ದ್ರಾವಿಡ್ ಗಿಂತ ಅನುಭವಿಯಾದರೂ ಕ್ರಿಕೆಟ್ ದೇವರಿಗೇಕೆ 'ಹಾಲ್ ಆಫ್ ಫೇಮ್' ಗೌರವ ಸಿಕ್ಕಿಲ್ಲ ನಿಮಗೆ ಗೊತ್ತೆ?

ಭಾರತೀಯ ಕ್ರಿಕೆಟ್ ದೇವರು ಸಚಿನ್ ಗೆ ಏಕೆ ಈ ಗೌರವ ಇನ್ನೂ ಸಿಕ್ಕಿಲ್ಲ ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

Published: 04th November 2018 12:00 PM  |   Last Updated: 04th November 2018 12:39 PM   |  A+A-


Why Sachin Tendulkar hasn't been inducted into ICC Hall of Fame yet? Here's the reason

ಸಂಗ್ರಹ ಚಿತ್ರ

Posted By : SVN
Source : Online Desk
ನವದೆಹಲಿ: ಇತ್ತೀಚೆಗಷ್ಟೇ ಐಸಿಸಿ ಪ್ರತಿಷ್ಠಿತ ಹಾಲ್ ಆಫ್ ಫೇಮ್ ಗೌರವಕ್ಕೆ ಭಾರತ ತಂಡದ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಪಾತ್ರರಾಗಿದ್ದರು. ದ್ರಾವಿಡ್ ಈ ಗೌರವ ಸಿಕ್ಕಿದ್ದು ಎಲ್ಲರಿಗೂ ಖುಷಿಯ ವಿಚಾರವೇ ಆದರೆ ದಾಖಲೆಗಳ ವೀರ ಮತ್ತು ಭಾರತೀಯ ಕ್ರಿಕೆಟ್ ದೇವರು ಸಚಿನ್ ಗೆ ಏಕೆ ಈ ಗೌರವ ಇನ್ನೂ ಸಿಕ್ಕಿಲ್ಲ ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ದ್ರಾವಿಡ್ ​ಗೆ ಹಾಲ್​ ಆಫ್​ ಫೇಮ್​ ಗೌರವ ನೀಡಿ ಐಸಿಸಿ ಆದರಿಸಿದೆ. ಆದರೆ ಇದು ಕೆಲವರಲ್ಲಿ ಗೊಂದಲ ಮೂಡಿಸಿರುವುದು ನಿಜ. ಏಕೆಂದರೆ ದ್ರಾವಿಡ್​ ಗಿಂತ ಸಚಿನ್ ಎಲ್ಲ ದಾಖಲೆಗಳಲ್ಲೂ ಮುಂದಿದ್ದಾರೆ. ಟೆಸ್ಟ್​, ಏಕದಿನ ಕ್ರಿಕೆಟ್ ​ನಲ್ಲಿ  ಅತಿಹೆಚ್ಚು  ರನ್​ ಬಾರಿಸಿದ್ದಾರೆ. ಅತಿ ಹೆಚ್ಚು ಶತಕ ಹಾಗೂ ಅತಿ ಹೆಚ್ಚು ಅರ್ಧಶತಕ ಹೀಗೆ ಎಲ್ಲ ದಾಖಲೆಗಳು ಸಚಿನ್​ ಹೆಸರಲ್ಲೇ ಇವೆ. ದ್ರಾವಿಡ್​ 164 ಟೆಸ್ಟ್​  ಹಾಗೂ 344 ಏಕದಿನ ಕ್ರಿಕೆಟ್​ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್​ ನಲ್ಲಿ 13, 288 ಹಾಗೂ ಏಕದಿನದಲ್ಲಿ 10, 889 ರನ್ ಗಳನ್ನ​ ಸಿಡಿಸಿದ್ದಾರೆ. ಸಚಿನ್​ 200 ಟೆಸ್ಟ್ ಪಂದ್ಯಗಳನ್ನಾಡಿದ್ದು 15,921​ ಮತ್ತು 463 ಏಕದಿನ ಪಂದ್ಯಗಳಲ್ಲಿ 18, 426 ರನ್​ ಗಳ ಬೃಹತ್​ ಮೊತ್ತವನ್ನೇ ಪೇರಿಸಿದ್ದಾರೆ. 

ಹೀಗಿದ್ದರೂ ಸಚಿನ್​ಗೂ ಮೊದಲೇ ದ್ರಾವಿಡ್ ​ಗೇಕೆ ಹಾಲ್​ ಆಫ್​ ಫೇಮ್​ ಗೌರವ?
ಐಸಿಸಿಯ ಹಾಲ್​ ಆಫ್​ ಫೇಮ್ ​ಗೆ ಆಯ್ಕೆಯಾಗುವ ಯಾವುದೇ ಆಟಗಾರ ಹಿಂದಿನ 4 ರಿಂದ 5 ವರ್ಷ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್​ ನಲ್ಲಿ ಆಡಿರಬಾರದು. ಆದರೆ ಸಚಿನ್​ ತಮ್ಮಕೊನೆಯ ಹಾಗೂ ದಾಖಲೆ 200 ನೇ ಟೆಸ್ಟ್​ ಪಂದ್ಯವನ್ನು 2013ರ ನವೆಂಬರ್​ ತಿಂಗಳಲ್ಲಿ ವಿಂಡೀಸ್​ ವಿರುದ್ಧ ಆಡಿದ್ದರು. ಅದರ ಪ್ರಕಾರ ಸಚಿನ್​ ಗೆ ಮುಂಬರುವ ನವೆಂಬರ್​ ಗೆ ನಿವೃತ್ತಿ ಘೋಷಿಸಿ 5 ವರ್ಷ ಪೂರೈಸಿದಂತಾಗುತ್ತದೆ. ಈ ಕಾರಣದಿಂದಲೇ ಸಚಿನ್​ ಗಿಂತಲೂ ಮೊದಲೇ ದ್ರಾವಿಡ್​  ಹಾಲ್​ ಆಫ್​ ಫೇಮ್​ ಗೌರವಕ್ಕೆ ಪಾತ್ರರಾಗಿದ್ದಾರೆ.

ದ್ರಾವಿಡ್​ ಅಂತಾರಾಷ್ಟ್ರೀಯ ಕ್ರಿಕೆಟ್ ​ಗೆ ನಿವೃತ್ತಿ ಘೋಷಿಸಿ 6 ವರ್ಷಗಳಾಗಿದ್ದು, ಈ ಹಿನ್ನೆಲೆಯಲ್ಲಿ ಐಸಿಸಿಯ ಹಾಲ್​ ಆಫ್​ ಫೇಮ್​ ಗೌರವಕ್ಕೆ ಪಾತ್ರರಾಗಿದ್ದಾರೆ. ದ್ರಾವಿಡ್​ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ 2012ರ ಮಾರ್ಚ್ 9ರಂದು ಆಡಿದ್ದರು. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp