Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Priyanka Gandhi Vadra

ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶ ಪೂರ್ವ ವಿಭಾಗ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

Dodge  Car

ಇದು ಸಿದ್ದಗಂಗಾ ಮಠದ ಶತಾಯುಷಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಅಚ್ಚು ಮೆಚ್ಚಿನ ಕಾರು!

DCM Dr G Parameshwar with Siddaganga Shree(File photo)

ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಪ್ರಧಾನಿ ಗೈರು: ಡಿಸಿಎಂ ಪರಮೇಶ್ವರ್ ಟೀಕೆ

Minister Sa Ra Mahesh Pulls Up SP Divya Gopinath For Stopping Him During Siddaganga Seer

ತುಮಕೂರು ಎಸ್ ಪಿಗೆ ಸಚಿವ ಸಾ.ರಾ.ಮಹೇಶ್ ಅವಾಜ್, ಕಣ್ಣೀರು ಹಾಕಿದ ಮಹಿಳಾ ಅಧಿಕಾರಿ

Home minister M B Patil in press meet

ಅಗತ್ಯಬಿದ್ದರೆ ಶಾಸಕ ಗಣೇಶ್ ರೌಡಿ ಶೀಟರ್ ಪಟ್ಟಿಗೆ;ಗೃಹ ಸಚಿವ ಎಂ ಬಿ ಪಾಟೀಲ್

Shah Faesal launches crowdfunding campaign for clean politics in Jammu and Kashmir

ಸ್ವಚ್ಛ ರಾಜಕೀಯಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹ ಆಂದೋಲನ ಆರಂಭಿಸಿದ ಶಾಹ್ ಫೈಸಲ್

K C Venugopal slams Priyank Kharge for organizing the seminar

ಶೋಕಾಚರಣೆ ನಡುವೆ ಕಾರ್ಯಕ್ರಮ: ಸಚಿವ ಪ್ರಿಯಾಂಕ್ ಖರ್ಗೆಗೆ ವೇಣುಗೋಪಾಲ್ ತರಾಟೆ

CM H D Kumaraswamy(File photo)

ಈಗಲ್ಟನ್ ರೆಸಾರ್ಟ್ ನಲ್ಲಿ ಸಣ್ಣ ಅಚಾತುರ್ಯ ನಡೆದಿರುವುದು ನಿಜ-ಸಿಎಂ ಕುಮಾರಸ್ವಾಮಿ

G Parameshwara

ಇಂತ ಕೀಳು ಮಟ್ಟದ ರಾಜಕಾರಣ ಎಂದು ನೋಡಿಲ್ಲ: ಕಾಂಗ್ರೆಸ್ ಶಾಸಕರ ಹೊಡೆದಾಟ ಕುರಿತು ಪರಮೇಶ್ವರ್

Janhvi Kapoor

ಜಾಹ್ನವಿಗೆ ಕಿಚಾಯಿಸಿದ ಛಾಯಾಗ್ರಾಹಕನಿಗೆ ಶ್ರೀದೇವಿ ಪುತ್ರಿ ಕೊಟ್ಟ ಪ್ರತ್ಯುತ್ತರ!

Anand Singh  And  MLA J N Ganesh

ಶಾಸಕರ ಹೊಡೆದಾಟ: ಬಿಜೆಪಿಯಿಂದ ಶಾಸಕರನ್ನು ರಕ್ಷಿಸಿಕೊಳ್ಳಲು ಹೋದ ಕಾಂಗ್ರೆಸ್ ತಾನೇ ಹಳ್ಳಕ್ಕೆ ಬಿದ್ದಿತೆ?

Representational image

ಲೋಕಸಭೆ ಚುನಾವಣೆಯಲ್ಲಿ ಎನ್ ಡಿ ಗೆ ಬೆಂಬಲವಿಲ್ಲ: ಜಿಜೆಎಂ

Representational image

ಬೆಂಗಳೂರು; ವಿದ್ಯಾರ್ಥಿನಿ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಶಿಕ್ಷಕ ಬಂಧನ

ಮುಖಪುಟ >> ಕ್ರಿಕೆಟ್

ವಿರಾಟ್ ಕೊಹ್ಲಿ: ದೆಹಲಿಯ ಗಲ್ಲಿ ಕ್ರಿಕೆಟಿಗ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿ ಇಂದಿಗೆ 10 ವರ್ಷ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗಿಂದು ಸ್ಮರಣೀಯ ದಿನ, ಇಂದಿನಿಂದಲೇ ನಿರ್ಣಾಯಕ ಮೂರನೇ ಟೆಸ್ಟ್ ಕೂಡ ಆರಂಭ
10 years of Virat Kohli: Delhi street-fighter who went on to rule cricketing world

ವಿರಾಟ್ ಕೊಹ್ಲಿ

ಲಂಡನ್: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಕಾಲಿಟ್ಟು ಇಂದಿಗೆ ಸರಿಯಾಗಿ 10 ವರ್ಷ. ದೆಹಲಿಯ ಗಲ್ಲಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗ ಇಂದು ಟೀಂ ಇಂಡಿಯಾದ ಸಾರಥ್ಯ ವಹಿಸಿದ್ದಾರೆ.

ಹೌದು.. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ಪದಾರ್ಪಣೆ ಮಾಡಿ ಇಂದಿಗೆ ಸರಿಯಾಗಿ 10 ವರ್ಷ.  ಆಗಸ್ಟ್ 18, 2008ರಂದು ದಂಬುಲಾದಲ್ಲಿ ಶ್ರೀಲಂಕಾ ವಿರುದ್ಧ ವಿರಾಟ್ ಕೊಹ್ಲಿ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದರು. ಆ ಬಳಿಕ 2011ರಲ್ಲಿ ಟೆಸ್ಟ್‌ ತಂಡಕ್ಕೆ ಕಾಲಿಟ್ಟ ಅವರು, 2010ರಲ್ಲಿ ಭಾರತ ಪರ ಚೊಚ್ಚಲ ಟಿ20 ಆಡಿದ್ದರು. 10 ವರ್ಷಗಳಲ್ಲಿ ವಿರಾಟ್‌ ಅನೇಕ ದಾಖಲೆಗಳನ್ನು ಬರೆದಿದ್ದು, ಕ್ರಿಕೆಟ್‌ ಜಗತ್ತಿನಲ್ಲಿ ದಂತಕಥೆ ಎನಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ.

ಕೊಹ್ಲಿ ಸಾಧನೆ ಶ್ಲಾಘನೀಯವಾದರೂ, ವಿರಾಟ್ ಕೊಹ್ಲಿ ಮುಂದೆ ಈಗ ಸಾಕಷ್ಟು ಸವಾಲುಗಳಿವೆ. ಪ್ರಮುಖವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಅಗ್ರ ತಂಡವಾಗಿದ್ದರೂ, ಇಂಗ್ಲೆಂಡ್ ನೆಲದಲ್ಲಿ ತೋರುತ್ತಿರುವ ತಂಡದ ಕಳಪೆ ಪ್ರದರ್ಶನ ವಿರಾಟ್ ಕೊಹ್ಲಿ ಕಂಗೆಡಿಸಿದೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಕೊಹ್ಲಿ ಪಡೆ ಮೊದಲೆರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದು, ಇಂದಿನಿಂದ ಆರಂಭವಾಗಲಿರುವ ಮೂರನೇ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. 

ಟೀಕೆಗಳಿಗೆ ಉತ್ತರ ನೀಡುವರೇ ಕೊಹ್ಲಿ
ಇನ್ನು ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಪ್ರತಿರೋಧ ಒಡ್ಡದೇ ಸೋಲೊಪ್ಪಿಕೊಂಡ ರೀತಿ ಟೀಂ ಇಂಡಿಯಾ ಭಾರಿ ಟೀಕೆ ಎದುರಿಸುವಂತೆ ಮಾಡಿತ್ತು. ಸ್ವತಃ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಸಂದೀಪ್ ಪಾಟೀಲ ಅವರು, ‘ವಿರಾಟ್ ಬಳಗವು ಇಂಗ್ಲೆಂಡ್‌ಗೆ ಕಾಫಿ ಕುಡಿಯಲು ತೆರಳಿರಬಹುದು’ ಎಂದು ಕುಟುಕಿದ್ದರು.

ಆದರೆ ಎರಡನೇ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕೊಹ್ಲಿ, 'ಸೋತಿದ್ದೇವೆಂದು ಕೈಬಿಡಬೇಡಿ, ನಮ್ಮನ್ನು ಬೆಂಬಲಿಸಿ ಜಯದ ಲಯಕ್ಕೆ ಮರಳುತ್ತೇವೆ' ಎಂದು ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.  ಆ ಮಾತನ್ನು ಉಳಿಸಿಕೊಳ್ಳುವ ಸವಾಲು ಅವರ ಮುಂದಿದೆ. ಆದರೆ, ಆತ್ಮವಿಶ್ವಾಸದ ಉತ್ತುಂಗ ದಲ್ಲಿರುವ ಆತಿಥೇಯ ತಂಡವನ್ನು ಮಣಿಸುವುದು ಸುಲಭವಲ್ಲ. ಇದೊಂದು ಪಂದ್ಯ ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವತ್ತ ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ಚಿತ್ತ ನೆಟ್ಟಿದೆ.
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : London, Cricket Offbeat, Virat Kohli, India, England, ಲಂಡನ್, ಕ್ರಿಕೆಟ್ ಸ್ವಾರಸ್ಯ, ವಿರಾಟ್ ಕೊಹ್ಲಿ, ಭಾರತ, ಇಂಗ್ಲೆಂಡ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS