ಕೊಹ್ಲಿ ಶತಕ, ಕೆಕೆಆರ್ ವಿರುದ್ಧ ಆರ್ ಸಿಬಿಗೆ 10 ರನ್ ಗಳ ರೋಚಕ ಗೆಲುವು

ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2019ರ ಟಿ-20 ಚಾಂಪಿಯನ್ ಶಿಪ್ ಪಂದ್ಯಾವಳಿಯ 35ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ರನ್ ಗಳಿಂದ ಗೆಲುವು ಸಾಧಿಸಿದೆ.
ಆರ್ ಸಿಬಿ ಆಟಗಾರರು
ಆರ್ ಸಿಬಿ ಆಟಗಾರರು

ಕೊಲ್ಕತ್ತಾ : ಈಡನ್  ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ  ಐಪಿಎಲ್  2019ರ ಟಿ-20 ಚಾಂಪಿಯನ್ ಶಿಪ್ ಪಂದ್ಯಾವಳಿಯ 35ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್  ಬೆಂಗಳೂರು 10 ರನ್ ಗಳಿಂದ ಗೆಲುವು ಸಾಧಿಸಿದೆ.

ನಾಯಕ ವಿರಾಟ್ ಕೊಹ್ಲಿಯ ಶತಕದ ನೆರವಿನಿಂದ ಆರ್ ಸಿಬಿ ರೋಚಕ ಗೆಲುವು ದಾಖಲಿಸಿದೆ. ಆ ಗೆಲುವಿನ ಹೊರತಾಗಿ ಆಡಿರುವ 9 ಪಂದ್ಯಗಳಲ್ಲಿ ನಾಲ್ಕು ಅಂಕಗಳನ್ನು ಮಾತ್ರ ಸಂಪಾದಿಸಿರುವ ಆರ್ ಸಿಬಿ ಕೊನೆಯ ಸ್ಥಾನದಲ್ಲಿ ಮುಂದುವರಿದಿದೆ. ಅಲ್ಲದೇ ಪ್ಲೇ -ಆಫ್ ಆಸೆಯನ್ನು ಜೀವಂತವಾಗಿರಿಸಲು ಮುಂದಿನ ಎಲ್ಲ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಅತ್ತ ಒಂಬತ್ತು ಪಂದ್ಯಗಳಲ್ಲಿ ಐದನೇ ಸೋಲಿನೊಂದಿಗೆ ಎಂಟು ಮಾತ್ರ ಮಾತ್ರ ಸಂಪಾದಿಸಿರುವ ಕೆಕೆಆರ್ ಆರನೇ ಸ್ಥಾನದಲ್ಲಿದ್ದು, ಪ್ಲೇ- ಆಫ್ ಸಾಧ್ಯತೆಯು ಕಠಿಣವೆನಿಸಿದೆ.

ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್  ಮೊದಲು ಪೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರಿಂದ ಆರ್  ಸಿಬಿ ಮೊದಲಿಗೆ ಬ್ಯಾಟಿಂಗ್ ಮಾಡಿತು. ಆರಂಭಿಕ ಆಟಗಾರರಾದ ಪಾರ್ಥಿವ್ ಪಟೇಲ್ 11 ರನ್ ಗಳಿಸಿ  ನಾರಿನ್ ಬೌಲಿಂಗ್ ನಲ್ಲಿ ರಾಣಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ನಾಯಕ ವಿರಾಟ್ ಕೊಹ್ಲಿ 58 ಎಸೆತಗಳಲ್ಲಿ  4 ಸಿಕ್ಸರ್, 9 ಬೌಂಡರಿಗಳ ಮೂಲಕ ಶತಕ ಸಿಡಿಸುವ ಮೂಲಕ ಆರ್ ಸಿಬಿ ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಿಸಿದ್ದರಲ್ಲದೇ, ತಂಡ ಗೆಲಲ್ಲು ಪ್ರಮುಖ ಕಾರಣರಾದರು. ಇವರಿಗೆ ಸಾಥ್ ನೀಡಿದ ಎಡಿ ನಾಥ್ 13, ಎಂಎಂ ಆಲಿ 66, ಎಂಪಿ ಸ್ಟೊಯ್ ನೀಸ್ 17 ರನ್ ಗಳಿಸುವ ಮೂಲಕ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 213 ರನ್ ಕಲೆ ಹಾಕಿತು.
ಈ ಗುರಿ ಬೆನ್ನತ್ತಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಪರ  ಆರಂಭಿಕ ಆಟಗಾರ ಸಿಎಲೈನ್ ಕೇವಲ 1ರನ್ ಗಳಿಸಿದಾಗ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.  ಎಸ್ ಪಿ ನರೈನ್ 18, ಸುಬ್ಮಾನ್ ಗಿಲ್ 9, ಉತ್ತಪ್ಪ 9 ರನ್ ಗಳಿಸಿ ಬೇಗನೆ ಔಟಾದರು.
ನಂತರ ಜೊತೆಗೂಡಿದ ಎನ್ ರಾಣಾ 85 ಹಾಗೂ ರಸೆಲ್ 65 ರನ್ ಗಳಿಸುವ ಮೂಲಕ ಸ್ವಲ್ಪ ಭರವಸೆ ಮೂಡಿಸಿದರಾದರೂ ತಂಡ ಗೆಲ್ಲಿಸಿಕೊಳ್ಳುವಲ್ಲಿ ವಿಫಲರಾದರು.ಇದರಿಂದಾಗಿ ಕೆಕೆಆರ್  ನಿಗದಿತ ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಲಷ್ಟೇ ಶಕ್ತವಾಯಿತು. ಶತಕ ಬಾರಿಸಿದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಫ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com