ಆರ್ ಸಿಬಿಗೆ ತವರಿನಲ್ಲೇ ಮತ್ತೊಂದು ಮುಖಭಂಗ, ಸೋಲಿನಲ್ಲೂ ಕೊಹ್ಲಿ ಪಡೆಯ ಹೀನಾಯ ದಾಖಲೆ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂದು ಮತ್ತೊಂದು ಸೋಲು ಎದುರಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಪಡೆ 4 ವಿಕೆಟ್ ಗಳ ಸೋಲು ಕಂಡಿದೆ. ಆ ಮೂಲಕ ಟೂರ್ನಿಯಲ್ಲಿ ಸತತ 6 ಸೋಲು ಕಂಡು ಕೊನೆಯ ಸ್ಥಾನದಲ್ಲಿ ಮುಂದುವರೆದಿದೆ.

Published: 07th April 2019 12:00 PM  |   Last Updated: 07th April 2019 08:31 AM   |  A+A-


Most consecutive losses at the start of a IPL season: RCB Equals Delhi

ಸಂಗ್ರಹ ಚಿತ್ರ

Posted By : SVN SVN
Source : Online Desk
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂದು ಮತ್ತೊಂದು ಸೋಲು ಎದುರಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಪಡೆ 4 ವಿಕೆಟ್  ಗಳ ಸೋಲು ಕಂಡಿದೆ. ಆ ಮೂಲಕ ಟೂರ್ನಿಯಲ್ಲಿ ಸತತ 6 ಸೋಲು ಕಂಡು ಕೊನೆಯ ಸ್ಥಾನದಲ್ಲಿ ಮುಂದುವರೆದಿದೆ.

ಇನ್ನು ಹಾಲಿ ಟೂರ್ನಿಯಲ್ಲಿ ಗೆಲುವನ್ನೇ ಕಾಣದ ಆರ್ ಸಿಬಿ ಸೋಲಿನಲ್ಲೂ ಕಳಪೆ ದಾಖಲೆ ಬರೆದಿದ್ದು, ಟೂರ್ನಿ ಆರಂಭದಲ್ಲೇ ಸತತ 6 ಸೋಲು ಕಂಡ 2ನೇ ತಂಡ ಎಂಬ ಕುಖ್ಯಾತಿಗೆ ಭಾಜನವಾಗಿದೆ. ಆ ಮೂಲಕ ಇದೇ ರೀತಿಯ ಕಳಪೆ ದಾಖಲೆ ಬರೆದಿದ್ದ ದೆಹಲಿ ತಂಡದ ದಾಖಲೆಯನ್ನು ಆರ್ ಸಿಬಿ ಸಮಗಟ್ಟಿದೆ. 2013ರಲ್ಲಿ ಇದೇ ದೆಹಲಿ ತಂಡ ಸತತ ಆರು ಸೋಲು ಕಂಡು ಈ ದಾಖಲೆ ಬರೆದಿತ್ತು. ಇದೀಗ ಕೊಹ್ಲಿ ಪಡೆ ಈ ದಾಖಲೆಯಲ್ಲಿ ಸರಿಗಟ್ಟಿದೆ.

ದೆಹಲಿ ಮತ್ತು ಆರ್ ಸಿಬಿಯನ್ನು ಹೊರತು ಪಡಿಸಿದರೆ, 2012ರಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡ ಸತತ ಐದು ಸೋಲು ಕಂಡಿತ್ತು. ಇದಾದ ಬಳಿಕ 2014 ಮತ್ತು 2015ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೂಡ 2 ಬಾರಿ 5 ಸೋಲುಗಳನ್ನು ಕಂಡಿತ್ತು. ಇದೇ ತಂಡ 2008ರಲ್ಲಿ ಸತತ 4 ಸೋಲು ಕಂಡಿತ್ತು. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp