ಸಿಎಸ್ ಕೆ ವಿರುದ್ಧ ಸನ್ ರೈಸರ್ಸ್ ಗೆ ಆರು ವಿಕೆಟ್ ಗಳ ಜಯ

ಐಪಿಎಲ್ 2019ನೇ ಸಾಲಿನ ಟಿ-20 ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ಇಂದು ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಆರು ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದ್ರಾಬಾದ್ : ಐಪಿಎಲ್ 2019ನೇ ಸಾಲಿನ ಟಿ-20 ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ಇಂದು ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಆರು ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದೆ.

ಇದರೊಂದಿಗೆ ಎಂಟನೇ ಪಂದ್ಯ ಆಡಿರುವ ಹೈದ್ರಾಬಾದ್ ಅಷ್ಟೇ ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಅತ್ತ ಸೋಲಿನ ಬಳಿಕವೂ ಚೆನ್ನೈ ಸೂಪರ್ ಕಿಂಗ್ಸ್  14 ಅಂಕಗಳೊಂದಿಗೆ ಅಗ್ರ ಸ್ಥಾನ ಕಾಯ್ದುಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್  , ಐದು ವಿಕೆಟ್ ನಷ್ಟಕ್ಕೆ 132 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಆಟಗಾರರಾದ ವ್ಯಾಟ್ಸನ್ 31 , ಡುಪ್ಲೆಸಿಸ್ 45 ಗಳಿಸಿ ಬೇಗನೆ ಫೆವಿಲಿಯನ್ ನತ್ತ ಹೆಜ್ಜೆ ಹಾಕಿದರು.
ನಂತರ ಬಂದ ರೈನಾ 13 ರನ್ ಗಳಿಸಿ ರಶಿದ್ ಖಾನ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲೂಗೆ ಬಲಿಯಾದರು. ನಂತರ ಅಂಬಡಿ ರಾಯುಡು 25  ರನ್ ಗಳಿಸಿ, ಕೊನೆಯವರಗೂ ಹೋರಾಟ ನಡೆಸಿದರೆ, ಕೆಎಂ ಜಾದವ್ ಕೇವಲ 1 ರನ್ ಗಳಿಗೆ ಎಲ್ ಬಿಡಬ್ಲ್ಯೂಗೆ ಬಲಿಯಾದರು. ನಂತರ ಬಂದ ಬಿಲ್ಲಿಂಗ್ ಡೆಕ್ ಔಟಾದರು. ರವೀಂದ್ರ ಜಡೇಜಾ 10 ರನ್ ಗಳಿಸಿದರು. ಇದರಿಂದಾಗಿ ಧೋನಿ ಇಲ್ಲದ ಚೆನ್ನೈ ಸೂಪರ್ ಕಿಂಗ್ಸ್  ನಿಗದಿತ ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಕೇವಲ 132 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಗುರಿ ಬೆನ್ನತ್ತಿದ್ದ ಹೈದ್ರಾಬಾದ್ ಸನ್ ರೈಸರ್ಸ್ ಆರಂಭಿಕ ಆಟಗಾರರಾದ ಡಿಎ ವಾರ್ನರ್ 50 ಹಾಗೂ ಜೆಎಂಬೈರ್ ಸ್ಟಾ 61 ರನ್ ಗಳಿಸುವ ಮೂಲಕ ತಂಡ ಗೆಲ್ಲಲು ಪ್ರಮುಖ ಕಾರಣರಾದರು.
ಉಳಿದಂತೆ ಡಿಜೆ ಹೂಡಾ 13, ವಿ ಶಂಕರ್ 7 ರನ್ ಗಳಿಸಿದರು. ಇನ್ನೂ 19 ಎಸೆತ ಬಾಕಿ ಇರುವಂತೆಯೇ  4 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಡೇವಿಡ್ ವಾರ್ನರ್  ಪ್ಲೆಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com