ಪತಿ ಸ್ಟುವರ್ಟ್ ಬಿನ್ನಿ ಎಲ್ಲಿ..? ಎಂದ ಟ್ರಾಲಿಗರಿಗೆ ಖಡಕ್ ತಿರುಗೇಟು ಕೊಟ್ಟ ಮಯಾಂತಿ ಲ್ಯಾಂಗರ್!

ಪತಿ ಸ್ಟುವರ್ಟ್ ಬಿನ್ನಿ ಎಲ್ಲಿ ಎಂದು ಕಾಲೆಳೆಯುವ ಪ್ರಯತ್ನ ಮಾಡಿದ ಟ್ರೋಲಿಗರಿಗೆ ಖ್ಯಾತ ನಿರೂಪಕಿ ಮಯಾಂತಿ ಲ್ಯಾಂಗರ್ ಖಡಕ್ ತಿರುಗೇಟು ನೀಡಿದ್ದಾರೆ.

Published: 17th April 2019 12:00 PM  |   Last Updated: 17th April 2019 04:06 AM   |  A+A-


Anchor Mayanti Langer Shuts Down Trolls For Taking A Dig At Husband Stuart Binny

ಸಂಗ್ರಹ ಚಿತ್ರ

Posted By : SVN SVN
Source : Online Desk
ಮೊಹಾಲಿ: ಪತಿ ಸ್ಟುವರ್ಟ್ ಬಿನ್ನಿ ಎಲ್ಲಿ ಎಂದು ಕಾಲೆಳೆಯುವ ಪ್ರಯತ್ನ ಮಾಡಿದ ಟ್ರೋಲಿಗರಿಗೆ ಖ್ಯಾತ ನಿರೂಪಕಿ ಮಯಾಂತಿ ಲ್ಯಾಂಗರ್ ಖಡಕ್ ತಿರುಗೇಟು ನೀಡಿದ್ದಾರೆ.

ನಿನ್ನೆ ಮೊಹಲಿಯಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ 12 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು. ಮಯಾಂತಿ ಲ್ಯಾಂಗರ್ ಪತಿ, ಸ್ಟುವರ್ಟ್ ಬಿನ್ನಿ ಕೂಡ ರಾಜಸ್ತಾನ ತಂಡದ ಪರ ಆಡುತ್ತಿದ್ದು, ನಿನ್ನೆ ಬಿನ್ನಿ ಕೇವಲ 11 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ ಅಜೇಯ 33 ರನ್ ಸಿಡಿಸಿದ್ದರು. ಆದರೂ ತಂಡ 12 ರನ್ ಗಳ ಅಂತರದಲ್ಲಿ ಸೋಲು ಕಂಡಿತು.

ಈ ಪಂದ್ಯದ ಬಳಿಕ ಟ್ರೋಲಿಗರು ಮಯಾಂತಿ ಲ್ಯಾಂಗರ್ ಅವರನ್ನು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಅಶ್ವಿನ್ ಗೌರ್ ಎಂಬ ಟ್ವಟರ್ ಖಾತೆದಾರರು ಸ್ಟುವರ್ಟ್ ಎಲ್ಲಿ ಕಾಣಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿದ ಮಯಾಂತಿ ಬಹುಶಃ ನೀವು ಐಪಿಎಲ್ ನೋಡುತ್ತಿಲ್ಲ ಎಂದು ಕಾಣಿಸುತ್ತದೆ. ಸ್ಟಾರ್ ಸ್ಪೋರ್ಟ್ಸ್ ನೋಡಿ ಸ್ಟುವರ್ಟ್ ಸಿಗುತ್ತಾರೆ ಎಂದು ಕಾಲೆಳೆದಿದ್ದಾರೆ.

ಮತ್ತೋರ್ವ ಟ್ವಿಟರ್ ಖಾತೆದಾರ ನವನೀತ್ ಕುಮಾರ್ ಎಂಬುವವರು, ಇಂದಿನ ಅದ್ಬುತ ಪ್ರದರ್ಶನದ ಬಳಿಕ ಮಯಾಂತಿ ಸೋಲೋ ಚಿತ್ರಗಳನ್ನು ಬಿಟ್ಟು ತಮ್ಮ ಪತಿಯೊಂದಿಗಿರುವ ಜೋಡಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಬಹುದು ಎಂದು ಮಯಾಂತಿ ಕಾಲೆಳೆದಿದ್ದಾರೆ. ಅಲ್ಲದೆ ಮಯಾಂತಿ ಮತ್ತು ಸ್ಟುವರ್ಟ್ ಜೊತೆಗಿರುವ ಫೋಟೋ ಕೂಡ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಮಯಾಂತಿ, ನವನೀತ್ ನಿಮ್ಮ ಬಳಿ ನನ್ನ ಫೋನ್ ನಂಬರ್ ಇಲ್ಲ ಎಂದು ಕಾಣಿಸುತ್ತದೆ. ಹೀಗಾಗಿ ಡಿಪಿ ಯಾವುದು ಎಂದು ನಿಮಗೆ ತಿಳಿದಿಲ್ಲ. ಆದರೂ ಈ ಅದ್ಭುತ ಮತ್ತು ಸುಂದರ ಚಿತ್ರವನ್ನು ಹೆಕ್ಕಿ ತೆಗೆದಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.

ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ತಂಡ ಮೊದಲು ಬೌಲಿಂಗ್ ಆರಿಸಿಕೊಂಡಿತ್ತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡ ನಿಗದಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ ಕನ್ನಡಿಗ ಕೆಎಲ್ ರಾಹುಲ್ ಅವರ ಅಮೋಘ ಅರ್ಧಶತಕ (52 ರನ್) ಹಾಗೂ ಡೇವಿಡ್ ಮಿಲ್ಲರ್ (40 ರನ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 182 ರನ್ ಗಳ ಬಹತ್ ರನ್ ಪೇರಿಸಿತು. ಈ ಬೃಹತ್ ಗುರಿಯನ್ನು ಬೆನ್ನು ಹತ್ತಿದ ರಾಜಸ್ಥಾನ ತಂಡ 20 ಓವರ್ ನಲ್ಲಿ 7 ವಿಕೆಟ್ ಕಳೆದುಕೊಂಡು 170 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಪಂಜಾಬ್ ಎದುರು 12 ರನ್ ಗಳ ವಿರೋಚಿತ ಸೋಲು ಅನುಭವಿಸಿತು.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp