ಮ್ಯಾಚ್ ಫಿಕ್ಸಿಂಗ್ ಮಾಡಿದ್ರಾ ರಿಷಭ್ ಪಂತ್, ಇದಕ್ಕೆ ಬಿಸಿಸಿಐ ಹೇಳಿದ್ದೇನು?

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಆಡಿದ ಮಾತುಗಳೀಗ ವಿವಾದಕ್ಕೆ ಕಾರಣವಾಗಿದೆ.
ರಿಷಬ್ ಪಂತ್
ರಿಷಬ್ ಪಂತ್
ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಆಡಿದ ಮಾತುಗಳೀಗ ವಿವಾದಕ್ಕೆ ಕಾರಣವಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ರಿಷಭ್ ಪಂತ್ ಪಂದ್ಯದ ಎಸೆತವೊಂದರಲ್ಲಿ ಬೌಂಡರಿ ಬರಲಿದೆ ಎನ್ನುವ ಅರ್ಥದಲ್ಲಿ ಆಡಿದ ಮಾತುಗಳು ಸ್ಟಂಪ್ ಮೈಕ್ ನಲ್ಲಿ ದಾಖಲಾಗಿದ್ದು ಇದು ಅಭಿಮಾನಿಗಳಿಗೆ ಪಂದ್ಯದ ಕುರಿತಾಗಿ ಫಿಕ್ಸಿಂಗ್ ಅನುಮಾನ ಮೂಡುವಂತೆ ಮಾಡಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದಕ್ಕೆ ನೆಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಇದಕ್ಕೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಪಂತ್ ಮಾತುಗಳನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ಸಂದೀಪ್ ಲಮಿಚೆನ್ನೆರ ಎಸೆತವನ್ನು ರಾಬಿನ್ ಉತ್ತಪ್ಪ ಎದುರಿಸುವ ಮುನ್ನವೇ ಯೇ ತೋ ಚೌಕಾ ಹೇ(ಇದು ಬೌಂಡರಿ ಆಗಲಿದೆ) ಎಂದು ಹೇಳಿದ್ದರು. ನಿರೀಕ್ಷೆಯಂತೆಯೇ ಉತ್ತಪ್ಪ ಆ ಎಸೆತದಲ್ಲಿ ಕವರ್ಸ್ ನಲ್ಲಿ ಬೌಂಡರಿ ಬಾರಿಸಿದ್ದರು.
ಇದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ವಿಡಿಯೋದಲ್ಲಿ ಕೇಳಿಸಿರುವ ವಾಕ್ಯಕ್ಕೂ ಮುನ್ನ ರಿಷಬ್ ಏನು ಹೇಳಿದರು ಎನ್ನುವುದು ಯಾರಿಗೂ ಗೊತ್ತಿಲ್ಲ. ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಗೆ ಆ ವಿಭಾಗದಲ್ಲಿ ಹೆಚ್ಚಿನ ಫೀಲ್ಡರ್ ಗಳನ್ನು ನಿಲ್ಲಿಸುವಂತೆ ಹೇಳಿದ್ದಾರೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com