ಆರ್‌ಸಿಬಿ ಸತತ 6 ಪಂದ್ಯ ಸೋಲಿಗೆ ಎಬಿ ಡಿವಿಲಿಯರ್ಸ್ ಕೊಟ್ಟ ಕಾರಣ ಏನು ಗೊತ್ತ?

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಟೂರ್ನಿಯಲ್ಲಿ ಬೆಂಗಳೂರು ತಂಡ ಸತತ 6 ಪಂದ್ಯಗಳಲ್ಲಿ ಸೋಲು ಕಂಡಿದ್ದು ಆರ್‌ಸಿಬಿ ಮೇಲಿನ ನಂಬಿಕೆ ನಿಧಾನವಾಗಿ ಹೊರಟು ಹೋಗುತ್ತಿದೆ.

Published: 11th April 2019 12:00 PM  |   Last Updated: 11th April 2019 04:58 AM   |  A+A-


AB De Villiers

ಎಬಿ ಡಿವಿಲಿಯರ್ಸ್

Posted By : VS VS
Source : Online Desk
ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಟೂರ್ನಿಯಲ್ಲಿ ಬೆಂಗಳೂರು ತಂಡ ಸತತ 6 ಪಂದ್ಯಗಳಲ್ಲಿ ಸೋಲು ಕಂಡಿದ್ದು ಆರ್‌ಸಿಬಿ ಮೇಲಿನ ನಂಬಿಕೆ ನಿಧಾನವಾಗಿ ಹೊರಟು ಹೋಗುತ್ತಿದೆ. 

ಇನ್ನು ಪಂದ್ಯಗಳ ಸೋಲಿಗೆ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಕೆಲವೊಂದು ಕಾರಣಗಳನ್ನು ಕೊಟ್ಟಿದ್ದಾರೆ. ಅದರಲ್ಲಿ ಕಳಪೆ ಫೀಲ್ಡಿಂಗ್. ಕ್ರಿಕೆಟ್ ನಲ್ಲಿ ತಂಡವೊಂದರ ಸಾಮರ್ಥ್ಯವನ್ನು ಅದರ ಕ್ಷೇತ್ರರಕ್ಷಣೆಯ ಮಟ್ಟವನ್ನು ನೋಡಿ ಅಳೆಯಬಹುದು. ತಂಡದ ಪ್ರತಿಯೊಬ್ಬ ಆಟಗಾರ ಬ್ಯಾಟ್ಸ್ ಮನ್, ಬೌಲರ್ ಅಥವಾ ಆಲ್ ರೌಂಡರ್ ಆಗಿ ಗುರುತಿಸಿಕೊಂಡಿರುತ್ತಾರೆ. 

ಆದರೆ ಫೀಲ್ಡರ್ ಅಂತಾ ಯಾರು ಗುರುತಿಸಿಕೊಂಡಿರುವುದಿಲ್ಲ. ಹೀಗಾಗಿ ತಂಡದಲ್ಲಿ ಪ್ರತಿಯೊಬ್ಬ ಆಟಗಾರನೂ ಫೀಲ್ಡರ್ ಆಗಿರುತ್ತಾನೆ. ಆತ ಅಂಗಳದಲ್ಲಿ ಬಲಿಷ್ಠ ನಿರ್ವಹಣೆ ತೋರಬೇಕಾಗುತ್ತದೆ. ಆರ್‌ಸಿಬಿ ಈ ವಿಷಯದಲ್ಲಿ ಎಡವುತ್ತಿದೆ ಎಂದು ಎಬಿಡಿ ಹೇಳಿದರು.

ಪ್ರತಿಯೊಂದು ಪಂದ್ಯದಲ್ಲೂ ನಾವು ಬಹಳಷ್ಟು ಕ್ಯಾಚ್ ಗಳನ್ನು ಕೈಚೆಲ್ಲಿದ್ದೇವೆ. ಸಣ್ಣ ಅಂತರದಿಂದ ಸೋತೆವು. ತವರಿನ ಪಂದ್ಯಗಳಲ್ಲಿ ನಾವು ಮುಂಬೈ ಮತ್ತು ಕೆಕೆಆರ್ ವಿರುದ್ಧ ಗೆಲ್ಲಬಹುದಿತ್ತು ಎಂದು ಹೇಳಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp