12 ಗಂಟೆಗಳಲ್ಲಿ 2 ದೇಶಗಳಲ್ಲಿ 2 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದ ಮಲಿಂಗಾ!

ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗಾ ಕ್ರಿಕೆಟ್ ಲೋಕದಲ್ಲಿ ಅತ್ಯಪರೂಪದ ದಾಖಲೆ ನಿರ್ಮಾಣ ಮಾಡಿದ್ದು, ಕೇವಲ 12 ಗಂಟೆಗಳ ಅವಧಿಯಲ್ಲಿ 2 ದೇಶಗಳಲ್ಲಿ 2 ಕ್ರಿಕೆಟ್​ ಪಂದ್ಯಗಳನ್ನಾಡಿ 10 ವಿಕೆಟ್​ ಪಡೆಯುವ ಮೂಲಕ ಎರಡೂ ತಂಡಗಳಿಗೆ ಗೆಲುವು ದಕ್ಕಿಸಿಕೊಟ್ಟಿದ್ದಾರೆ.
ಮಲಿಂಗಾ ಬೌಲಿಂಗ್
ಮಲಿಂಗಾ ಬೌಲಿಂಗ್
ಮುಂಬೈ: ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗಾ ಕ್ರಿಕೆಟ್ ಲೋಕದಲ್ಲಿ ಅತ್ಯಪರೂಪದ ದಾಖಲೆ ನಿರ್ಮಾಣ ಮಾಡಿದ್ದು, ಕೇವಲ 12 ಗಂಟೆಗಳ ಅವಧಿಯಲ್ಲಿ 2 ದೇಶಗಳಲ್ಲಿ 2 ಕ್ರಿಕೆಟ್​ ಪಂದ್ಯಗಳನ್ನಾಡಿ 10 ವಿಕೆಟ್​ ಪಡೆಯುವ ಮೂಲಕ ಎರಡೂ ತಂಡಗಳಿಗೆ ಗೆಲುವು ದಕ್ಕಿಸಿಕೊಟ್ಟಿದ್ದಾರೆ.
ಹೌದು.. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಪರ ಆಡಿದ್ದ ಮಲಿಂಗಾ 34 ರನ್​ ನೀಡಿ 3 ವಿಕೆಟ್​ ಪಡೆದಿದ್ದರು. ಈ ಪಂದ್ಯವನ್ನು ಮುಂಬೈ ಇಂಡಿಯನ್ಸ್​ ತಂಡ ಗೆದ್ದುಕೊಂಡಿತ್ತು. ಮಧ್ಯರಾತ್ರಿ ವೇಳೆಗೆ ಐಪಿಎಲ್​ ಪಂದ್ಯ ಮುಗಿದಿತ್ತು. 
ಆದರೂ ಮಲಿಂಗಾ ಗುರುವಾರ ಮುಂಜಾನೆ ಮುಂಬೈನಿಂದ ಹೊರಟು ಕ್ಯಾಂಡಿ ತಲುಪಿದ್ದರು. ಅಲ್ಲಿ ಅವರು ಶ್ರೀಲಂಕಾ ದೇಶೀಯ ಕ್ರಿಕೆಟ್ ನ ಲಿಸ್ಟ್​ ಎ ಪಂದ್ಯದಲ್ಲಿ ಆಡಿದರು. ಈ ಪಂದ್ಯದಲ್ಲಿ ಗಾಲೆ ತಂಡವನ್ನು ಪ್ರತಿನಿಧಿಸಿದ್ದ ಮಲಿಂಗಾ 49 ರನ್​ಗೆ 7 ವಿಕೆಟ್​ ಪಡೆದು ಜೀವನ ಶ್ರೇಷ್ಠ ಬೌಲಿಂಗ್​ ನಿರ್ವಹಣೆಯೊಂದಿಗೆ ಕ್ಯಾಂಡಿ ತಂಡದ ವಿರುದ್ಧ 156 ರನ್​ಗಳ ಗೆಲುವು ದಕ್ಕಿಸಿಕೊಟ್ಟರು.
ಶ್ರೀಲಂಕಾ ಏಕದಿನ ತಂಡದ ನಾಯಕ ಮಲಿಂಗಾ ಅವರಿಗೆ ಏಪ್ರಿಲ್​ ತಿಂಗಳಿನಲ್ಲಿ ಐಪಿಎಲ್ ನಲ್ಲಿ ಪಾಲ್ಗೊಳ್ಳಲು ಶ್ರೀಲಂಕಾ ಕ್ರಿಕೆಟ್​ ಮಂಡಳಿ ಅನುಮತಿ ನೀಡಿತ್ತು. ಆದರೆ ವಿಶ್ವಕಪ್ ಗೆ ಸಿದ್ಧವಾಗುವ ನಿಟ್ಟಿನಲ್ಲಿ ಮಲಿಂಗಾ ದೇಶೀಯ ಟೂರ್ನಿಗಳಲ್ಲೂ ಆಡಲು ನಿರ್ಧರಿಸಿದ್ದಾರೆ. ಐಪಿಎಲ್​ ಪಂದ್ಯಗಳ ನಡುವೆ ಬಿಡುವು ಮಾಡಿಕೊಂಡು ಶ್ರೀಲಂಕಾದಲ್ಲೂ ಪ್ರಾಂತೀಯ ತಂಡಗಳ ಪರ ಆಡುತ್ತಿದ್ದಾರೆ.
ಈ ಬಗ್ಗೆ ಮುಂಬೈ ಇಂಡಿಯನ್ಸ್ ತಂಡ ಕೂಡ ತನ್ನ ಟ್ವಿಟರ್ ಖಾತೆಯಲ್ಲಿ ಹೆಮ್ಮೆಯಿಂದ ಬರೆದುಕೊಂಡಿದ್ದು, ಚಾಂಪಿಯನ್ ಮಲಿಂಗಾ ತಂಡ ಸೇರಿಕೊಳ್ಳುವುದನ್ನು ಎದುರುನೋಡುತ್ತಿದ್ದೇವೆ ಎಂದು ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com