ಪುರುಷ, ಮಹಿಳಾ ಕ್ರಿಕೆಟ್ ಮಿಕ್ಸಡ್ ಟಿ20 ಲೀಗ್ ಗೆ ಅಭಿಮಾನಿಗಳ ಬೆಂಬಲ ಕೋರಿದ ಬಿಸಿಸಿಐ!

ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು ಎಂಬಂತೆ ಪುರುಷ ಕ್ರಿಕೆಟಿಗರು ಮತ್ತು ಮಹಿಳಾ ಕ್ರಿಕೆಟ್ ಆಟಗಾರ್ತಿಯರನ್ನೊಳಗೊಂಡ ಟಿ20 ಲೀಗ್ ಆಯೋಜನೆಗೆ ಬಿಸಿಸಿಐ ಮುಂದಾಗಿದ್ದು, ಇದಕ್ಕೆ ಅಭಿಮಾನಿಗಳ ಬೆಂಬಲದ ಅಗತ್ಯವಿದೆ.
ಮಹಿಳಾ-ಪುರುಷ ಕ್ರಿಕೆಟ್ ಟಿ20 ಲೀಗ್
ಮಹಿಳಾ-ಪುರುಷ ಕ್ರಿಕೆಟ್ ಟಿ20 ಲೀಗ್
ಚೆನ್ನೈ: ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು ಎಂಬಂತೆ ಪುರುಷ ಕ್ರಿಕೆಟಿಗರು ಮತ್ತು ಮಹಿಳಾ ಕ್ರಿಕೆಟ್ ಆಟಗಾರ್ತಿಯರನ್ನೊಳಗೊಂಡ ಟಿ20 ಲೀಗ್ ಆಯೋಜನೆಗೆ ಬಿಸಿಸಿಐ ಮುಂದಾಗಿದ್ದು, ಇದಕ್ಕೆ ಅಭಿಮಾನಿಗಳ ಬೆಂಬಲದ ಅಗತ್ಯವಿದೆ.
ಹೌದು.. ಬಿಸಿಸಿಐನ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಈಗಾಗಲೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕಿಚ್ಚು ಹೊತ್ತಿಸಿದ್ದು, ಟೂರ್ನಿಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲದ ನಡುವೆಯೇ ಬಿಸಿಸಿಐ ಮತ್ತೊಂದು ಮಹತ್ವದ ಐತಿಹಾಸಿಕ ಟೂರ್ನಿ ಆಯೋಜನೆಗೆ ಸಿದ್ಧತೆ ನಡೆಸುತ್ತಿದೆ. ಆದರೆ ಈ ಟೂರ್ನಿಗೆ ಕ್ರಿಕೆಟ್ ಅಭಿಮಾನಿಗಳ ಬೆಂಬಲ ಬೇಕಿದೆ.
ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪುರುಷ ಕ್ರಿಕೆಟಿಗರು ಮತ್ತು ಮಹಿಳಾ ಕ್ರಿಕೆಟ್ ಆಟಗಾರ್ತಿಯರನ್ನೊಳಗೊಂಡ ಟಿ20 ಲೀಗ್ ಆಯೋಜನೆಗೆ ಬಿಸಿಸಿಐ ಮುಂದಾಗಿದೆ ಈ ಕುರಿತು ಅಭಿಮಾನಿಗಳ ಸಲಹೆ ಕೇಳುತ್ತಿದೆ. ಈ ಕುರಿತ ಪ್ರಮೋಷನಲ್ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಟೀಂ ಇಂಡಿಯಾ ಮಹಿಳೆಯರ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್, ಮಹಿಳಾ ಟಿ20 ತಂಡ ನಾಯಕಿ ಹರ್ಮನ್ ಪ್ರೀತ್ ಕೌರ್, ಮಹಿಳಾ ತಂಡದ ಮತ್ತೋರ್ವ ಪ್ರಮುಖ ಆಟಗಾರ್ತಿ ವೇದಾ ಕೃಷ್ಣ ಮೂರ್ತಿ ಒಬ್ಬರಿಗೊಬ್ಬರು ಸವಾಲೆಸೆದುಕೊಳ್ಳುವ ವಿಡಿಯೋ ಇದಾಗಿದೆ, ಅಲ್ಲದೆ ವಿಡಿಯೋ ಕೊನೆಯಲ್ಲಿ ಎಲ್ಲರೂ #ಚಾಲೆಂಜ್_ಅಕ್ಸೆಪ್ಟೆಟ್ #ChallengeAccepted ಎಂದು ಹೇಳುವ ಮೂಲಕ ವಿನೂತನ ಟೂರ್ನಿಗೆ ನಾವು ಸಿದ್ಧ ಎಂದು ಹೇಳಿದ್ದಾರೆ.
ಮತ್ತೊಂದು ಮಹತ್ವದ ಅಂಶವೆಂದರೆ ಮಹಿಳಾ ಮತ್ತು ಪುರುಷ ಆಟಗಾರರ ಮಿಕ್ಸೆಡ್ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೆಂಬಲ ನೀಡಿದ್ದು, ತಾನೂ ಕೂಡ ಈ ಮಹ್ವದ ಟೂರ್ನಿಯ ಬೆಂಬಲಕ್ಕೆ ನಿಂತಿದ್ದು, ನೀವು ಕೂಡ ಬೆಂಬಲ ನೀಡಿ ಎಂದು ಹೇಳಿದೆ.
ಇನ್ನು ಬಿಸಿಸಿಐ ಈ ಕನಸಿನ ಟೂರ್ನಿ ಆರಂಭಕ್ಕೆ ಕ್ರಿಕೆಟ್ ಅಭಿಮಾನಿಗಳ ಬೆಂಬಲದ ಅಗತ್ಯವಿದ್ದು, ಇದಕ್ಕಾಗಿ https://www.liveinstyle.com/challengeaccepted ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ನಿಮ್ಮ ಹೆಸರು, ಇ-ಮೇಲ್ ವಿಳಾಸ ಮತ್ತು ನಿಮ್ಮ ರಾಜ್ಯವನ್ನು ಆಯ್ಕೆ ಮಾಡುವ ಮೂಲಕ ಈ ಟೂರ್ನಿಗೆ ಬೆಂಬಲ ನೀಡಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com