ನನ್ನ ಹತ್ತಿರ ಮಂಕಡ್ ರನೌಟ್ ನಡೆಯಲ್ಲ; ಕೊಹ್ಲಿಯ ವಿಡಿಯೋ ನೋಡಿದ್ರೆ ನಕ್ತೀರಾ!

ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಮಾಡಿರುವ ಮಂಕಡ್ ರನೌಟ್ ಪ್ರಕರಣವು ಟೂರ್ನಿಯಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮಂಕಡ್ ರನೌಟ್ ನನ್ನ ಹತ್ತಿರ ನಡೆಯಲ್ಲ...

Published: 20th April 2019 12:00 PM  |   Last Updated: 20th April 2019 07:22 AM   |  A+A-


Virat Kohli

ವಿರಾಟ್ ಕೊಹ್ಲಿ

Posted By : VS VS
Source : Online Desk
ಕೋಲ್ಕತ್ತಾ: ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಮಾಡಿರುವ ಮಂಕಡ್ ರನೌಟ್ ಪ್ರಕರಣವು ಟೂರ್ನಿಯಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮಂಕಡ್ ರನೌಟ್ ನನ್ನ ಹತ್ತಿರ ನಡೆಯಲ್ಲ ಎಂಬಂತೆ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ 18ನೇ ಓವರ್ ನ ಕೊನೆಯ ಎಸೆತದಲ್ಲಿ ಸುನಿಲ್ ನರೈನ್ ಬೌಲಿಂಗ್ ಬೌಲಿಂಗ್ ಮಾಡದೇ ಮುಂದೆ ಹೋದರು. ಈ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ವಿರಾಟ್ ಕೊಹ್ಲಿ ಕುಳಿತುಕೊಂಡು ಬ್ಯಾಟ್ ಅನ್ನು ಕ್ರಿಸ್ ನಲ್ಲಿ ಇಡುವ ಮೂಲಕ ನನ್ನನ್ನು ಮಂಕಡ್ ರನೌಟ್ ಮಾಡಲು ಸಾಧ್ಯವಿಲ್ಲ ಎಂಬಂತೆ ತೋರಿಸಿದರು. ಈ ವಿಡಿಯೋ ಇದೀಗ ವೈರಲ್ ಆಗಿದೆ. 

ಈ ಪಂದ್ಯದಲ್ಲಿ ಆರ್ಸಿಬಿ ತಂಡ 213 ರನ್ ಪೇರಿಸಿದ್ದು ಕೋಲ್ಕತ್ತಾ ತಂಡವನ್ನು 203 ರನ್ ಗಳಿಗೆ ಆಲೌಟ್ ಮಾಡುವ ಮೂಲಕ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಎರಡನೇ ಗೆಲುವು ಸಾಧಿಸಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp