ಮೊದಲ ಗೆಲುವಿನ ಖುಷಿಯಲ್ಲಿದ್ದ ಕೊಹ್ಲಿಗೆ ಶಾಕ್; ದಂಡ ಹಾಕಿದ ರೆಫರಿ!

ಪ್ರಸಕ್ತ ಸಾಲಿನಲ್ಲಿ ಪಂಜಾಬ್ ವಿರುದ್ಧ ಜಯ ಸಾಧಿಸಿ ಗೆಲುವಿನ ಖಾತೆ ತೆರದ ಆರ್ ಸಿಬಿ ಸಂತಸದ್ಲಿರುವಾಗಲೇ ನಾಯಕ ವಿರಾಟ್ ಕೊಹ್ಲಿಗೆ ಮ್ಯಾಚ್ ರೆಫರಿ ಶಾಕ್ ನೀಡಿದ್ದು, ಕೊಹ್ಲಿಗೆ ದಂಡ ಹಾಕಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೊಹಾಲಿ: ಪ್ರಸಕ್ತ ಸಾಲಿನಲ್ಲಿ ಪಂಜಾಬ್ ವಿರುದ್ಧ ಜಯ ಸಾಧಿಸಿ ಗೆಲುವಿನ ಖಾತೆ ತೆರದ ಆರ್ ಸಿಬಿ ಸಂತಸದ್ಲಿರುವಾಗಲೇ ನಾಯಕ ವಿರಾಟ್ ಕೊಹ್ಲಿಗೆ ಮ್ಯಾಚ್ ರೆಫರಿ ಶಾಕ್ ನೀಡಿದ್ದು, ಕೊಹ್ಲಿಗೆ ದಂಡ ಹಾಕಿದ್ದಾರೆ.
ಹೌದು.. ನಿನ್ನೆ ಮೊಹಾಲಿಯಲ್ಲಿ ನಡೆದ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಆರ್ ಸಿಬಿ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ನಿಗದಿತ 20 ಓವರ್ ಗಳಲ್ಇ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆರ್ ಸಿಬಿ ಪರ ನಾಯಕ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 63 ಮತ್ತು ಎಬಿಡಿ ವಿಲಿಯರ್ಸ್ 38 ಎಸೆತಗಳಲ್ಲಿ 59 ರನ್ ಗಳಿಸಿ ತಂಡವನ್ನು ನಾಲ್ಕು ಎಸೆತಗಳು ಬಾಕಿ ಇರುವಂತೆ ಗೆಲುವಿನ ದಡ ಮುಟ್ಟಿಸಿದರು.
ಹಾಲಿ ಟೂರ್ನಿಯಲ್ಲಿ ಸತತ 6 ಪಂದ್ಯಗಳ ಬಳಿಕ 7ನೇ ಪಂದ್ಯದಲ್ಲಿ ಕೊಹ್ಲಿ ಪಡೆ ಗೆಲುವು ಸಾಧಿಸಿತ್ತು, ಈ ಗೆಲುವಿನ ಸಂಭ್ರಮದಲ್ಲಿರುವಾಗವೇ ಮ್ಯಾಚ್ ರೆಫರಿ ಕೊಹ್ಲಿಗೆ ಶಾಕ್ ನೀಡಿದ್ದಾರೆ. ಪಂಜಾಬ್ ವಿರುದ್ಧ ನಿಧಾನಗತಿಯ ಬೌಲಿಂಗ್ ಮಾಡಿದ ಆರೋಪದ ಮೇರೆಗೆ ಕೊಹ್ಲಿಗೆ ದಂಡ ಹಾಕಲಾಗಿದ್ದು, ರೆಫರಿ ಕೊಹ್ಲಿಗೆ ಬರೊಬ್ಬರಿ 12 ಲಕ್ಷ ರೂ ದಂಡ ವಿಧಿಸಿದ್ದಾರೆ.
ಈ ಹಿಂದೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಹಾಗೂ ರಾಜಸ್ತಾನ ರಾಯಲ್ಸ್ ತಂಡದ ಅಜಿಂಕ್ಯಾ ರಹಾನೆ ಕೂಡ ನಿಧಾಗನತಿಯ ಬೌಲಿಂಗ್ ಮೇರೆಗೆ ದಂಡ ಹಾಕಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com