ಭಾರತ ಹಾಕಿ ತಂಡದ ನೂತನ ಕೋಚ್ ಆಗಿ ಗ್ರಹಾಂ ರೀಡ್ ನೇಮಕ

ಆಸ್ಟ್ರೇಲಿಯಾದ ಮಾಜಿ ಸ್ಟಾರ್ ಆಟಗಾರ ಗ್ರಹಾಂ ರೀಡ್ ಅವರನ್ನು ಹಾಕಿ ಇಂಡಿಯಾ ಸೋಮವಾರ ಮುಖ್ಯ ಕೋಚ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಸ್ಟಾರ್ ಆಟಗಾರ ಗ್ರಹಾಂ ರೀಡ್ ಅವರನ್ನು ಹಾಕಿ ಇಂಡಿಯಾ ಸೋಮವಾರ ಮುಖ್ಯ ಕೋಚ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. 
ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಇವರು ಶೀಘ್ರ ಸೇರಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ರಕ್ಷಣಾ ಆಟಗಾರ ಗ್ರಹಾಂ ರೀಡ್ ಅವರು, ತಂಡ 1992ರಲ್ಲಿ ಬಾರ್ಸಿಲೋನಾದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ತಂಡದ ಸದಸ್ಯರಾಗಿದ್ದರು. ಇವರ ನೇತೃತ್ವದಲ್ಲೇ ಭಾರತ ತಂಡ ಭುವನೇಶ್ವರ್ ದಲ್ಲಿ ಜೂನ್ 6 ರಿಂದ 16 ರ ವರೆಗೂ ನಡೆಯಲಿರುವ ಎಫ್ಐಎಚ್ ಪುರುಷರ ಸೀರಿಸ್ ಫೈನಲ್ ನಲ್ಲಿ ಮುನ್ನಡೆಯಲಿದೆ.
ವಿಶ್ವಕಪ್ ಕ್ವಾರ್ಟರ್ ಫೈನಲ್ಸ್ ನಲ್ಲಿ ಭಾರತ ಹಾಕಿ ತಂಡ ಸೋಲು ಕಂಡಿತ್ತು. ಪರಿಣಾಮ ಪುರುಷರ ತಂಡದ ಕೋಚ್ ಹರೇಂದ್ರ ಸಿಂಗ್ ಅವರ ಸೇವೆಯನ್ನು ಮುಂದುವರೆಸಲು ಹಾಕಿ ಇಂಡಿಯಾ ಒಪ್ಪದೇ, ಅವರನ್ನು ಜೂನಿಯರ್ ಹಾಕಿ ತಂಡದ ಕೋಚ್ ಸ್ಥಾನಕ್ಕೆ ನೇಮಿಸಲಾಗಿತ್ತು. ಇವರಿಂದ ತೆರವಾಗಿದ್ದ ಸ್ಥಾನಕ್ಕೆ ಕೋಚ್ ಹುಡುಕಾಟ ನಡೆದಿತ್ತು. ಅಂತಿಮವಾಗಿ ಗ್ರಹಾಂ ರೀಡ್  ಅವರನ್ನು ನೇಮಕ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com