ಚಾಲೆಂಜ್ ಗಾಗಿ ವೇಷ ಬದಲಿಸಿ ಚೆನ್ನೈ ಬೀದಿಗಳಲ್ಲಿ ಅಡ್ಡಾಡಿದ ಕ್ರಿಕೆಟಿಗ ಹೇಡನ್: ಫೋಟೋ ವೈರಲ್
ಚಾಲೆಂಜ್ ಗಾಗಿ ವೇಷ ಬದಲಿಸಿ ಚೆನ್ನೈ ಬೀದಿಗಳಲ್ಲಿ ಅಡ್ಡಾಡಿದ ಕ್ರಿಕೆಟಿಗ ಹೇಡನ್: ಫೋಟೋ ವೈರಲ್

ಚಾಲೆಂಜ್ ಗಾಗಿ ವೇಷ ಬದಲಿಸಿ ಚೆನ್ನೈ ಬೀದಿಗಳಲ್ಲಿ ಅಡ್ಡಾಡಿದ ಕ್ರಿಕೆಟಿಗ ಹೇಡನ್: ಫೋಟೋ ವೈರಲ್

ಆಸ್ಟ್ರೇಲಿಯಾದ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಚೆನ್ನೈ ನ ಬೀದಿಗಳಲ್ಲಿ ವೇಷ ಬದಲಿಸಿಕೊಂಡು ಲುಂಗಿ ಉಟ್ಟು ಅಡ್ಡಾಡಿರುವ ಫೋಟೋ ಅಭಿಮಾನಿಗಳ ಗಮನ ಸೆಳೆದಿದೆ.
ನವದೆಹಲಿ: ಆಸ್ಟ್ರೇಲಿಯಾದ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಚೆನ್ನೈ ನ ಬೀದಿಗಳಲ್ಲಿ ವೇಷ ಬದಲಿಸಿಕೊಂಡು ಲುಂಗಿ ಉಟ್ಟು ಅಡ್ಡಾಡಿರುವ ಫೋಟೋ ಅಭಿಮಾನಿಗಳ ಗಮನ ಸೆಳೆದಿದೆ. 
ಲುಂಗಿ ಉಟ್ಟು, ಗಡ್ಡ ಧರಿಸಿರುವ ವೇಷದಲ್ಲಿ ಮ್ಯಾಥ್ಯೂ ಹೇಡನ್ ಚೆನ್ನೈ ನ ಟಿ.ನಗರದಲ್ಲಿ ಶಾಪಿಂಗ್ ಮಾಡುತ್ತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ವೇಷ ಬದಲಿಸಿಕೊಂಡು ಶಾಪಿಂಗ್ ಮಾಡಿದ್ದಕ್ಕೆ ಮ್ಯಾಥ್ಯೂ ಹೇಡನ್ ಕಾರಣವನ್ನೂ ಬಹಿರಂಗಪಡಿಸಿದ್ದು, ಚಾಲೆಂಜ್ ಗಾಗಿ ಹೀಗೆ ಮಾಡಿದ್ದಾಗಿ ಹೇಳಿದ್ದಾರೆ. 
ರಾಜಸ್ಥಾನ್ ರಾಯಲ್ಸ್ ನ ಬ್ರಾಂಡ್ ಅಂಬಾಸಿಡರ್ ಆಗಿರುವ ಆಸ್ಟ್ರೇಲಿಯಾದ ಮತ್ತೋರ್ವ ಕ್ರಿಕೆಟಿಗ ಶೇನ್ ವಾರ್ನ್ ಚಾಲೆಂಜ್ ಮಾಡಿದ್ದರು ಎಂದು ಹೇಡನ್ ಹೇಳಿದ್ದಾರೆ.  1,000 ರೂಗಳಿಗಿಂತ ಹೆಚ್ಚು ಖರ್ಚು ಮಾಡದೇ ಶಾಪಿಂಗ್ ಮಾಡಬೇಕೆಂದು ಶೇನ್ ವಾರ್ನ್ ಚಾಲೆಂಜ್ ಹಾಕಿದ್ದರು. ಆದ್ದರಿಂದಲೇ ನಾನು ಲುಂಗಿ, ಶರ್ಟ್, ರಜಿನಿ ಕನ್ನಡಕ ಹಾಕಿ ಮಾರ್ಕೆಟ್ ಗೆ ಶಾಪಿಂಗ್ ಮಾಡಲು ತೆರಳಿದ್ದೆ ಎಂದು ಹೇಡನ್ ಬಹಿರಂಗಪಡಿಸಿದ್ದಾರೆ. 
ವೇಷ ಬದಲಿಸಿಕೊಂಡಿದ್ದರ ಬಗ್ಗೆ ಮಾತನಾಡಿರುವ ಹೇಡನ್ ಟಿ.ನಗರ್ ನಲ್ಲಿ ವೇಷ ಬದಲಿಸಿಕೊಂಡಿದ್ದು ಕೆಲಸ ಮಾಡಿತ್ತು ಎಂದು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com