ಐಪಿಎಲ್ 2019: ಕೆಕೆಆರ್ ವಿರುದ್ಧ ಸಿಎಸ್‌ಕೆಗೆ 7 ವಿಕೆಟ್ ಭರ್ಜರಿ ಗೆಲುವು

ಐಪಿಎಲ್ 2019 ಟೂರ್ನಿ ನಿಮಿತ್ತ ಇಂದು ನಡೆದ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ಚೆನ್ನೈ ತಂಡ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.

Published: 09th April 2019 12:00 PM  |   Last Updated: 10th April 2019 12:33 PM   |  A+A-


Chennai Super Kings won by 7 wickets against Kolkata Knight Riders

ಕೆಕೆಆರ್ ವಿರುದ್ಧ ಸಿಎಸ್‌ಕೆಗೆ 7 ವಿಕೆಟ್ ಅಂತರದ ಭರ್ಜರಿ ಗೆಲುವು

Posted By : SVN SVN
Source : Online Desk
ಚೆನ್ನೈ: ಐಪಿಎಲ್ 2019 ಟೂರ್ನಿ ನಿಮಿತ್ತ ಇಂದು ನಡೆದ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ಚೆನ್ನೈ ತಂಡ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಕೋಲ್ಕತಾ ತಂಡ ಚೆನ್ನೈನ ಬೌಲರ್ ಗಳಾದ ದೀಪಕ್ ಚಾಹರ್ (3 ವಿಕೆಟ್), ಹರ್ಭಜನ್ ಸಿಂಗ್ (2 ವಿಕೆಟ್) ಮತ್ತು ಇಮ್ರಾನ್ ತಾಹಿರ್ (2 ವಿಕೆಟ್) ಸಾಂಘಿಕ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿತು. ತಂಡದ ಮೊತ್ತ ಕೇವಲ 44 ರನ್ ಗಳಾಗುವಷ್ಟರಲ್ಲಿ ಕೋಲ್ಕತಾದ ಪ್ರಮುಖ 5 ವಿಕೆಟ್ ಗಳು ಪತನಗೊಂಡಿದ್ದವು. ಮಧ್ಯಮ ಕ್ರಮಾಂಕದ ಆಟಗಾರ ಆಂಡ್ರೆ ರೆಸಲ್ (ಅಜೇಯ 50) ಅರ್ಧಶತಕ ಸಿಡಿಸಿ ತಂಡದ ಮೊತ್ತ 100 ರನ್ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಕೋಲ್ಕತಾ 4 ಮಂದಿ ಬ್ಯಾಟ್ಸಮನ್ ಗಳು ಶೂನ್ಯ ಸಂಪಾದನೆ ಮಾಡಿದ್ದು, ತಂಡಕ್ಕೆ ಭಾರಿ ಹೊಡತೆ ನೀಡಿತು. ಅಂತಿಮವಾಗಿ ಕೋಲ್ಕತಾ ತಂಡ ನಿಗದಿತ 20 ಓವರ್ ಗಳಲ್ಲಿ 108 ರನ್ ಗಳಿಸಿತು.

ಕೋಲ್ಕತಾ ತಂಡ ನೀಡಿದ 109 ರನ್ ಗಳ ಸುಲಭದ ಗುರಿಯನ್ನು ಬೆನ್ನು ಹತ್ತಿದ ಚೆನ್ನೈ ತಂಡ 17.2 ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಚೆನ್ನೈ ಪರ ಆರಂಭಿಕ ಬ್ಯಾಟ್ಸಮನ್ ಫಾಫ್ ಡುಪ್ಲೆಸಿಸ್ ಅಜೇಯ 43 ರನ್ ಗಳಿಸಿ ಚೆನ್ನೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಪಂದ್ಯದ ಗೆಲುವಿನ ಮೂಲಕ ತನ್ನ ಅಂಕಗಳಿಕೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 10ಕ್ಕೆ ಏರಿಸಿಕೊಂಡು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಅಂತೆಯೇ 8 ಅಂಕಗಳಿಸಿರುವ ಕೋಲ್ಕತಾ 2ನೇ ಸ್ಥಾನದಲ್ಲಿ ಮುಂದುವರೆದಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp