ಐಪಿಎಲ್ 2019: ಡೆಲ್ಲಿ ವಿರುದ್ಧ ಪಂಜಾಬ್‌ಗೆ 14 ರನ್ ಗಳ ಭರ್ಜರಿ ಗೆಲುವು

ಸ್ಯಾಮ್ ಕರನ್ ಅವರ ಹ್ಯಾಟ್ರಿಕ್ ವಿಕೆಟ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್‌, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ರನ್‌ಗಳ ಭರ್ಜರಿ ಗೆಲುವು...

Published: 02nd April 2019 12:00 PM  |   Last Updated: 02nd April 2019 12:50 PM   |  A+A-


IPL 2019: Kings XI Punjab beat Delhi Capitals by 14 runs

ಪಂಜಾಬ್‌ ತಂಡ

Posted By : LSB LSB
Source : PTI
ಮೊಹಾಲಿ: ಸ್ಯಾಮ್ ಕರನ್ ಅವರ ಹ್ಯಾಟ್ರಿಕ್ ವಿಕೆಟ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್‌, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಇಂದು ಮೊಹಾಲಿಯಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 166 ರನ್ ಕಲೆ ಹಾಕಿತ್ತು. 

ಗೆಲುವಿಗೆ 167 ರನ್ ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವನ್ನು ನಾಲ್ಕು ಎಸೆತಗಳು ಬಾಕಿ ಇರುವಂತೆಯೇ 152 ರನ್‌ಗಳಿಗೆ ಕಟ್ಟಿಹಾಕುವ ಮೂಲಕ ಪಂಜಾಬ್ ಐಪಿಎಲ್ 12ನೇ ಆವೃತ್ತಿಯಲ್ಲಿ ಮೂರನೇ ಗೆಲುವು ದಾಖಲಿಸಿತು.

ಪಂಜಾಬ್ ಆರಂಭದಲ್ಲೇ ಕೆ ಎಲ್ ರಾಹುಲ್(15)ವಿಕೆಟ್ ಕಳೆದುಕೊಂಡಿತು. ಸ್ಯಾಮ್ ಕರನ್ ಆರ್ಭಟ 20 ರನ್​ಗೆ ನಿಂತರೆ, ಬರವಸೆಯ ಆಟಗಾರ ಮಯಾಂಕ್ ಅಗರ್ವಾಲ್ 6 ರನ್ ಗಳಿಸಿರುವಾಗ ಅನಗತ್ಯ ರನ್ ಕಲೆಹಾಕಲೋಗಿ ರನೌಟ್​ಗೆ ಬಲಿಯಾದರು.

144ಕ್ಕೆ 4 ವಿಕೆಟ್‌ ಕಳೆದುಕೊಂಡು ಜಯದ ಸನಿಹದಲ್ಲಿದ್ದ ಡೆಲ್ಲಿ, ಅಂತಿಮ 8 ರನ್‌ ಕಲೆಹಾಕುವಷ್ಟರಲ್ಲಿ ನಾಟಕೀಯವಾಗಿ ಆರು ವಿಕೆಟ್‌ ಕಳೆದುಕೊಂಡು ಸೋಲಿಗೊಳಗಾಯಿತು. ಕರನ್ ಅಲ್ಲದೆ, ಅಶ್ವಿನ್‌ ಮತ್ತು ಮೊಹಮ್ಮದ್‌ ಶಮಿ ತಲಾ 2 ವಿಕೆಟ್‌ ಪಡೆದರು.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp