ಡಕೌಟ್ ಮೂಲಕ 2018 ಮುಗಿಸಿದ ಕೊಹ್ಲಿ, ಯಾವೆಲ್ಲ ದಾಖಲೆ ಮಿಸ್​ ಮಾಡಿಕೊಂಡ್ರು ಗೊತ್ತಾ?

ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಶೆ ಮೂಡಿಸಿದ್ದ ಟೀಂ ಇಂಡಿಯಾ ನಾಯಕ ತಾವು ಸಾಧಿಸಬಹುದಾಗಿದ್ದ ಹಲವು ದಾಖಲೆಗಳನ್ನು ಮಿಸ್ ಮಾಡಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಶೆ ಮೂಡಿಸಿದ್ದ ಟೀಂ ಇಂಡಿಯಾ ನಾಯಕ ತಾವು ಸಾಧಿಸಬಹುದಾಗಿದ್ದ ಹಲವು ದಾಖಲೆಗಳನ್ನು ಮಿಸ್ ಮಾಡಿಕೊಂಡಿದ್ದಾರೆ.
3ನೇ ಟೆಸ್ಚ್ ಪಂದ್ಯ ನಿರ್ಣಾಯಕ ಹಂತ ತಲುಪಿರುವಂತೆಯೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೀರಸ ಡಕೌಟ್ ನೊಂದಿಗೆ 2018ನೇ ಸಾಲನ್ನು ಪೂರ್ತಿಗೊಳಿಸಿದ್ದಾರೆ.  ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 82 ರನ್ ಗಳಿಸಿದ್ದ ವಿರಾಟ್ ಗೆ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಪಿರಿಣಾಮ ಕೊಹ್ಲಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಆ ಮೂಲಕ 2018ನೇ ಸಾಲಿನಲ್ಲೂ ಟೆಸ್ಟ್ ಹಾಗೂ ಏಕದಿನದಲ್ಲಿ ಗರಿಷ್ಠ ರನ್ ಪೇರಿಸುವುದರೊಂದಿಗೆ ಕೊಹ್ಲಿ ಗುಡ್ ಬೈ ಹೇಳಿದ್ದಾರೆ. ಆದರೂ ಕೊನೆಯ ಇನ್ನಿಂಗ್ಸ್ ನಲ್ಲಿ ಸೊನ್ನೆಗೆ ಔಟಾಗುವ ಮೂಲಕ ಹಲವು ದಾಖಲೆಗಳನ್ನು ಕೊಹ್ಲಿ ಮಿಸ್ ಮಾಡಿಕೊಂಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಎಲ್ಲ ಮೂರು ಪ್ರಕಾರದ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ 2,735 ರನ್ ಪೇರಿಸಿದ್ದರು. ಈ ಮೂಲಕ ವರ್ಷವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (2833 ರನ್, 2005ರಲ್ಲಿ) ದಾಖಲೆಯನ್ನು ಮುರಿಯುವಲ್ಲಿ ವಿಫಲವಾದರು. ಕೊಹ್ಲಿಗೆ ಪಾಟಿಂಗ್ ದಾಖಲೆ ಮುರಿಯಲು ಕೇವಲ 98 ರನ್ ಗಳ ಅವಶ್ಯಕತೆ ಇತ್ತು. ಮೊದಲ ಇನ್ನಿಂಗ್ಸ್ ನಲ್ಲಿ 82 ರನ್ ಗಳಿಸಿದ್ದ ಕೊಹ್ಲಿ ಶತಕ ವಂಚಿತರಾಗಿದ್ದರು.  2ನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸುವ ಮೂಲಕ ಈ ದಾಖಲೆ ಸರಿಗಟ್ಟುವ ಅವಕಾಶವಿತ್ತು. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಕಳೆದ ಸಾಲಿನಲ್ಲೂ ವಿರಾಟ್ 2818 ರನ್ ಪೇರಿಸಿದ್ದರು.
ಇನ್ನು ವಿದೇಶ ನೆಲದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಗ್ರೇಮ್ ಸ್ಮಿತ್ ದಾಖಲೆಯನ್ನು ಮುರಿಯುವಲ್ಲಿ ಕೊಹ್ಲಿ ವಿಫಲವಾಗಿದ್ದಾರೆ. 2017ನೇ ಸಾಲಿನಲ್ಲಿ  ಒಟ್ಟಾರೆ  2818ರನ್​ಗಳಿಕೆ ಮಾಡಿದ್ದ ಕೊಹ್ಲಿ  ಜಸ್ಟ್​ 15 ರನ್​ಗಳಿಂದ ಈ ದಾಖಲೆ ಮಿಸ್​ ಮಾಡಿಕೊಂಡಿದ್ದರು. ಇನ್ನು ಶ್ರೀಲಂಕಾದ ಕುಮಾರ್​ ಸಂಗಕ್ಕರ್​ 2014ರಲ್ಲಿ 2813ರನ್​ಗಳಿಕೆ ಮಾಡಿ ಕೇವಲ 20 ರನ್​ಗಳಿಂದ  ಈ ದಾಖಲೆ ಮಿಸ್​ ಮಾಡಿಕೊಂಡಿದ್ದರು. 
ಈ ಮೊದಲು ಕ್ಯಾಲೆಂಡರ್ ವರ್ಷದಲ್ಲಿ ವಿದೇಶದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ವಿರಾಟ್ ಪಾತ್ರವಾಗಿದ್ದರು. ಇಲ್ಲಿ ದಿ ವಾಲ್ ಖ್ಯಾತಿಯ ಮಾಜಿ ನಾಯಕ ರಾಹುಲ್ ದ್ರಾವಿಡ್ ದಾಖಲೆಯನ್ನು ಅಳಿಸಿ ಹಾಕಿದ್ದರು. ಒಟ್ಟಿನಲ್ಲಿ ಆಸೀಸ್ ಸರಣಿಯಲ್ಲಿ ಶತಕ ಹಾಗೂ ಅರ್ಧಶತಕ ಸೇರಿದಂತೆ ಕೊಹ್ಲಿ ಒಟ್ಟು 286 ರನ್ ಕಲೆ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com