ವಿಶ್ವಕಪ್ ಮಹಾಸಮರಕ್ಕೆ ಆಯ್ಕೆ ಮಾಡಲಾಗಿರುವ ಟೀಂ ಇಂಡಿಯಾ ಸದೃಢ ಹಾಗೂ ಸಮರ್ಥ: ಎಂಎಸ್‌ಕೆ ಪ್ರಸಾದ್

ನಾವು ಆಯ್ಕೆ ಮಾಡಿರುವ ತಂಡ ವಿಶ್ವಕಪ್ ಮಹಾಸಮರಕ್ಕೆ ಎಲ್ಲಾ ಕಡೆಯಿಂದಲೂ ಸಮರ್ಥ ಹಾಗೂ ಸದೃಢವಾಗಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.

Published: 15th April 2019 12:00 PM  |   Last Updated: 15th April 2019 07:46 AM   |  A+A-


MSK Prasad

ಎಂಎಸ್‌ಕೆ ಪ್ರಸಾದ್

Posted By : VS VS
Source : Online Desk
ಮುಂಬೈ: ನಾವು ಆಯ್ಕೆ ಮಾಡಿರುವ ತಂಡ ವಿಶ್ವಕಪ್ ಮಹಾಸಮರಕ್ಕೆ ಎಲ್ಲಾ ಕಡೆಯಿಂದಲೂ ಸಮರ್ಥ ಹಾಗೂ ಸದೃಢವಾಗಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.

ವಿಶ್ವಕಪ್ ಗೆ ಆಯ್ಕೆಯಾಗಿರುವ ತಂಡದಲ್ಲಿ ಅಂಬಟ್ಟಿ ರಾಯುಡು ಮತ್ತು ರಿಷಬ್ ಪಂತ್ ಗೆ ಅವಕಾಶ ನೀಡಿಲ್ಲ. ಬದಲಿಗೆ ವಿಜಯ್ ಶಂಕರ್ ಗೆ ಸ್ಥಾನ ನೀಡಲಾಗಿದ್ದು ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂಎಸ್‌ಕೆ ಪ್ರಸಾದ್, ಚಾಂಪಿಯನ್ಸ್ ಟ್ರೋಫಿ ಬಳಿಕ ನಾವು ಅಂಬಟ್ಟಿ ರಾಯುಡು ಹಾಗೂ ವಿಜಯ್ ಶಂಕರ್ ಅವುಗಳನ್ನು ನೀಡಿದ್ದೇವು. ಈ ಅವಕಾಶಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳುವಲ್ಲಿ ರಾಯುಡು ವಿಫಲರಾಗಿದ್ದಾರೆ. ಆದರೆ ಶಂಕರ್ ಒಳ್ಳೆಯ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು ಆಲ್ರೌಂಡರ್ ಆಗಿದ್ದು ಇದು ನಮಗೆ ಟೂರ್ನಿಗೆ ಉಪಯುಕ್ತವಾಗುತ್ತದೆ ಎಂದರು.

ಹಾರ್ದಿಕ್ ಪಾಂಡ್ಯ ಜೊತೆಗೆ ನಮಗೆ ಮತ್ತೊಬ್ಬ ಆಲ್ರೌಂಡರ್ ಅವಶ್ಯಕತೆ ಇತ್ತು. ಹೀಗಾಗಿ ಮೂರು ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ವಿಜಯ್ ಶಂಕರ್ ಗೆ ನಮ್ಮ ಮೊದಲ ಆದ್ಯತೆ ಎಂದರು.

ವಿಶ್ವಕಪ್ ಗೆ ಆಯ್ಕೆಯಾಗಿರುವ ಟೀಂ ಇಂಡಿಯಾ ಆಟಗಾರರ ಪಟ್ಟಿ:
ವಿರಾಟ್ ಕೊಹ್ಲಿ(ನಾಯಕ)
ರೋಹಿತ್ ಶರ್ಮಾ(ಉಪನಾಯಕ)
ಶಿಖರ್ ಧವನ್
ಕೆಎಲ್ ರಾಹುಲ್
ವಿಜಯ್ ಶಂಕರ್ 
ಕೇದಾರ್ ಜಾದವ್
ದಿನೇಶ್ ಕಾರ್ತಿಕ್
ಎಂಎಸ್ ಧೋನಿ
ಕುಲದೀಪ್ ಯಾದವ್
ಭುವನೇಶ್ವರ್ ಕುಮಾರ್
ಯಜುವೇಂದ್ರ ಚಹಾಲ್
ಜಸ್ ಪ್ರೀತ್ ಬುಮ್ರಾ
ಹಾರ್ದಿಕ್ ಪಾಂಡ್ಯ
ರವೀಂದ್ರ ಜಡೇಜಾ 
ಮೊಹಮ್ಮದ್ ಶಮಿ
Stay up to date on all the latest ಕ್ರಿಕೆಟ್ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp