Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Virat Kohli

ಸಚಿನ್ ತೆಂಡೂಲ್ಕರ್‌ರ ಮತ್ತೊಂದು ವಿಶ್ವ ದಾಖಲೆ ಧೂಳಿಪಟ ಮಾಡಿದ 'ರನ್ ಮೆಷಿನ್' ಕೊಹ್ಲಿ!

IMA Jewels investor protest at the town hall in bengaluru on Saturday. | (Pandarinath B | EPS)

ಐಎಂಎ ವಂಚನೆ: ಮನ್ಸೂರ್ ಖಾನ್ ಆಸ್ತಿ ಮುಟ್ಟುಗೋಲಿಗೆ ಅನುಮತಿ ಕೋರಿ ಎಸ್‌ಐಟಿಯಿಂದ ಹೈಕೋರ್ಟ್ ಗೆ ಮೊರೆ

Harshika Poonacha

ಇದ್ದದ್ದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದಂಗೆ: ಸಚಿವರ ಮಾತಿಗೆ ಹರ್ಷಿಕಾ ಪ್ರತಿಕ್ರಿಯೆ

Bengal doctors say Mamata free to choose venue, but meeting should be held in open

ಮಮತಾಗೆ ತಲೆನೋವಾದ ಡಾಕ್ಟರ್ಸ್ ಸ್ಟ್ರೈಕ್: ಬಹಿರಂಗ ಚರ್ಚೆಗೆ ವೈದ್ಯರ ಪಟ್ಟು

PM Imran Khan

ಇಂಡೋ-ಪಾಕ್ ಹೈ ವೋಲ್ಟೇಜ್ ಪಂದ್ಯ: ಸರ್ಫರಾಜ್ ಅಹ್ಮದ್ ಗೆ ಪಾಕ್ ಪ್ರಧಾನಿ ಸಲಹೆ!

Oops! Imran Khan

ಸುದ್ದಿಗೋಷ್ಟಿಯನ್ನು ಫೇಸ್‌ಬುಕ್‌ ಲೈವ್ ಮಾಡೋಕೆ ಹೋದ ಪಾಕ್ ಸಚಿವರನ್ನು ಕಂಡ ನೆಟ್ಟಿಗರು ಬಿದ್ದು ಬಿದ್ದು ನಕ್ಕದ್ದೇಕೆ?

TS Satyaprakash

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಕೋಲಾರ ಬಿಜೆಪಿ ಮುಖಂಡ ಸಾವು

Open for talks with Mamata: Agitating doctors

ಸಂಧಾನಕ್ಕೆ ಸಿದ್ಧ, ಆದರೆ ಕಣ್ಣೊರೆಸುವ ತಂತ್ರಗಾರಿಕೆ ಬೇಡ: ದೀದಿಗೆ ವೈದ್ಯರ ಎಚ್ಚರಿಕೆ

Bihar: Death toll due to Acute Encephalitis Syndrome (AES) in Muzaffarpur rises to 84

ಬಿಹಾರ: ಎನ್ಸಿಫಾಲಿಟಿಸ್ ಸೋಂಕಿಗೆ 84 ಬಲಿ, 4 ಲಕ್ಷ ಪರಿಹಾರ ಘೋಷಿಸಿದ ಸಿಎಂ ನಿತೀಶ್ ಕುಮಾರ್!

ನಿರಂತರ ಕಲುಶಿತ ನೀರು ಪೂರೈಕೆ: ಬೇಸತ್ತ ಕುಟುಂಬದಿಂದ ದಯಾಮರಣ ಕೋರಿ ಪ್ರಧಾನಿಗೆ ಅರ್ಜಿ!

ನಿರಂತರ ಕಲುಶಿತ ನೀರು ಪೂರೈಕೆ: ಬೇಸತ್ತ ಕುಟುಂಬದಿಂದ ದಯಾಮರಣ ಕೋರಿ ಪ್ರಧಾನಿಗೆ ಅರ್ಜಿ!

Heatwave kills 45 in Bihar in 24 hours

ಬಿಹಾರ: ಒಣ ಬಿಸಿ ಹವೆಗೆ ಕಳೆದ 24 ಗಂಟೆಗಳಲ್ಲಿ 45 ಸಾವು

Israeli PM Benjamin Netanyahu

ಸಾರ್ವಜನಿಕ ಹಣ ದುಂದುವೆಚ್ಚ: ಇಸ್ರೇಲ್ ಪ್ರಧಾನಿ ನೇತನ್ಯಾಹು ಪತ್ನಿಗೆ ದಂಡ

Vijay Shankar

ವಿಶ್ವಕಪ್ ಕ್ರಿಕೆಟ್ : ಮ್ಯಾಂಚೆಸ್ಟರ್ ನಲ್ಲಿ ವಿಜಯ್ ಶಂಕರ್ ಪಾಕಿಸ್ತಾನ ವಿರುದ್ಧ ಆಡುವ ಸಾಧ್ಯತೆ

ಮುಖಪುಟ >> ಅಂಕಣಗಳು

ಬದುಕು ಸಂಖ್ಯಾಶಾಸ್ತ್ರ; ಸೋಶಿಯಲ್ ಮೀಡಿಯಾ ಚುನಾವಣೆಯ ಅಸ್ತ್ರ!

ಹಣಕ್ಲಾಸು-81
Election 2019: Social media is a key for political parties to win: here is how

ಬದುಕು ಸಂಖ್ಯಾಶಾಸ್ತ್ರ; ಸೋಶಿಯಲ್ ಮೀಡಿಯಾ ಚುನಾವಣೆಯ ಅಸ್ತ್ರ!

ಒಮ್ಮೆ ಹಾಗೆ ಗಮನಿಸಿ ನೋಡಿ ಬದುಕಿನಲ್ಲಿ ಸಂಖ್ಯೆಗಳದ್ದೇ ಸಾಮ್ರಾಜ್ಯ. ವ್ಯಕ್ತಿ ಎಷ್ಟೇ ಶ್ರೀಮಂತನಿರಲಿ ಅಥವಾ ಬಡವನಿರಲಿ ಎಲ್ಲರ ಬದುಕಿನಲ್ಲೂ ಸಂಖ್ಯೆ ಮಾತ್ರ ಇದ್ದೇ ಇರುತ್ತದೆ. ಸಂಖ್ಯೆಗಳಿಲ್ಲದ ಬದುಕನ್ನ ಇಂದಿಗೆ ಊಹಿಸಿಕೊಳ್ಳಲು ಸಾಧ್ಯವಿಲ್ಲ. ವ್ಯಕ್ತಿ ಹುಟ್ಟಿದ ದಿನಾಂಕದಿಂದ ಶುರುವಾಗುವ ಈ ಸಂಖ್ಯೆಗಳ ಆಟ ನಿಲ್ಲುವುದು ಕೂಡ ಸಂಖ್ಯೆಯೊಂದಿಗೆ. ಸಂಖ್ಯೆ ಅಥವಾ ನಂಬರ್ಸ್ ಬದುಕಿನ ಅತಿ ಮುಖ್ಯ ಭಾಗ. ಕೆಲವೊಮ್ಮೆ ನಾವು ಅದರ ಬಗ್ಗೆ ಮಾತನಾಡದೆ ಇದ್ದರೂ ಅದು ನಮ್ಮ ಜೀವನದಲ್ಲಿ ಮಾತ್ರ ಇದ್ದೇ ಇರುತ್ತದೆ. ಮಕ್ಕಳಿದ್ದಾಗ ಶಾಲೆಯಲ್ಲಿ ತೆಗೆಯುವ ಅಂಕ ಮುಖ್ಯವಾದರೆ, ಯೌವ್ವನದಲ್ಲಿ ಗಳಿಸುವ ಆದಾಯ, ಮಧ್ಯ ವಯಸ್ಸಿನಲ್ಲಿ ಬಿಪಿ, ಶುಗರ್ ಸಂಖ್ಯೆ, ಮುಪ್ಪು ಆವರಿಸುತ್ತಾ ತಿನ್ನುವ ಗುಳಿಗೆಗಳ ಲೆಕ್ಕ ಒಟ್ಟಿನಲ್ಲಿ ಬದುಕೆಂದರೆ ಅದೊಂದು ಗಣಿತ, ಎಲ್ಲವೂ ಸಂಖ್ಯಾಶಾಸ್ತ್ರ! ಈಗ ಚುನಾವಣೆ ಸಮಯ ಬೇರೆ! ಸಂಖ್ಯೆಗಳು ಇನ್ನಷ್ಟು ಮಹತ್ವದ ಪಾತ್ರ ವಹಿಸುತ್ತವೆ. ಈ ಸಂಖ್ಯೆಗಳನ್ನ ಸರಿಯಾಗಿ ಬಳಸಿಕೊಳ್ಳುವ ಸಾಮರ್ಥ್ಯವುಳ್ಳವರು ಜಯಗಳಿಸುತ್ತಾರೆ. ಇದನ್ನ ಡೇಟಾ ಕಲೆಕ್ಷನ್ ಅಂತಲೂ ಕರೆಯುತ್ತೇವೆ. ಕೊನೆಗೂ ಹೀಗೆ ಸಂಗ್ರಹಿಸಿದ ಮಾಹಿತಿಯಿಂದ ಫಲಿತಾಂಶ ಏನಾಯಿತು ಎನ್ನುವುದು ಕೂಡ ಸಂಖ್ಯೆಯಲ್ಲಿ ನಮೂದಿಸಿಸಲ್ಪಡುತ್ತವೆ. 

ಚುನಾವಣೆಗೆ ಬೇಕಾಗುವ ಅತಿ ಮುಖ್ಯ ಅಂಕಿ-ಅಂಶಗಳೇನು? ಎನ್ನುವುದನ್ನ ಅವಲೋಕಿಸೋಣ. 
  1. ಎಲ್ಲಕ್ಕೂ ಮೊದಲು ಎಷ್ಟು ಜನ ವೋಟ್ ಮಾಡುವ ಅಧಿಕಾರ ಪಡೆದಿದ್ದಾರೆ ಎನ್ನುವುದು ಅತಿ ಮುಖ್ಯ ಮಾಹಿತಿಯಾಗುತ್ತದೆ. ಈ ಬಾರಿ 9೦ ಕೋಟಿ ಜನ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. 
  2. ಹತ್ತಿರಹತ್ತಿರ ಎಂಟೂವರೆ ಕೋಟಿ ಹೊಸ ವೋಟರ್ಸ್ ಈ ಬಾರಿಯ ಎಲೆಕ್ಷನ್ ನಲ್ಲಿ ಮತ ಚಲಾಯಿಸಲಿದ್ದಾರೆ. ಅಂದರೆ 2014 ಕ್ಕೆ ಹೋಲಿಸಿದರೆ ಎಂಟೂವರೆ ಕೋಟಿ ಹೆಚ್ಚಿನ ಮತದಾರರು ತಮ್ಮ ಹಕ್ಕನ್ನ ಚಲಾಯಿಸಲಿದ್ದಾರೆ. 
  3. ಒಂದೂವರೆ ಕೋಟಿ ಮತದಾರರು 18 ಅಥವಾ 19 ವಯಸ್ಸಿನವರು. ಪ್ರಥಮ ಬಾರಿಗೆ ತಮ್ಮ ಮತವನ್ನ ಚಲಾಯಿಸಲಿದ್ದಾರೆ. 
  4. ಹತ್ತಿರತ್ತಿರ 72 ಸಾವಿರ ಅನಿವಾಸಿ ಭಾರತೀಯರು ಮತ ಚಲಾಯಿಸಲು ನೊಂದಾವಣಿ ಮಾಡಿಕೊಂಡಿದ್ದಾರೆ. 
  5. ಎಲೆಕ್ಷನ್ ಏಪ್ರಿಲ್ 11 ರಿಂದ ಮೇ 19 ರ ವರೆಗೆ ನೆಡೆಯಲಿದೆ . 
  6. ಮೇ 23 ಮತ ಎಣಿಕೆ ಶುರುವಾಗುತ್ತದೆ ಮತ್ತು ಅದೇ ದಿನ ಫಲಿತಾಂಶ ಕೂಡ ತಿಳಿಸಲಾಗುತ್ತದೆ. 
  7. ಒಟ್ಟು 543 ಪಾರ್ಲಿಮೆಂಟ್ ಸದಸ್ಯ ಸ್ಥಾನಗಳಿವೆ. ಈ ಸ್ಥಾನಗಳನ್ನ ಪಡೆಯುವ ಆಕಾಂಕ್ಷೆ ಹೊಂದಿರುವ 8 ಸಾವಿರಕ್ಕೂ ಹೆಚ್ಚು ಉಮೇದುವಾರರು ಕಣದಲ್ಲಿದ್ದಾರೆ. 
  8. ಹೆಂಗಸರು ಭಾರತದ ಜನಸಂಖ್ಯೆಯ 49 ಪ್ರತಿಶತವಿದ್ದರೂ ಸಂಸತ್ತಿನಲ್ಲಿ ಅವರ ಪ್ರತಿನಿಧಿತ್ವ ಮಾತ್ರ 11 ಪ್ರತಿಶತವಿದೆ. 
  9. ಉತ್ತರ ಪ್ರದೇಶ ಅತಿ ಹೆಚ್ಚು ಸದಸ್ಯರನ್ನ ಸಂಸತ್ತಿಗೆ ಕಳಿಸುತ್ತದೆ. 543 ರಲ್ಲಿ 80 ಸದಸ್ಯರು ಉತ್ತರ ಪ್ರದೇಶದವರು. 

  ಚುನಾವಣೆಗೆ ಅಪರೋಕ್ಷವಾಗಿ ಕಾಣಿಕೆ ನೀಡುವ ಕೆಲವು ಅಂಕಿ ಅಂಶಗಳು ಹೀಗಿವೆ : 
  1. 2014 ರಲ್ಲಿ ಇಂಟರ್ನೆಟ್ ಬಳಸುವರ ಸಂಖ್ಯೆ 25 ಕೋಟಿ. ಇಂದಿಗೆ ಇಂಟರ್ನೆಟ್ ಬಳಸುವರ ಸಂಖ್ಯೆ 62 ಕೋಟಿ. 
  2. ವಾಟ್ಸಪ್ಪ್ ಬಳಕೆದಾರರ ಸಂಖ್ಯೆ 20 ಕೋಟಿಗೂ ಹೆಚ್ಚಿದೆ . 
  3. ನರೇಂದ್ರ ಮೋದಿಯವರು ಟ್ವಿಟ್ಟರ್ ನಲ್ಲಿ 4 ಕೋಟಿ 60 ಲಕ್ಷ ಜನ ಹಿಂಬಾಲಕರನ್ನ ಪಡೆದಿದ್ದಾರೆ. ರಾಹುಲ್ ಗಾಂಧಿ 90 ಲಕ್ಷ ಜನ ಹಿಂಬಾಲಕರನ್ನ ಹೊಂದಿದ್ದಾರೆ. 
  4. ಕಾಂಗ್ರೆಸ್ ಪಕ್ಷಕ್ಕೆ ಅಪರೋಕ್ಷವಾಗಿ ಸಂಬಂದಿಸಿದ 687 ಫೇಸ್ಬುಕ್ ಪುಟಗಳನ್ನ ಅಳಿಸಿಹಾಕಿದೆ. ಹಾಗೆಯೇ ಭಾರತೀಯ ಜನತಾ ಪಾರ್ಟಿಯ 15 ಫೇಸ್ಬುಕ್ ಪೇಜ್ ಗಳನ್ನ ಕೂಡ ನಿರ್ಬಂಧಿಸಲಾಗಿದೆ. 
  5. ಮೊಬೈಲ್ ಡೇಟಾ ಶುಲ್ಕ ಭಾರತದಲ್ಲಿ ಅತಿ ಕಡಿಮೆ. ತನ್ನ ಪ್ರಥಮ ದಿನಗಳ ಶುಲ್ಕಕ್ಕೆ ಹೋಲಿಸಿದರೆ 2 ಸಾವಿರ ಪ್ರತಿಶತ ಕುಸಿತ ಕಂಡಿದೆ. ಅಲ್ಲದೆ ಜಗತ್ತಿನ ಅತಿ ಅಗ್ಗದಲ್ಲಿ ಈ ಸೇವೆಯನ್ನ ನೀಡುವ ದೇಶ ಎನಿಸಿಕೊಂಡಿದೆ. 
  6. ಇಂಟರ್ನೆಟ್ ನ ಭವಿಷ್ಯ ಪೂರ್ತಿ ಭಾರತೀಯರ ಕೈಲಿದೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ. 
  7. ಪ್ರಮುಖ ರಾಜಕೀಯ ಪಕ್ಷಗಳು ಫೇಸ್ಬುಕ್ ನಲ್ಲಿ ತಮ್ಮ ಜಾಹೀರಾತಿಗಾಗಿ ಕೋಟ್ಯಂತರ ಹಣವನ್ನ ವ್ಯಯಿಸಿವೆ . 
  8. 2014 ರಿಂದ ಇತ್ತೀಚಿಗೆ ಹೊಸದಾಗಿ ಇಂಟರ್ನೆಟ್ ಬಳಸುವರ ಸಂಖ್ಯೆ 20 ಕೋಟಿಗೂ ಹೆಚ್ಚಿದೆ. ಈ ಹೊಸ ಬಳಕೆದಾರರನ್ನ ತಮಗೆ ಬೇಕಾದ ಮಾಹಿತಿ ಕೊಟ್ಟು ದಾರಿ ತಪ್ಪಿಸುವುದು ಬಹಳ ಸುಲಭ. 
  9. ಹೀಗೆ ಇಂಟರ್ನೆಟ್ ಬಳಸುವರಲ್ಲಿ 97 ಪ್ರತಿಶತ ಮೊಬೈಲ್ ಮೂಲಕ ಇದನ್ನ ಬಳಸುತ್ತಾರೆ.  

ಮೇಲೆ ಹೇಳಿದ ಅಂಶಗಳು ಅತ್ಯಂತ ಮೂಲಭೂತ ಅಂಶಗಳು. ಇದರೊಂದಿಗೆ ಪ್ರತಿ ಹಂತದಲ್ಲೂ ಅವುಗಳನ್ನ ಮತ್ತಷ್ಟು ಆಳವಾಗಿ ವಿಭಾಗಿಸಲಾಗುತ್ತದೆ. ಉದಾಹರಣೆಗೆ ಒಂದೂವರೆ ಕೋಟಿ 18/19 ವರ್ಷದ ಹೊಸ ಮತದಾರರಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೆಷ್ಟು? ಗಂಡು ಮಕ್ಕಳ ಸಂಖ್ಯೆಯೆಷ್ಟು? ಇವರಲ್ಲಿ ಎಷ್ಟು ಜನ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ? ಎಷ್ಟು ಜನ ಹಳ್ಳಿಗಳಲ್ಲಿ? ಅವರ ಎಕನಾಮಿಕ್ ಬ್ಯಾಕ್ ಗ್ರೌಂಡ್, ಅವರ ಕಲ್ಚರಲ್ ಬ್ಯಾಕ್ಗ್ರೌಂಡ್.., ಹೀಗೆ ಪ್ರತಿಯೊಂದನ್ನು ಅತ್ಯಂತ ಸೂಕ್ಷ್ಮವಾಗಿ ವಿಭಜಿಸಿ ವಿಶ್ಲೇಷಣೆ ಮಾಡಲಾಗುತ್ತದೆ. ಹೊಸ ತಲೆಮಾರು ಟ್ವಿಟ್ಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಸದಾ ಕ್ರಿಯಾಶೀಲರಾಗಿರುತ್ತಾರೆ. 62 ಕೋಟಿ ಜನ ಇಂಟರ್ನೆಟ್ ಬಳಕೆದಾರರಿದ್ದಾರೆ. ಇವರೆಲ್ಲಾ ನಿತ್ಯವೂ ತಮಗೆ ಅರಿವಿಲ್ಲದೆ ತಮ್ಮ ಬದುಕುವ ರೀತಿಯನ್ನ, ತಮ್ಮ ಇಷ್ಟ, ಅನಿಷ್ಟಗಳನ್ನ, ಬೇಕು ಬೇಡಗಳನ್ನ ಎಲ್ಲವನ್ನೂ ಬಿಟ್ಟು ಹೋಗುತ್ತಿದ್ದಾರೆ. ಇದನ್ನ ಡಿಜಿಟಲ್ ಫುಟ್ ಪ್ರಿಂಟ್ ಎನ್ನಲಾಗುತ್ತದೆ. ನಮ್ಮ ಮಾಹಿತಿಗಳನ್ನ ಕಲೆ ಹಾಕಿ ಅವುಗಳನ್ನ ನಮ್ಮ ಪ್ರಚೋದನೆಗೆ ಬಳಸಲಾಗುತ್ತದೆ. ಭಾರತದಲ್ಲಿ ಇಂದು 96 ಕೋಟಿ ಮೊಬೈಲ್ ಫೋನ್ ಗಳಿವೆ ಆದರೆ ಅವುಗಳಲ್ಲಿ ಸ್ಮಾರ್ಟ್ ಫೋನ್ ಗಳ ಸಂಖ್ಯೆ 34 ಕೋಟಿ. 2022 ರ ವೇಳೆಗೆ ಇದು 80 ಕೋಟಿ ತಲುಪಲಿದೆ ಎನ್ನುತ್ತದೆ ಅಂಕಿ-ಅಂಶ. ಅಂದರೆ ಗಮನಿಸಿ ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾಗಳು ಅತ್ಯಂತ ಪ್ರಬಲ ಅಸ್ತ್ರಗಳಾಗುತ್ತವೆ. ಅದು ಚುನಾವಣೆ ಇರಬಹದು ಅಥವಾ ಮತ್ಯಾವುದೇ ಪ್ರಮುಖ ಘಟನೆಯಾಗಿರಬಹದು. ಸೋಶಿಯಲ್ ಮೀಡಿಯಾ ಅಲ್ಲಿನ ಫಲಿತಾಂಶದ ಮೇಲೆ ಬೃಹತ್ ಪರಿಣಾಮ ಬೀರುತ್ತದೆ. 

ಹಾಗೆ ನೋಡಲು ಹೋದರೆ 2014 ರಲ್ಲಿ ನರೇಂದ್ರ ಮೋದಿಯವರ ಗೆಲುವಿಗೆ, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವಿಗೆ, ಬ್ರೆಕ್ಸಿಟ್ ಎನ್ನುವ ಹೊಸ ನಾಟಕ ಶುರುವಿಗೆ ಎಲ್ಲಕ್ಕೂ ಸೋಶಿಯಲ್ ಮೀಡಿಯಾದ ಕಾಣಿಕೆ ಬಳಷ್ಟಿದೆ. 2019೧೯ ರ ಭಾರತದ ಈ ಮಹಾನ್ ಚುನಾವಣೆಯಲ್ಲಿ ಕೂಡ ಸೋಶಿಯಲ್ ಮೀಡಿಯಾಗಳ ಅಬ್ಬರ ಬಹಳಷ್ಟಿದೆ. ಈ ಅಸ್ತ್ರವನ್ನ ಸರಿಯಾಗಿ ಬಳಸಲು ಬರುವರು ಮಾತ್ರ ಜಯಶೀಲರಾಗಿ ಹೊರಹೊಮ್ಮುತ್ತಾರೆ. ಭಾರತದ ಆಡಳಿತ ಪಕ್ಷಕ್ಕೆ ಈ ಅಸ್ತ್ರವನ್ನ ಬಳಸಿಕೊಳ್ಳುವ ಕಲೆ ಸಿದ್ದಿಸಿದೆ. ಪ್ರಧಾನ ವಿರೋಧ ಪಕ್ಷ ಈ ವಿಷಯದಲ್ಲಿ ಸ್ವಲ್ಪ ಹಿಂದೆ ಆದರೆ 2014 ಕ್ಕೆ ಹೋಲಿಸಿ ನೋಡಿದರೆ ಅಂತರ ಕಡಿಮೆಯಾಗಿದೆ ಅನ್ನಬಹದು. 

ಕೊನೆಮಾತು: 90 ಕೋಟಿ ಬಹುದೊಡ್ಡ ಸಂಖ್ಯೆ. 130 ಕೋಟಿಗೂ ಹೆಚ್ಚಿರುವ ಜನಸಂಖ್ಯೆಯಲ್ಲಿ 90 ಕೋಟಿ ಜನರು ಈ ಬಾರಿ ಮತದಾನ ಮಾಡಲು ಅರ್ಹರು. ಈ ಸಂಖ್ಯೆ ಭಾರತವನ್ನ ಜಗತ್ತಿನ ಅತಿ ದೊಡ್ಡ ಗಣತಂತ್ರವನ್ನಾಗಿಸಿದೆ. 2019 ರ ಚುನಾವಣೆಯನ್ನ ಜಗತ್ತಿನ ಅತಿ ದೊಡ್ಡ ಚುನಾವಣೆ ಎಂದು ಪರಿಗಣಿಸಲಾಗಿದೆ. ತಂತ್ರಜ್ಞಾನ ಮುಂದುವರೆದಂತೆ ಜನರನ್ನ ಮಾಹಿತಿ ಅತಿ ವೇಗದಲ್ಲಿ ತಲುಪುತ್ತಿದೆ. ಹೀಗೆ ತಲುಪುವ ಮಾಹಿತಿ ಸರಿಯೋ ತಪ್ಪೋ ಎಂದು ನೋಡುವರಾರು? ಒಂದು ವಾಟ್ಸಪ್ ಗ್ರೂಪ್ ನಲ್ಲಿ 256 ಜನರನ್ನ ಸೇರಿಸಬಹದು. ಮಾಹಿತಿಯನ್ನ ಫಾರ್ವಾರ್ಡ್ ಮಾಡುವುದನ್ನ ಐದು ಸಂಖ್ಯೆಗೆ ಸೀಮಿತಗೊಳಿಸಲಾಗಿದೆ. ಹೀಗಿದ್ದೂ 1280 ಜನರನ್ನ ಅರೆಗಳಿಗೆಯಲ್ಲಿ ಸುಮ್ಮನೆ ಒಂದು ಸಣ್ಣ ಬಟನ್ ಒತ್ತುವುದರ ಮೂಲಕ ತಲುಪಿಬಿಡಬಹದು. ಚುನಾವಣೆ ಬರುತ್ತದೆ ಹೋಗುತ್ತದೆ. ಆ ವಿಷಯ ಹಾಗಿರಲಿ, ಜನಸಂಖ್ಯಾ ಸ್ಫೋಟದೊಂದಿಗೆ ಮಾಹಿತಿ ಸ್ಪೋಟವಾಗುತ್ತಿದೆ. ಸರಿಯೋ ತಪ್ಪೋ ತಿಳಿಯದ ವಯಸ್ಸಿನ ಮಕ್ಕಳ ಕೈಯಲ್ಲಿ ಸ್ಮಾರ್ಟ್ ಫೋನ್ ರಾರಾಜಿಸುತ್ತಿದೆ. ಈ ವಿಸ್ಪೋಟವ ತಡೆಯುವರಾರು? ನಮ್ಮಲ್ಲಿ ಚುನಾವಣೆಯನ್ನ ಪ್ರಣಾಳಿಕೆ ಅವಲಂಬಿಸಿ ಮಾಡುವುದೆಂದು? ಯಾವುದೇ ರಾಜಕೀಯ ಪಕ್ಷ ಇಂತಹ ವಿಸ್ಪೋಟವನ್ನ ತಡೆಯುತ್ತವೆ ಎನ್ನುವ ಪ್ರಣಾಳಿಕೆಯನ್ನ ಏಕೆ ಬಿಡುಗಡೆ ಮಾಡಿಲ್ಲ? ಕೈಲಿರುವ ಫೋನ್ ಸ್ಮಾರ್ಟ್ ಆದರೆ ಸಾಕೆ....? 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಲೇಖಕರ ಕುರಿತು : ಕಳೆದ ಎರಡು ದಶಕದಿಂದ ಆಂತರಿಕ ಲೆಕ್ಕ ಪರಿಶೋಧಕರಾಗಿ ದುಬೈ ಮತ್ತು ಯೂರೋಪಿನ ವಿತ್ತ ಪ್ರಪಂಚದಲ್ಲಿ ಬದುಕು ಕಂಡು ಕೊಂಡಿರುವ ಶ್ರೀ. ರಂಗಸ್ವಾಮಿ ಮೂಕನಹಳ್ಳಿಯವರು ಹವ್ಯಾಸಿ ಬರಹಗಾರರು. ವೃತ್ತಿ ಮತ್ತು ಪ್ರವೃತ್ತಿಯ ಸಲುವಾಗಿ ಐವತ್ತಕ್ಕೂ ಹೆಚ್ಚು ದೇಶಗಳ ಸುತ್ತಿರುವ ಲೇಖಕರು ತಾವು ಕಂಡ ದೇಶಗಳಷ್ಟೇ ಅಲ್ಲದೆ ಜಗತ್ತಿನ ಆರ್ಥಿಕ ಸ್ಥಿತಿಗತಿ ಬಗ್ಗೆ ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿಗೆ ಲೇಖನಗಳ ಬರೆದಿದ್ದಾರೆ. ಇವರು ಕಂಡ ದೇಶಗಳ ಪ್ರವಾಸಿ ಕಥನ ತರಂಗ, ವಿಜಯ ನೆಕ್ಸ್ಟ್ ಮತ್ತು ಡಿಜಿಟಲ್ ಕನ್ನಡದಲ್ಲಿ ಲೇಖನ ಮತ್ತು ಸರಣಿ ರೂಪದಲ್ಲಿ ಪ್ರಕಟವಾಗಿವೆ. ಹಣಕ್ಲಾಸು ಕನ್ನಡಪ್ರಭ.ಕಾಮ್ ನಲ್ಲಿ ಪ್ರತಿ ಗುರುವಾರ ಪ್ರಕಟವಾಗುವ ಅಂಕಣ ಬರಹ.
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Election 2019, social media, Political parties, Hanaclassu, 2019 ಲೋಕಸಭಾ ಚುನಾವಣೆ, ಸಾಮಾಜಿಕ ಜಾಲತಾಣ, ರಾಜಕೀಯ ಪಕ್ಷಗಳು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS