3 ತಿಂಗಳಿಗೆ ರಾಯುಡು, ಪಂತ್ ಹಿಂದಿಕ್ಕಿ ವಿಶ್ವಕಪ್‌ಗೆ ಸ್ಥಾನ ಪಡೆದ ವಿಜಯ್ ಶಂಕರ್ ವಿಶೇಷತೆ ಏನು?

ಕ್ರಿಕೆಟ್ ನಲ್ಲಿ ಆಟಗಾರನ ಪ್ರದರ್ಶನದ ಜೊತೆ, ಜೊತೆಗೆ ಆಟಗಾರನ ಅದೃಷ್ಟ ಕೊಡುಗೆ ನೀಡಬೇಕಾಗಿದ್ದು, ಇದಕ್ಕೆ ಉತ್ತಮ ಉದಾಹರಣೆ ತಮಿಳುನಾಡಿನ ಆಲ್ ರೌಂಡರ್ ವಿಜಯ್ ಶಂಕರ್.
ವಿಜಯ್ ಶಂಕರ್
ವಿಜಯ್ ಶಂಕರ್
ಮುಂಬೈ: ಕ್ರಿಕೆಟ್ ನಲ್ಲಿ ಆಟಗಾರನ ಪ್ರದರ್ಶನದ ಜೊತೆ, ಜೊತೆಗೆ ಆಟಗಾರನ ಅದೃಷ್ಟ ಕೊಡುಗೆ ನೀಡಬೇಕಾಗಿದ್ದು, ಇದಕ್ಕೆ ಉತ್ತಮ ಉದಾಹರಣೆ ತಮಿಳುನಾಡಿನ ಆಲ್ ರೌಂಡರ್ ವಿಜಯ್ ಶಂಕರ್. 
ಹೌದು.. ವಿಜಯ್ ಶಂಕರ್ ಭಾರತದ ಪರ ಪಾದಾರ್ಪಣೆ ಮಾಡಿ ಮೂರೇ ತಿಂಗಳು ಕಳೆದಿದ್ದು ಅದಾಗಲೇ ಆಯ್ಕೆ ಸಮಿತಿ ಹಾಗೂ ನಾಯಕನ ವಿಶ್ವಾಸ ಗೆಲ್ಲುವಲ್ಲಿ ಸಫಲರಾಗಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಜಯ್ ಶಂಕರ್ ಅವರು ಕಳೆದ ವರ್ಷ ಮಾ. 6 ರಂದು ಕೊಲಂಬೊದಲ್ಲಿ ಟಿ-20 ಪಂದ್ಯ ಆಡಿದರು. 
ಪ್ರಸಕ್ತ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೆಲ್ಬೋರ್ನ್ ಪಂದ್ಯದಲ್ಲಿ ಇವರು ಏಕದಿನ ತಂಡದಲ್ಲಿ ಸ್ಥಾನ ಪಡೆದರು. ಈವರೆಗೆ ಇವರು 9 ಏಕದಿನ ಪಂದ್ಯಗಳಲ್ಲಿ 2 ವಿಕೆಟ್ ಉರುಳಿಸಿದ್ದು, 165 ರನ್ ಕಲೆ ಹಾಕಿದ್ದಾರೆ. ಇದಾಗ್ಯೂ ಆಯ್ಕೆ ಸಮಿತಿ ಇವರ ಮೇಲೆ ನಂಬಿಕೆ ಇಟ್ಟು ತಂಡದಲ್ಲಿ ಸ್ಥಾನ ನೀಡಿದೆ. 
ತಮಿಳುನಾಡು ಪರ ಲಿಸ್ಟ್ ‘ಎ’ ನಲ್ಲಿ 67 ಪಂದ್ಯ ಆಡಿರುವ ವಿಜಯ್, 45 ವಿಕೆಟ್ ಪಡೆದಿದ್ದು, 1613 ರನ್ ಸಿಡಿಸಿದ್ದಾರೆ. ಈ ಪ್ರದರ್ಶನ ಆಯ್ಕೆ ಸಮಿತಿ ಮನ ಕರಗುವಂತೆ ಮಾಡಿದೆ. ಇವರು ಸಾಧಾರಣ ಪ್ರದರ್ಶನ ನೀಡಿದರೂ ಅದೃಷ್ಟ ಇವರ ಜೊತೆಗಿದ್ದು, ಮೊದಲ ಬಾರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 
ಕಳೆದ ರಣಜಿ ಋತುವಿನಲ್ಲಿ ವಿಜಯ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದರು. ವಿಜಯ್ 111, 82. 91, 103 ರನ್ ಕಲೆ ಹಾಕಿದ್ದು ಒಟ್ಟಾರೆ 577 ರನ್ ಸೇರಿಸಿದ್ದಾರೆ. ಇವರು ಸನ್ ರೈಸರ್ಸ್‍ ಹೈದರಾಬಾದ್ ಪರ ಬ್ಯಾಟ್ ಮಾಡುತ್ತಿರುವ ವಿಜಯ್ ಶಂಕರ್ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com