ಖವಾಜ ಅದ್ಭುತ ಕ್ಯಾಚ್ ಕಂಡು ಬೆಪ್ಪಾದ ವಿರಾಟ್ ಕೊಹ್ಲಿ, ವಿಡಿಯೋ ವೈರಲ್!

ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್ ಮನ್ ಗಳು ಅಲ್ಪ ಮೊತ್ತಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದಾರೆ...
ವಿರಾಟ್ ಕೊಹ್ಲಿ-ಉಸ್ಮಾನ್ ಖವಾಜ
ವಿರಾಟ್ ಕೊಹ್ಲಿ-ಉಸ್ಮಾನ್ ಖವಾಜ
ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್ ಮನ್ ಗಳು ಅಲ್ಪ ಮೊತ್ತಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದಾರೆ. 
ಇನ್ನು ಭರವಸೆ ಮೂಡಿಸಿದ್ದ ವಿರಾಟ್ ಕೊಹ್ಲಿ ಸಹ 3 ರನ್ ಗಳಿಗೆ ಔಟಾಗಿದ್ದಾರೆ. ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ಚೆಂಡನ್ನು ವಿರಾಟ್ ಕೊಹ್ಲಿ ಗಲ್ಲಿಯತ್ತ ಸಿಡಿಸಿದರು. ಈ ವೇಳೆ ಗಲ್ಲಿಯಲ್ಲಿದ್ದ ಉಸ್ಮಾನ್ ಖವಾಜ ಹಾರಿ ಅದ್ಭುತವಾಗಿ ಕ್ಯಾಚ್ ಹಿಡಿದರು. ಇದರಿಂದ ವಿರಾಟ್ ಕೊಹ್ಲಿ ಪೆಲಿವಿಯನ್ ಸೇರಬೇಕಾಯಿತು. 
ಅಂತ ತಾವು ಸಿಡಿಸಿದ ಚೆಂಡನ್ನು ಖವಾಜ ಡೈವ್ ಮಾಡಿ ಕ್ಯಾಚ್ ಹಿಡಿದಿದ್ದರಿಂದ ವಿರಾಟ್ ಕೊಹ್ಲಿ ಕ್ಷಣಕಾಲ ಬೆಪ್ಪಾಗಿ ನಿಂತು ನಿರಾಸೆಯಿಂದ ಮೈದಾನದಿಂದ ಹೊರ ನಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com