ಸ್ಥೂಲಕಾಯ: ಲೆಪ್ಟಿನ್ ಹಾರ್ಮೋನ್ ಕಾರಣ; ಇದರ ಪರಿಣಾಮ ಏನು? ನಿರ್ವಹಣೆ ಹೇಗೆ? (ಕುಶಲವೇ ಕ್ಷೇಮವೇ)
ವಯಸ್ಕರಲ್ಲಿ ಬಹುಪಾಲು ಐದು ಜನರಲ್ಲಿ ಒಬ್ಬರಿಗೆ ಸ್ಕೂಲಕಾಯ ಇರುತ್ತದೆ. ಒಂದು ಅಂದಾಜಿನ ಪ್ರಕಾರ ವಿಶ್ವದಾದ್ಯಂತ ಒಂದು ಬಿಲಿಯನ್ ಜನರಿಗೆ ಸ್ಕೂಲಕಾಯ ಇರುತ್ತದೆ ಅಥವಾ ಅವರು ಅತಿ ತೂಕದವರಾಗಿರುತ್ತಾರೆ.
Published: 12th March 2022 11:00 AM | Last Updated: 14th March 2022 03:25 PM | A+A A-

ಸ್ಥೂಲಕಾಯ
ವಯಸ್ಕರಲ್ಲಿ ಬಹುಪಾಲು ಐದು ಜನರಲ್ಲಿ ಒಬ್ಬರಿಗೆ ಸ್ಕೂಲಕಾಯ ಇರುತ್ತದೆ. ಒಂದು ಅಂದಾಜಿನ ಪ್ರಕಾರ ವಿಶ್ವದಾದ್ಯಂತ ಒಂದು ಬಿಲಿಯನ್ ಜನರಿಗೆ ಸ್ಕೂಲಕಾಯ ಇರುತ್ತದೆ ಅಥವಾ ಅವರು ಅತಿ ತೂಕದವರಾಗಿರುತ್ತಾರೆ. ಇದರಿಂದ ವ್ಯಕ್ತಿಯ ಆಯಸ್ಸು ಕಡಿಮೆಯಾಗಬಹುದು.
ಸ್ಥೂಲಕಾಯಕ್ಕೆ ಕಾರಣವಾಗುವ ಹಾರ್ಮೋನ್
ಸ್ಥೂಲಕಾಯ ಅಥವಾ Obesity ಅನೇಕರನ್ನು ಕಾಡುತ್ತಿದೆ. ನಾವು ಸೇವಿಸುವ ಆಹಾರ, ಪರಿಸರ, ಒತ್ತಡ, ಚಟುವಟಿಕೆಯಿಲ್ಲದ ಜೀವನಶೈಲಿಗಳೆಲ್ಲ ಸ್ಕೂಲಕಾಯಕ್ಕೆ ತಮ್ಮ ತಮ್ಮ ಕೊಡುಗೆಯನ್ನು ಕೊಟ್ಟೇ ಇವೆ. ವಾಹನಗಳಿಗೆ ನೋಡಿ, ನೀವು ಕೊಂಡುಕೊಂಡಾಗ ಒಂದು ಓನರ್ ಮ್ಯಾನ್ಯುಯಲ್ ಕೊಡುತ್ತಾರೆ. ಮೂರು ತಿಂಗಳಿಗೆ, ಆರು ತಿಂಗಳಿಗೆ, ವರ್ಷಕ್ಕೆ ಒಮ್ಮೆ ವಾಹನವನ್ನು ತಂದು ಸರ್ವೀಸ್ ಮಾಡಿಸಿಕೊಂಡು ಹೋಗಿ ಎಂದು ವಾಹನದ ಕಾರ್ಯಕ್ಷಮತೆಯನ್ನು ಸಂಪೂರ್ಣ ಪರೀಕ್ಷಿಸಿ, ಕೊರತೆ ಇರುವ, ಆಯಿಲ್ ಇತ್ಯಾದಿಗಳನ್ನು ತುಂಬಿ, ಚಲಿಸಲು ಕಳುಹಿಸಿಕೊಡುತ್ತಾರೆ. ಸುಮಾರು ವರ್ಷಗಳ ಕಾಲ ಇದನ್ನು ಪಾಲನೆ ಮಾಡುತ್ತೀರಿ. ಆದರೆ, ನಿಮ್ಮ ಶರೀರಕ್ಕೆ ಇಂಥಾ ಕಟ್ಟು ಪಾಡು, ನಿಯಮಗಳನ್ನು ಹಾಕಿಕೊಳ್ಳುವುದೇ ಇಲ್ಲ. ನಿಯಮಿತವಾದ ತಪಾಸಣೆ, ಚಿಕಿತ್ಸೆಗಳ ಬಗ್ಗೆ ಆಲೋಚನೆ ಮಾಡುವುದೇ ಇಲ್ಲ. ಅನಾರೋಗ್ಯ ಉಂಟಾದಾಗ ಮಾತ್ರ ವೈದ್ಯರ ಬಳಿ ಹೋಗುತ್ತೇವೆ.
ಲೆಪ್ಟಿನ್ ಎಂಬ ಹಾರ್ಮೋನ್
ನಮ್ಮ ಶರೀರದ ವಿಷಯುಕ್ತ ಜೀವಕೋಶಗಳಿಂದ ಉತ್ಪಾದನೆಯಾಗುವ ಚೋದನಿಕೆಯೇ ಲೆಪ್ಟಿನ್. ಇದು ದೇಹಕ್ಕೆ ಅಗತ್ಯ. ಆದರೆ ಇದರ ವ್ಯತ್ಯಯದಿಂದ ಸ್ಕೂಲಕಾಯ ಸಮಸ್ಯೆ ಉಂಟಾಗುತ್ತದೆ. ಲೆಪ್ಟಿನ್ ಒಂದು ಮಟ್ಟದಲ್ಲಿ ಶರೀರದಲ್ಲಿ ಎಷ್ಟು ಇರಬೇಕೆಂಬುದನ್ನು ಮಿದುಳು ಗುರುತಿಸಬೇಕು, ಮಿದುಳು ಈ ಗುರುತಿಸುವಿಕೆಯನ್ನು ಮಾಡದಿದ್ದಾಗ ವಿಷಾಂಶ ಶರೀರದಲ್ಲಿ ಸಂಗ್ರಹವಾಗುತ್ತ ಹೋಗುತ್ತದೆ.
ಲೆಪ್ಟಿನ್ ಸಮಸ್ಯೆ ಹೇಗೆ ಉಂಟಾಗುತ್ತದೆ?
ಅತಿಯಾಗಿ ತಿನ್ನುವುದು, ರಾತ್ರಿವೇಳೆ ಅತಿ ಹೆಚ್ಚು ಆಹಾರ ಸೇವನೆ, ಊಟಗಳ ನಡುವೆ ಹೆಚ್ಚಿನ ಸ್ನಾಕ್ಸ್ ಸೇವನೆ, ವ್ಯಾಯಾಮ ರಹಿತ ಜೀವನ, ಒತ್ತಡ ಇವೆಲ್ಲ ಲೆಪ್ಟಿನ್ ಸಮಸ್ಯೆಗೆ ಕಾರಣವಾಗುತ್ತವೆ.
ಸ್ಥೂಲಕಾಯದವರಲ್ಲಿ ಅವರ ರಕ್ತದಲ್ಲಿ ತುಂಬಾ ಲೆಪ್ಟಿನ್ ಇದ್ದು, ಅದು ಅವರ ಮಿದುಳಿಗೆ ರವಾನೆಯಾಗದೆ ಇರುವುದರಿಂದ ಮಿದುಳಿಗೆ ಲೆಪ್ಪಿನ್ನ ಇರುವಿಕೆ ತಿಳಿಯುವುದಿಲ್ಲ. ಅಂದರೆ, ಪಿಷ್ಠಯುಕ್ತ ಜೀವಕೋಶಗಳು ಲೆಪ್ಪಿನ್ ಅನ್ನು ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿರುತ್ತವೆ. ಇದರ ಪರಿಹಾರಕ್ಕೆ ದಾರಿ ಎಂದರೆ, ಆರೋಗ್ಯ ಪೂರ್ಣವಾದ ತೂಕ ಇಳಿಕೆ ಮತ್ತು ವ್ಯಕ್ತಿಯ ವಯಸ್ಸಿಗೆ, ಎತ್ತರಕ್ಕೆ ತಕ್ಕ ತೂಕ ಇರುವಂತೆ ನೋಡಿಕೊಳ್ಳುವುದಾಗಿದೆ.
ಸ್ಥೂಲಕಾಯದ ಪರಿಣಾಮಗಳು
- ವ್ಯಕ್ತಿಯ ಆಯಸ್ಸು ಕಡಿಮೆಯಾಗಬಹುದು.
- ಸ್ಥೂಲಕಾಯವು ಗ್ಯಾಸ್ಟ್ರೋ ಇಂಟೆಸ್ಟೈನಲ್ ಕಾಯಿಲೆ, ಗೌಟ್, ಆಸ್ಟಿಯೋ ಆರ್ಥೆರೈಟಿಸ್ ಎಂಬ ಮೂಳೆ ಸವೆತದ ಕಾಯಿಲೆಗೆ ಕಾರಣವಾಗಬಹುದು.
- ಸ್ಫೂಲಕಾಯದಿಂದ ವ್ಯಕ್ತಿಗೆ ಮಾನಸಿಕವಾಗಿ ಉಂಟಾಗುವ ಮುಜುಗರ ಸಾಮಾಜಿಕವಾಗಿ ಎದುರಿಸಬೇಕಾದ ಸಮಸ್ಯೆಗಳು ಹಲವಾರು
- ಅಧಿಕ ರಕ್ತದೊತ್ತಡ
- ಸಕ್ಕರೆ ಕಾಯಿಲೆ - ಸಹಜ ತೂಕವುಳ್ಳವರಿಗಿಂತ 40 ಪಟ್ಟು ಅಧಿಕವಾಗಿ ಕಾಯಿಲೆಗೊಳಗಾಗುತ್ತಾರೆ.
- ಹೃದ್ರೋಗಗಳು - ಸಹಜ ತೂಕದ ವ್ಯಕ್ತಿಗಳಿಗಿಂತ ಆರು ಪಟ್ಟು ಅಧಿಕ ಹೃದಯದ ಕಾಯಿಲೆಗಳಿಗೊಳಗಾಗುತ್ತಾರೆ.
- ಪಾಶ್ರ್ವವಾಯು
- ನಿದ್ರಾಹೀನತೆ
- ಅತಿಯಾಗಿ ಬೆವರುವುದು
- ಸಂಧಿವಾತ
- ನಿದ್ರಾ ಶ್ವಾಸಬಂಧ (Sleep Apnea)
- ಆಸ್ತಮಾ
- ಅಧಿಕ ಕೊಲೆಸ್ಟ್ರಾಲ್
- ಉಸಿರಾಟದಲ್ಲಿ ತೊಂದರೆ
- ಅನ್ನನಾಳದ ರಿಪ್ಲೆಕ್ಸ್ ಕಾಯಿಲೆ
- ಅನಿಯಂತ್ರಿತ ಮೂತ್ರ ವಿಸರ್ಜನೆ
- ಬೆನ್ನು ನೋವು
- ಪಿತ್ತಕೋಶದ ಕಲ್ಲುಗಳು
- ಜೀವನಾವಧಿ ಕಡಿಮೆಯಾಗುತ್ತದೆ
- ಆತಂಕ, ಖಿನ್ನತೆ
- ಚರ್ಮದ ಮಡಿಕೆಗಳಿಂದಾಗಿ ಚರ್ಮರೋಗಗಳು
- ಲೈಂಗಿಕ ನಿರಾಸಕ್ತಿ
- ಜನನಾಂಗದ ಸೋಂಕು
ಸ್ಥೂಲಕಾಯ ಏಕೆ ಉಂಟಾಗುತ್ತದೆ?
- ಸದಾ ಒಂದೇ ಕಡೆ ಕುಳಿತು ಮಾಡುವ ದೈಹಿಕ ಚಟುವಟಿಕೆಗಳಿಲ್ಲದ ಕೆಲಸ.
- ಫಾಸ್ಟ್ ಫುಡ್, ಜಂಕ್ಫುಡ್ಗಳ ಸೇವನೆಯಿಂದಾಗಿ ಶರೀರದಲ್ಲಿ ಕೊಬ್ಬು ಶೇಖರಣೆ
- ಅತಿಯಾಗಿ ತಿನ್ನುವ ಚಟದಿಂದ ಶರೀರದಲ್ಲಿ ಬೊಜ್ಜು ಸಂಗ್ರಹವಾಗುತ್ತ ಹೋಗುತ್ತದೆ. ಸ್ಕೂಲಕಾಯವಾಗುತ್ತದೆ.
- ಸ್ಕೂಲಕಾಯ ನಿರ್ವಹಣೆ ಹೇಗೆ?
- ವ್ಯಾಯಾಮ ಹೆಚ್ಚು ಮಾಡಿ. ವಾರಕ್ಕೆ 40 ನಿಮಿಷಗಳ 5 ಬಾರಿ ವ್ಯಾಯಾಮ.
- ಪ್ರತಿದಿನ ಹಣ್ಣು ತರಕಾರಿಗಳ ಸೇವನೆ.
- ಸೇವಿಸುವ ಕೆಲೊರಿಯಲ್ಲಿ ಕಡಿತ ಮಾಡಿರಿ.
- ಸ್ಕೂಲಕಾಯಕ್ಕೆ ಸರಳ ಉತ್ತರಗಳಿಲ್ಲ.
- ಮಕ್ಕಳಲ್ಲಿ ಪೋಷಕಾಂಶ ಬಹಳ ಮುಖ್ಯ.
- ಸ್ಕೂಲಕಾಯಕ್ಕೆ ಸಂಬಂಧಿಸಿದ ಮಾನಸಿಕ ಸಮಸ್ಯೆಗಳ ಬಗ್ಗೆ ಎಚ್ಚರದಿಂದ ಇರಬೇಕು.
ಸ್ಥೂಲಕಾಯ ಚಿಕಿತ್ಸೆ:
- ಆಯುರ್ವೇದದಲ್ಲಿ ಪಂಚಕರ್ಮ ಚಿಕಿತ್ಸೆಯ ಮೂಲಕ ತೂಕ ಇಳಿಸಿಕೊಳ್ಳಬಹುದು.
- ಪಥ್ಯ, ವ್ಯಾಯಾಮ, ಔಷಧಿಗಳ ಮೂಲಕ ತೂಕ ಕಡಿಮೆ ಮಾಡಿಕೊಳ್ಳಬಹುದು.
ಡಾ. ವಸುಂಧರಾ ಭೂಪತಿ
ಮೊಬೈಲ್: 9986840477
ಇ-ಮೇಲ್: bhupathivasundhara@gmail.com