೂರ್ ಅಂತ ಹೇಳಿ, ನೀವು ಯಾವೋಳ ಜೊತೆ ಟಿಬಿ ಯಲ್ಲಿ ಒಂದೇ ರೂಮಿನಲ್ಲಿದ್ದಿರಿ?
 • ಹೆದರಿಸಿ, ಬೆದರಿಕೆ ಹಾಕುವ ಹೆಂಡತಿ ವರದಕ್ಷಿಣೆ/ ಹಣ /ಸ್ಕೂಟರ್/ ಸೈಟು ಇತ್ಯಾದಿಗೆ ನೀವು ಡಿಮಾಂಡ್ ಮಾಡುತ್ತೀರಿ ಎಂದು ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ. ನೀವು ಅವಾಚ್ಯ ಶಬ್ದಗಳಿಂದ ನನ್ನನ್ನು ಬೈದಿದ್ದೀರಿ, ಹೊಡೆದಿದ್ದೀರಿ ಎಂದು ಮಹಿಳಾ ಸಹಾಯವಾಣಿಗೆ ಫೋನ್ ಮಾಡುತ್ತೇನೆ. ನನ್ನ ಒಡವೆಗಳನ್ನೆಲ್ಲಾ ತೆಗೆದುಕೊಂಡು ಹೋಗಿದ್ದೀರಿ ಎಂದು ದೂರು ಕೊಡುತ್ತೇನೆ. ನನ್ನ ತಂದೆ-ತಾಯಿಯನ್ನು ಕೊಲ್ಲುವ ಬೆದರಿಕೆ ಹಾಕಿದ್ದೀರಿ, ನನಗೆ ಊಟದಲ್ಲಿ ವಿಷ ಸೇರಿಸಿ ಕೊಲ್ಲಲು ಸಂಚು ಮಾಡಿದ್ದೀರಿ, ಎಂದು ಕಂಪ್ಲೆಂಟ್ ಕೊಡುತ್ತೇನೆ. ಪೊಲೀಸ್ ಸ್ಟೇಷನ್, ಕೋರ್ಟಿಗೆ ನಿಮ್ಮನ್ನು ಎಳೆಯುತ್ತೇನೆ, ಮಾನ ಮರ್ಯಾದೆಯನ್ನು ಹರಾಜು ಹಾಕುತ್ತೇನೆ, ಮಕ್ಕಳನ್ನು ನೀವು ನಿರ್ಲಕ್ಷ್ಯ ಮಾಡಿದ್ದೀರಿ, ಅವರ ವಿದ್ಯಾಭ್ಯಾಸಕ್ಕೆ ದುಡ್ಡು ಕೊಡುತ್ತಿಲ್ಲ ಎನ್ನುತ್ತೇನೆ. ಡೈವೋರ್ಸ್ ಕೊಡದೇ ಸತಾಯಿಸುತ್ತೇನೆ.
 • ತವರುಮನೆಗೆ ಮಕ್ಕಳನ್ನು ಕರೆದುಕೊಂಡು ಹೋಗಿ ವಾಪಸ್ ಬರಲು ರಾಜಿ ಸಂಧಾನಕ್ಕೆ ಹೆಂಡತಿ ಒಪ್ಪುತ್ತಿಲ್ಲ.
 • ನಾನು/ನಮ್ಮ ಮನೆಯವರು ಒಪ್ಪಿದ ಹುಡುಗನಿಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡುತ್ತೇನೆ, ನೀವು ಏನು ಮಾಡುತ್ತೀರೋ ನೋಡುತ್ತೇನೆ.
 • ನೀವು ಕಟ್ಟಿರುವ ಮನೆಯನ್ನು, ನಿಮಗಿರುವ ಆಸ್ತಿಯನ್ನು ನನ್ನ ಹೆಸರಿಗೆ ಈಗಲೇ ಬರೆದು ಖಾತೆ ಮಾಡಿಕೊಡಿ. ನಿಮ್ಮ ಬ್ಯಾಂಕ್ ಅಕೌಂಟ್ ಜಾಯಿಂಟ್ ಅಕೌಂಟ್ ಮಾಡಿ, ನನ್ನ ಸಹಿ ಇಲ್ಲದೆ ನೀವು ಒಂದು ರೂಪಾಯಿ ಖರ್ಚು ಮಾಡುವಂತಿಲ್ಲ.

ಇವು ಪುರುಷರು ಎದುರಿಸುವ ಮಾನಸಿಕ ಸಮಸ್ಯೆಗಳು. ಪುರುಷರ ಮಾನಸಿಕ ಸಮಸ್ಯೆಗಳಿಗೆ ಆಪ್ತಸಮಾಲೋಚನೆ ಬೇಕು, ಹಾಗೂ ಕಾನೂನಿನ ನೆರವು ಬೇಕಾಗಿದೆ. ಅಶಕ್ತ /ಶೋಷಿತ ಪುರುಷರ ನೋವನ್ನು ಸಮಾಜ/ಸರ್ಕಾರ ಅರ್ಥಮಾಡಿಕೊಳ್ಳಬೇಕು. "ಪುರುಷ ವಾಣಿ ಸಹಾಯ ಕೇಂದ್ರ ತೆರೆದರೆ ಒಳ್ಳೆಯದು".


ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ 

drcrchandrashekhar@gmail.com
+919845605615


Stay up to date on all the latest ಅಂಕಣಗಳು news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp