ಪಾಂಡ್ಯ, ರಾಹುಲ್ ಗೆ ಬಿಸಿಸಿಐ ತಲಾ 20 ಲಕ್ಷ ರೂ. ದಂಡ, 10 ಹುತಾತ್ಮರ ಕುಟುಂಬಕ್ಕೆ ಒಂದೊಂದು ಲಕ್ಷ ನೀಡಲು ಸೂಚನೆ!

ಚಾಟ್ ಶೋ ನಲ್ಲಿ ಮಹಿಳೆಯರ್ ಅಬಗ್ಗೆ ಅಕ್ಷೇಪಾರ್ಹ ಹೇಳಿಕೆ ನೀಡಿದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಪ್ರಾರಂಭಿಕ ಆಟಗಾರ ಕೆ.ಎಲ್ ರಾಹುಲ್ ಗೆ ಬಿಸಿಸಿಐ ಒಟ್ಟಾರೆ ತಲಾ 20 ಲಕ್ಷ ದಂಡ ವಿಧಿಸಿದೆ.

Published: 20th April 2019 12:00 PM  |   Last Updated: 20th April 2019 12:58 PM   |  A+A-


BCCI ombudsman fines Pandya, Rahul for Koffee fiasco

ಪಾಂಡ್ಯ, ರಾಹುಲ್ ಗೆ ಬಿಸಿಸಿಐ ತಲಾ 20 ಲಕ್ಷ ರೂ. ದಂಡ, 10 ಹುತಾತ್ಮರ ಕುಟುಂಬಕ್ಕೆ ಒಂದೊಂದು ಲಕ್ಷ ನೀಡಲು ಸೂಚನೆ!

Posted By : SBV SBV
Source : IANS
ನವದೆಹಲಿ: ಚಾಟ್  ಶೋ ನಲ್ಲಿ ಮಹಿಳೆಯರ್ ಅಬಗ್ಗೆ ಅಕ್ಷೇಪಾರ್ಹ ಹೇಳಿಕೆ ನೀಡಿದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಪ್ರಾರಂಭಿಕ ಆಟಗಾರ ಕೆ.ಎಲ್ ರಾಹುಲ್ ಗೆ ಬಿಸಿಸಿಐ ಒಟ್ಟಾರೆ ತಲಾ 20 ಲಕ್ಷ ದಂಡ ವಿಧಿಸಿದೆ. 

ಬಿಸಿಸಿಐ ಓಂಬುಡ್ಸ್ಮನ್ ಆದೇಶ ಹೊರಡಿಸಿದ್ದು, ಕರ್ತವ್ಯದಲ್ಲಿದ್ದಾಗ  ಹುತಾತ್ಮರಾದ 10 ಅರೆಸೇನಾ ಪಡೆ ಪೇದೆಗಳ ಕುಟುಂಬಕ್ಕೆ ಒಂದೊಂದು 1 ಲಕ್ಷ ನೀಡುವಂತೆ ಇಬ್ಬರಿಗೂ ಸೂಚನೆ ನೀಡಿದೆ. 

ಇನ್ನು 10 ಲಕ್ಷ ರೂಪಾಯಿಯನ್ನು ಅಂಧರ ಕ್ರಿಕೆಟ್ ಉತ್ತೇಜನಕ್ಕಾಗಿ ಪ್ರಾರಂಭಿಸಲಾಗಿರುವ ನಿಧಿಗೆ ನೀಡಬೇಕೆಂದು ಬಿಸಿಸಿಐ ಇಬ್ಬರೂ ಆಟಗಾರರಿಗೆ ಸೂಚಿಸಿದೆ. 

4 ವಾರಗಳ ಒಳಗಾಗಿ ದಂಡ ಪಾವತಿ ಮಾಡುವುದಕ್ಕೆ ವಿಫಲವಾದರೆ, ಆಟಗಾರರ ಸಂಭಾವನೆಯನ್ನು ಕಡಿತಗೊಳಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. 

ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬೆನ್ನಲ್ಲೆ ಆಸ್ಟ್ರೇಲಿಯಾ ಟೂರ್ನಮೆಂಟ್ ನಿಂದ ಇಬ್ಬರೂ ಆಟಗಾರರನ್ನು ಕೈಬಿಡಲಾಗಿತ್ತು. ಇದರಿಂದ ಇಬ್ಬರೂ ತಲಾ 30 ಲಕ್ಷ ಕಳೆದುಕೊಂಡಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp