ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಐಪಿಎಲ್ 2019:​ ಪ್ಲೇ-ಆಫ್​ ಹಾಗೂ ಫೈನಲ್ ​​ನಿಂದ ಚೆನ್ನೈ ಹೊರಕ್ಕೆ, ಬೆಂಗಳೂರಿಗೆ ಅವಕಾಶ ಸಾಧ್ಯತೆ!

ಮಹತ್ವದ ಬೆಳವಣಿಗೆಯಲ್ಲಿ ಹಾಲಿ ಐಪಿಎಲ್ ಟೂರ್ನಿ 2019ರ ಪ್ಲೇಆಫ್ ಮತ್ತು ಫೈನಲ್ ನಿಂದ ಚೈನ್ನೈ ಹೊರ ಬೀಳುವ ಸಾದ್ಯತೆ ಇದ್ದು, ಬೆಂಗಳೂರಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ.
ಚೆನ್ನೈ: ಮಹತ್ವದ ಬೆಳವಣಿಗೆಯಲ್ಲಿ ಹಾಲಿ ಐಪಿಎಲ್ ಟೂರ್ನಿ 2019ರ ಪ್ಲೇಆಫ್ ಮತ್ತು ಫೈನಲ್ ನಿಂದ ಚೈನ್ನೈ ಹೊರ ಬೀಳುವ ಸಾದ್ಯತೆ ಇದ್ದು, ಬೆಂಗಳೂರಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ.
ಅರೇ ಇದೇನಿದು... ಹಾಲಿ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ಪ್ರವೇಶಿಸುವ ಹೊಸ್ತಿಲಲ್ಲಿದ್ದು, ಸತತ 6 ಪಂದ್ಯಗಳನ್ನು ಸೋತು ಟೂರ್ನಿಯಿಂದಲೇ ಹೊರ ಬೀಳುವ ಹಂತದಲ್ಲಿರುವ ಬೆಂಗಳೂರು ತಂಡ ಹೇಗೆ ಪ್ಲೇ ಆಫ್ ಮತ್ತು ಪೈನಲ್ ಗೇರುತ್ತದೆ ಎಂದು ದಂಗಾಗಬೇಡಿ. ಇದು ತಂಡಗಳಿಗೆ ಸಂಬಂಧಿಸಿದ ವಿಚಾರವಲ್ಲ ಬದಲಿಗೆ ಕ್ರೀಡಾಂಗಣಗಳಿಗೆ ಸಂಬಂಧಿಸಿದ ಸುದ್ದಿ...
ಕಳೆದ ಬಾರಿ ಚೆನ್ನೈ ತಂಡ ಐಪಿಎಲ್​ನಲ್ಲಿ ಗೆದ್ದಿದ್ದರಿಂದ ಎರಡು ಪ್ಲೇ-ಆಫ್​, ಎಲಿಮಿನೇಟರ್​ ಹಾಗೂ ಫೈನಲ್​ ಪಂದ್ಯವನ್ನು ಹೋಸ್ಟ್​ ಮಾಡುವ ಅವಕಾಶ ಹೊಂದಿತ್ತು. ಆದರೆ, ಚೆನ್ನೈ ಸ್ಟೇಡಿಯಂ ವ್ಯಾಜ್ಯ ಬಗೆಹರಿಯದ ಕಾರಣ, ಈ ಪಂದ್ಯಗಳು ಅಲ್ಲಿ ನಡೆಯುವುದು ಬಹುತೇಕ ಅನುಮಾನ ಎನ್ನಲಾಗಿದೆ. ಹಾಗಾಗಿ, ಎಲಿಮಿನೇಟರ್​ ಹಾಗೂ ಫೈನಲ್ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಏನಿದು ಗೊಂದಲ?
ಚೆನ್ನೈನ ಚೆಪಾಕ್​ ಸ್ಟೇಡಿಯಂನಲ್ಲಿರುವ ಐ,ಜೆ ಹಾಗೂ ಕೆ ಸ್ಟ್ಯಾಂಡ್ ಗಳು ಕಾರ್ಪೋರೇಷನ್​ ನಿಯಮಗಳನ್ನು ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪ ಇದೆ. ಈ ಪ್ರಕರಣ ಕುರಿತು ಹೈಕೋರ್ಟ್ ​​ನಲ್ಲಿ ವಿಚಾರಣೆ ನಡೆಯುತ್ತಿದೆ. ವ್ಯಾಜ್ಯ ಬಗೆಹರಿಯುವವರೆಗೆ ಈ ಸ್ಟ್ಯಾಂಡ್ ಗಳನ್ನು ಬಳಕೆ ಮಾಡದಂತೆ 2011ರಲ್ಲಿ ಮದ್ರಾಸ್​ ಹೈಕೋರ್ಟ್​ ಆದೇಶ ಹೊರಡಿಸಿತ್ತು. ಈ ಮೂರು ಸ್ಟ್ಯಾಂಡ್ ಗಳಲ್ಲಿ 12 ಸಾವಿರ ಜನರು ಕುಳಿತುಕೊಳ್ಳಬಹುದು. ಆದರೆ ಈ ವ್ಯಾಜ್ಯ ಇನ್ನೂ ಬಗೆಹರಿದಿಲ್ಲ. ಈ ಪ್ರಕರಣ ಇತ್ಯರ್ಥಗೊಂಡ ನಂತರವೇ ಈ ಕ್ರೀಡಾಂಗಣದಲ್ಲಿ ಪಂದ್ಯ​ ನಡೆಸಲು ನಿರ್ಧರಿಸಲಾಗಿದೆ.
ಬಿಸಿಸಿಐ ನಿಯಮಗಳ ಪ್ರಕಾರ ಕಳೆದ ವರ್ಷ ಐಪಿಎಲ್​​ನಲ್ಲಿ ಚಾಂಪಿಯನ್ ಶಿಪ್​ ಎತ್ತಿ ಹಿಡಿದ ಚೆನ್ನೈ ಎಲಿಮಿನೇಟರ್​ ಹಾಗೂ ಫೈನಲ್​ ಹೋಸ್ಟ್​ ಮಾಡುವ ಹಕ್ಕನ್ನು ಹೊಂದಿದೆ. ಆದರೆ, ಈಗ ಬೆಂಗಳೂರಿಗೆ ಈ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕಮಿಟಿ ಆಫ್​ ಅಡ್ಮಿನಿಸ್ಟ್ರೇಟರ್​ ಮುಖ್ಯಸ್ಥ ವಿನೋದ್​ ರೈ  ಅವರು, 'ನಾವು ಈ ವಿಚಾರದ ಕುರಿತು ತಮಿಳುನಾಡು ಕ್ರಿಕೆಟ್​ ಮಂಡಳಿಯ ಜೊತೆ ಚರ್ಚೆ ನಡೆಸುತ್ತೇವೆ. ಎಲಿಮಿನೇಟರ್​ ಹಾಗೂ ಫೈನಲ್​ ಪಂದ್ಯಗಳಲ್ಲಿ ಇಷ್ಟೊಂದು ಕುರ್ಚಿಗಳು ಖಾಲಿ ಇದ್ದರೆ ಆಭಾಸ ಎನಿಸುತ್ತದೆ. ಒಂದೊಮ್ಮೆ ಸಮಸ್ಯೆ ಬಗೆಹರಿದರೆ ಇಲ್ಲಿಯೇ ಪಂದ್ಯ ಏರ್ಪಡಿಸುತ್ತೇವೆ. ಇಲ್ಲವಾದರೆ, ಬೆಂಗಳೂರಿಗೆ ಎಲಿಮಿನೇಟರ್ ಹಾಗೂ ಫೈನಲ್​ ಪಂದ್ಯವನ್ನು ಸ್ಥಳಾಂತರ ಮಾಡುತ್ತೇವೆ' ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com