ವಾಂಖೆಡೆ ಸ್ಟೇಡಿಯಂಗೆ ಯಾವುದೇ ಬೆದರಿಕೆ ಇಲ್ಲ: ಮುಂಬೈ ಪೊಲೀಸರು

ಐಪಿಎಲ್ ಪಂದ್ಯಾವಳಿ ನಡೆಯುತ್ತಿರುವ ದಕ್ಷಿಣ ಮುಂಬೈನಲ್ಲಿರುವ ವಾಂಖೆಡೆ ಸ್ಟೇಡಿಯಂಗೆ ಯಾವುದೇ ಬೆದರಿಕೆ ಇಲ್ಲ ಎಂದು ಶನಿವಾರ ಮುಂಬೈ...
ವಾಂಖೆಡೆ ಸ್ಟೇಡಿಯಂ
ವಾಂಖೆಡೆ ಸ್ಟೇಡಿಯಂ
ಮುಂಬೈ: ಐಪಿಎಲ್ ಪಂದ್ಯಾವಳಿ ನಡೆಯುತ್ತಿರುವ ದಕ್ಷಿಣ ಮುಂಬೈನಲ್ಲಿರುವ ವಾಂಖೆಡೆ ಸ್ಟೇಡಿಯಂಗೆ ಯಾವುದೇ ಬೆದರಿಕೆ ಇಲ್ಲ ಎಂದು ಶನಿವಾರ ಮುಂಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸ್ಟೇಡಿಯಂ ಬೆದರಿಕೆ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಂಖೆಡೆ ಸ್ಟೇಡಿಯಂಗೆ ಬೆದರಿಕೆ ಇರುವ ಬಗ್ಗೆ ನಮಗೆ ಯಾವುದೇ ಗುಪ್ತಚರ ಮಾಹಿತಿ ಇಲ್ಲ ಎಂದು ಮುಂಬೈ ಪೊಲೀಸ್ ವಕ್ತಾರ, ಡಿಸಿಪಿ ಮಂಜುನಾಥ್ ಸಿಂಗ್ ಅವರು ಹೇಳಿದ್ದಾರೆ. ಅಲ್ಲದೆ ಸುಳ್ಳು ಸುದ್ದಿಯನ್ನು ನಂಬದಂತೆ ಪೊಲೀಸರು ಜನತೆಗೆ ಮನವಿ ಮಾಡಿದ್ದಾರೆ.
ಐಪಿಎಲ್ 12ನೇ ಆವೃತ್ತಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ಮೊದಲ ಬಾರಿಗೆ ಮುಖಾಮುಖೀಯಾಗುತ್ತಿದ್ದು, ಇಂದು ಎರಡೂ ತಂಡಗಳು ವಾಂಖೆಡೆ ಕ್ರೀಡಾಂಣದಲ್ಲಿ ಸೆಣೆಸಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com