ಅದ್ಭುತ ಡೈವ್ ಮಾಡಿ ಸಿಕ್ಸರ್ ತಡೆದ ಧವನ್, ವಿಡಿಯೋ ವೈರಲ್!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಶಿಖರ್ ಧವನ್ ಅದ್ಭುತ ಡೈವ್ ಮಾಡಿ ಸಿಕ್ಸ್ ತಡೆದಿರುವ ವಿಡಿಯೋ ವೈರಲ್ ಆಗಿದೆ...

Published: 12th November 2018 12:00 PM  |   Last Updated: 12th November 2018 03:23 AM   |  A+A-


Shikhar Dhawan

ಶಿಖರ್ ಧವನ್

Posted By : VS
Source : Online Desk
ಚೆನ್ನೈ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಶಿಖರ್ ಧವನ್ ಅದ್ಭುತ ಡೈವ್ ಮಾಡಿ ಸಿಕ್ಸ್ ತಡೆದಿರುವ ವಿಡಿಯೋ ವೈರಲ್ ಆಗಿದೆ. 

ಚೆನ್ನೈನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದ್ದು 3-0 ಅಂತರದಿಂದ ಸರಣಿ ಕ್ಲೀನ್ ಸ್ವಿಪ್ ಮಾಡಿದೆ. 

ಇದೇ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಎಸೆತದವನ್ನು ವಿಂಡೀಸ್ ಬ್ಯಾಟ್ಸ್ ಮನ್ ಹೋಪ್ ಸಿಕ್ಸರ್ ಬೌಂಡರಿಗೆ ಸಿಡಿಸಿದರು. ಈ ವೇಳೆ ಬೌಂಡರಿ ಗೆರೆಯಲ್ಲಿದ್ದ ಶಿಖರ್ ಧವನ್ ಅದ್ಭುತವಾಗಿ ಡೈವ್ ಮಾಡಿ ಕ್ಯಾಚ್ ಹಿಡಿಯಲು ಮುಂದಾದರೂ, ಅದರಲ್ಲಿ ಸಫಲರಾದರೂ ಆದರೆ ಡೈವ್ ಮಾಡಿದ್ದರಿಂದ ಇನ್ನೇನು ಬೌಂಡರಿ ಗೆರೆ ದಾಟುತ್ತೇನೆ ಎಂದು ಭಾವಿಸಿ ಚೆಂಡನ್ನು ಎಸೆದರು. ಆ ಮೂಲಕ 5 ರನ್ ಗಳನ್ನು ಉಳಿಸಿದ್ದಾರೆ. 

ಅತ್ಯುತ್ತಮ ಫೀಲ್ಡಿಂಗ್ ಮಾಡುವ ಶಿಖರ್ ಧವನ್ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದರು. ಬೌಂಡರಿ ಗೆರೆಯಲ್ಲಿದ್ದರಿಂದ ಚೆಂಡನ್ನು ಮೈದಾನದೊಳಕ್ಕೆ ಎಸೆದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp