Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Arunachal MLA Tirong Aboh, son, nine others killed in ambush

ಅರುಣಾಚಲದಲ್ಲಿ ಉಗ್ರರ ಅಟ್ಟಹಾಸ: ಶಾಸಕ ತಿರೋಂಗ್ ಅಬೊ, ಅವರ ಪುತ್ರ ಸೇರಿ 11 ಮಂದಿ ಸಾವು

SC turns down 100% matching of VVPATs with EVMs

ಲೋಕಸಮರ: ಇವಿಎಂ ಮತಗಳ ಜೊತೆ ಶೇ. 100 ವಿವಿಪ್ಯಾಟ್ ಹೊಂದಾಣಿಕೆ ಕೋರಿದ್ದ ಅರ್ಜಿ 'ಸುಪ್ರೀಂ'ನಿಂದ ವಜಾ

Arundathi Nag

ದೇಶ ಸರ್ವಾಧಿಕಾರತ್ವದ ಹಿಡಿತಕ್ಕೆ: ಅರುಂಧತಿ ನಾಗ್ ಆತಂಕ

Vivek Oberoi

ಐಶ್ವರ್ಯಾ ರೈ ಕುರಿತ ಟ್ವೀಟ್ ನ್ನು ಡಿಲೀಟ್ ಮಾಡಿ ಕ್ಷಮೆ ಕೇಳಿದ ವಿವೇಕ್ ಒಬೆರಾಯ್

ಸಂಗ್ರಹ ಚಿತ್ರ

ಮತದಾನ ಮುಗಿಯುತ್ತಿದ್ದಂತೆ ಗ್ರಾಹಕರಿಗೆ ಶಾಕ್, ತೈಲ ಬೆಲೆ ಏರಿಕೆ, ಬೆಂಗಳೂರಿನಲ್ಲಿ ದರ ಎಷ್ಟು?

Madhya Pradesh government to reopen 12-year-old murder case against Pragya Thakur

ಪ್ರಗ್ಯಾ ಸಿಂಗ್ ವಿರುದ್ಧದ ಕೊಲೆ ಪ್ರಕರಣದ ಮರು ತನಿಖೆಗೆ ಮುಂದಾದ ಮಧ್ಯ ಪ್ರದೇಶ ಸರ್ಕಾರ

SC stays Delhi HC order disallowing black money law to operate retrospectively

ಕಪ್ಪು ಹಣ ಕಾಯ್ದೆ ಪೂರ್ವಾನ್ವಯ ಗೊಳಿಸಲಾಗದು ಎಂಬ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ಸಂಗ್ರಹ ಚಿತ್ರ

ಕಮರಿದ ಪೋಷಕರ ಆಸೆ: ಗೃಹರಕ್ಷಕ ನೇಮಕಾತಿ ಓಟ ಪರೀಕ್ಷೆ ವೇಳೆ ಕುಸಿದು ಬಿದ್ದು ಉದ್ಯೋಗಾಕಾಂಕ್ಷಿ ಸಾವು

Representational Image.

ಗದಗ ಜಿಲ್ಲೆಯ ಈ ಗ್ರಾಮದಲ್ಲಿ ಚಹಾ, ಕಿರಾಣಿ, ಪಾನ್ ಶಾಪ್ ಗಳಲ್ಲಿ ಸಹ ದೊರಕುತ್ತದೆ ಲಿಕ್ಕರ್!

Old man commits suicide after fire setting on the wife at Bengaluru

ಬೆಂಗಳೂರು: ಪತ್ನಿಗೆ ಬೆಂಕಿಹಚ್ಚಿ ಕೊಂದು ತಾನೂ ವಿಷಕುಡಿದ ವೃದ್ದ ಆತ್ಮಹತ್ಯೆ

Representational image

ಬೆಂಗಳೂರು: ಭಾವಿ ಪತಿ ವಿರುದ್ಧ ಅತ್ಯಾಚಾರ-ವಂಚನೆ ಕೇಸ್ ದಾಖಲಿಸಿದ ಮಹಿಳೆ

Gali Janardana Reddy

ಮರವೇರಿ ಮಾವಿನ ಕಾಯಿ ಕಿತ್ತು ಪತ್ನಿಗೆ ಕೊಟ್ಟ ಗಾಲಿ ಜನಾರ್ದನ ರೆಡ್ಡಿ

Ramveer Upadhyay

ಪಕ್ಷ ವಿರೋಧಿ ಚಟುವಟಿಕೆ ಆರೋಪ: ಬಿಎಸ್ಪಿ ಹಿರಿಯ ನಾಯಕ ರಾಮ್‌ವೀರ್‌ ಉಪಾಧ್ಯಾಯ ಅಮಾನತು

ಮುಖಪುಟ >> ಅಂಕಣಗಳು

ಮದುವೆ ಎಂಬ ಮಹಾ ಉದ್ಯಮ !

ಹಣಕ್ಲಾಸು-66
mukesh ambani daughter wedding

ಅಂಬಾನಿ ಪುತ್ರಿಯ ವಿವಾಹದ ಫೋಟೋ

ಭಾರತ ಬಡದೇಶ ಆದರೆ ಭಾರತೀಯರು?ಅವರು ಬಡವರೇ? ಹೀಗೊಂದು ಪ್ರಶ್ನೆ ಬಹಳ ವರ್ಷಗಳಿಂದ ಗಿರಕಿ ಹೊಡೆಯುತ್ತಿದ್ದೆ. ಇದಕ್ಕೆ ಕಾರಣವೇನು ಗೊತ್ತೇ? ನಮ್ಮದು ಗುಪ್ತ ಆರ್ಥಿಕತೆ ಅರ್ಥಾತ್ ಹಿಡನ್ ಎಕಾನಮಿ. ಜಗತ್ತಿನ ಬೆರಳೆಣಿಕೆಯಷ್ಟು ದೇಶಗಳು ಮಾತ್ರ ತಮ್ಮೆಲ್ಲಾ ವಹಿವಾಟನ್ನ ನೊಂದಾಯಿಸುತ್ತವೆ. ಅಲ್ಲಿ ಎಲ್ಲವೂ ಲೀಗಲ್ ಯಾವ ವ್ಯವಹಾರವನ್ನೂ ಕದ್ದು ಮುಚ್ಚಿ ಮಾಡುವುದಿಲ್ಲ ಹೀಗಾಗಿ ಅವು ಪೇಪರ್ ನಲ್ಲಿ ಅತ್ಯಂತ ಸಂಪದ್ಭರಿತ ದೇಶಗಳು ಎನ್ನಿಸಿಕೊಳ್ಳುತ್ತವೆ. 

ಭಾರತದಲ್ಲಿ 90 ಪ್ರತಿಶತ ವಹಿವಾಟು ಹೆಜ್ಜೆಯ ಗುರುತು ಉಳಿಸದೆ ಸದ್ದಿಲ್ಲದೇ ಆಗಿ ಹೋಗುತ್ತದೆ. ಅಂದರೆ ಇಂದು ಜಗತ್ತಿನ ದೃಷ್ಟಿಯಲ್ಲಿ ಭಾರತದ ಆರ್ಥಿಕತೆ ಇಷ್ಟು ಎಂದು ಯಾವ ಸಂಖ್ಯೆ ಹೇಳುತ್ತೇವೆಯೋ ಅದು ನಮ್ಮ ನಿಜ ಆರ್ಥಿಕತೆಯ 10 ಪ್ರತಿಶತವೂ ಅಲ್ಲ!! ಗಮನಿಸಿ 130 ಕೋಟಿಗೂ ಮೀರಿದ ಜನಸಂಖ್ಯೆಯಲ್ಲಿ ತೆರಿಗೆ ಪಾವತಿ ಮಾಡುವರ ಸಂಖ್ಯೆ 2 ಕೋಟಿಯಷ್ಟೇ. ನುರಿತ ವೈದ್ಯರಿರಬಹದು, ಇಂಜಿನಿಯರ್ ಇರಬಹದು ಅವರು ಸರಕಾರಿ ಕೆಲಸದಲ್ಲಿ ಇಲ್ಲವೆಂದರೆ ಅವರಾರು ತೆರಿಗೆ ಕಟ್ಟಬೇಕು ಎನ್ನುವ ಜರೂರತ್ತು ಬರುವುದಿಲ್ಲ. ಅಷ್ಟೇಕೆ ಲೆಕ್ಕ ಪರಿಶೋಧಕರೇ ತೆರಿಗೆ ಹೇಗೆ ಕಟ್ಟದೆ ಬಚಾವಾಗಬಹದು ಎನ್ನುವುದಕ್ಕೆ ಸಲಹೆ ಕೊಡುವ ದೇಶ ನಮ್ಮದು. ಇರಲಿ. ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಹಣವೆನ್ನುವುದು ಇಂದು ನಮ್ಮ ಸಮಾಜದಲ್ಲಿ ಸಾಕಷ್ಟು ಓಡಾಡುತ್ತಿದೆ. ಭಾರತೀಯರು ಮದುವೆಗಾಗಿ ಖರ್ಚು ಮಾಡುವ ಹಣದಲ್ಲಿ ಆಗಿರುವ ಹೆಚ್ಚಳ ಎಂಥಹವರನ್ನೂ ಅಚ್ಚರಿಗೆ ದೂಡುತ್ತದೆ. ಹೆಚ್ಚಾಗಿ ನಮ್ಮ ಮದುವೆಯ ಅದ್ಧೂರಿ ಮತ್ತು ಖರ್ಚು ನೋಡಿ ನಮ್ಮ ದೇಶದ ಸ್ಥಿತಿ ನೋಡಿ ಹೆಚ್ಚು ತಲೆ ಕೆಡೆಸಿಕೊಂಡು ಹೈರಾಣಾಗುವುದು ಯೂರೋಪಿಯನ್ನರು. 

ಮದುವೆ ಎನ್ನುವುದು ಕೂಡ ಒಂದು ಇಂಡಸ್ಟ್ರಿ ರೂಪ ಪಡೆದಿದೆ. ಈ ವ್ಯಾಪಾರ  ಒಂದು ಲಕ್ಷ ಕೋಟಿ ರೂಪಾಯಿ ವಾರ್ಷಿಕ ವಹಿವಾಟು ದಾಖಲಿಸುತ್ತ ಬಂದಿದೆ. ಅಷ್ಟಕ್ಕೇ ನಿಲ್ಲದೆ ವಾರ್ಷಿಕ 25 ರಿಂದ 30 ಪ್ರತಿಶತ ಹೆಚ್ಚಳ ಕಾಣುತ್ತ ಸಾಗುತ್ತಿದೆ. ಕಳೆದ ವಾರ ಪಾಕಿಸ್ತಾನ ಪಾಪರ್ ಏಕೆ?ಏನು? ಇಲ್ಲಿದೆ ಖಬರ್  ಲೇಖನವನ್ನ ಹಣಕ್ಲಾಸು ಅಂಕಣ ಬರಹದಲ್ಲಿ ಬರೆಯಲಾಗಿತ್ತು. ಅದರಲ್ಲಿ ಪಾಕಿಸ್ತಾನವನ್ನ ಸಂಪೂರ್ಣವಾಗಿ ಬೈಲ್ ಔಟ್ ಮಾಡಲು ಒಂದು ಲಕ್ಷ ಕೋಟಿ ರೂಪಾಯಿ ಬೇಕು ಎನ್ನುವುದನ್ನೂ ಬರೆಯಲಾಗಿತ್ತು. ಅಂದರೆ ಭಾರತೀಯರು ಒಂದು ವರ್ಷದ ತಮ್ಮ ಮದುವೆ ಖರ್ಚನ್ನ ಪಾಕಿಸ್ತಾನಕ್ಕೆ ನೀಡಿದರೆ ಅದರ ಎಲ್ಲಾ ತೊಂದರೆಗಳು ನೀಗಿ ಹೋಗುತ್ತವೆ. ಈಗ ಊಹಿಸಿಕೊಳ್ಳಿ ಇದು ಎಷ್ಟೊಂದು ದೊಡ್ಡ ಮೊತ್ತವೆಂದು, ಮದುವೆ ಎನ್ನುವ ವ್ಯಾಪಾರ ಎಷ್ಟು ದೊಡ್ಡ ಮಾರುಕಟ್ಟೆ ಹೊಂದಿದೆ ಎಂದು. 

ಸರಾಸರಿ ಭಾರತೀಯರು ತಮ್ಮ ಮದುವೆಗೆ 20 ಲಕ್ಷದಿಂದ ಐದು ಕೋಟಿ ರೂಪಾಯಿ ತನಕ ವೆಚ್ಚ ಮಾಡುತ್ತಾರೆ ಎನ್ನುತ್ತದೆ ಅಂಕಿ-ಅಂಶ. ತಮ್ಮ ಜೀವಿತಾವಧಿಯಲ್ಲಿ ಗಳಿಸಿದ ಐದನೇ ಒಂದು ಭಾಗವನ್ನ ಮದುವೆಗಾಗಿ ಖರ್ಚು ಮಾಡುತ್ತಾರೆ ಭಾರತೀಯರು ಎನ್ನುತ್ತದೆ ಒಂದು ಸಮೀಕ್ಷೆ. ಇನ್ನು ಭಾರತೀಯ ಮೂಲದ ವಿದೇಶದಲ್ಲಿ ನೆಲಸಿರುವ ಅನಿವಾಸಿ ಭಾರತೀಯರ ಮದುವೆಯ ಖರ್ಚು ಕೂಡ ಹುಬ್ಬೇರಿಸುವಂತೆ ಇದೆ. ಲಂಡನ್ ನಗರದ ರಸ್ತೆಯಲ್ಲಿ ಕುದುರೆಯ ಮೇಲೆ ವರನನ್ನ ಕೊಡಿಸಿಕೊಂಡು ಮೆರವಣಿಗೆ ಸಾಗುವ ನೋಟಕ್ಕೆ ಹಲವು ಬಾರಿ ನಾನೇ ಸಾಕ್ಷಿಯಾಗಿದ್ದೇನೆ. ಇನ್ನು ಡಿಸೆಂಬರ್ 2013 ರಲ್ಲಿ ಭಾರತೀಯ ಮೂಲದ ಉದ್ಯಮಿ ಲಕ್ಷ್ಮಿ ಮಿತ್ತಲ್ ಸಹೋದರನ ಪುತ್ರಿಯ ಮದುವೆಯನ್ನ ಬಾರ್ಸಿಲೋನಾ ನಗರದಲ್ಲಿ ಆಯೋಜಿಸಲಾಗಿತ್ತು. ಡಿಸೆಂಬರ್ 5 ರಿಂದ 7 ರವೆರೆಗೆ ಮೂರು ದಿನದ ಮದುವೆಗೆ ಅವರು ಮಾಡಿದ ಖರ್ಚು ಬರೋಬ್ಬರಿ 500 ಕೋಟಿ ರೂಪಾಯಿ! ಜನ ಸಾಮಾನ್ಯ ನಿಬ್ಬೆರಗಾಗಿ ನೋಡುತ್ತಾ ನಿಲ್ಲುವಂತಹ ದೃಶ್ಯಗಳು ಅಲ್ಲಿ ಸೃಷ್ಟಿಯಾಗಿತ್ತು. ಆ ನಂತರದ ದಿನಗಳಲ್ಲಿ ಸ್ಥಳೀಯರು ಭಾರತೀಯರನ್ನ ನೋಡುವ ದೃಷ್ಟಿಯೇ ಬದಲಾಯಿತು. ಅದು ಬೇರೆಯದೇ ಕಥೆ. 

ತೀರಾ ಇತ್ತೀಚಿಗೆ ಮದುವೆಯಾದ ದೀಪಿಕಾ ಮತ್ತು ರಣವೀರ್ ಮತ್ತು ಪ್ರಿಯಾಂಕಾ ಮತ್ತು ನಿಕ್ ಇವರೆಲ್ಲಾ ಕೋಟಿಗಳಲ್ಲಿ ಖರ್ಚು ಮಾಡಿದವರೇ. ಆದರೆ ಇವರು ಇಲ್ಲಿಯೂ ಹಣವನ್ನ ಮಾಡುವ ದಾರಿಯನ್ನ ಕಂಡು ಕೊಂಡಿದ್ದಾರೆ. ಸೆಲೆಬ್ರೆಟಿ ಎಂದರೆ ಬಾಯಿ ಬಿಡುವ ಅವರ ಜೀವನದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಹಪಹಪಿಸುವ ಜನ ಸಾಮಾನ್ಯನ ಕುತೂಹಲವನ್ನ ಇವರು ಬಂಡವಾಳ ಮಾಡಿಕೊಂಡು ತಮ್ಮ ಮದುವೆಯ ಚಿತ್ರ ಪಟವನ್ನ ಅಥವಾ ವಿಡಿಯೋ ತುಣುಕನ್ನ ಮಾಧ್ಯಮ ಕಂಪನಿಗಳಿಗೆ ಕೋಟಿಗಟ್ಟಲೆ ಹಣಕ್ಕೆ ಮಾರಿಕೊಳ್ಳುತ್ತಾರೆ. 

ಸದ್ಯದ ಮಟ್ಟಿಗೆ ಅತ್ಯಂತ ಹೆಚ್ಚು ಸದ್ದು  ಮಾಡುತ್ತಿರುವುದು ಮುಖೇಶ್ ಅಂಬಾನಿಯವರ ಮಗಳ ಮದುವೆಯ ಸುದ್ದಿ. ಈ ಮದುವೆಗೆ ಎಷ್ಟು ಖರ್ಚಾಗಬಹದು? ಇಲ್ಲಿಯವರೆಗೆ ಯಾರೂ ಇತಿಹಾಸದಲ್ಲಿ ಮಾಡಿರದಂತ ಮದುವೆಯಿದು ಎನ್ನುವ ಹೆಗ್ಗಳಿಕೆ ಈ ಮದುವೆ ಪಡೆಯುವ ಸಾಧ್ಯತೆಗಳಿವೆ. ಜಗತ್ತಿನಲ್ಲೇ ಅತಿ ಹೆಚ್ಚು ಖರ್ಚು ಮಾಡಿದ ಮದುವೆಯಲ್ಲಿ ಪ್ರಥಮ ಸ್ಥಾನದಲ್ಲಿರುವುದು ಇಂಗ್ಲಂಡ್ ನ ಪ್ರಿನ್ಸ್ ಚಾರ್ಲ್ಸ್ ಮತ್ತು ಡಯಾನಾ ಮದುವೆ. ಅಂದು ಮಾಡಿದ ಖರ್ಚಿನ ಇಂದಿನ ಲೆಕ್ಕಾಚಾರದ ಪ್ರಕಾರ 110 ಮಿಲಿಯನ್ ಡಾಲರ್! ಎರಡನೇ ಸ್ಥಾನದಲ್ಲಿ ಲಕ್ಷ್ಮಿ ಮಿತ್ತಲ್ ಸಹೋದರನ ಮಗಳ ಮದುವೆ, ಒಟ್ಟು ಖರ್ಚು 66 ಮಿಲಿಯನ್ ಡಾಲರ್! ಮುಖೇಶ್ ಅಂಬಾನಿಯವರ ಮಗಳ ಮದುವೆಯ ಬಜೆಟ್ 100 ಮಿಲಿಯನ್ ಅಮೆರಿಕನ್ ಡಾಲರ್!! ಇದು ಬಜೆಟ್ ಮೀರುವ ಎಲ್ಲಾ ಸಾಧ್ಯತೆಯಿದೆ ಮತ್ತು ಇಂಗ್ಲೆಂಡ್ ಪ್ರಿನ್ಸ್ ಚಾರ್ಲ್ಸ್ ಮತ್ತು ಮೃತ ಡಯಾನರ ಮದುವೆಯ ಖರ್ಚಿನ ಲೆಕ್ಕವನ್ನ ಮೀರಿ ಪ್ರಥಮ ಸ್ಥಾನ ಅಲಂಕರಿಸುವ ಸಾಧ್ಯತೆ ನಿಚ್ಚಳವಾಗಿದೆ. ಇದೀಗ ಲೇಖನದ ಪ್ರಥಮ ಸಾಲನ್ನ ಮತ್ತೊಮ್ಮೆ ಓದಿ. ಮಿತ್ತಲ್, ಅಂಬಾನಿ ಅಂತಲ್ಲ ಸಾಮಾನ್ಯ ಮನುಷ್ಯ ಕೂಡ ತನ್ನ ಶಕ್ತಿ ಮೀರಿ ಮದುವೆಗಾಗಿ ಹಣವನ್ನ ಖರ್ಚು ಮಾಡುತ್ತಾನೆ. 

ಅಂಬಾನಿ ಮಗಳ ಮದುವೆಗೆ ವಿಶ್ವದ ಎಲ್ಲಾ ಪ್ರಮುಖರೂ ಸಾಕ್ಷಿಯಾಗುತ್ತಿದ್ದಾರೆ. ಸ್ವಲ್ಪ ದಿನದ ಹಿಂದೆ ಕೋಟ್ಯಂತರ ರೂಪಾಯಿ ವ್ಯಯಿಸಿ ಮದುವೆಯಾದ ದೀಪಿಕಾ-ರಣವೀರ್ ಇರಬಹದು ಪ್ರಿಯಾಂಕಾ-ನಿಕ್ ಇರಬಹದು, ಶಾರುಖ್, ಸಲ್ಮಾನ್, ಹಿಲರಿ ಕ್ಲಿಂಟನ್ ಎಲ್ಲರೂ ಅಂಬಾನಿಯ ಮಗಳ ಮದುವೆಯಲ್ಲಿ ಹೆಜ್ಜೆ ಹಾಕುತ್ತಾರೆ. ಹಾಡುತ್ತಾರೆ, ಕುಣಿಯುತ್ತಾರೆ. ಜಗತ್ತಿನ ಅತ್ಯಂತ ಪ್ರಸಿದ್ಧ ಹಾಡುಗಾರ್ತಿ ಬೇಯೊನ್ಸ್ ಮದುವೆಯಲ್ಲಿ ಬಂದು ಪ್ರದರ್ಶನ ನೀಡಲು ಪಡೆದದ್ದು ಬರೋಬ್ಬರಿ 4 ಮಿಲಿಯನ್ ಡಾಲರ್! ಪ್ರಸಿದ್ಧ ಕಲೆಗಾರರ ದಂಡನ್ನು ಮಗಳ ಮದುವೆಯಲ್ಲಿ ಹಾಡಿ ಕುಣಿಯಲು ಅಂಬಾನಿ ಕರೆಸಿದ್ದಾರೆ. ಬೇಯೊನ್ಸ್ ಅತಿ ಹೆಚ್ಚು ಸಂಭಾವನೆ ಪಡೆದ ಸೆಲೆಬ್ರೆಟಿ. 2017 ರಿಂದ ಸಂಗೀತ ಜಗತ್ತಿನಲ್ಲಿ ಅತಿ ಹೆಚ್ಚು ಗಳಿಸುವ ಮಹಿಳೆ ಪಟ್ಟದಲ್ಲಿ ಕೂತಿರುವ ಬೇಯೊನ್ಸ್ ವಾರ್ಷಿಕ ಆದಾಯ 100 ಮಿಲಿಯನ್ ಮೀರುತ್ತದೆ. ಹಳ್ಳವಿದ್ದೆಡೆ ನೀರು ಎನ್ನುವುದು ಇದಕ್ಕೇ ಇರಬೇಕು. ಬೇಯೊನ್ಸ್ ಅತಿ ಹೆಚ್ಚು ಸಂಭಾವನೆ ಪಡೆಯುವ ಸಂಗೀತಗಾರ್ತಿ ಎಂದು ಕೊಂಡರೆ ಅದು ತಪ್ಪು ಜೆನಿಫರ್ ಲೋಪೆಜ್ ಎನ್ನುವ ಮಹಿಳೆ ಇಂತಹ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಯಸುವುದು ಕೇವಲ ಐದು ಮಿಲಿಯನ್ ಡಾಲರ್ ಅಷ್ಟೇ. ಅಮೆರಿಕಾದ ಒಂದು ಕಾಲದ ಅಧ್ಯಕ್ಷ ನ ಹೆಂಡತಿ ಒಬಾಮ ಆಡಳಿತದಲ್ಲಿ ಉನ್ನತ ಹುದ್ದೆಯಲ್ಲಿದ್ದ ಹಿಲರಿ ಕ್ಲಿಂಟನ್ ನಮ್ಮ ಭಾರತೀಯ ಉಡುಗೆ ತೊಟ್ಟು ಕುಣಿಯುತ್ತಾರೆ ಎಂದ ಮೇಲೆ ಬೇರೆಯವರು ಯಾವ ಲೆಕ್ಕ? ಹಣವೆನ್ನುವುದು ಜಗತ್ತಿನ ಎಂತಹ ಪ್ರಸಿದ್ಧರನ್ನೂ ಖಾಸಗಿ ಕಾರ್ಯಕ್ರಮದಲ್ಲಿ ಕುಣಿಸುತ್ತದೆ. 

ಇದೆಲ್ಲಾ ಪ್ರಸಿದ್ಧರ ಕತೆಯಾಯ್ತು ಜನ ಸಾಮಾನ್ಯ ನಿಜವಾಗಿಯೂ ಇಷ್ಟೊಂದು ಹಣ ಖರ್ಚು ಮಾಡುತ್ತಾನಾ? ಎನ್ನುವುದಕ್ಕೆ ನಿಖರ ಉತ್ತರ ಹೇಳುವುದು ಕಷ್ಟ. ಖರ್ಚು ಕೋಟಿಯಲ್ಲಿ ಇಲ್ಲದಿರಬಹದು ಆದರೆ ಆತನ ಮಿತಿಯನ್ನ ಆತ ಖಂಡಿತ ಮೀರಿ ಖರ್ಚು ಮಾಡುತ್ತಾನೆ ಎಂದು ಮಾತ್ರ ಹೇಳಬಹದು. ಹಿಂದೆಲ್ಲಾ ಮನೆಯಲ್ಲಿ, ದೇವಸ್ಥಾನದಲ್ಲಿ ಮದುವೆ ನೆಡೆದು ಹೋಗುತ್ತಿತ್ತು. ನೆಂಟರು ಇಷ್ಟರು ವಾರದ ಮುಂಚೆಯೆ ಮನೆಗೆ ಬಂದು ಮದುವೆಯ ಕೆಲಸದಲ್ಲಿ ಭಾಗಿಯಾಗುತ್ತಿದ್ದರು. ಅಡುಗೆಯನ್ನ ಕೂಡ ಒಂದಷ್ಟು ನುರಿತ ಹೆಂಗಸರು ಮತ್ತು ಗಂಡಸರು ಸೇರಿ ಮಾಡಿ ಮುಗಿಸುತ್ತಿದ್ದರು. ಇಂದು ಕಾಲ ಬದಲಾಗಿದೆ. ಈ ಕೆಲಸವನ್ನ ಇವೆಂಟ್ ಮ್ಯಾನೇಜ್ಮೆಂಟ್ ಎನ್ನುವ ಪರಿಕಲ್ಪನೆ ಅಪೋಷನ ತೆಗೆದು ಕೊಂಡಿದೆ. ಹೆಣ್ಣು ಹೆತ್ತವರು ಅಥವಾ ಗಂಡು ಹೆತ್ತವರು ಯಾರಾದರೂ ಸರಿಯೇ ಮದುವೆಯ ದಿನ ಅತಿಥಿಗಳಂತೆ ನೆಡೆದು ಹೋದರೆ ಸಾಕು ಮಿಕ್ಕೆಲ್ಲಾ ಆಗುಹೋಗನ್ನು ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳು ನೋಡಿಕೊಳ್ಳುತ್ತವೆ. ನಿಮ್ಮ ಬಜೆಟ್ ಎಷ್ಟು ಎಂದು ಹೇಳಿದರೆ ಸಾಕು ಅದಕ್ಕೆ ತಕ್ಕಂತೆ ಏನೇನು ಮಾಡಬಹದು ಎನ್ನುವ ಒಂದು ಪಟ್ಟಿಯನ್ನ ಅವರು ನಿಮ್ಮ ಮುಂದೆ ಇರಿಸುತ್ತಾರೆ. ಅದನ್ನ ನೋಡಿ ಒಪ್ಪಿಗೆ ಕೊಟ್ಟರೆ ಅಲ್ಲಿಗೆ ಮುಗಿಯಿತು. ಉಳಿದದ್ದು ಅವರು ಮಾಡುತ್ತಾರೆ ಹಣ ಕೊಡುವುದಷ್ಟೇ ನಿಮ್ಮ ಕೆಲಸ. 

ಇಂತಹ ಅದ್ದೊರಿ ಮದುವೆ ತಪ್ಪೇ? ಸರಿಯೇ? 
ಇದನ್ನ ಎರಡು ದೃಷ್ಟಿಯಲ್ಲೂ ನೋಡಬಹದು, ವಿಶ್ಲೇಷಿಸಬಹದು. ಉಳ್ಳವರು ಮಾಡುತ್ತಾರೆ ಆ ಮೂಲಕ ಸಮಾಜದಲ್ಲಿ ಒಂದಷ್ಟು ಹಣ ಅಲ್ಲಿಂದ ಇಲ್ಲಿಗೆ ಹರಿದಾಡುತ್ತದೆ ಅದರಲ್ಲಿ ತಪ್ಪಿಲ್ಲ. ಆದರೆ ಇಲ್ಲದವರು ಸಾಲ ಮಾಡಿ ಕುಣಿಯುವ ಶೋಕಿಗೆ ಹೋಗಬಾರದು ಅಷ್ಟೇ. ಈಗೀಗ ನೀವು ಮದುವೆ ಮಾಡಿಕೊಳ್ಳಿ ಹನಿಮೂನ್ ಖರ್ಚು ಕೂಡ ಕೊಡುತ್ತೇವೆ ನಂತರ ನಿಧಾನವಾಗಿ ಐದು ವರ್ಷ ಕಂತು ಕಟ್ಟಿ ಎನ್ನುವ ಆಫರ್ ಗಳು ಕೂಡ ಚೀನಾ ದೇಶದಲ್ಲಿ ಶುರುವಾಗಿದೆ. ಇಂತಹ ವಿಷಯಗಳು ಅಲ್ಲಿಂದ ಇಲ್ಲಿಗೆ ಬರಲು ಹೆಚ್ಚು ಸಮಯ ಹಿಡಿಯುವುದಿಲ್ಲ.  

ಕೊನೆ ಮಾತು: ದ.ರಾ. ಬೇಂದ್ರೆಯವರ ಕುರುಡು ಕಾಂಚಾಣ ಪದ್ಯ ನೆನಪಾಗುತ್ತಿದೆ. ಅಲ್ಲಿನ ಕೊನೆಯ ಸಾಲಿನಲ್ಲಿ ಹ್ಯಾಂಗಾರೆ ಕುಣಿಕುಣಿದು ಮಂಗಾಟ ನಡೆದಾಗ ಅಂಗಾತ ಬಿತ್ತೋ, ಹೆಗಲಲಿ ಎತ್ತೋ.ಎನ್ನುತ್ತಾರೆ. ಕವಿಯ ಆಶಯ ನಿಜವಾಗವುದೆಂದು? ನಿತ್ಯ ಹೆಚ್ಚಾಗುತ್ತಿರುವ ಮನುಷ್ಯ-ಮನುಷ್ಯನ ನಡುವಿನ ಅಂತರ ಕುರುಡು ಕಾಂಚಾಣಾ ಕುಣಿಯುತಲಿತ್ತು| ಕಾಲಿಗೆ ಬಿದ್ದವರ ತುಳಿಯುತಲಿತ್ತೋ|| ಎನ್ನುವುದನ್ನೇ ನಿಜವಾಗಿಸುತ್ತಾ ಹೋಗುತ್ತದೆ. ಇಂತಹ ಮದುವೆಗಳು ಸಮಾಜಕ್ಕೆ ಗುಪ್ತವಾಗಿ ಒಂದು ಸಂದೇಶವನ್ನ ಕೊಡುತ್ತವೆ ಗದ್ದಲದಲ್ಲಿ ಜನ ಸಾಮಾನ್ಯ ಅದನ್ನ ಗಮನಸಿಸುವುದಿಲ್ಲ. ಅದೇನೆಂದರೆ ಹಣವಂತರು ಮತ್ತು ಪ್ರಸಿದ್ಧರಿಗೆ ಜಾತಿ, ಧರ್ಮ, ಪಂಥದ ಕಟ್ಟಳೆಯಿಲ್ಲ ಅವರೆಲ್ಲಾ ದುಡ್ಡೇ ದೊಡ್ಡಪ್ಪ ತತ್ವಕ್ಕೆ ಬದ್ದರಾದರವರು. ಗುದ್ದಾಟ-ಕಚ್ಚಾಟ, ಜಾತಿ-ಧರ್ಮ-ಸಿದ್ಧಾಂತಗಳು ಮಾತ್ರ ಜನ ಸಾಮಾನ್ಯನ ಆಸ್ತಿಯಷ್ಟೇ. 

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಲೇಖಕರ ಕುರಿತು : ಕಳೆದ ಎರಡು ದಶಕದಿಂದ ಆಂತರಿಕ ಲೆಕ್ಕ ಪರಿಶೋಧಕರಾಗಿ ದುಬೈ ಮತ್ತು ಯೂರೋಪಿನ ವಿತ್ತ ಪ್ರಪಂಚದಲ್ಲಿ ಬದುಕು ಕಂಡು ಕೊಂಡಿರುವ ಶ್ರೀ. ರಂಗಸ್ವಾಮಿ ಮೂಕನಹಳ್ಳಿಯವರು ಹವ್ಯಾಸಿ ಬರಹಗಾರರು. ವೃತ್ತಿ ಮತ್ತು ಪ್ರವೃತ್ತಿಯ ಸಲುವಾಗಿ ಐವತ್ತಕ್ಕೂ ಹೆಚ್ಚು ದೇಶಗಳ ಸುತ್ತಿರುವ ಲೇಖಕರು ತಾವು ಕಂಡ ದೇಶಗಳಷ್ಟೇ ಅಲ್ಲದೆ ಜಗತ್ತಿನ ಆರ್ಥಿಕ ಸ್ಥಿತಿಗತಿ ಬಗ್ಗೆ ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿಗೆ ಲೇಖನಗಳ ಬರೆದಿದ್ದಾರೆ. ಇವರು ಕಂಡ ದೇಶಗಳ ಪ್ರವಾಸಿ ಕಥನ ತರಂಗ, ವಿಜಯ ನೆಕ್ಸ್ಟ್ ಮತ್ತು ಡಿಜಿಟಲ್ ಕನ್ನಡದಲ್ಲಿ ಲೇಖನ ಮತ್ತು ಸರಣಿ ರೂಪದಲ್ಲಿ ಪ್ರಕಟವಾಗಿವೆ. ಹಣಕ್ಲಾಸು ಕನ್ನಡಪ್ರಭ.ಕಾಮ್ ನಲ್ಲಿ ಪ್ರತಿ ಗುರುವಾರ ಪ್ರಕಟವಾಗುವ ಅಂಕಣ ಬರಹ.
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Hanaclassu, Marriage, business, ಮದುವೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS