'ಲೇಟ್‌ ನೈಟ್‌ ಔಟ್‌': ದುಬೈನಲ್ಲಿ ಪಾಕ್‌ ಕ್ರಿಕೆಟಿಗ ಉಮರ್‌ ಅಕ್ಮಲ್‌ಗೆ ದಂಡ

ಸತತ ಎರಡು ವರ್ಷಗಳ ಬಳಿಕ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಮರಳಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಉಮರ್‌ ಅಕ್ಮಲ್‌ ಅವರು...

Published: 02nd April 2019 12:00 PM  |   Last Updated: 02nd April 2019 01:23 AM   |  A+A-


Umar Akmal

ಉಮರ್‌ ಅಕ್ಮಲ್‌

Posted By : PSN PSN
Source : UNI
ಸತತ ಎರಡು ವರ್ಷಗಳ ಬಳಿಕ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಮರಳಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಉಮರ್‌ ಅಕ್ಮಲ್‌ ಅವರು ತಡರಾತ್ರಿ ಸಂಗೀತ ಕಾರ್ಯಕ್ರಮಕ್ಕೆ ತೆರಳುವ ಮೂಲಕ ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ.

ಕಳೆದ ಭಾನುವಾರ ದುಬೈನಲ್ಲಿ ನಡೆದಿದ್ದ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಐದನೇ ಹಾಗೂ ಅಂತಿಮ ಪಂದ್ಯದ ಬಳಿಕ ತಡರಾತ್ರಿ ಅಕ್ಮಲ್‌, ಖ್ಯಾತ ಸಂಗೀತಗಾರ ಎಕೋನ್‌ ಅವರ ಹಿಪ್‌-ಹಾಪ್‌ ಸಂಗೀತ ಕಾರ್ಯಕ್ರಮಕ್ಕೆತೆರಳಿದ್ದರು. ಇದು ತಂಡದ ನಿಯಮ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದೆ. ಹಾಗಾಗಿ, ಅವರಿಗೆ ಪಂದ್ಯದ ಶೇ. 20 ರ ಸಂಭಾವನೆ ದಂಡವನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಸೋಮವಾರ ವಿಧಿಸಿದೆ.

ಸಂಗೀತ ಕಾರ್ಯಕ್ರಮದ ವಿಡಿಯೋವೊಂದನ್ನು ಅಕ್ಮಲ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದರು. ಇದನ್ನು ಗಮನಿಸಿದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ದಂಡ ವಿಧಿಸಿದೆ. ಇದಾದ ಬಳಿಕ ಅಕ್ಮಲ್‌, ಅನುಮತಿ ಇಲ್ಲದೆ ಸಂಗೀತ ಕಾರ್ಯಕ್ರಮಕ್ಕೆ ತೆರಳಿದ್ದರಿಂದ ರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಬಳಿ ಕ್ಷಮೆ ಕೋರಿದ್ದಾರೆ.

"ಉಮರ್‌ ಅಕ್ಮಲ್‌ ತಾವು ಎಸಗಿದ ತಪ್ಪನ್ನು ಅರಿತುಕೊಂಡು ಕ್ಷಮೆ ಕೋರಿರುವುದು ಸಂತಸ ಉಂಟುಮಾಡಿದೆ. ರಾಷ್ಟ್ರೀಯ ತಂಡದಲ್ಲಿದ್ದಾಗ ಯಾವುದೇ ಆಟಗಾರ ವೃತ್ತಿಪರವಲ್ಲದ ವರ್ತನೆ ಕಂಡುಬಂದಲ್ಲಿ ಅದನ್ನು ಮಂಡಳಿ ಕಡೆಗಣಿಸುವಂತಿಲ್ಲ." ಎಂದು ಪಿಸಿಬಿ ವ್ಯವಸ್ಥಾಪಕ ನಿರ್ದೇಶಕ ವಾಸೀಂ ಖಾನ್‌ ತಿಳಿಸಿದ್ದಾರೆ.

ತಂಡದ ಆಟಗಾರರಿಂದ ಉನ್ನತ ಮಟ್ಟದ ವೃತ್ತಿಪರತೆ ಮತ್ತು ಬದ್ಧತೆಯನ್ನು ಪಿಸಿಬಿ ನಿರೀಕ್ಷಿಸುತ್ತದೆ ಹಾಗೂ ಮತ್ತೊಮ್ಮೆ ಇಂಥ ಘಟನೆಗಳು ಮರುಕಳಿಸದಂತೆ ತಡೆಯುವ ಸಲುವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಕಳೆದ 2017ರ ಐಸಿಸಿ ಚಾಂಪಿಯನ್‌ಶಿಪ್‌ ಗೂ ಒಂದು ವಾರದ ಮುನ್ನ ಫಿಟ್ನೆಸ್‌ ಟೆಸ್ಟ್‌ನಲ್ಲಿ ವಿಫಲರಾದ ಉಮರ್‌ ಅಕ್ಮಲ್‌, ಪಾಕಿಸ್ತಾನ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದರು. ಅಂದಿನಿಂದ ಇಲ್ಲಿಯವರೆಗೂ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿರಲಿಲ್ಲ. ಆದರೆ, ಇತ್ತೀಚೆಗೆ ಮುಕ್ತಾಯವಾಗಿದ್ದ ಪಿಎಸ್‌ಎಲ್‌ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು ಹಾಗೂ ಮುಂಬರುವ ಐಸಿಸಿ ವಿಶ್ವಕಪ್‌ ಪಾಕ್‌ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ ಅಗತ್ಯವಿರುವ ಹಿನ್ನೆಲೆಯಲ್ಲಿ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿತ್ತು.

ಆಸಿಸ್‌ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ 0-5 ಅಂತರದಲ್ಲಿ ಸೋಲು ಅನುಭವಿಸಿತ್ತು.
Stay up to date on all the latest ಕ್ರಿಕೆಟ್ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp