ಐಪಿಎಲ್ 2019: ಗಾಯಾಳು ಕೌಲ್ಟರ್‌ ನೈಲ್‌ ಔಟ್‌, ಆರ್‌ಸಿಬಿಗೆ ಡೇಲ್ ಸ್ಟೈನ್‌ ಇನ್‌

ನಥಾನ್‌ ಕೌಲ್ಟರ್‌ ನೈಲ್‌ ಗಾಯಗೊಂಡಿರುವುದರಿಂದ ಅವರ ಸ್ಥಾನಕ್ಕೆ ಮುಂದಿನ ಪಂದ್ಯಗಳಿಗೆ ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್‌ ಸ್ಟೈನ್‌ ರಾಯಲ್‌ ಚಾಲೆಂಜರ್ಸ್‌ ತಂಡ ಸೇರ್ಪಡೆಯಾಗುತ್ತಿದ್ದಾರೆ.
ಡೇಲ್‌ ಸ್ಟೈನ್‌
ಡೇಲ್‌ ಸ್ಟೈನ್‌
ಬೆಂಗಳೂರು:  ನಥಾನ್‌ ಕೌಲ್ಟರ್‌ ನೈಲ್‌ ಗಾಯಗೊಂಡಿರುವುದರಿಂದ ಅವರ ಸ್ಥಾನಕ್ಕೆ ಮುಂದಿನ ಪಂದ್ಯಗಳಿಗೆ ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್‌ ಸ್ಟೈನ್‌  ರಾಯಲ್‌ ಚಾಲೆಂಜರ್ಸ್‌ ತಂಡ ಸೇರ್ಪಡೆಯಾಗುತ್ತಿದ್ದಾರೆ.
ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ಪ್ರಾಂಚೈಸಿ ಪಾಲಾಗದ ಡೇಲ್‌ ಸ್ಟೈನ್‌ ಅವರು ನಿರಾಸೆಗೆ ಒಳಗಾಗಿದ್ದರು. ಆದರೆ, ಆಸೀಸ್‌ ವೇಗಿ ಕೌಲ್ಟರ್‌ ನೈಲ್‌ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಸ್ಟೈನ್‌ಗೆ ಅವಕಾಶ ಕಲ್ಪಿಸಲಾಗಿದೆ. ಎರಡು ವರ್ಷಗಳ ಬಳಿಕ ಸ್ಟೈನ್‌ ಐಪಿಎಲ್‌ಗೆ ಮರಳುತ್ತಿದ್ದಾರೆ. 2016 ರಲ್ಲಿ ಗುಜರಾತ್‌ ಲಯನ್ಸ್‌ ಪರ ಆಡಿದ್ದರು.
2008ರ ಉದ್ಘಾಟನಾ ಆವೃತ್ತಿಗೆ ಆರ್‌ಸಿಬಿಗೆ ಪದಾರ್ಪಣೆ ಮಾಡಿದ್ದ ಸ್ಟೈನ್‌, 2010ರವರೆಗೂ ಆಡಿದ್ದರು. ಈ ಅವಧಿಯಲ್ಲಿ 28 ಪಂದ್ಯಗಳನ್ನು ಆಡಿದ್ದ ಅವರು 27 ವಿಕೆಟ್‌ಗಳನ್ನು ಉರುಳಿಸಿದ್ದರು. ಇದೀಗ ಮತ್ತೊಮ್ಮೆ ಆರ್‌ಸಿಬಿಗೆ ಆಗಮಿಸಲಿರುವ ಸ್ಟೈನ್‌ ಮೇಲೆ ಬೌಲಿಂಗ್‌ ವಿಭಾಗದಲ್ಲಿ ಭಾರಿ ನಿರೀಕ್ಷೆ ಇಡಲಾಗಿದೆ.
ಈಗಾಗಲೇ ಆರ್‌ಸಿಬಿ ಆಡಿರುವ ಎಲ್ಲ ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇನ್ನೂ ಪ್ಲೇ ಆಫ್ ಗೆ ತಲುಪಬೇಕಾದರೆ ಉಳಿದ ಎಲ್ಲ ಪಂದ್ಯಗಳಲ್ಲಿ ಜಯ ಸಾಧಿಸಿಬೇಕು. ನಾಳೆ, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ಮೊಹಾಲಿಯಲ್ಲಿ ಆರ್‌ಸಿಬಿ ಸೆಣಸಲಿದೆ.
ಕೌಲ್ಟರ್‌ ನೈಲ್‌ ಅವರ ಅನುಪಸ್ಥಿಯಲ್ಲಿ ಡೆತ್‌ ಓವರ್‌ಗಳಲ್ಲಿ ಸ್ಟೈನ್‌ ಅವರನ್ನು ಬಳಸಿಕೊಳ್ಳಬಹುದು. ಕೌಲ್ಟರ್‌ ನೈಲ್‌ ಗಾಯದಿಂದಾಗಿ 2018ರ ಆವೃತ್ತಿಯ ಎಲ್ಲ ಪಂದ್ಯಗಳಿಂದ ದೂರ ಉಳಿದಿದ್ದರು.
ಈ ಬಾರಿ ಆರಂಭದಲ್ಲಿ ಪಾಕಿಸ್ತಾನದ ವಿರುದ್ಧ ಏಕದಿನ ಸರಣಿ ಇದ್ದ ಕಾರಣ ಅವರು ಆರಂಭದ ಪಂದ್ಯಗಳಲ್ಲಿ ಆಡಿರಲಿಲ್ಲ. ಆದರೆ, ಇದೀಗ ಅವರು ಗಾಯಗೊಂಡಿದ್ದು ಇನ್ನುಳಿದ ಎಲ್ಲ ಪಂದ್ಯಗಳಿಗೂ ಅವರು ಅಲಭ್ಯರಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com